ಶೀಘ್ರದಲ್ಲೇ ಲಾಂಚ್‌ ಆಗಲಿದೆ ಜಿಯೋ ಫೋನ್ 5G! ಚೀನಾ ಫೋನ್‌ಗಳಿಗೆ ಬಿಗ್‌ ಶಾಕ್‌!

|

ದೇಶದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ರಿಲಯನ್ಸ್‌ ಜಿಯೋ ಸ್ಮಾರ್ಟ್‌ಫೋನ್‌ ವಲಯದಲ್ಲಿಯೂ ಕೂಡ ಗುರುತಿಸಿಕೊಂಡಿದೆ. ಈಗಾಗಲೇ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಮೂಲಕ ಸಖತ್‌ ಸೌಂಡ್‌ ಮಾಡಿದ್ದ ಜಿಯೋ ಶೀಘ್ರದಲ್ಲೇ ಹೊಸ 5G ಫೋನ್‌ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈಗಾಗಲೇ ಜಿಯೋ ಫೋನ್‌ 5G ಬಿಡುಗಡೆ ಮಾಡುವುದಕ್ಕೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಆದರೆ ಈ ಹೊಸ 5G ಫೋನಿನ ಬಿಡುಗಡೆ ದಿನಾಂಕವನ್ನು ಇನ್ನು ಬಹಿರಂಗಪಡಿಸಿಲ್ಲ.

ಜಿಯೋ

ಹೌದು, ರಿಲಯನ್ಸ್ ಜಿಯೋ ಶೀಘ್ರದಲ್ಲೇ ಭಾರತದಲ್ಲಿ ಹೊಸ ಜಿಯೋ ಫೋನ್ 5G ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಭಾರತದಲ್ಲಿ 5G ರೂಲ್‌ಔಟ್‌ ಮಾಡಲು ಸಿದ್ಧತೆ ನಡೆಸಿರುವ ರಿಲಯನ್ಸ್ ಜಿಯೋ ತನ್ನ 5G ಫೋನ್‌ ಮೂಲಕ ದೇಶದ ಮೂಲೆ ಮೂಲೆಗೂ 5G ತಲುಪಿಸುವುದಕ್ಕೆ ಮುಂದಾಗಿದೆ. ಈಗಾಗಲೇ ಭಾರತದಲ್ಲಿ ಗೂಗಲ್ ಸಹಯೋಗದೊಂದಿಗೆ ಜಿಯೋ ಫೋನ್ ನೆಕ್ಸ್ಟ್ ಅನ್ನು ಪ್ರಾರಂಭಿಸಿದ್ದ ಜಿಯೋ, 5G ಫೋನ್‌ ನಲ್ಲಿಯು ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆಯಿದೆ. ಹಾಗಾದ್ರೆ ಜಿಯೋ 5G ಫೋನ್‌ ಹೇಗಿರಲಿದೆ? ಏನೆಲ್ಲಾ ವಿಶೇಷತೆಗಳನ್ನು ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ

ಲಭ್ಯವಿರುವ ಮಾಹಿತಿಗಳ ಪ್ರಕಾರ ಜಿಯೋ ಫೋನ್ 5G ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇನ್ನು ಈ ಫೋನ್‌ನ ಬೆಲೆ ಬಜೆಟ್‌ ಬೆಲೆಯಲ್ಲಿ ಇರಲಿದೆ ಎನ್ನಲಾಗಿದ್ದು, ಸುಮಾರು 12,000ರೂ. ಗಳಲ್ಲಿ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಮತ್ತೊದು ವರದಿಯಲ್ಲಿ ಈ ಫೋನ್‌ 2,500 ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ದೊರೆಯುವ ನಿರೀಕ್ಷೆಯಿದೆ ಎಂದು ಹೇಳಿಕೊಂಡಿದೆ. ಆದರೆ ಜಿಯೋ ಫೋನ್ 5G ಫೀಚರ್ ಫೋನ್ ಆಗಿದ್ದರೆ ಮಾತ್ರ ಈ ಬೆಲೆಯಲ್ಲಿ ಬರಲಿದೆ ಎನ್ನಲಾಗಿದೆ.

