ಸ್ಯಾಮ್‌ಸಂಗ್‌ ವಾರ್ಷಿಕೋತ್ಸವ ಸೇಲ್‌..! ಕೇವಲ 29,999 ರೂ.ಗೆ ಗೆಲಾಕ್ಸಿ ಎಸ್9..!

|

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ ಗ್ರಾಹಕರಿಗಾಗಿ ವಿಶೇಷ ಮಾರಾಟವನ್ನು ಹಮ್ಮಿಕೊಂಡಿದ್ದು, ವಾರ್ಷಿಕೋತ್ಸವ ಮಾರಾಟ ಆಯೋಜಿಸಿದೆ. ಸ್ಯಾಮ್‌ಸಂಗ್‌ ವಾರ್ಷಿಕೋತ್ಸವ ಮಾರಾಟದ ಭಾಗವಾಗಿ ಏಳು ದಿನಗಳು ಆಡಿಯೋ ಸಾಧನಗಳು, ಟಿವಿಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಉತ್ಪನ್ನಗಳು ಅತ್ಯುತ್ತಮ ರಿಯಾಯಿತಿಯಲ್ಲಿ ದೊರೆಯುತ್ತವೆ. ಈಗಾಗಲೇ ಪ್ರಾರಂಭವಾಗಿರುವ ಸ್ಯಾಮ್‌ಸಂಗ್‌ ಆನಿವರ್ಸರಿ ಸೇಲ್‌ ಅಕ್ಟೋಬರ್ 13 ರವರೆಗೂ ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್‌ನಲ್ಲಿ ನಡೆಯಲಿದೆ.

ಭರ್ಜರಿ ರಿಯಾಯಿತಿ

ಭರ್ಜರಿ ರಿಯಾಯಿತಿ

ಈ ಸೇಲ್‌ನಲ್ಲಿ ಕಂಪನಿಯು ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ.50, ಸ್ಮಾರ್ಟ್‌ವಾಚ್‌ಗಳ ಮೇಲೆ ಶೇ.20 ಮತ್ತು ಟಿವಿಗಳ ಮೇಲೆ ಶೇ.49ರವರೆಗೆ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿಗಳ ಹೊರತಾಗಿ, ಗ್ರಾಹಕರು ಆಯ್ದ ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳಲ್ಲಿ ಶೇ.10 ಕ್ಯಾಶ್‌ಬ್ಯಾಕ್‌ನಂತಹ ಹೆಚ್ಚುವರಿ ಕೊಡುಗೆಗಳು ಸಹ ಗ್ರಾಹಕರಿಗೆ ಕಾಯ್ದಿವೆ. ಅಮೆಜಾನ್ ಪೇನಲ್ಲಿ ವಹಿವಾಟು ನಡೆಸಿದರೆ 1500 ರೂ.ವರೆಗೂ ಕ್ಯಾಶ್‌ಬ್ಯಾಕ್‌, ಮೇಕ್‌ಮೈಟ್ರಿಪ್ ಮೂಲಕ ಟ್ರಾವೆಲ್ ಬುಕಿಂಗ್‌ನಲ್ಲಿ ಶೇ.25ರವರೆಗೆ ರಿಯಾಯಿತಿಯನ್ನು ಪಡೆಯಬಹುದು.

29,999 ರೂ.ಗೆ ಗೆಲಾಕ್ಸಿ ಎಸ್9

29,999 ರೂ.ಗೆ ಗೆಲಾಕ್ಸಿ ಎಸ್9

ಸ್ಯಾಮ್‌ಸಂಗ್ ವಾರ್ಷಿಕೋತ್ಸವ ಮಾರಾಟದ ಭಾಗವಾಗಿ, ಕಂಪನಿಯು ಕಳೆದ ವರ್ಷ ಬಿಡುಗಡೆಯಾದ ಪ್ರಮುಖ ಸ್ಮಾರ್ಟ್‌ಫೋನ್ ಗೆಲಾಕ್ಸಿ ಎಸ್9 (64 ಜಿಬಿ) ಅನ್ನು 29,999 ರೂ.ಗಳಿಗೆ ನೀಡುತ್ತಿದೆ. 62,000 ರೂ. ಮುಖಬೆಲೆ ಹೊಂದಿರುವ ಈ ಹ್ಯಾಂಡ್‌ಸೆಟ್‌ 32,001 ರೂ.ಗಳಷ್ಟು ಬೆಲೆ ಕಡಿತಕೊಂಡಿದ್ದು, ಇದು ಹ್ಯಾಂಡ್‌ಸೆಟ್‌ ಮೇಲೆ ಇದುವರೆಗೂ ನೀಡಿರುವ ಅತಿದೊಡ್ಡ ರಿಯಾಯಿತಿಯಾಗಿದೆ. 3,333 ರೂ.ಗಳಿಂದ ಪ್ರಾರಂಭವಾಗುವ ಯಾವುದೇ ವೆಚ್ಚವಿಲ್ಲದ ಇಎಂಐಗಳನ್ನು ಸಹ ಈ ಸಾಧನಕ್ಕಾಗಿ ಸ್ಯಾಮ್‌ಸಂಗ್‌ ನೀಡುತ್ತಿದೆ.

