'ಕೇಬಲ್ ಟಿವಿ' ಶವಪೆಟ್ಟಿಗೆಗೆ ಕೊನೆ ಮೊಳೆ!..ಅಂಬಾನಿಯಿಂದ ಮತ್ತೊಂದು ಆಫರ್!

|

ಬಿಲಿಯನೇರ್ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ''ಎಲ್ಲಾ ಜಿಯೋಫೈಬರ್ ಗ್ರಾಹಕರಿಗೆ ಪೂರಕವಾಗಿ ಉಚಿತ ಸೆಟ್‌ಟಾಪ್ ಬಾಕ್ಸ್ ನೀಡುತ್ತದೆ" ಎಂದು ಮೂಲಗಳು ತಿಳಿಸಿವೆ. ಟೆಲಿಕಾಂ ಆಪರೇಟರ್ ಜಿಯೋ ತನ್ನ ಪ್ರತಿ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಉಚಿತ ಸೆಟ್ ಟಾಪ್ ಬಾಕ್ಸ್ ನೀಡಿ, ಮನೆ ಮನೆಯ ಕೇಬಲ್ ಟಿವಿ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಮೂಲದ ದೇಶದಲ್ಲಿ ಮತ್ತೊಮ್ಮೆ ಕಿಚ್ಚು ಹಚ್ಚಿಸಲು ಅಂಬಾನಿ ರೆಡಿಯಾಗಿದ್ದಾರೆ.

ಉಚಿತ ಪ್ರವೇಶ

ಇತ್ತೀಚಿನ ವರದಿ ಪ್ರಕಾರ, ಜಿಯೋಫೈಬರ್ ಗ್ರಾಹಕರು ಚಲನಚಿತ್ರಗಳು ಮತ್ತು ಪ್ರಮುಖ ಮನರಂಜನಾ ಮೊಬೈಲ್ ಅಪ್ಲಿಕೇಶನ್‌ಗಳ ಇತರ ವೀಡಿಯೊ ವಿಷಯಗಳಿಗೆ ಉಚಿತ ಪ್ರವೇಶವನ್ನು ಹೊಂದಿರುತ್ತಾರೆ.ಅವರ ಚಂದಾದಾರಿಕೆ ಶುಲ್ಕವನ್ನು ಮಾಸಿಕ ಬ್ರಾಡ್‌ಬ್ಯಾಂಡ್ ಸಂಪರ್ಕ ದರಗಳಲ್ಲಿ ಒಟ್ಟುಗೂಡಿಸಲಾಗುತ್ತದೆ ಮತ್ತು ಯಾವುದೇ ಪ್ರತ್ಯೇಕ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಇದರಿಂದ ಕೇಬಲ್ ಟಿವಿ ಗ್ರಾಹಕರ ಕಣ್ಣು ಜಿಯೋ ಫೈಬರ್‌ನತ್ತ ವಾಲುವ ಸಾಧ್ಯತೆ ಹೆಚ್ಚಾಗಿದೆ.

ಭದ್ರತಾ ಠೇವಣಿ

ಭಾರತದ ಟೆಲಿಕಾಂದಲ್ಲಿ ಜಿಯೋ ಮೂಲಕ ಬಿರುಗಾಳಿ ಬೀಸಿದ ಅಂಬಾನಿ, ಇದೀಗ ಮೂರು ವರ್ಷಗಳ ನಂತರ 'ಜಿಯೋ ಫೈಬರ್' ಮೂಲಕ ಮತ್ತೊಮ್ಮೆ ದೇಶದಲ್ಲಿ ಬದಲಾವಣೆಗೆ ನಾಂದಿಹಾಡಲು ಮುಂದಾಗಿದ್ದಾರೆ. ಆಯ್ದ ನಗರಗಳಲ್ಲಿ ಜಿಯೋ ಗಿಗಾ ಫೈಬರ್ ಪೂರ್ವವೀಕ್ಷಣೆ ಪ್ರಸ್ತಾಪದೊಂದಿಗೆ 2500 ರೂ.ಗಳ ಭದ್ರತಾ ಠೇವಣಿ ಹೊಂದಿದೆ. ಹೊಸ ಗ್ರಾಹಕರು 1500 ರೂ.ಗಳ ಮರುಪಾವತಿಸಬಹುದಾದ ಭದ್ರತಾ ಠೇವಣಿ ಪಾವತಿಸಬೇಕಾಗುತ್ತದೆ. ಜಿಯೋ ಫೈಬರ್ ಸಹ 1000 ರೂ.ಗಳನ್ನು ಅನುಸ್ಥಾಪನಾ ಶುಲ್ಕವಾಗಿ ವಿಧಿಸುತ್ತದೆ.

