ತೃತೀಯ ತ್ರೈಮಾಸಿಕದಲ್ಲಿ ರಿಲಯನ್ಸ್‌ಗೆ ದಾಖಲೆಯ 20,539 ಕೋಟಿ ರೂ ನಿವ್ವಳ ಲಾಭ!

|

ಡಿಸೆಂಬರ್ 31, 2021ಕ್ಕೆ ಅಂತ್ಯವಾದ ಆರ್ಥಿಕ ವರ್ಷ 2021-22ರ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ ದಾಖಲೆಯ 20,539 ರೂ. ನಿವ್ವಳ ಲಾಭವಾಗಿದ್ದು (ಎಕ್ಸೆಪ್ಷನಲ್ ಐಟಮ್‌ಗೆ ಮೊದಲು), ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 37.9ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಸಂಸ್ಥೆಯ ಒಟ್ಟಾರೆ ವರಮಾನ 209,823 ಕೋಟಿ ರೂ.ಗಳಾಗಿದೆ. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್‌ಗಳ ಮೊದಲಿನ ಆದಾಯವು (EBITDA) ಈ ತ್ರೈಮಾಸಿಕದಲ್ಲಿ 33,886 ಕೋಟಿ ರೂ.ಗಳಷ್ಟಿದೆ. ಈ ಪೈಕಿ ಡಿಜಿಟಲ್ ಸೇವೆಗಳ EBITDA ಇದೇ ಮೊದಲ ಬಾರಿಗೆ 10,000 ಕೋಟಿ ರೂ.ಗಳಿಗೂ ಹೆಚ್ಚಾಗಿದೆ.

ತೃತೀಯ ತ್ರೈಮಾಸಿಕದಲ್ಲಿ ರಿಲಯನ್ಸ್‌ಗೆ ದಾಖಲೆಯ 20,539 ಕೋಟಿ ರೂ ನಿವ್ವಳ ಲಾಭ!

ಫಲಿತಾಂಶದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಡಿ. ಅಂಬಾನಿ,'ನಮ್ಮ ಎಲ್ಲ ವ್ಯವಹಾರಗಳಿಂದ ಮಹತ್ತರ ಕೊಡುಗೆಯೊಂದಿಗೆ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರಕಟಿಸಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ನಮ್ಮ ಗ್ರಾಹಕ ವ್ಯವಹಾರಗಳಾದ ರೀಟೇಲ್ ಮತ್ತು ಡಿಜಿಟಲ್ ಸೇವೆಗಳೆರಡೂ ಅತ್ಯಧಿಕ ವರಮಾನ ಮತ್ತು EBITDA ಅನ್ನು ದಾಖಲಿಸಿವೆ.' ಎಂದು ಹೇಳಿದ್ದಾರೆ.

ತೃತೀಯ ತ್ರೈಮಾಸಿಕದಲ್ಲಿ ರಿಲಯನ್ಸ್‌ಗೆ ದಾಖಲೆಯ 20,539 ಕೋಟಿ ರೂ ನಿವ್ವಳ ಲಾಭ!

ಗುಜರಾತ್ ರಾಜ್ಯದಲ್ಲಿ 10 ಲಕ್ಷ ಪ್ರತ್ಯಕ್ಷ/ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿರುವ 5.955 ಲಕ್ಷ ಕೋಟಿ ರೂ.ಗಳ ಒಟ್ಟಾರೆ ಹೂಡಿಕೆಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಲ್ಲಿನ ರಾಜ್ಯ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಬುಧಾಬಿಯ ರುವಾಯಸ್‌ನಲ್ಲಿ ಜಾಗತಿಕ ಪ್ರಮಾಣದ ಹೊಸ ರಾಸಾಯನಿಕ ತಯಾರಿಕಾ ಘಟಕವನ್ನು ಸ್ಥಾಪಿಸುವುದಕ್ಕಾಗಿಯೂ ಸಂಸ್ಥೆಯು ಅಬುಧಾಬಿ ಕೆಮಿಕಲ್ಸ್ ಡೆರಿವೇಟಿವ್ಸ್ ಕಂಪನಿ ಆರ್‌ಎಸ್‌ಸಿ ಲಿಮಿಟೆಡ್‌ನೊಂದಿಗೆ ಈ ತ್ರೈಮಾಸಿಕದಲ್ಲಿ ಒಪ್ಪಂದ ಮಾಡಿಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್‌ಫೋಕಾಮ್ ಲಿಮಿಟೆಡ್, ಈ ಹಿಂದೆ ಪಡೆದುಕೊಂಡ ಸ್ಪೆಕ್ಟ್ರಮ್‌ಗಳಿಗೆ ಬಡ್ಡಿಸಹಿತ ಪಾವತಿಯಾಗಿ ದೂರಸಂಪರ್ಕ ಇಲಾಖೆಗೆ 30,791 ಕೋಟಿ ರೂ.ಗಳ ಮೊತ್ತವನ್ನು ಪಾವತಿಸಿದೆ. ಮುಂಗಡವಾಗಿ ಮಾಡಲಾದ ಈ ಪಾವತಿಯಿಂದಾಗಿ ಮುಂಬರುವ ವರ್ಷಗಳಲ್ಲಿ ಪಾವತಿಸಬೇಕಾಗಿದ್ದ ವಾರ್ಷಿಕ 1,200 ಕೋಟಿ ರೂ.ಗಳಷ್ಟು ಬಡ್ಡಿಯ ಉಳಿತಾಯ ಸಾಧ್ಯವಾಗಲಿದೆ.

