ಭಾರತದಲ್ಲಿ ಶಿಯೋಮಿಯಿಂದ ಹೊಸ ರೆಡ್ಮಿ ಸ್ಮಾರ್ಟ್‌ಟಿವಿ ಬಿಡುಗಡೆ! ಬೆಲೆ ಎಷ್ಟು?

|

ಜನಪ್ರಿಯ ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ವಲಯದಲ್ಲೂ ಗುರುತಿಸಿಕೊಂಡಿದೆ. ತನ್ನ ವಿಭಿನ್ನ ಶೈಲಿಯ ಸ್ಮಾರ್ಟ್‌ಟಿವಿಗಳಿಂದ ಗ್ರಾಹಕರ ಮನಸ್ಸು ಗೆದ್ದಿದೆ. ಇದೀಗ ಭಾರತದಲ್ಲಿ ಹೊಸ ರೆಡ್ಮಿ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ರೆಡ್ಮಿ TV 32 ಇಂಚು ಮತ್ತು 43 ಇಂಚಿನ ಎರಡು ಸ್ಕ್ರೀನ್ ಗಾತ್ರಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಅನ್ನೊದು ಹೈಲೈಟ್‌ ಆಗಿದೆ.

ಶಿಯೋಮಿ

ಹೌದು, ಶಿಯೋಮಿ ಹೊಸ ರೆಡ್ಮಿ ಸ್ಮಾರ್ಟ್‌ ಟಿವಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿ ಕ್ರೋಮಾಕಾಸ್ಟ್‌ ಇಂಟರ್‌ಬಿಲ್ಟ್‌ ಮತ್ತು ಗೂಗಲ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಡ್ಯುಯಲ್ ಬ್ಯಾಂಡ್ ವೈ-ಫೈ, 20W ಸ್ಪೀಕರ್‌ಗಳು ಮತ್ತು ಡಾಲ್ಬಿ ಆಡಿಯೋ ಬೆಂಬಲಿಸಲಿದೆ. ಇನ್ನು ಈ ಟಿವಿ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಸಮಯದಲ್ಲಿ ಮಾರಾಟವಾಗುವ ಸಾದ್ಯತೆ ಇದೆ. ಇನ್ನುಳಿದಂತೆ ಈ ರೆಡ್ಮಿ ಸ್ಮಾರ್ಟ್‌ಟಿವಿಯ ವಿಶೆಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ

ಶಿಯೋಮಿ ಲಾಂಚ್‌ ಮಾಡಿರುವ ಹೊಸ ರೆಡ್ಮಿ ಸ್ಮಾರ್ಟ್ ಟಿವಿ 32 ಇಂಚು ಮತ್ತು 43 ಇಂಚಿನ ಸ್ಕ್ರೀನ್‌ ಗಾತ್ರದ ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ 32 ಇಂಚಿನ ರೂಪಾಂತರವು ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 43 ಇಂಚಿನ ರೂಪಾಂತರವು ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಹೊಸ ಸ್ಮಾರ್ಟ್ ಟಿವಿಗಳು "ಆಲ್-ರೌಂಡ್ ಎಂಟರ್ಟೈನ್ಮೆಂಟ್" ನೀಡುವ ಗುರಿಯನ್ನು ಹೊಂದಿವೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಗಳು ಡಾಲ್ಬಿ ಆಡಿಯೋ, IMDb ಇಂಟಿಗ್ರೇಷನ್ ಮತ್ತು ಗೂಗಲ್ ಅಸಿಸ್ಟೆಂಟ್ ಸಪೋರ್ಟ್ ನೀಡುವ ವಿಶೇಷ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ.

