ಏರ್‌ಟೆಲ್‌ಗೆ ಇತಿಹಾಸದಲ್ಲೇ ಬಿಗ್‌ಶಾಕ್!..ಇದನ್ನು ಆ ದೇವರೂ ಕೂಡ ಊಹಿಸಿರಲಿಲ್ಲವೇನೋ!!

|

ಭಾರತದ ಟೆಲಿಕಾಂ ಪ್ರಪಂಚದಲ್ಲಿ ಇಂತಹದೊಂದು ಬದಲಾವಣೆಯಾಗುತ್ತದೆ ಎಂದು ನಾವು ಮಾತ್ರವಲ್ಲ ಆ ದೇವರೂ ಕೂಡ ಊಹಿಸಿರಲಿಲ್ಲವೇನೋ. ಏಕೆಂದರೆ, ಇಂದು ಕಳೆದ ಎರಡು ದಶಕಗಳಿಂದ ದೇಶದ ಟೆಲಿಕಾಂ ಅನ್ನು ರಾಜನಂತೆ ಆಳಿದ ಏರ್‌ಟೆಲ್ ಸಂಸ್ಥೆಗೆ ಇತಿಹಾಸದಲ್ಲೇ ದೊಡ್ಡ ಶಾಕ್ ಸಿಕ್ಕಿದೆ. ರಿಲಯನ್ಸ್ ಜಿಯೋ ಸಂಸ್ಥೆ ಶುರುವಾಗಿ ಕೇವಲ ಎರಡುವರೆ ವರ್ಷಗಳಲ್ಲೇ ದೇಶದ ಟೆಲಿಕಾಂ ದಿಗ್ಗಜನಾಗಿ ಮೆರೆದಿದ್ದ ಏರ್‌ಟೆಲ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.!

ಹೌದು, ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಈ ಬಾರಿ ಭಾರ್ತಿ ಏರ್‌ಟೆಲ್ ಅನ್ನು ಚಂದಾದಾರರ ಆಧಾರದ ಮೇಲೆ ಮೀರಿಸಿದೆ ಮತ್ತು ಭಾರತದ ಎರಡನೆಯ ಅತಿದೊಡ್ಡ ದೂರಸಂಪರ್ಕ ಕಂಪೆನಿಯಾಗಿ ಹೊರಹೊಮ್ಮಿದೆ. ರಿಲಯನ್ಸ್ ಜಿಯೋ ಪ್ರಸ್ತುತ 30.6 ಕೋಟಿ ಗ್ರಾಹಕರನ್ನು ಹೊಂದಿದ್ದರೆ, ಏರ್‌ಟೆಲ್ ಕಂಪೆನಿ 28.4 ಕೋಟಿ ಗ್ರಾಹಕರಿಗೆ ಇಳಿದಿದೆ ಎಂಬ ಶಾಕಿಂಗ್ ರಿಪೋರ್ಟ್ ಹೊರಬಿದ್ದಿದೆ. ಇನ್ನು ಜೊತೆಗೂಡಿರುವ ವೊಡಾಫೋನ್-ಐಡಿಯಾವನ್ನು ಸಹ ಜಿಯೋ ಶೀಘ್ರವೇ ಮೀರಿಸಲಿದೆ ಎಂದು ಹೇಳಲಾಗಿದೆ.

ಏರ್‌ಟೆಲ್‌ಗೆ ಇತಿಹಾಸದಲ್ಲೇ ಬಿಗ್‌ಶಾಕ್!.ಇದನ್ನು ಆ ದೇವರೂ ಕೂಡ ಊಹಿಸಿರಲಿಲ್ಲವೇನೋ!

