ಕರ್ನಾಟಕದಲ್ಲಿ ಎರಡು ಕೋಟಿ+ ಗ್ರಾಹಕರ ನೆಲೆಯನ್ನು ದಾಟಿದ ಜಿಯೋ!

|

ಕೇವಲ 3 ವರ್ಷಗಳಲ್ಲಿ, ಜಿಯೋ ಭಾರತೀಯರೆಲ್ಲರನ್ನೂ ಡೇಟಾದ ಶಕ್ತಿಯೊಂದಿಗೆ ಸಶಕ್ತರನ್ನಾಗಿಸುವ ಮೂಲಕ ಅವರು ಮಾಂತ್ರಿಕ ಕೆಲಸಗಳನ್ನು ಮಾಡುವುದನ್ನು ಸಾಧ್ಯವಾಗಿಸಿದೆ. ದೇಶದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರೂಪಿಸುವಲ್ಲಿ ಜಿಯೋ ಪರಿವರ್ತನಶೀಲ ಪಾತ್ರವನ್ನು ವಹಿಸಿದೆ ಮತ್ತು ಅದರ ಪ್ರಾರಂಭದಿಂದಾಗಿ ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ರಾಷ್ಟ್ರದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆದ ಜಿಯೋ ಈಗ ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಗ್ರಾಹಕರ ನೆಲೆಯನ್ನು ಪಡೆದುಕೊಂಡಿದೆ.

ಕರ್ನಾಟಕದಲ್ಲಿ

ಕರ್ನಾಟಕದಲ್ಲಿನ ನೈಜ 4ಜಿ ಆಪರೇಟರ್ ಆದ ಜಿಯೋ, ಟೆಲಿಕಾಂ ಉದ್ಯಮವು ಸಂಖ್ಯೆಗಳ ಕುಗ್ಗುವಿಕೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೂ ನಿರಂತರವಾಗಿ ಬೆಳೆಯುತ್ತಿದೆ. ಜಿಯೋನ ನಿರಂತರ ಗ್ರಾಹಕ ಸೇರ್ಪಡೆಯು ಜಿಯೋ ಸೇವೆ ಮತ್ತು ಬ್ರಾಂಡ್‌ನ ಕುರಿತು ನಿರಂತರವಾಗಿ ಬೆಳೆಯುತ್ತಿರುವ ಗ್ರಾಹಕರ ಪ್ರೀತಿ, ಒಲವು ಮತ್ತು ಆದ್ಯತೆಗೆ ಸಾಕ್ಷಿಯಾಗಿದೆ. ಗ್ರಾಹಕರು ಕರ್ನಾಟಕದಲ್ಲಿ ಜಿಯೋನ ವಿಸ್ತಾರವಾದ, ವೇಗವಾದ ಮತ್ತು ಅತಿದೊಡ್ಡದಾದ 4ಜಿ ನೆಟ್‌ವರ್ಕ್ ಅನ್ನು ಅನುಭವಿಸುವುದರೊಂದಿಗೆ ಇದು ಕೋವಿಡ್ ಸಮಯದಲ್ಲಿ ಅನೇಕ ಪಟ್ಟು ಹೆಚ್ಚಳ ಕಂಡಿದೆ.

4ಜಿ ಸೇವೆ

ಜಿಯೋ ಡಿಜಿಟಲ್ ಲೈಫ್ ಅನ್ನು ತ್ವರಿತವಾಗಿ ಸ್ವೀಕರಿಸಿದ ಮತ್ತು ಸುಲಭವಾಗಿ ಕೈಗೆಟುಕುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಆನಂದಿಸುತ್ತಿರುವ ಕರ್ನಾಟಕದೆಲ್ಲೆಡೆಯ ಎಲ್ಲ ಚಂದಾದಾರರಿಗೆ ಜಿಯೋ ಧನ್ಯವಾದಗಳನ್ನು ಸಮರ್ಪಿಸುತ್ತದೆ.

ಭಾರತವನ್ನು 2ಜಿ ಮುಕ್ತವಾಗಿಸುವ ಮತ್ತು ನೈಜ 4ಜಿ ಸೇವೆಗಳೊಂದಿಗೆ ಭಾರತೀಯರೆಲ್ಲರನ್ನೂ ಸಶಕ್ತರನ್ನಾಗಿಸುವ ಏಕೈಕ ಉದ್ದೇಶದಿಂದ, ಜಿಯೋ ತನ್ನ ಗ್ರಾಹಕರಿಗೆ ಎಲ್ಲ ಟ್ಯಾರಿಫ್ ಪ್ಲಾನ್‌ಗಳಲ್ಲೂ ಮಾರುಕಟ್ಟೆ ದರದ ಹೋಲಿಕೆಯಲ್ಲಿ 25% ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.