ತೃತೀಯ ತ್ರೈಮಾಸಿಕದಲ್ಲಿ ರಿಲಯನ್ಸ್‌ಗೆ ದಾಖಲೆಯ 20,539 ಕೋಟಿ ರೂ ನಿವ್ವಳ ಲಾಭ!

ರಿಲಯನ್ಸ್ ಇಂಡಸ್ಟ್ರೀಸ್‌ನ ಇನ್ನೊಂದು ಅಂಗಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಇದೇ ಅವಧಿಯಲ್ಲಿ ಡಂಜೋನಲ್ಲಿ 25.8%ರಷ್ಟು ಪಾಲಿನ ಖರೀದಿಯನ್ನು ಘೋಷಿಸಿದೆ. ಈ ಪಾಲುದಾರಿಕೆಗಾಗಿ ಸಂಸ್ಥೆಯು 200 ಮಿಲಿಯನ್ ಅಮೆರಿಕನ್ ಡಾಲರುಗಳ ಹೂಡಿಕೆಯನ್ನು ಮಾಡಿದೆ.

ಮತ್ತೊಂದು ಅಂಗಸಂಸ್ಥೆ ರಿಲಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್‌ಮೆಂಟ್ಸ್ ಆಂಡ್ ಹೋಲ್ಡಿಂಗ್ಸ್ ಲಿಮಿಟೆಡ್, ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಐಷಾರಾಮಿ ಹೋಟಲುಗಳಲ್ಲೊಂದಾದ ಮ್ಯಾಂಡರಿನ್ ಓರಿಯೆಂಟಲ್ ನ್ಯೂಯಾರ್ಕ್‌ನ 73.37% ಪಾಲನ್ನು 98.15 ಮಿಲಿಯನ್ ಅಮೆರಿಕನ್ ಡಾಲರುಗಳ ಮೊತ್ತಕ್ಕೆ ಖರೀದಿಸುವ ಒಪ್ಪಂದಕ್ಕೆ ಸಹಿಮಾಡಿದೆ.

ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್:
ರಿಲಯನ್ಸ್ ಸಮೂಹದ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಆರ್ಥಿಕ ವರ್ಷ 2021-22ರ ಮೂರನೇ ತ್ರೈಮಾಸಿಕದಲ್ಲಿ 3,795 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಜಿಯೋ ಚಂದಾದಾರರ ಸಂಖ್ಯೆ 421.0 ದಶಲಕ್ಷಕ್ಕೆ ತಲುಪಿದ್ದು, ಈ ಸಂಖ್ಯೆಯಲ್ಲಿ 10.2 ದಶಲಕ್ಷದಷ್ಟು ನಿವ್ವಳ ಹೆಚ್ಚಳ ಕಂಡುಬಂದಿದೆ. ಈ ತ್ರೈಮಾಸಿಕದಲ್ಲಿ ಪ್ರತಿ ಗ್ರಾಹಕರಿಂದ ದೊರಕಿದ ಸರಾಸರಿ ಆದಾಯ (ARPU) ರೂ. 151.6ರಷ್ಟಿತ್ತು. ಈ ತ್ರೈಮಾಸಿಕದಲ್ಲಿ ಒಟ್ಟಾರೆ ಡೇಟಾ ಟ್ರಾಫಿಕ್ 47.8%ರಷ್ಟು ಹೆಚ್ಚಳ ಕಂಡು 23.4 ಶತಕೋಟಿ ಜಿಬಿ ತಲುಪಿದೆ.

ರಿಲಯನ್ಸ್ ರೀಟೇಲ್:
ರಿಲಯನ್ಸ್ ರೀಟೇಲ್ ಈ ತ್ರೈಮಾಸಿಕದಲ್ಲಿ 3,822 ಕೋಟಿ ರೂ.ಗಳ EBITDA ಹಾಗೂ 2,259 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. 14,412 ಕಾರ್ಯನಿರತ ಭೌತಿಕ ಮಳಿಗೆಗಳನ್ನು ನಿರ್ವಹಿಸುತ್ತಿರುವ ರಿಲಯನ್ಸ್ ರೀಟೇಲ್‌ನ ಜಾಲಕ್ಕೆ ಈ ತ್ರೈಮಾಸಿಕದಲ್ಲಿ 837 ಹೊಸ ಮಳಿಗೆಗಳು ಸೇರಿವೆ.

Most Read Articles
Best Mobiles in India

English summary
Reliance Retail Q3 Results: Profit rises 23% to Rs 2,259 cr.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X