ರಿಲಯನ್ಸ್ ಜಿಯೋ ವ್ಯವಹಾರವು ಆಕ್ರಮಣಕಾರಿ ಮತ್ತು ಅಗ್ಗದ ಸುಂಕದ ಯೋಜನೆಗಳಿಂದ ಉತ್ತೇಜಿಸಲ್ಪಟ್ಟಿದ್ದು, ಭಾರತದ ಟೆಲಿಕಾಂ ಸ್ಥಳವನ್ನು ಸುಮಾರು ಎರಡು ದಶಕಗಳಿಂದ ನಿಯಂತ್ರಿಸಿದ ಭಾರ್ತಿ ಏರ್‌ಟೆಲ್ ಇದೇ ಮೊದಲ ಬಾರಿಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿದೆ. ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್ ವಿಲೀನವಾಗಿ ಏರ್‌ಟೆಲ್‌ಗಿಂತ ಗ್ರಾಹಕರನ್ನು ಹೊಂದಿದ್ದರೂ, ರಿಲಯನ್ಸ್ ಜಿಯೋ ಪ್ರಪ್ರಥಮ ಬಾರಿಗೆ ಏರ್‌ಟೆಲ್‌ನಂತಹ ಕಂಪೆನಿಯನ್ನು ಏಕಪಕ್ಷೀಯವಾಗಿ ಹಿಂದಿಕ್ಕಿರುವುದು ಕಂಡುಬಂದಿದೆ.

ಏರ್‌ಟೆಲ್‌ಗೆ ಇತಿಹಾಸದಲ್ಲೇ ಬಿಗ್‌ಶಾಕ್!.ಇದನ್ನು ಆ ದೇವರೂ ಕೂಡ ಊಹಿಸಿರಲಿಲ್ಲವೇನೋ!

ರಿಲಯನ್ಸ್ ಜಿಯೋಗೆ ಎದುರಾಗಿ ಏರ್‌ಟೆಲ್ ಸೇರಿದಂತೆ ಇನ್ನುಳಿದ ದೇಶದ ಎಲ್ಲಾ ಟೆಲಿಕಾಂ ಕಂಪೆನಿಗಳು ಪೈಪೋಟಿ ನೀಡಲು ಯತ್ನಿಸಿ ವಿಫಲವಾಗಿವೆ. ಜಿಯೋವಿನ ಸೇವೆಯನ್ನು ಭಾರತೀಯರು ಅಪ್ಪಿಕೊಂಡಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆಯಲ್ಲಿ ಜಿಯೋ ಬರುವುದಕ್ಕೂ ಮುನ್ನ ಭಾರತದ ಟೆಲಿಕಾಂ ಕಂಪೆನಿಗಳು ಗ್ರಾಹಕರ ರಕ್ತವನ್ನು ಹೇಗೆ ಹೀರಿದ್ದವು ಎಂಬ ಅಂಶಗಳು ಕೂಡ ವೈರಲ್ ಆಗಿದೆ. ಆ ರಕ್ತಹೀರಿದ ಚರಿತ್ರೆ ಈ ಕೆಳಗಿನಂತಿದೆ.!

ನೀವು PF ಖಾತೆಯನ್ನು ಹೊಂದಿದ್ದರೆ ಶೀಘ್ರವೇ ಈ ಕೆಲಸ ಮಾಡಿ!

ಒಂದು ಜಿಬಿ ಡೇಟಾ ಬೆಲೆ 300 ರೂ.!

ಒಂದು ಜಿಬಿ ಡೇಟಾ ಬೆಲೆ 300 ರೂ.!

ಕೇವಲ ಎರಡು ವರ್ಷಗಳ ಹಿಂದೆ ಭಾರತದಲ್ಲಿ ಒಂದು ಜಿಬಿ ಹೈಸ್ಪೀಡ್ ಡೇಟಾ ಪಡೆಯಲು ಪಾವತಿಸಬೇಕಿದ್ದ ಸರಾಸರಿ ಬೆಲೆ 300 ರೂ.ಗಳು ಎಂದರೆ ಈಗ ಆಶ್ಚರ್ಯವಾಗಬಹುದು. ಈಗ ಒಂದು ಜಿಬಿ ಹೈಸ್ಪೀಡ್ ಡೇಟಾ ಕೇವಲ ಮೂರರಿಂದ ನಾಲ್ಕು ರೂಪಾಯಿಗಳಲ್ಲಿ ಜನರಿಗೆ ಸಿಗುತ್ತಿದೆ. ಕೇವಲ ಡೇಟಾ ಮಾತ್ರವಲ್ಲದೆ, ಉಚಿತ ಕರೆ ಹಾಗೂ ಎಸ್‌ಎಮ್‌ಎಸ್‌ಗಳು ಕೂಡ ಇದೇ ಡೇಟಾದ ಜೊತೆಗೆ ಉಚಿತವಾಗಿದೆ. ಹಾಗಾಗಿಯೇ, ಒಂದು ಬಾಟಲಿ ತಂಪು ಪಾನೀಯಕ್ಕಿಂತ 1ಜಿಬಿ ಡೇಟಾ ಅಗ್ಗವೆಂದು 'ಮೋದಿ' ಹೇಳಿದ್ದು ನಿಜವೆನ್ನಲೇಬೇಕು.

ಆಗ ಟೆಲಿಕಾಂ ಆದಾಯ ಎಷ್ಟು ಗೊತ್ತಾ?

ಆಗ ಟೆಲಿಕಾಂ ಆದಾಯ ಎಷ್ಟು ಗೊತ್ತಾ?

ಕಳೆದ ಎರಡು ವರ್ಷಗಳ ಹಿಂದೆ ಒಂದು ವರ್ಷಕ್ಕೆ ಭಾರತದ ಒಟ್ಟು ಟೆಲಿಕಾಂಗಳ ಆದಾಯ ಎಷ್ಟು ಎಂಬುದನ್ನು ನೀವು ಊಹೆ ಮಾಡಲು ಸಾಧ್ಯವಿಲ್ಲಾ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ವರದಿಯ ಪ್ರಕಾರ, ಎರಡು ವರ್ಷಗಳ ಹಿಂದೆ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳ ಒಂದು ವರ್ಷದ ಆದಾಯ ಮೂರು ಲಕ್ಷಕೋಟಿಗೂ (3,00,000cR) ಹೆಚ್ಚು. ಭಾರತೀಯ ಟೆಲಿಕಾಂ ಪ್ರಪಂಚವನ್ನು ಏಕಸ್ವಾಮ್ಯ ಮಾಡಿಕೊಂಡಿದ್ದರ ಪರಿಣಾಮ ಇದು ಎಂದು ಆ ವರದಿ ಹೇಳಿದೆ.

ದಿಕ್ಕುತಪ್ಪಿಸುತ್ತಿದ್ದವು ಟೆಲಿಕಾಂ ಕಂಪೆನಿಗಳು

ದಿಕ್ಕುತಪ್ಪಿಸುತ್ತಿದ್ದವು ಟೆಲಿಕಾಂ ಕಂಪೆನಿಗಳು

ಇಂದು ಟ್ರಾಯ್ ಕೇವಲ ಒಂದು ಟೆಲಿಕಾಂ ಕಂಪೆನಿಗೆ ಸಹಾಯ ಮಾಡುತ್ತಿದೆ ಎಂಬ ಆರೋಪವಿದೆ. ಆದರೆ, ಎರಡು ವರ್ಷಗಳ ಹಿಂದೆ ಟೆಲಿಕಾಂ ಕಂಪೆನಿಗಳು ಟ್ರಾಯ್ ಅನ್ನು ಸಹ ಮೀರಿ ಬೆಳೆದಿದ್ದವು. ಟೆಲಿಕಾಂ ಕಂಪೆನಿಗಳ ಮೇಲೆ ಟ್ರಾಯ್ ನಿಯಂತ್ರಣವಿದ್ದರೂ ಸಹ ಎಲ್ಲಾ ಟೆಲಿಕಾಂಗಳು ಟ್ರಾಯ್ ಅನ್ನು ದಿಕ್ಕುತಪ್ಪಿಸುತ್ತಿದ್ದವು. ತನ್ನ ಗ್ರಾಹಕರಿಗೆ ಇತರ ಉತ್ತಮ ಸೇವೆಗಳನ್ನು ನೀಡುವುದಾಗಿ ಹೇಳಿ ಅವರಿಂದ ಟೆಲಿಕಾಂ ಕಂಪೆನಿಗಳು ಹೆಚ್ಚು ಹಣ ಪೀಕುತ್ತಿದ್ದವು ಎಂದು ಸ್ವತಃ ಟ್ರಾಯ್ ಹೇಳಿಕೊಂಡಿದ್ದು ನಿಮಗೆ ತಿಳಿದಿರಬಹುದು.

'ಜಿಯೋ' ರಾಕ್!..ಕೇಬಲ್ ಬಿಲ್ ಹೆಚ್ಚಳಕ್ಕೆ ಬೇಸತ್ತಿದ್ದ ಜನರಿಗೆ ಗುಡ್‌ನ್ಯೂಸ್!

ಗ್ರಾಹಕರ ಜೇಬಿಗೆ ಕನ್ನ

ಗ್ರಾಹಕರ ಜೇಬಿಗೆ ಕನ್ನ

ಮೊಬೈಲ್‌ ಬಳಕೆದಾರರ ರೀಚಾರ್ಜ್ ಮಾಡಿಸುವಾಗ ತೆರಬೇಕಿದ್ದ ಹಣ ಒಂದೆಡೆಯಾದರೆ, ಮೊಬೈಲ್‌ನಲ್ಲಿ ಮಾತನಾಡುವಾಗ ಕರೆಕಡಿತದಂತಹ ಲೋಪಗಳಿಂದಲೂ ಟೆಲಿಕಾಂ ಕಂಪೆನಿಗಳು ದುಡ್ಡು ಮಾಡಿಕೊಳ್ಳುತ್ತಿದ್ದವು. ಆಗಿದ್ದ ರೇಡಿಯೋ ಲಿಂಕ್ ತಂತ್ರಜ್ಞಾನವನ್ನು ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡ ಟೆಲಿಕಾಂ ಕಂಪೆನಿಗಳು ಕರೆ ಕಡಿತವಾಗಿದ್ದರೂ ಅದು ಚಾಲನೆಯಲ್ಲೇ ಇರುವಂತೆ ತೋರಿಸಿ ಗ್ರಾಹಕರ ಜೇಬಿಗೆ ಕನ್ನ ಹಾಕುತದತಿದ್ದವು. ಒಂದು ಮಾಹಿತಿಯಂತೆ ಇದರಿಂದ ಅವುಗಳಿಗೆ ಸಿಗುತ್ತಿದ್ದ ಆದಾಯವೇ ಪ್ರತಿದಿನ 50 ಕೋಟಿಗೂ ಹೆಚ್ಚಿತ್ತಂತೆ.

ದಿನವೊಂದರ ಗಳಿಕೆ 250 ಕೋಟಿ ರೂ.

ದಿನವೊಂದರ ಗಳಿಕೆ 250 ಕೋಟಿ ರೂ.

ಇಂದು ನಿವ್ವಳ ಲಾಭದಲ್ಲಿ ಸಾವಿರಾರು ಕೋಟಿ ಇಳಿಕೆ ಕಂಡಿರುವ ಟೆಲಿಕಾಂ ಕಂಪೆನಿಗಳು ಅಂದು ಒಂದು ದಿನಕ್ಕೆ ಗಳಿಸುತ್ತಿದ್ದ ಆದಾಯ ಎಷ್ಟು ಎಂಬುದನ್ನು ಕೇಳಿದರೆ ನೀವು ದಂಗಾಗಬಹುದು. ಏಕೆಂದರೆ, ಕರೆ ಕಡಿತದ ಕ್ರಮಕ್ಕೆ ಟೆಲಿಕಾಂ ಕಂಪೆನಿಗಳಿಗೆ ಟ್ರಾಯ್ ದಂಡ ವಿಧಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಮುಕುಲ್ ರೋಹಟಗಿ ಅವರು ನೀಡಿದ ಮಾಹಿತಿಯಂತೆ, ಟೆಲಿಕಾಂ ಕಂಪೆನಿಗಳ ದಿನವೊಂದರ ಸರಾಸರಿ ಗಳಿಕೆ 250 ಕೋಟಿ ರೂಪಾಯಿಗಳಿಗೂ ಹೆಚ್ಚು.!

ಟೆಲಿಕಾಂ ಏಕಸ್ವಾಮ್ಯವಾಗಿತ್ತು.!

ಟೆಲಿಕಾಂ ಏಕಸ್ವಾಮ್ಯವಾಗಿತ್ತು.!

ಇಂದು ಜಿಯೋ ಭಾರತದ ಟೆಲಿಕಾಂ ಅನ್ನು ಏಕಸ್ವಾಮ್ಯ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಎರಡು ವರ್ಷಗಳ ಹಿಂದೆ ಒಂದೇ ಒಂದು ಟೆಲಿಕಾಂ ಕಂಪೆನಿ ತನ್ನ ತೆಕ್ಕೆಯಲ್ಲಿ ಭಾರತದ ಟೆಲಿಕಾಂ ಅನ್ನು ಹಿಡಿದಿಟ್ಟುಕೊಂಡಿತ್ತು. ಈ ಒಂದು ಕಂಪೆನಿಯನ್ನೇ ಹಹಿಂಬಾಲಿಸುತ್ತಿದ್ದ ಇತರೆ ಟೆಲಿಕಾಂ ಕಂಪೆನಿಗಳು ಸಹ ಸೇವೆಯ ಹೆಸರಿನಲ್ಲಿ ಒಂದೇ ಬಗೆಯಲ್ಲಿ ಕಾರ್ಯನಿರ್ವಹಣೆ ನೀಡುತ್ತಿದ್ದವು. ಇದರಿಂದ ಗ್ರಾಹಕನಿಗೆ ಆಯ್ಕೆಗಳೇ ಇಲ್ಲದ ಸ್ಥಿತಿ ಎದುರಾಗಿತ್ತು ಎಂದರೆ ತಪ್ಪಾಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.

ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿರಲಿಲ್ಲ!

ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿರಲಿಲ್ಲ!

ಎರಡು ವರ್ಷಗಳ ಹಿಂದೆಯೇ ಭಾರತದಲ್ಲಿದ್ದ ಮೊಬೈಲ್ ಸಂಪರ್ಕಗಳ ಸಂಖ್ಯೆ 96.2 ಕೋಟಿಯಾಗಿತ್ತು. ಆದರೆ, ಇಷ್ಟು ದೊಡ್ಡದ ಟೆಲಿಕಾಂ ಇದ್ದರೂ ಕೂಡ ಯಾವುದೇ ಟೆಲಿಕಾಂ ಕಂಪೆನಿ ಕೂಡಾ ಕರೆಗಳ ಗುಣಮಟ್ಟವನ್ನು ಉತ್ತಮ ಪಡಿಸುವ ಹೂಡಿಕೆಗೆ ಸಿದ್ಧವಿಲ್ಲ ಎಂದು ವರದಿಯೊಂದು ಹೇಳಿತ್ತು. 300ರಿಂದ 900 ಮೆಗಾಹರ್ಟ್ಸ್ ಕಂಪನಾಂಕದ ತರಂಗಗಳಲ್ಲಿ ಕರೆಯಗುಣಮಟ್ಟ ಚೆನ್ನಾಗಿರುತ್ತದೆ ಎಂದು ತಿಳಿದಿದ್ದರೂ ಆ ತರಂಗಗಳ ಖರೀದಿಗೆ ಯಾವ ಟೆಲಿಕಾಂ ಕಂಪೆನಿಯೂ ಮುಂದೆ ಬರಲಿಲ್ಲ. ಏಕೆಂದರೆ, ಗ್ರಾಹಕರಿಂದ ಹಣ ಪೀಕಲು ಹೆಚ್ಚು ವೆಚ್ಚ ಮಾಡಲು ಯಾವ ಟೆಲಿಕಾಂ ಕಂಪೆನಿಗಳಿಗೂ ಇಷ್ಟವಿರಲಿಲ್ಲ.

ಶೇ. 80% ರಷ್ಟು ಬೆಲೆ ಇಳಿಕೆ

ಶೇ. 80% ರಷ್ಟು ಬೆಲೆ ಇಳಿಕೆ

ಎರಡು ವರ್ಷಗಳ ಹಿಂದೆ ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಗೆ ಕಾಲಿಟ್ಟಿತು. ಟೆಲಿಕಾಂಗೆ ಜಿಯೋ ಪ್ರವೇಶ ಮಾಡಿದ ನಂತರ ಜನರ ದುಡ್ಡನ್ನು ನುಂಗಿ ನೀರುಕುಡಿಯುತ್ತಿದ್ದ ಉಳಿದ ಟೆಲಿಕಾಂ ಕಂಪೆನಿಗಳ ಸೇವೆಗಳ ಬೆಲೆಗಳು ಶೇ 80% ರಷ್ಟು ಇಳಿಕೆಯಾಯಿತು. ಒಂದು GB ಡೇಟಾಗೆ 300 ರಿಂದ 400ರೂಪಾಯಿಗಳನ್ನು ಪೀಕುತ್ತಿದ್ದ ಕಂಪೆನಿಗಳು ಇದೀಗ 2 ರಿಂದ 3 ರೂಪಾಯಿಗೆ ಒಂದು GB ಡೇಟಾ ನೀಡುತ್ತಿವೆ.ಈಗ ಏನಿದ್ದರೂ ಅನ್‌ಲಿಮಿಟೆಡ್ ಸೇವೆಗಳದ್ದೇ ಜಮಾನವಾಗಿದ್ದು, ಗ್ರಾಹಕರು ಅತ್ಯುತ್ತಮ ದರದಲ್ಲಿ ಹೆಚ್ಚು ಸೇವೆಯನ್ನು ಪಡೆಯುತ್ತಿರುವುದನ್ನು ನೀವು ನೋಡಬಹುದು.

