ಜಿಯೋಫೋನ್ ಆಲ್ ಇನ್ ಒನ್!..75 ರೂ.ಗೆ ಒಂದು ತಿಂಗಳು ಡೇಟಾ ಆಫರ್!

|

ಮೊನ್ನೆಮೊನ್ನೆಯಷ್ಟೇ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ ಆಲ್ ಇನ್ ಒನ್ ಯೋಜನೆಗಳನ್ನು ಪರಿಚಯಿಸಿದ್ದ ರಿಲಯನ್ಸ್ ಜಿಯೋ ಇದೀಗ 'ಜಿಯೋಫೋನ್' ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಜಿಯೋ ಬಳಕೆದಾರರಿಗೆ ಐಯುಸಿ ಚಾರ್ಜಸ್ ಬಂದ ನಂತರ ಇದೀಗ ಜಿಯೋಫೋನ್ ಬಳಕೆದಾರರಿಗೂ ಆಲ್ ಇನ್ ಒನ್ ಯೋಜನೆಗಳು ಪರಿಚಯಿಸಲಾಗಿದ್ದು, ಕೇವಲ 75 ರೂ.ಗಳಿಂದ ಪ್ರಾರಂಭವಾಗುವಂತೆ ಜಿಯೋಫೋನ್ ಬಳಕೆದಾರರಿರು ಹೊಸ ನಾಲ್ಕು ಹೊಸ ಆಲ್-ಇನ್-ಒನ್ ಯೋಜನೆಗಳು ಪಡೆದುಕೊಳ್ಳಬಹುದಾಗಿದೆ.

ಜಿಯೋ ಪ್ರಿಪೇಯ್ಡ್

ಹೌದು, ಜಿಯೋ ಪ್ರಿಪೇಯ್ಡ್ ಬಳಕೆದಾರರಿಗಾಗಿ ಲಭ್ಯವಿರುವ ಆಲ್ ಇನ್ ಒನ್ ಯೋಜನೆಗಳಂತೆಯೇ, ಈಗ ಜಿಯೋಫೋನ್ ಆಲ್ ಇನ್ ಒನ್ ಯೋಜನೆಗಳು ದೈನಂದಿನ ಡೇಟಾ, ಆಫ್-ನೆಟ್ ವಾಯ್ಸ್ ಕಾಲಿಂಗ್ ನಿಮಿಷಗಳು, ಜಿಯೋ ಟು ಜಿಯೋ ಉಚಿತ ಧ್ವನಿ ಕರೆ ಮತ್ತು ಸಂಪೂರ್ಣ ಸಂಖ್ಯೆಯ ನಿರ್ದಿಷ್ಟ ಎಸ್‌ಎಂಎಸ್‌ಗಳೊಂದಿಗೆ ಬರುತ್ತವೆ. 75ರೂ, 125 ರೂ, 155 ರೂ ಮತ್ತು 185 ರೂ.ಗಳ ಬೆಲೆಯಲ್ಲಿ ಈ ಆಲ್‌ ಇನ್‌ ಒನ್ ಪ್ಯಾಕ್ ಅನ್ನು ಖರೀದಿಸಬಹುದಾಗಿದೆ. ಆದರೆ, ಈ ಎಲ್ಲಾ ಯೋಜನೆಗಳು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿವೆ.

75 ರೂ.

75 ರೂ.ಗಳಿಂದ ಪ್ರಾರಂಭವಾಗುವ ಜಿಯೋಫೋನ್ ಆಲ್ ಇನ್ ಒನ್ ಯೋಜನೆಯು ಒಟ್ಟಾರೆ 3ಜಿಬಿ ಡೇಟಾವನ್ನು ನೀಡುತ್ತಿದೆ. ನೀವು ಈ ಯೋಜನೆಯನ್ನು ಪಡೆದುಕೊಂಡರೆ, ಪ್ರತಿದಿನ 0.1ಜಿಬಿ ಡೇಟಾ, ಜಿಯೋ ಟು ಜಿಯೋ ಅನಿಯಮಿತ ಕರೆಗಳು, ಪ್ರತಿದಿನ 50 ಎಸ್‌ಎಂಎಸ್‌ಗಳ ಜೊತೆಗೆ ಇತರೆ ನೆಟ್‌ವರ್ಕ್‌ಗಳಿಗೆ 500 ಉಚಿತ ಕರೆಗಳ ಲಾಭ ಸಿಗಲಿದೆ. ಹಾಗೆಯೇ, 125 ರೂ.ಗಳಲ್ಲಿ ಪ್ರತಿದಿನ 0.5ಜಿಬಿ ಡೇಟಾ, 300 ಎಸ್‌ಎಂಎಸ್ ಸೇರಿದಂತೆ ಜಿಯೋ ಟು ಜಿಯೋ ಅನಿಯಮಿತ ಹಾಗೂ ಇತರೆ ನೆಟ್‌ವರ್ಕ್‌ಗಳಿಗೆ 500 ಉಚಿತ ಕರೆಗಳು ಲಭ್ಯವಿವೆ.

