ಜಿಯೋಗಿಂತ ಏರ್‌ಟೆಲ್‌ 4G ವೇಗ ಜಾಸ್ತಿ ಅಂದಿದಕ್ಕೆ ಬಿತ್ತು ಕೇಸು..!!

Written By:

ಭಾರ್ತಿ ಏರ್‌ಟೆಲ್‌ ದೇಶದಲ್ಲಿ ಅತ್ಯಂತ ವೇಗದ ಇಂಟರ್ನೆಟ್ ಹೊಂದಿದೆ ಎಂದು ಹೇಳಿದ ಒಂದೇ ಕಾರಣಕ್ಕೆ ರಿಲಯನ್ಸ್ ಮಾಲೀಕತ್ವದ ಜಿಯೋ ಸೋಮವಾರ ಬ್ರಾಡ್‌ಬ್ಯಾಂಡ್ ವೇಗವನ್ನು ಅಳತೆ ಮಾಡುವ ಓಕ್ಲಾ ಸಂಸ್ಥೆಯ ಮೇಲೆ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್‌ನಲ್ಲಿ ದೂರೊಂದನ್ನು ದಾಖಲಿಸಿದೆ.

ಜಿಯೋಗಿಂತ ಏರ್‌ಟೆಲ್‌ 4G ವೇಗ ಜಾಸ್ತಿ ಅಂದಿದಕ್ಕೆ ಬಿತ್ತು ಕೇಸು..!!

ಓದಿರಿ: 42Gbps ವೇಗದ Wi-Fi: ಸೆಕೆಂಡ್‌ನಲ್ಲಿ 40 ಸಿನಿಮಾ ಡೌನ್‌ಲೋಡ್ ಮಾಡಬಹುದಂತೆ..!!!

ಇದಕ್ಕೆ ವಿವರಣೆ ನೀಡಿರುವ ಜಿಯೋ, ದೇಶದಲ್ಲಿ ಏರ್‌ಟೆಲ್ ಮಾತ್ರವೇ ವೇಗದ ಇಂಟರ್ನೆಟ್ ಸೇವೆಯನ್ನು ನೀಡುತ್ತಿದೆ ಎಂಬುದು ಸುಳ್ಳು. ಸುಮ್ಮನೆ ಏರ್‌ಟೆಲ್ ಪ್ರಮೋಟ್ ಮಾಡುವ ಮೂಲಕ ಗ್ರಾಹಕರನ್ನು ಹಾದಿತಪ್ಪಿಸುತ್ತಿರುವ ಓಕ್ಲಾ ಮೇಲೆ ದೂರು ದಾಖಲಿಸಿರುವುದಾಗಿ ತಿಳಿಸಿದೆ.

ಅತ್ಯಂತ ವೇಗದ ಇಂಟರ್‌ನೆಟ್ ವೇಗವನ್ನು ನೀಡುತ್ತಿರುವುದು ಏರ್‌ಟೆಲ್ ಎಂಬುದನ್ನು ಸರ್ಕಾರಿ ಸಂಸ್ಥೆಗಳು ದೃಡೀಕರಿಸಬೇಕೆ ಹೊರತು ಬೇರೆ ಕಂಪನಿಗಳಲ್ಲ ಎಂದು ತಿಳಿಸಿದೆ.

ಜಿಯೋಗಿಂತ ಏರ್‌ಟೆಲ್‌ 4G ವೇಗ ಜಾಸ್ತಿ ಅಂದಿದಕ್ಕೆ ಬಿತ್ತು ಕೇಸು..!!

ಓದಿರಿ: ಆಪಲ್ ಪೋನಿನ ಬೆಲೆಯಲ್ಲೇ ಭಾರೀ ಕಡಿತ: ರೂ. 19,999ಕ್ಕೆ ಐಪೋನ್ ಲಭ್ಯ..!!

ಓಕ್ಲಾ ನೀಡಿರುವ ಈ ಹೇಳಿಕೆಯಿಂದ ಜನರು ಏರ್‌ಟೆಲ್ ದೇಶದಲ್ಲಿ ಅತ್ಯಂತ ವೇಗ ಇಂಟರ್ನೆಟ್ ವೇಗವನ್ನು ಹೊಂದಿದೆ ಎಂದು ತಿಳಿಯುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ನಮಗೆ ನಷ್ಟ ಉಂಟಾಗುತ್ತಿದೆ. ಏರ್‌ಟೆಲ್ ಸಹ ತನ್ನ ಜಾಹೀರಾತುಗಳಲ್ಲಿ ಇದನ್ನೇ ಬಳಿಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

ಓಕ್ಲಾ ನಾನ್‌ ಪ್ರಾಫಿಟ್ ಆರ್ಗನೇಜೆಷನ್ ಸೇವೆಗಳಿಗೆ ಶುಲ್ಕ ವಿಧಿಸಲಿದೆ. ಅದಕ್ಕಾಗಿ ಏರ್‌ಟೆಲ್ ಚೆನ್ನಾಗಿದೆ ಎಂದು ಹೇಳಬಹುದು. ಹಾಗಾಗಿ, ಓಕ್ಲಾ ಹೇಳಿರುವುದು ಸರಿ ಇಲ್ಲ ಎಂದು ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್‌ನಲ್ಲಿ ತಿಳಿಸಿದೆ.

Read more about:
English summary
Reliance Jio on Monday lodged a complaint with the Advertising Standards Council of India (ASCI) against broadband tester Ookla’s to know more visit kananda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot