ರಿಲಾಯನ್ಸ್‌ ಜಿಯೋ ಫೈಬರ್‌ನಿಂದ ಭರ್ಜರಿ ಡೇಟಾ ಆಫರ್!

|

ಕೊರೊನಾ ವೈರಸ್ ತೀವ್ರವಾಗಿ ಹರುಡುತ್ತಿರುವ ಕಾರಣದಿಂದಾಗಿ ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದ್ದು, ಈ ಹಿನ್ನಲೆಯಲ್ಲಿ ಮನೆಯಲ್ಲಿ ಇರುವ ಭಾರತೀಯರಿಗೆ ಸಹಾಯ ಮಾಡಲು ಜಿಯೋ ಮುಂದಾಗಿದೆ. ಮನೆಯಲ್ಲಿದ್ದಾಗ ಎಲ್ಲರೂ ಸಂಪರ್ಕದಲ್ಲಿ ಇರಲಿ ಎನ್ನುವ ಕಾರಣಕ್ಕೆ ಜಿಯೋ ಫೈಬರ್ ಉಚಿತವಾಗಿ ನೀಡಲು ಮುಂದಾಗಿದೆ.

ಜಿಯೋಫೈಬರ್

ಜಿಯೋ ತನ್ನ ಬಳಕೆದಾರರಿಗೆ ಬೇಸಿಕ್ ಜಿಯೋಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಯಾವುದೇ ಸೇವಾ ಶುಲ್ಕವಿಲ್ಲದೆ ಉಚಿತವಾಗಿ 30 ದಿನಗಳವರೆಗೆ ನೀಡಲಿದೆ. ಇದರಲ್ಲಿ ಮೊದಲ 100 ಜಿಬಿ 10 ಎಮ್‌ಬಿಪಿಎಸ್ ವೇಗದ ಇಂಟರ್‌ನೆಟ್‌ನೊಂದಿಗೆ ದೊರೆಯಲಿದ್ದು, ನಂತರ 1 ಎಮ್‌ಬಿಪಿಎಸ್‌ನಲ್ಲಿ ಅನಿಯಮಿತ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಮನೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಹಾಯವಾಗಲಿದ್ದು, ಅಲ್ಲದೇ ವಿಡಿಯೋ ನೋಡಲು, ಗೇಮ್ ಆಡಲು ಸಹಾಯವಾಗಲಿದೆ.

ಜಿಯೋ

ಈ ಆಫರ್ ಕೇವಲ ಹೊಸ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದು, ಈ ಸೇವೆಯನ್ನು ಪಡೆಯಲು ಗ್ರಾಹಕರು ರೂ 1500 / - ಅತ್ಯಲ್ಪ ಭದ್ರತಾ ಠೇವಣಿಯನ್ನು ಇಡಬೇಕಾಗಿದೆ ಮತ್ತು ರೂ 1000 / - ಅನುಸ್ಥಾಪನಾ ಶುಲ್ಕ ನೀಡುವ ಮೂಲಕ ಜಿಯೋ ಮನೆ ಗೇಟ್‌ವೇ ಅನ್ನು ನೀಡಲಿದೆ. ಈ ಯೋಜನೆಗಾಗಿ ಯಾವುದೇ ಸೇವಾ ಶುಲ್ಕವನ್ನು ಜಿಯೋ ವಿಧಿಸುತ್ತಿಲ್ಲ. ಇದಕ್ಕಿಂತ ಹೆಚ್ಚಿನ ವೇಗದ ಇಂಟರ್ನೆಟ್ ಬೇಕಿದ್ದಲ್ಲಿ ಬಳಕೆದಾರರು ಮೈ ಜಿಯೋ ಆಪ್ ಇಲ್ಲವೇ, ಮೈಜಿಯೋ. ಕಾಮ್‌ನಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಜಿಯೋ 4G ಡೇಟಾ ವೋಚರ್‌

ಜಿಯೋ 4G ಡೇಟಾ ವೋಚರ್‌

ಲಾಕ್‌ಡೌನ್ ಹಿನ್ನಲೆಯಲ್ಲಿ ಜಿಯೋ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ತನ್ನ ಐದು 4G ಡೇಟಾ ವೋಚರ್ಸ್‌ ಪೈಕಿ 11ರೂ, 21ರೂ, 51ರೂ ಮತ್ತು 101ರೂ. ಪ್ಲ್ಯಾನ್‌ಗಳಲ್ಲಿ ಬದಲಾವಣೆ ಮಾಡಿದೆ. ಈ ಯೋಜನೆಗಳಲ್ಲಿ ಈ ಮೊದಲು ಲಭ್ಯವಿದ್ದ ಡೇಟಾ ಸೌಲಭ್ಯದ ಎರಡರಷ್ಟು ಡೇಟಾ ಪ್ರಯೋಜನ ಇದೀಗ ದೊರೆಯಲಿದೆ. ಹಾಗೆಯೇ ಜಿಯೋ ದಿಂದ ಇತರೆ ಟೆಲಿಕಾಂಗಳಿಗೆ ಉಚಿತ ನಿಮಿಷಗಳ ಸೌಲಭ್ಯ ನೀಡಿದೆ.

ಡಬಲ್‌ ಡೇಟಾ ಸೌಲಭ್ಯ

ಡಬಲ್‌ ಡೇಟಾ ಸೌಲಭ್ಯ

ಜಿಯೋ ಸಂಸ್ಥೆಯ ಆರಂಭಿಕ 11ರೂ. 4G ಡೇಟಾ ವೋಚರ್ ನಲ್ಲಿ ಈ ಮೊದಲು 400MB ಡೇಟಾ ಲಭ್ಯ ಇತ್ತು ಇದೀಗ 800MB ಡೇಟಾ ಸಿಗಲಿದೆ. ಅದೇ ರೀತಿ 21ರೂ. ವೋಚರ್‌ನಲ್ಲಿ 2GB ಡೇಟಾ ಲಭ್ಯವಿದೆ. ಈ ಮೊದಲು 1GB ಡೇಟಾ ಸಿಗುತ್ತಿತ್ತು. 3GB ಡೇಟಾ ಲಭ್ಯವಿದ್ದ, 51ರೂ. ವೋಚರ್‌ನಲ್ಲಿ ಈಗ 6GB ಡೇಟಾ ಸೌಲಭ್ಯ ದೊರೆಯುತ್ತದೆ. ಇನ್ನು 101ರೂ. ಡೇಟಾ ವೋಚರ್ ಪ್ಲ್ಯಾನಿನಲ್ಲಿ 6GB ಡೇಟಾ ದೊರೆಯುತ್ತಿತ್ತು ಆದ್ರೆ ಈಗ ಒಟ್ಟು 12GB ಡೇಟಾ ಸಿಗಲಿದೆ.

Most Read Articles
Best Mobiles in India

English summary
JioFiber offer - Stay Safe, Stay Connected, Stay Productive.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X