ಜಿಯೋ ಟೆಲಿಕಾಂನಿಂದ ಜಿಯೋ ಫೋನ್‌ ಬಳಕೆದಾರರಿಗೆ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌!

|

ರಿಲಯನ್ಸ್‌ ಜಿಯೋ ಟೆಲಿಕಾಂ ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ತನ್ನ ಗ್ರಾಹಕರಿಗೆ ಆಕರ್ಷಕ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳ ಮೂಲಕ ಗಮನ ಸೆಳೆದಿದೆ. ಇದಲ್ಲದೆ ತನ್ನ ಜಿಯೋ ಫೀಚರ್‌ ಫೋನ್‌ ಮೂಲಕವೂ ಸೌಂಡ್‌ ಮಾಡುತ್ತಿದೆ. ಇನ್ನು ಜಿಯೋಫೋನ್‌ ಬಳಕೆದಾರರಿಗೆ ಪ್ರತ್ಯೇಕವಾದ ರೀಚಾರ್ಜ್‌ ಪ್ಲಾನ್‌ಗಳನ್ನು ಸಹ ಪರಿಚಯಿಸಿದೆ. ಇದೀಗ ರಿಲಯನ್ಸ್ ಜಿಯೋ ತನ್ನ ಜಿಯೋ ಫೋನ್ ಬಳಕೆದಾರರಿಗಾಗಿ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ ಅನ್ನು ಪರಿಚಯಿಸಿದೆ.

ಜಿಯೋಫೋನ್‌

ಹೌದು, ಜಿಯೋ ಟೆಲಿಕಾಂ ಜಿಯೋಫೋನ್‌ ಬಳಕೆದಾರರಿಗೆ ಹೊಸದಾಗಿ 75 ರೂ,ಗಳ ರೀಚಾರ್ಜ್ ಪ್ಲಾನ್ ಅನ್ನು ಲಾಂಚ್‌ ಮಾಡಿದೆ. ಜಿಯೋ ಟೆಲಿಕಾಂ ಈಗಾಗಲೇ ತನ್ನ ಹಳೆಯ ರೀಚಾರ್ಜ್‌ ಪ್ಲಾನ್‌ಗಳಾದ 39ರೂ ಮತ್ತು 69ರೂ ಬೆಲೆಯ ಪ್ಲಾನ್‌ಗಳನ್ನು ಸ್ಟಾಪ್‌ ಮಾಡಿದೆ. ಜಿಯೋಫೋನ್‌ ನೆಕ್ಸ್ಟ್‌ ಸ್ಮಾರ್ಟ್‌ಫೋನ್‌ ಲಾಂಚ್‌ಗೂ ಮುನ್ನ ಪರಿಚಯಿಸಿರುವ ಈ ಪ್ಲಾನ್‌ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಹಾಗಾದ್ರೆ ಈ ಹೊಸ ಪ್ಲಾನ್‌ ಯಾವೆಲ್ಲಾ ಪ್ರಯೋಜನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಫೋನ್

ಜಿಯೋ ಫೋನ್ ಬಳಕೆದಾರರಿಗೆ ಪರಿಚಯಿಸಿರುವ 75ರೂ,ಗಳ ಪ್ರಿಪೇಯ್ಡ್ ಪ್ಲಾನ್ 28 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಲಾನ್‌ ಡೈಲಿ 50 ಎಸ್ಎಂಎಸ್ ಮತ್ತು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ನಂತಹ ಜಿಯೋ ಆಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಇದಲ್ಲದೆ ಅನಿಯಮಿತ ಕರೆಗಳು ಮತ್ತು ತಿಂಗಳಿಗೆ 3GB 4G ಡೇಟಾವನ್ನು ಪ್ರಯೋಜನ ಸಿಗಲಿದೆ. 39ರೂ ಮತ್ತು 69ರು ಪ್ಲಾನ್‌ ಈಗಾಗಲೇ ಸ್ಟಾಪ್‌ ಮಾಡಿರುವುದರಿಂದ 75ರೂ, ಗಳ ಪ್ಲಾನ್‌ ಸದ್ಯ ಲಭ್ಯವಿರುವ ಅಗ್ಗದ ಬೆಲೆಯ ಯೋಜನೆ ಆಗಿದೆ.

ಟೆಲಿಕಾಂ

ಇನ್ನು ಜಿಯೋ ಟೆಲಿಕಾಂ ಜಿಯೋ ಫೋನ್‌ ಬಳಕೆದಾರರಿಗೆ ಹಲವು ಪ್ಲಾನ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಜಿಯೋ 125ರೂ. ಪ್ಲಾನ್ ಕೂಡ ಸೇರಿದೆ. ಈ ಪ್ಲಾನ್‌ 28 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಒಟ್ಟು 14GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇನ್ನು ಅನಿಯಿತ ಕರಗಳ ಜೊತೆಗೆ ಒಟ್ಟು 300 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 155ರೂ. ಪ್ಲಾನ್

ಜಿಯೋ 155ರೂ. ಪ್ಲಾನ್

ಜಿಯೋ ಫೋನ್‌ ಬಳಕೆದಾರರು 155ರೂ. ಪ್ಲ್ಯಾನ್‌ ಮೂಲಕ ಫೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 28GB ಡೇಟಾ ಪ್ರಯೋಜನ ಪಡೆದುಕೊಳ್ಳಬಹುದಾಗಿದೆಎ. ಅಲ್ಲದೆ ಈ ಪ್ಲಾನ್‌ನಲ್ಲಿ ಪ್ರತಿದಿನ 1GB ಡೇಟಾ ಪ್ರಯೋಜನ ಕೂಡ ಸಿಗಲಿದೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ.

ಜಿಯೋ 185ರೂ. ಪ್ಲಾನ್

ಜಿಯೋ 185ರೂ. ಪ್ಲಾನ್

ಜಿಯೋ ಟೆಲಿಕಾಂನ 185ರೂ. ಪ್ಲ್ಯಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ. ಈ ಪ್ಲಾನ್‌ ಫೂರ್ಣ ವ್ಯಾಲಿಡಿಟಿ ಅವಧಿಯಲ್ಲಿ ಒಟ್ಟು 56GB ಡೇಟಾ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ನೀವು ಪ್ರತಿದಿನ 2GB ಡೇಟಾ ಬಳಕೆ ಮಾಡಬಹುದು. ಇನ್ನು ಎಂದಿನಂತೆ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ.

Most Read Articles
Best Mobiles in India

English summary
Reliance Jio has introduced a new prepaid recharge plan for Jio Phone users. The new Jio Rs. 75 recharge plan is the cheapest plan currently offered by the telecom giant.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X