ರೆಡ್ಮಿ

ಇನ್ನು ಈ ಹೊಸ ರೆಡ್ಮಿ ಸ್ಮಾರ್ಟ್ ಟಿವಿಗಳು ಡಾಲ್ಬಿ 5.1 ಸರೌಂಡ್ ಸೌಂಡ್ ಅನುಭವವನ್ನು ನೀಡಲಿವೆ. ಈ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್ 11 ಬೆಂಬಲಿಸಲಿದ್ದು, ಇತ್ತೀಚಿನ ಪ್ಯಾಚ್ ವಾಲ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಇದಲ್ಲದೆ ಶಿಯೋಮಿ ಕಂಪೆನಿ ಈ ಹೊಸ ರೆಡ್ಮಿ ಸ್ಮಾರ್ಟ್ ಟಿವಿಗಳನ್ನು ಮಿ ರಿಮೋಟ್‌ನೊಂದಿಗೆ ಸಂಯೋಜಿಸಿದೆ. ಇನ್ನು ಈ ಟಿವಿ ರಿಮೋಟ್‌ ಗೂಗಲ್ ಅಸಿಸ್ಟೆಂಟ್ ಬಟನ್ ಮತ್ತು ಕ್ವಿಕ್ ಮ್ಯೂಟ್ ಮತ್ತು ಕ್ವಿಕ್ ವೇಕ್ ಸೇರಿದಂತೆ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಕಸ್ಟಮೈಸೆಬಲ್‌ ಪಿಕ್ಚರ್‌ ಕಂಟ್ರೋಲ್‌ ಅನ್ನು ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ HDMI, 3.5mm ಜಾಕ್, USB, AV, ಈಥರ್ನೆಟ್ ಮತ್ತು ಆಂಟೆನಾ ಪೋರ್ಟ್‌ಗಳನ್ನು ಬೆಂಬಲಿಸಲಿದೆ.

ಸ್ಮಾರ್ಟ್ ಟಿವಿ

ಇನ್ನು ಈ ಸ್ಮಾರ್ಟ್ ಟಿವಿ ವೀಕ್ಷಕರಿಗೆ ಚಲನಚಿತ್ರಗಳ ರೇಟಿಂಗ್‌ಗಳನ್ನು ಮತ್ತು ಕಂಟೆಂಟ್‌ ಪೇಜ್‌ನಿಂದ ನೇರವಾಗಿ ಶೋ ಗಳನ್ನು ಪರಿಶೀಲಿಸಲು ಅನುವು ಮಾಡಿಕೊಡಲಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಡಾಲ್ಬಿ ಆಡಿಯೋ ಬೆಂಬಲಿಸಲಿದ್ದು, 20W ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಶಿಯೋಮಿ ರೆಡ್ಮಿ ಟಿವಿ ಆಡಿಯೋ ಸಿಸ್ಟಮ್ ಡಿಟಿಎಸ್ ವರ್ಚುವಲ್: ಎಕ್ಸ್ ಸರೌಂಡ್ ಸೌಂಡ್ಸ್ಮ ಅನ್ನು ಕೂಡ ಹೊಂದಿದೆ. ಈ ಸ್ಮಾರ್ಟ್‌ಟಿವಿ ಕ್ವಿಕ್‌ ಮ್ಯೂಟ್‌ ಹೊಂದಿರುವುದರಿಂದ, ಇದನ್ನು ಎರಡು ಬಾರಿ ಟ್ಯಾಪ್ ಮಾಡುವ ಮೂಲಕ ಟಿವಿಯನ್ನು ಮ್ಯೂಟ್ ಮಾಡುತ್ತದೆ. ರಿಮೋಟ್ ಕೂಡ ಕ್ವಿಕ್ ವೇಕ್ ಫೀಚರ್ ಅನ್ನು ಒಳಗೊಂಡಿದೆ, ಇದು ಐದು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಟಿವಿಯನ್ನು ಆನ್ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ರೆಡ್ಮಿ ಸ್ಮಾರ್ಟ್ ಟಿವಿ

ಭಾರತದಲ್ಲಿ ರೆಡ್ಮಿ ಸ್ಮಾರ್ಟ್ ಟಿವಿ ಬೆಲೆ 32 ಇಂಚಿನ ರೂಪಾಂತರಕ್ಕೆ 15,999ರೂ. ಬೆಲೆಯನ್ನು ಹೊಂದಿದೆ. ಹಾಗೆಯೇ ರಡ್ಮಿ ಟಿವಿಯ 43 ಇಂಚಿನ ರೂಪಾಂತರವು 25,999 ರೂ. ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಯಾವಾಗ ಮಾರಾಟವಾಗಲಿದೆ ಅನ್ನೊದನ್ನ ಇನ್ನು ಬಹಿರಂಗಪಡಿಸಿಲ್ಲ. ಆದರೆ ಈ ಸ್ಮಾರ್ಟ್‌ಟಿವಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ ಸೇಲ್‌ನಲ್ಲಿ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Most Read Articles
Best Mobiles in India

English summary
New smart TVs are aimed to bring an “all-round entertainment” and offer features including Dolby Audio, IMDb integration, and Google Assistant support.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X