7,999 ರೂ.ಗೆ ಇಂದು ಬಿಡುಗಡೆಯಾದ 'ರೆಡ್‌ಮಿ 7' ಒಂದು ಅದ್ಬುತ ಫೋನ್!!

ಭಾರತದಲ್ಲಿಂದು ಶಿಯೋಮಿ ಮೊಬೈಲ್ ಹಬ್ಬವೇ ಏರ್ಪಟ್ಟಿತ್ತು ಎನ್ನುವ ಮಟ್ಟಿಗೆ ಶಿಯೋಮಿಯ ಎರಡು ಬಜೆಟ್ ಸ್ಮಾರ್ಟ್‌ಫೋನ್‌ಗಳು ಇಂದು ಲಾಂಚ್ ಆಗಿವೆ. ದೇಶದ ಬಜೆಟ್ ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಭುತ್ವ ಸಾಧಿಸಿರುವ ಶಿಯೋಮಿ, ಇಂದು ಕೇವಲ 10 ಸಾವಿರ ರೂ.ಗಳಲ್ಲಿ 32MP ಸೆಲ್ಫೀ ಕ್ಯಾಮೆರಾದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಗಮನಸೆಳೆದಿದೆ.

ಆದರೆ, ಶಿಯೋಮಿ ಕಂಪೆನಿ ತನ್ನ ಸೆಲ್ಫೀ ಎಕ್ಸ್‌ಪರ್ಟ್ 'ರೆಡ್‌ಮಿ ವೈ3' ಪೋನ್ನು ಇಂದು ಲಾಂಚ್ ಮಾಡಿರುವುದು ಅಷ್ಟೇನು ವಿಶೇಷವಾಗಿರಲಿಲ್ಲ. ಏಕೆಂದರೆ, ಶಿಯೋಮಿ ತನ್ನ 'ರೆಡ್‌ಮಿ ವೈ3' ಪೋನ್ ಜೊತೆಗೆ 'ರೆಡ್‌ಮಿ 7' ಸ್ಮಾರ್ಟ್‌ಫೋನನ್ನೂ ಕೂಡ ಬಿಡುಗಡೆ ಮಾಡಿದೆ. ಅದು ಕೂಡ ಕೇವಲ 7,999 ರೂ.ಗಳಿಗೆ 'ರೆಡ್‌ಮಿ 7' ಪೋನ್ ಬಿಡುಗಡೆಯಾಗಿರುವುದು ಇನ್ನೂ ಆಶ್ಚರ್ಯವಾಗಿದೆ.

ರೆಡ್‌ಮಿ ಗೋ ನಂತರ ಶಿಯೋಮಿ ಕಂಪೆನಿ ಬಿಡುಗಡೆ ಮಾಡಿದ ಎರಡನೇ ಕಡಿಮೆ ಬಜೆಟ್ ಪೋನ್ ಇದಾಗಿದ್ದು, 6.26-ಇಂಚಿನ ಹೆಚ್‌ಡಿ + ಡಿಸ್‌ಪ್ಲೇ, 4,000 mAh ಬ್ಯಾಟರಿ ಮತ್ತು ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 632 ಪ್ರೊಸೆಸರ್ ಹೊಂದಿರುವುದು ಫೋನಿನ ವಿಶೇಷತೆಯಾಗಿದೆ. ಹಾಗಾದರೆ, 7,999 ರೂ. ಬೆಲೆಯ 'ರೆಡ್‌ಮಿ 7' ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ರೆಡ್‌ಮಿ 7' ವಿನ್ಯಾಸ