ಡಿಜಿಟಲ್ ಲೈಫ್

ಜಿಯೋ, ಅತ್ಯಂತ ವಿಶಾಲವಾದ ತನ್ನ ಪ್ರಸ್ತುತ ನೆಟ್‌ವರ್ಕ್‌ ಹಾಗೂ ನೆಟ್‌ವರ್ಕ್ ವ್ಯಾಪ್ತಿ ಮತ್ತು ಮೂಲಸೌಕರ್ಯದಲ್ಲಿ ಯೋಜಿತ ಹೆಚ್ಚಳದಿಂದ ರಾಜ್ಯದ ಪ್ರತಿಯೊಂದು ಮನೆಗೂ ತನ್ನ ಸೇವೆ ತಲುಪುತ್ತದೆಂದು ನಂಬುತ್ತದೆ, ಮತ್ತು ಜಿಯೋ ಡಿಜಿಟಲ್ ಲೈಫ್‌ನ ಪ್ರಯೋಜನಗಳನ್ನು ನೀಡುತ್ತದೆ. ಈ ಪ್ರಯೋಜನಗಳು ಹೀಗಿವೆ:

* ಸದೃಢ ಹಾಗೂ ವಿಸ್ತಾರವಾದ 4ಜಿ ನೆಟ್‌ವರ್ಕ್ ಆದ ಜಿಯೋನಲ್ಲಿ ಕರ್ನಾಟಕದಾದ್ಯಂತ ತೊಡಕಿಲ್ಲದ ಸಂಪರ್ಕ

* ಜಿಯೋನ ಅಪರಿಮಿತ ವಾಯ್ಸ್ ಮತ್ತು ಡೇಟಾ ಪ್ರಯೋಜನಗಳು

* ಜಿಯೋಟಿವಿ (ಅತ್ಯಂತ ಜನಪ್ರಿಯವಾದ ಆನ್ ದ ಗೋ, ಕ್ಯಾಚ್-ಅಪ್ ಟಿವಿ ಆಪ್), ಜಿಯೋ ಮ್ಯೂಸಿಕ್, ಜಿಯೋ ಸಿನೆಮಾ, ಜಿಯೋ ಸಾವನ್ ಮತ್ತಿತರ ಇನ್ ಹೌಸ್ ಆಪ್‌ಗಳ ಮೂಲಕ ದೊಡ್ಡ ಪ್ರಮಾಣದ ಜಿಯೋ ಪ್ರೀಮಿಯಂ ಕಂಟೆಂಟ್ ಪಡೆದುಕೊಳ್ಳುವ ಅವಕಾಶ

* ಸರಳ ಮತ್ತು ಅನುಕೂಲಕರ ಆನ್-ಬೋರ್ಡಿಂಗ್ ಅನುಭವದೊಂದಿಗೆ ರಾಜ್ಯಾದ್ಯಂತ ಜಿಯೋ ಸಿಮ್‌ಗಳ ಸುಲಭ ಲಭ್ಯತೆ

ಶಿಕ್ಷಣ

ಜಾಗತಿಕ ಸೋಂಕಿನ ಈ ಸಮಯದಲ್ಲಿ, ಅಂತರಜಾಲವು ನಾವು ಕೆಲಸಮಾಡುವ ವಿಧಾನವನ್ನು ಬದಲಿಸಿ ಜನರಿಗೆ ನೆರವಾದ ಒಂದು ಕ್ಷೇತ್ರವೆಂದರೆ ಶಿಕ್ಷಣ ಹಾಗೂ ಮನೆಯಿಂದ ಕೆಲಸ ಮಾಡುವ ಅವಕಾಶ. ಸರಿಸಾಟಿಯಿಲ್ಲದ ಸಂಪರ್ಕ ಮತ್ತು ಡೇಟಾ ವೇಗದ ಸಹಾಯದಿಂದ ಈ ಸೇವೆಯು ದೊಡ್ಡ ಪಟ್ಟಣಗಳಿಗೆ ಮಾತ್ರ ಸೀಮಿತವಾಗದೆ ಕರ್ನಾಟಕದ ದೂರದ ಭಾಗಗಳನ್ನೂ ತಲುಪುತ್ತಿದೆ.

ಅಭೂತಪೂರ್ವ ವ್ಯಾಪ್ತಿ

ಜಿಯೋನ ಅಭೂತಪೂರ್ವ ವ್ಯಾಪ್ತಿ ಮತ್ತು ಉತ್ತಮ ನೆಟ್‌ವರ್ಕ್ ಅನುಭವವು ಗ್ರಾಹಕರು ಡಿಜಿಟಲ್ ತಂತ್ರಜ್ಞಾನವನ್ನು ಬಳಸಲು ಹೆಚ್ಚು ಉತ್ತಮವಾದ ಸೌಕರ್ಯ ಒದಗಿಸಿದೆ. ಇದು ಕಲಿಕೆಯ ಅನೇಕ ಹೊಸ ಮಾರ್ಗಗಳಿಗೆ ಬಾಗಿಲು ತೆರೆದಿದೆ ಮತ್ತು ಭವಿಷ್ಯದ ಭರವಸೆಯ ಚಿತ್ರವನ್ನು ಕಟ್ಟಿಕೊಡುತ್ತಿದೆ. ಇದರಿಂದ ಗ್ರಾಹಕರಿಗೆ ಮನೆಯಿಂದಲೇ ಕೆಲಸ ಮಾಡಲು, ಕಲಿಯಲು, ಆರೋಗ್ಯದ ಕಾಳಜಿ ವಹಿಸಲು, ಶಾಪಿಂಗ್ ಮಾಡಲು ಮತ್ತು ವೈಯಕ್ತಿಕ ಹಾಗೂ ವೃತ್ತಿಪರ ಡಿಜಿಟಲ್ ಸಂಪರ್ಕಗಳನ್ನು ಸಾಧಿಸಲು ಅನುವುಮಾಡಿಕೊಟ್ಟಿದೆ.

ಎಚ್‌ಡಿ ಸೆಟ್‌ ಟಾಪ್ ಬಾಕ್ಸ್

ಜಾಗತಿಕ ಸೋಂಕಿನ ಈ ಸಮಯದಲ್ಲಿ ಜಿಯೋ ತಂಡವು ಯಾವುದೇ ತೊಡಕುಗಳಿಲ್ಲದಂತೆ ಕೆಲಸ ಮಾಡಿದೆ ಮತ್ತು ತನ್ನ ಎಲ್ಲ ಗ್ರಾಹಕರಿಗೂ ಸಂಪರ್ಕವನ್ನು ಖಚಿತಪಡಿಸಿದೆ. ಟವರ್‌ಗಳಿಗೆ ಇಂಧನ ತುಂಬಿಸುವುದಿರಲಿ ಅಥವಾ ರೀಚಾರ್ಜ್‌ಗಳನ್ನು ಸಕ್ರಿಯಗೊಳಿಸುವುದೇ ಇರಲಿ, ಅಡಚಣೆಗಳಿಲ್ಲದ ಡೇಟಾ ಸ್ಟ್ರೀಮಿಂಗ್ ಸಾಧ್ಯವಾಗಿಸಲು ಜಿಯೋ ತಂಡ ಯಾವಾಗಲೂ ಉಪಸ್ಥಿತರಿದ್ದಾರೆ.

ಎಂಬಿಪಿಎಸ್

ಜಿಯೋಫೈಬರ್ ಪ್ರಾರಂಭದ ಸದ್ಯದ ಹಂತದಲ್ಲಿ ಕರ್ನಾಟಕದ ವಿವಿಧ ನಗರಗಳಲ್ಲಿ 20 ಲಕ್ಷಕ್ಕೂ ಹೆಚ್ಚಿನ ಮನೆಗಳನ್ನು ಸಂಪರ್ಕಿಸಲು ಜಿಯೋ ಯೋಜಿಸಿದೆ. ಜಿಯೋಫೈಬರ್ ಗ್ರಾಹಕರಿಗೆ 1 ಗಿಗಾಬೈಟ್‌ವರೆಗಿನ ವೇಗ (100 ಎಂಬಿಪಿಎಸ್ ವೇಗದಿಂದ ಪ್ರಾರಂಭ) ಮತ್ತು 4ಕೆ ಎಚ್‌ಡಿ ಸೆಟ್‌ ಟಾಪ್ ಬಾಕ್ಸ್ ಮೂಲಕ ಅಂತರ್ಗತವಾಗಿರುವ ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್, ಜ಼ೀ 5, ಆಲ್ಟ್ ಬಾಲಾಜಿ, ಕಲರ್ಸ್, ಸನ್ ನೆಕ್ಸ್ಟ್, ವೂಟ್ ಮುಂತಾದ ಅನೇಕ ಒಟಿಟಿ ವೇದಿಕೆಗಳ ಕಂಟೆಂಟ್ ಒದಗಿಸುವ ಭರವಸೆ ನೀಡುತ್ತದೆ.

Most Read Articles
Best Mobiles in India

English summary
Jio crosses two crore-plus customer base in Karnataka.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X