1ಜಿಬಿ ಡೇಟಾ

ನೀವು ಪ್ರತಿದಿನ 1ಜಿಬಿ ಡೇಟಾವನ್ನು ಇಷ್ಟಪಟ್ಟರೆ ನಿಮಗಾಗಿ 155 ರೂ.ಗಳ ಜಿಯೋಫೋನ್ ಆಲ್ ಇನ್ ಒನ್ ಯೋಜನೆ ಲಭ್ಯವಿದೆ. ಈ ಯೋಜನೆಯಲ್ಲಿ ಒಟ್ಟಾರೆ 28ಜಿಬಿ ಡೇಟಾ ಲಭ್ಯವಿದೆ. ಜಿಯೋ ಟು ಜಿಯೋ ಅನಿಯಮಿತ ಕರೆಗಳು, ಪ್ರತಿದಿನ 100 ಎಸ್‌ಎಂಎಸ್‌ಗಳ ಜೊತೆಗೆ ಇತರೆ ನೆಟ್‌ವರ್ಕ್‌ಗಳಿಗೆ 500 ಉಚಿತ ಕರೆಗಳ ಲಾಭ ಸಿಗಲಿದೆ. ಹಾಗೆಯೇ, 185 ರೂ.ಗಳಗೆ ಒಟ್ಟಾರೆ 56ಜಿಬಿ ಡೇಟಾ. ಜೊತೆಗೆ ಜಿಯೋ ಟು ಜಿಯೋ ಅನಿಯಮಿತ ಕರೆಗಳು, ಪ್ರತಿದಿನ 100 ಎಸ್‌ಎಂಎಸ್‌ಗಳ ಜೊತೆಗೆ ಇತರೆ ನೆಟ್‌ವರ್ಕ್‌ಗಳಿಗೆ 500 ಉಚಿತ ಕರೆಗಳ ಲಾಭ ಸಿಗಲಿದೆ.

ಜಿಯೋಫೋನ್

ಇವುಗಳಲ್ಲಿ ಜಿಯೋಫೋನ್ ಬಳಕೆದಾರರಿಗಾಗಿ ನಾವು 125 ರೂ ಆಲ್-ಒನ್ ರೀಚಾರ್ಜ್ ಅನ್ನು ಉತ್ತಮ ಎಂದು ಕರೆಯುತ್ತೇವೆ. ಈ ಯೋಜನೆಯು ಅನಿಯಮಿತ ಜಿಯೋ-ಟು-ಜಿಯೋ ಧ್ವನಿ ಕರೆಗಳು, 500 ನಿಮಿಷಗಳ ಜಿಯೋ ಅಲ್ಲದ ಧ್ವನಿ ಕರೆ, ದಿನಕ್ಕೆ 0.5 ಜಿಬಿ ಡೇಟಾ ಮತ್ತು 28 ದಿನಗಳವರೆಗೆ ಮಾನ್ಯವಾಗಿರುವ 300 ಎಸ್‌ಎಂಎಸ್‌ಗಳನ್ನು ನೀಡುತ್ತದೆ. ಇದಲ್ಲದೇ, ಜಿಯೋಫೋನ್ ಆಲ್ ಇನ್ ಒನ್ ಪ್ರಿಪೇಯ್ಡ್ ರೀಚಾರ್ಜ್ ಜಿಯೋಫೋನ್‌ನ ಎಲ್ಲಾ 49 ರೂ ರೀಚಾರ್ಜ್ ಬಳಕೆದಾರರಿಗೆ ಗೋ-ಟು ಆಯ್ಕೆಯಾಗಿದೆ ಎಂಬುದು ನಿಮಗೆ ನೆನಪಿರಲಿ.

Most Read Articles
Best Mobiles in India

English summary
Reliance Jio has now come up with four new All-in-One plans for JioPhone users starting at Rs 75. The prices of the plans are Rs 75, Rs 125, Rs 155 and Rs 185, and the validity of all the plans is 28 days.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X