ಕೋವಿಡ್‌-19 ಸೋಂಕಿತರಿಗೆ ಆಹಾರ ಔಷಧಿ ತಲುಪಿಸುತ್ತೆ ಈ ರೋಬೋಟ್‌!

|

ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್‌ ವೇಗವಾಗಿ ಮುನ್ನುಗ್ಗುತ್ತಿದೆ. ಈ ಸಾಂಕ್ರಾಮಿಕ ವ್ಯಾಪಕವಾಗಿ ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ವೈದ್ಯರು ಸುರಕ್ಷಾ ಸೂಟ್‌ ಹಾಗೂ ಮಾಸ್ಕ್ ಧರಿಸಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅದಾಗ್ಯೂ ಸೋಂಕು ತಗಲುವ ಅಪಾಯದಲ್ಲೆ ಅವರು ಚಿಕಿತ್ಸೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ನೆರವಾಗಲು ರೋಬೋಟ್ ಅಭಿವೃದ್ಧಿಪಡಿಸಲಾಗಿದೆ.

ಕೋವಿಡ್‌-19 ಸೋಂಕಿತರಿಗೆ ಆಹಾರ ಔಷಧಿ ತಲುಪಿಸುತ್ತೆ ಈ ರೋಬೋಟ್‌!

ಹೌದು, ಕೊರೊನಾ ಸೋಂಕಿತರಿಗೆ ಆರೈಕೆ ಮಾಡಲು ಕೋ-ಬೋಟ್​ ಹೆಸರಿನ ರೋಬೋಟ್ ಅಭಿವೃದ್ಧಿಪಡಿಸಲಾಗಿದೆ. ಈ ರೋಬೋಟ್‌ ಅನ್ನು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭಮ್​​ ಜಿಲ್ಲೆಯ ಚಾಯ್​ಬಾಸಾದಲ್ಲಿ, ಜಿಲ್ಲಾ ಅಭಿವೃದ್ಧಿ ಉಪ ಆಯುಕ್ತ ಆದಿತ್ಯ ರಂಜನ್​ ಅವರ ಮೇಲ್ವಿಚಾರಣೆಯಲ್ಲಿ ಈ ರೋಬೋಟ್​ ಅಭಿವೃದ್ಧಿಪಡಿಸಲಾಗಿದೆ. ಈ ರೋಬೋಟ್ ಕೊರೊನಾ ಸೋಂಕಿತರ ಬೇಡ್‌ಗೆ ಊಟ, ನೀರು ಹಾಗೂ ಔಷಧಿಯನ್ನ ತಲುಪಿಸುತ್ತದೆ.

ಕೋವಿಡ್‌-19 ಸೋಂಕಿತರಿಗೆ ಆಹಾರ ಔಷಧಿ ತಲುಪಿಸುತ್ತೆ ಈ ರೋಬೋಟ್‌!

ಯಾರ ಸಹಾಯದ ಹಸ್ತಕ್ಷೇಪವಿಲ್ಲದೇ ಸೋಂಕಿತರ ಬಳಿ ತೆರಳಿ ಅವರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವಲ್ಲಿ ಕೋ-ಬೋಟ್​​ ಹೆಸರಿನ ಈ ರೋಬೋಟ್ ನೆರವಾಗಲಿದೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿಗಳು ಸೋಂಕಿತರ ಬಳಿ ಹೋಗಿ ಊಟ, ನೀರು ನೀಡುವ ಸಂದರ್ಭಗಳು ಕಡಿಮೆ ಆಗಲಿದ್ದು, ಇದರಿಂದ ಸೋಂಕು ತಗಲುವ ಅಪಾಯ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

ಕೋವಿಡ್‌-19 ಸೋಂಕಿತರಿಗೆ ಆಹಾರ ಔಷಧಿ ತಲುಪಿಸುತ್ತೆ ಈ ರೋಬೋಟ್‌!

ಇನ್ನು ಈ ರೋಬೋಟ್‌ ಅನ್ನು ಸುಲಭವಾಗಿ ಆಪರೇಟ್ ಮಾಬಹುದಾಗಿದ್ದು, ಸ್ಮಾರ್ಟ್‌ಫೋನ್​​ನಲ್ಲಿ ಇರುವ ಕ್ಯಾಮರಾ ಮೂಲಕ ಈ ರೋಬೋಟ್​ ಚಲನವಲನಗಳನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ವೈದ್ಯರು ಹಾಗೂ ರೋಗಿಗಳು ಮಾತಾಡಲು ಅನುಕೂಲವಾಗಲೆಂದು ಸ್ಪೀಕರ್​ ವ್ಯವಸ್ಥೆ ಕೂಡ ಈ ರೋಬೋಟ್‌ನಲ್ಲಿ ಅಳವಡಿಸಲಾಗಿದೆ.

Most Read Articles
Best Mobiles in India

English summary
Developed by District Deputy Development Commissioner (DDC) Aditya Ranjan, the remote-controlled COBOT-Robotics will provide food and medicine to patients without human intervention, an official release said.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X