ಶಾಕಿಂಗ್ ನ್ಯೂಸ್‌!..ಜಿಯೋದಿಂದ ಉಚಿತ ಕರೆಗಳು ಬಂದ್!

|

ಭಾರತೀಯ ಟೆಲಿಕಾಂ ವಲಯದಲ್ಲಿ ಅಗ್ಗದ ದರದಲ್ಲಿ ಡೇಟಾ, ಉಚಿತ ಕರೆಗಳ ಸೌಲಭ್ಯಗಳನ್ನು ಪರಿಚಯಿಸಿ 'ರಿಲಾಯನ್ಸ್‌ ಜಿಯೋ' ಬಳಕೆದಾರರ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಆದ್ರೆ ಈಗ ಜಿಯೋ ಸಂಸ್ಥೆಯು ತನ್ನ ಬಳಕೆದಾರ ಭಾರೀ ಆಘಾತಕಾರಿ ಸುದ್ದಿಯೊಂದನ್ನು ಹೊರಹಾಕಿದ್ದು, ಜಿಯೋ ಬಳಕೆದಾರರಿಗೆ ಇನ್ಮುಂದೆ ಉಚಿತ ಕರೆಗಳು ಪ್ರಯೋಜನ ದೊರೆಯುವುದಿಲ್ಲ.

ಶಾಕಿಂಗ್ ನ್ಯೂಸ್‌!..ಜಿಯೋದಿಂದ ಉಚಿತ ಕರೆಗಳು ಬಂದ್!

ಹೌದು, ಜನಪ್ರಿಯ ಟೆಲಿಕಾಂ ಸಂಸ್ಥೆ ಜಿಯೋ interconnet usage charges (IUC) ಇತರೆ ನೆಟವರ್ಕ್‌ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಿದ್ದು, ಇದೇ ಬುಧವಾರದಿಂದ ಈ ಹೊಸ ನಿಯಮ ಅನ್ವಯವಾಗಿದೆ. ಜಿಯೋದಿಂದ ಇತರೆ ನೆಟವರ್ಕ್‌ಗಳಿಗೆ ವಾಯಿಸ್‌ ಕರೆಗೆ ಚಾರ್ಜ್ ಆಗಲಿದ್ದು, ಉಳಿದಂತೆ ವಾಟ್ಸಪ್‌ ಕಾಲ್, ಫೇಸ್‌ಟೈಮ್‌ ಕರೆ, ಸೇರಿದಂತೆ ಇಂಟರ್ನೆಟ್‌ ಆಧಾರಿತ ಕರೆಗಳು ಉಚಿತವಾಗಿರಲಿವೆ.

ಶಾಕಿಂಗ್ ನ್ಯೂಸ್‌!..ಜಿಯೋದಿಂದ ಉಚಿತ ಕರೆಗಳು ಬಂದ್!

ಜಿಯೋ ಟೆಲಿಕಾಂ ನಿಂದ ಜಿಯೋ ಟೆಲಿಕಾಂ ಕರೆಗಳು ಉಚಿತವಾಗಿ ಮುಂದುವರೆಯಲಿವೆ. ಹಾಗೂ ಇತರೆ ನೆಟವರ್ಕ್‌ಗಳಿಂದ ಒಳಬರುವ ಕರೆಗಳು ಸಹ ಉಚಿತವಾಗಿರಲಿವೆ. ಆದ್ರೆ ಜಿಯೋ ದಿಂದ ಇತರೆ ನೆಟವರ್ಕ್‌ಗಳಿಗೆ ಹೊರ ಹೋಗುವ ಕರೆಗಳಿಗೆ ಮಾತ್ರ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ಚಾರ್ಜ್ ಆಗಲಿದೆ. 13,500 ಕೋಟಿಯಷ್ಟು ಇಂಟರ್‌ ಕನೆಕನ್‌ ಯುಸೆಜ್‌ ಚಾರ್ಜ್‌ ಬಾಕಿ ಇದ್ದ ಕಾರಣ ಜಿಯೋ ಈ ನಿರ್ಧಾರ ಕೈಗೊಂಡಿದೆ.

ಶಾಕಿಂಗ್ ನ್ಯೂಸ್‌!..ಜಿಯೋದಿಂದ ಉಚಿತ ಕರೆಗಳು ಬಂದ್!

ಸೆಪ್ಟೆಂಬರ್ 2016ರಲ್ಲಿ ಲಾಂಚ್ ಆದಾಗಿನಿಂದ ಜಿಯೋ ಗ್ರಾಹಕರಿಗೆ ಉಚಿತ ವಾಯಿಸ್‌ ಕರೆಗಳ ಪ್ರಯೋಜನವನ್ನು ನೀಡುತ್ತಾ ಬಂದಿತ್ತು. ಆದ್ರೆ ಇದೀಗ ಇತರೆ ನೆಟವರ್ಕ್‌ ಕರೆಗಳಿಗೆ ಉಚಿತ ಕರೆಗಳ ಸೌಲಭ್ಯಕ್ಕೆ ಬ್ರೇಕ್ ಹಾಕಿದೆ. ಈ ನಿರ್ಧಾರದಿಂದ ಗ್ರಾಹಕರಿಗೆ ನಿರಾಶೆಯಾಗಬಾರದೆಂದು ಜಿಯೋ ಅಷ್ಟೇ ಮೌಲ್ಯದ ಉಚಿತ ಡೇಟಾ ಸೌಲಭ್ಯದ ಪ್ರಯೋಜನ ನೀಡಲಿದೆ. ಇದೇ ಬುಧವಾರದಿಂದ ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಈ ಹೊಸ ನಿಯಮ ಅನ್ವಯವಾಗಲಿದೆ.

ಟ್ರಾಯ್‌ ನಿಯಮದಂತೆ 2017ರ ಮೊದಲು ಇತರೆ ನೆಟವರ್ಕ್‌ಗಳ ಕರೆಗಳಿಗೆ ಪ್ರತಿ ನಿಮಿಷಕ್ಕೆ 14 ಪೈಸೆ ನಿಗದಿ ಇತ್ತು. ಆದರೆ 2017ರ ನಂತರ ಟ್ರಾಯ್ ತನ್ನ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಿತ್ತು.

Best Mobiles in India

English summary
Reliance Jio will now start charging interconnet usage charges (IUC) at 6 paise per minute for all calls made to rival networks. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X