ಟಿವಿ, ಸ್ಮಾರ್ಟ್‌ಫೋನ್‌ ಬೆಲೆ ಕಡಿತ

ಟಿವಿ, ಸ್ಮಾರ್ಟ್‌ಫೋನ್‌ ಬೆಲೆ ಕಡಿತ

ಇನ್ನು, ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್ 9ರ ಮೂಲ ಆವೃತ್ತಿ 42,999 ರೂ.ಗಳಲ್ಲಿ ಲಭ್ಯವಿದೆ. 4,777 ರೂ.ಗಳಿಂದ ಪ್ರಾರಂಭವಾಗುವ ಯಾವುದೇ ವೆಚ್ಚವಿಲ್ಲದ ಇಎಂಐ ಸೇವೆಯನ್ನು ಸಹ ಈ ಸ್ಮಾರ್ಟ್‌ಫೋನ್‌ ಮೇಲೆ ಪಡೆಯಬಹುದು. ಸ್ಯಾಮ್‌ಸಂಗ್ ನೀಡುವ ಮತ್ತೊಂದು ಪ್ರಮುಖ ರಿಯಾಯಿತಿ ಎಂದರೆ, 55 ಇಂಚಿನ ಫ್ರೇಮ್ 4 ಕೆ ಯುಹೆಚ್‌ಡಿ ಟಿವಿ. 1,33,900 ರೂ. ಮೂಲ ಬೆಲೆ ಹೊಂದಿದ್ದ ಟಿವಿ, 48,910 ರೂ.ಗಳ ರಿಯಾಯಿತಿಯೊಂದಿಗೆ 84,990 ರೂ.ಗಳಿಗೆ ಲಭ್ಯವಿದೆ.

ಸ್ಮಾರ್ಟ್‌ವಾಚ್‌ ಮೇಲೂ ಬಿಗ್‌ ಡಿಸ್ಕೌಂಟ್‌

ಸ್ಮಾರ್ಟ್‌ವಾಚ್‌ ಮೇಲೂ ಬಿಗ್‌ ಡಿಸ್ಕೌಂಟ್‌

ಸ್ಯಾಮ್‌ಸಂಗ್ ಫ್ರೇಮ್‌ ಟಿವಿಯನ್ನು 3,541 ರೂ.ಯಿಂದ ನೋ ಕಾಸ್ಟ್‌ ಇಎಂಐ ಮೂಲಕ ಕೊಳ್ಳಬಹುದು. ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಇಎಂಐನಲ್ಲಿ ಟಿವಿ ಖರೀದಿಸಿದರೆ 6,000 ರೂ.ಗಳ ಕ್ಯಾಶ್‌ಬ್ಯಾಕ್‌ನ್ನು ಸ್ಯಾಮ್‌ಸಂಗ್‌ ನೀಡುತ್ತಿದೆ. ಇದರ ಜೊತೆಗೆ, ಬೆಂಕಿ, ಕಳ್ಳತನ ಅಥವಾ ಆಕಸ್ಮಿಕ ಹಾನಿಯ ವಿರುದ್ಧ ಒಂದು ವರ್ಷದ ವಿಮೆಯನ್ನು ಕೂಡ ಕಂಪನಿ ನೀಡುತ್ತಿದೆ. ಇನ್ನು, ಧರಿಸಬಹುದಾದ ವಸ್ತುಗಳನ್ನು ನೋಡಿದರೆ, 46 ಎಂಎಂ ಮತ್ತು 42 ಎಂಎಂ ಡಯಲ್ ಹೊಂದಿರುವ ಸ್ಯಾಮ್‌ಸಂಗ್ ಗೆಲಾಕ್ಸಿ ವಾಚ್ ಕ್ರಮವಾಗಿ 6,000 ಮತ್ತು 5,000 ರೂ. ರಿಯಾಯಿತಿಯನ್ನು ಪಡೆದಿದ್ದು, 23,990 ಮತ್ತು 19,990 ರೂ.ಗಳಿಗೆ ಮಾರಾಟವಾಗುತ್ತಿದೆ.

Best Mobiles in India

English summary
Samsung Anniversary Sale Is Here: Offers On Galaxy Note 9 And Galaxy S9 And More

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X