1Gbps

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೈಬರ್ ಅನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಗಿದೆ. 100Mbps ನಿಂದ ಪ್ರಾರಂಭವಾದ ವೇಗವು ಈಗ 1Gbps ವರೆಗೆ ಏರಿದೆ. ಪ್ರಾಯೋಗಿಕ ಹಂತದಲ್ಲಿ 5 ಲಕ್ಷ ಬಳಕೆದಾರರನ್ನು ಹೊಂದಿರುವ ಇದು ಇದೀಗ ಭಾರತದ ಅತಿದೊಡ್ಡ ಬೀಟಾ ಕಾರ್ಯಕ್ರಮವಾಗಿದೆ. ಡೆಮೊದಲ್ಲಿ ತೋರಿಸಿರುವಂತೆ ವೇಗ ಪರೀಕ್ಷೆಯು ಭರವಸೆಯಂತೆ 1 ಜಿಬಿಪಿಎಸ್ ತಲುಪಿದೆ ಎಂದು ಕಂಪನಿಯು ತೋರಿಸಿದೆ. ಜಿಯೋಕಾಲ್ ಈಗ ವಿವಿಧ ಸ್ಥಳಗಳಿಂದ ನಾಲ್ಕು ಜನರನ್ನು ಸಂಪರ್ಕಿಸುತ್ತದೆ.

2 ಕೋಟಿ ನಿವಾಸ

ರಿಲಯನ್ಸ್ ಜಿಯೋ ಫೈಬರ್ ಈಗಾಗಲೇ 1.5 ಕೋಟಿ ನೋಂದಣಿಗಳನ್ನು ಪಡೆದಿದೆ ಮತ್ತು ಭಾರತದ 1,600 ಪಟ್ಟಣಗಳಲ್ಲಿ 2 ಕೋಟಿ ನಿವಾಸಗಳನ್ನು ತಲುಪುವ ಉದ್ದೇಶವನ್ನು ಹೊಂದಿದೆ. ಆರಂಭದಲ್ಲಿ ಜಿಯೋ ಫೈಬರ್ ಸಂಪರ್ಕಗಳು ಆಯ್ದ ನಗರಗಳಲ್ಲಿ ಮಾತ್ರ ಲಭ್ಯವಿರುತ್ತವೆ. ಜಿಯೋ ನೀಡಿರುವ ಮಾಹಿತಿಯಂತೆ, ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಜೈಪುರ, ಹೈದರಾಬಾದ್, ಸೂರತ್, ವಡೋದರಾ, ಚೆನ್ನೈ ಸೇರಿದಂಷತೆ ರಾಜ್ಯದ ಇನ್ನೂ ಕೆಲವು ಜಿಲ್ಲೆಗಳಲ್ಲಿ ರಿಲಯನ್ಸ್ ಜಿಯೋ ಫೈಬರ್ ಸೇವೆ ಸಿಗಲಿದೆ.

Most Read Articles
Best Mobiles in India

English summary
Telecom operator Reliance Jio is likely to provide free set top box with its every broadband connection to woo direct-to-home and cable TV customers, according to a source privy to the development. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more