'ರೆಡ್‌ಮಿ 7' ವಿನ್ಯಾಸ

ಶಿಯೋಮಿ ಕಂಪೆನಿಯ ಎಲ್ಲಾ ಬಜೆಟ್ ಫೋನ್‌ಗಳ ವಿನ್ಯಾಸವನ್ನೇ ಹೊಂದಿರುವ 'ರೆಡ್‌ಮಿ 7' ಸ್ಮಾರ್ಟ್‌ಫೋನಿನ ವಿಶೇಷತೆ ಎಂದರೆ ನೋಚ್ ಎಂದು ಹೇಳಬಹುದು. 26-ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಜೊತೆಗೆ ನೋಚ್ ವಿನ್ಯಾಸವನ್ನು ಹೊಂದಿರುವ ಏಕೈಕ ಬಜೆಟ್ ಸ್ಮಾರ್ಟ್‌ಫೋನ್ ಇದಾಗಿದ್ದು, ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.

'ರೆಡ್‌ಮಿ 7' ಡಿಸ್‌ಪ್ಲೇ

'ರೆಡ್‌ಮಿ 7' ಡಿಸ್‌ಪ್ಲೇ

ಮೊದಲೇ ಹೇಳಿದಂತೆ ಶಿಯೋಮಿ 'ರೆಡ್‌ಮಿ 7' ಸ್ಮಾರ್ಟ್‌ಫೋನಿನಲ್ಲಿ 6.26-ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಅಳವಡಿಲಾಗಿದೆ. ಮಲ್ಟಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿರುವಂತಿರುವ ಡಿಸ್‌ಪ್ಲೇಯು 86.83% ನಷ್ಟು ಸ್ಕ್ರೀನ್-ಟು-ದೇಹ ಅನುಪಾತವನ್ನು ಹೊಂದಿರುವುದು ವಿಶೇಷವಾದರೆ, 19: 9 ಆಕಾರ ಅನುಪಾತದ ಫೋನ್ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿತವಾಗಿದೆ.

'ರೆಡ್‌ಮಿ 7' ಪ್ರೊಸೆಸರ್

'ರೆಡ್‌ಮಿ 7' ಪ್ರೊಸೆಸರ್

'ರೆಡ್‌ಮಿ 7' ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ TM 632 ಪ್ರೊಸೆಸರ್ ಅನ್ನು ನೀಡಲಾಗಿದ್ದು, 632 ಕ್ರೊಯೋ 250 ಆಕ್ಟಾ-ಕೋರ್ ಸಿಪಿಯು ಆರ್ಕಿಟೆಕ್ಚರ್ನೊಂದಿಗೆ ಸುಸಜ್ಜಿತವಾದ ಕಾರ್ಯಕ್ಷ ನಿಡಲಿದೆ. ಈ ಪ್ರೊಸೆಸರ್ ಹೆಚ್ಚಿನ ಬ್ಯಾಟರಿ ದಕ್ಷತೆಯನ್ನು ನೀಡುವುದಲ್ಲದೇ, ಗೇಮಿಂಗ್ಗಾಗಿ ಕ್ವಾಲ್ಕಾಮ್ ® ಅಡ್ರಿನೊ TM 506 ಜಿಪಿಯು ಅತ್ಯುತ್ತಮ ಅನುಭವವನ್ನು ಸೃಷ್ಟಿಸುತ್ತದೆ.