ಜಿಯೋ

ಇನ್ನು ಜಿಯೋ ಫೋನ್ 5G ಫೋನ್‌ 6.5-ಇಂಚಿನ HD+ IPS LCD ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 1:600 ​​x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರುವ ನಿರೀಕ್ಷೆಯಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 480 5G SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇನ್ನು ಜಿಯೋ ಫೋನ್ 5 ಜಿ ಅದೇ ಪ್ರಗತಿ ಓಎಸ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ, ಇದು ಜಿಯೋ ಆಂಡ್ರಾಯ್ಡ್ ಫೋನ್‌ಗಳಿಗಾಗಿ ಗೂಗಲ್ ಸಹಯೋಗದಲ್ಲಿ ರಚಿಸಲಾದ ಜಿಯೋದಿಂದ ಕಸ್ಟಮ್ ಆಂಡ್ರಾಯ್ಡ್ ಸಾಫ್ಟ್‌ವೇರ್ ಆಗಿದೆ. ಹಾಗೆಯೇ4GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಜಿಯೋ ಫೋನ್ 5G

ಜಿಯೋ ಫೋನ್ 5G ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರುವ ಸಾದ್ಯತೆಯಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿರಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಇದು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಇದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

‘ಜಿಯೋ ಫ್ರೀಡಂ ಆಫರ್'

‘ಜಿಯೋ ಫ್ರೀಡಂ ಆಫರ್'

ಇನ್ನು ಜಿಯೋ ಟೆಲಿಕಾಂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ‘ಜಿಯೋ ಫ್ರೀಡಂ ಆಫರ್' ಘೋಷಿಸಿದೆ. ಅದರಂತೆ 2,999 ರ ವಾರ್ಷಿಕ ರೀಚಾರ್ಜ್ ಯೋಜನೆಯಾದ ‘ಜಿಯೋ ಫ್ರೀಡಂ ಆಫರ್' ನಲ್ಲಿ ರೂ. 3,000 ಮೌಲ್ಯದ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ.
* ಹೆಚ್ಚಿನ ಡೇಟಾವನ್ನು ಬಳಸುವ ಸ್ವಾತಂತ್ರ್ಯ: ದೈನಂದಿನ ಮಿತಿಯನ್ನು ಮೀರಿ, ಹೆಚ್ಚುವರಿ 75 GB ಹೈ ಸ್ಪೀಡ್ ಡೇಟಾ.
* ಫ್ರೀಡಂ ಟು ಟ್ರಾವಲ್‌ ಸ್ವಾತಂತ್ರ್ಯ:4500 ರೂ. ಮತ್ತು ಹೆಚ್ಚಿನ ಪಾವತಿ ಮೊತ್ತದ ಮೇಲೆ 750 ರೂ. ಮೌಲ್ಯದ ಇಕ್ಸಿಗೋ ಕೂಪನ್‌ಗಳು
* ಫ್ರೀಡಂ ಟು ಹೆಲ್ತ್‌: ಕನಿಷ್ಠ 750 ರೂ. ರಿಯಾಯಿತಿಯ ನೆಟ್‌ಮೆಡಿಸ್ (Netmeds ) ಕೂಪನ್‌ಗಳು ಸಿಗಲಿದೆ. (3 ರಿಯಾಯಿತಿ ಕೂಪನ್‌ಗಳು ಪ್ರತಿ ಆಫರ್ 25% - ರೂ. 1000 ಮತ್ತು ಹೆಚ್ಚಿನ ಖರೀದಿಗೆ ಅನ್ವಯಿಸುತ್ತದೆ)
* ಫ್ರೀಡಮ್ ಟು ಫ್ಯಾಶನ್: 2990 ರೂ. ಮತ್ತು ಅದಕ್ಕಿಂತ ಹೆಚ್ಚಿನ ಖರೀದಿಗೆ 750 ರೂ. ಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು Ajio ಕೂಪನ್ ನೀಡುತ್ತದೆ.

Best Mobiles in India

Read more about:
English summary
Reliance Jio is expected to launch a new Jio Phone 5G in India soon

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X