'ರೆಡ್‌ಮಿ 7' RAM

'ರೆಡ್‌ಮಿ 7' RAM

2 ಜಿಬಿ + 16 ಜಿಬಿ / 3 ಜಿಬಿ + 32 ಜಿಬಿ ಮತ್ತು 3 ಜಿಬಿ + 64 ಜಿಬಿ ರೀತಿಯ ಮೂರು ಮಾದರಿಗಳಲ್ಲಿ ಬಿಡುಗಡೆಯಾಗಿರುವ 'ರೆಡ್‌ಮಿ 7' ಸ್ಮಾರ್ಟ್‌ಫೋನ್ 2 + 1 ಕಾರ್ಡ್ ಸ್ಲಾಟ್ ವಿನ್ಯಾಸವನ್ನು ಹೊಂದಿದೆ. 2 SIM ಕಾರ್ಡ್ ಸ್ಲಾಟ್‌ಗಳನ್ನು ಮತ್ತು 1 ಮೈಕ್ರೊ ಸ್ಲಾಟ್ ಅನ್ನು ಬಳಸಬಹುದಾಗಿದೆ. ಇನ್ನು 512GB ವರೆಗೆ ಮೈಕ್ರೊ SD ಸಂಗ್ರಹವನ್ನು ಈ ಸ್ಮಾರ್ಟ್‌ಫೋನ್ ಬೆಂಬಲಿಸುತ್ತದೆ.

'ರೆಡ್‌ಮಿ 7' ಕ್ಯಾಮೆರಾ!

'ರೆಡ್‌ಮಿ 7' ಕ್ಯಾಮೆರಾ!

ಶಿಯೋಮಿಯ ಬಜೆಟ್ ಸ್ಮಾರ್ಟ್‌ಫೋನ್ ಇದಾಗಿರುವುದರಿಂದ 12MP + 2MP ಹಿಂದಿನ ಡಯಲ್ ಕ್ಯಾಮರಾ ಹಾಗೂ 8MP ಸೆಲ್ಫಿ ಕ್ಯಾಮರಾಗಳನ್ನು ಈ ಫೋನಿನಲ್ಲಿ ಕಾಣಬಹುದು. ಪ್ರಾಥಮಿಕ ಸಂವೇದಕದಿಂದ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್ ಅತ್ಯುತ್ತಮ ಡೆಪ್ತ್ ಚಿತ್ರಗಳನ್ನು ಚಿತ್ರಿಸಲು ಸಹಾಯ ಮಾಡುತ್ತದೆ. ಇನ್ನು ಇದರಲ್ಲಿ 'AI ಭಾವಚಿತ್ರ ಮೋಡ್' ಇರುವುದು ಸಹ ವಿಶೇಷವೇ.

ರೆಡ್‌ಮಿ 7' ಬ್ಯಾಟರಿ

ರೆಡ್‌ಮಿ 7' ಬ್ಯಾಟರಿ

'ರೆಡ್‌ಮಿ 7'ಫೋನ್ 4000mAh (ಟೈಪ್) ಹೆಚ್ಚು ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಎರಡು-ದಿನದ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. 5V2A ಚಾರ್ಜರ್ ಅನ್ನು ಒಳಗೊಂಡಿರುವ ಈ ಫೋನಿನಲ್ಲಿ ಇನ್ನುಳಿದಂತೆ ಫೇಸ್‌ ಅನ್‌ಲಾಕ್, ಡ್ಯುಯಲ್ ವೋಲ್ಟ್ ಸಪೋರ್ಟ್ ಮತ್ತು MPEG4 ವಿಡಿಯೋ ಸಪೋರ್ಟ್ ಆಯ್ಕೆ ಇರುವುದನ್ನು ನೋಡಬಹುದು.

'ರೆಡ್‌ಮಿ 7' ಬೆಲೆ

'ರೆಡ್‌ಮಿ 7' ಬೆಲೆ

'ರೆಡ್‌ಮಿ 7' ಸ್ಮಾರ್ಟ್‌ಫೋನ್ ಇದೇ ಏಪ್ರಿಲ್ 29 ರಿಂದ ಮಾರಾಟಕ್ಕೆ ಬರಲಿದ್ದು, ಕೆಂಪು, ನೀಲಿ ಮತ್ತು ಕಪ್ಪು ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ. 2 ಜಿಬಿ / 32 ಜಿಬಿ ರೂಪಾಂತರಕ್ಕಾಗಿ 7,999 ರೂ. ಹಾಗೂ 3 ಜಿಬಿ / 32 ಜಿಬಿ ರೂಪಾಂತರಕ್ಕಾಗಿ 8,999 ರೂ. ಬೆಲೆ ನಿಗದಿಯಾಗಿದೆ. ಈ ಎರಡೂ ರೂಪಾಂತರಗಳು ಸಹ ಎಲ್ಲಾ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.

Most Read Articles
Best Mobiles in India

English summary
Reliance Jio pips Airtel to become India's second largest telecom company with 30 crore subscribers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more