ಭಾರತದಲ್ಲಿ ಸ್ಯಾಮ್‌ಸಂಗ್‌ ಬಿಕ್ಸ್‌ಬಿ 3.0 ಬಿಡುಗಡೆ! ವಿಶೇಷತೆ ಏನು?

|

ದಕ್ಷಿಣ ಕೋರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ತನ್ನದೇ ಆದ ವಾಯ್ಸ್‌ ಅಸಿಸ್ಟೆಮಟ್‌ ಬಿಕ್ಸ್‌ಬಿ ಹೊಂದಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಸ್ಯಾಮ್‌ಸಂಗ್‌ ಭಾರತದಲ್ಲಿ ಹೊಸ ಮಾದರಿಯ ಬಿಕ್ಸ್‌ಬಿ 3.0 ಆವೃತ್ತಿಯನ್ನು ಪರಿಚಯಿಸಿದೆ. ಈ ಹೊಸ ಮಾದರಿಯ ಬಿಕ್ಸ್‌ಬಿ ಈಗ ಭಾರತೀಯ ಹೆಸರುಗಳು, ಸ್ಥಳಗಳು, ಸಂಬಂಧಗಳು, ವಿಷಯಗಳು, ಸೇರಿದಂತೆ ಇತರ ವಿಷಯಗಳ ಜೊತೆಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ವರ್ಚುವಲ್ ಅಸಿಸ್ಟೆಂಟ್ ಈಗ ಬಳಕೆದಾರರಿಗೆ ಸಂಬಂಧಗಳನ್ನು ಮತ್ತು ಅವರ ಹೆಸರುಗಳನ್ನು ಹೊಂದಿಸಲು ಅನುಮತಿಸುತ್ತದೆ.

ಅಸಿಸ್ಟೆಂಟ್‌

ಹೌದು, ಸ್ಯಾಮ್‌ಸಂಗ್‌ ತನ್ನ ವಾಯ್ಸ್‌ ಅಸಿಸ್ಟೆಂಟ್‌ ಬಿಕ್ಸ್‌ಬಿಯಲ್ಲಿ "ಇಂಗ್ಲಿಷ್ (ಭಾರತ)" ನೊಂದಿಗೆ ಪರಿಚಯಿಸಿದೆ. ಪ್ರಸ್ತುತ ಬಿಕ್ಸ್‌ಬಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21, ಗ್ಯಾಲಕ್ಸಿ ಎ 52 ಮತ್ತು ಗ್ಯಾಲಕ್ಸಿ ಎ 72 ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಇದನ್ನು ಇನ್ನೂ ಹೆಚ್ಚಿನ ಡಿವೈಸ್‌ಗಳಲ್ಲಿ ಪರಿಚಯಿಸುವುದಾಗಿ ಸ್ಯಾಮ್‌ಸಂಗ್ ಹೇಳಿದೆ. ಈಗಾಗಲೇ ಬಿಕ್ಸ್‌ಬಿಯನ್ನು ಬಳಸುತ್ತಿರುವವರು ಬಿಕ್ಸ್‌ಬಿ ಅಪ್ಲಿಕೇಶನ್ ಮೂಲಕ ಅಪ್ಡೇಟ್‌ಗಾಗಿ ಸಂದೇಶವನ್ನು ಪಡೆಯಬೇಕು.ಇನ್ನುಳಿದಂತೆ ಈ ಹೊಸ ಬಿಕ್ಸ್‌ಬಿ ಅಪ್ಡೇಟ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ, ಹೊಸ ಬಿಕ್ಸ್‌ಬಿ 3.0 ಬಳಕೆದಾರರಿಗೆ "ಯೋಗ ಟೈಮರ್" ಪ್ರಾರಂಭಿಸಲು ಸಹಾಯ ಮಾಡುತ್ತದೆ. ಅಲ್ಲದೆ ತಮ್ಮ ನಗರದಲ್ಲಿ ದಿನದ ಹವಾಮಾನವನ್ನು ಪರಿಶೀಲಿಸಿ, ಕೆಲಸ ಮಾಡುವ ಹಾದಿಯಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಕೆಲಸ ಮಾಡಲು ಅವಕಾಶವನ್ನು ನೀಡಲಿದೆ. ಅಲ್ಲದೆ ಚಿಕನ್ ಪಾಕವಿಧಾನದೊಂದಿಗೆ ಪಾಕಶಾಲೆಯ ಕೌಶಲ್ಯಗಳನ್ನು ಸಹ ಇದು ಒಳಗೊಂಡಿರುವುದರಿಂದ ಅಡುಗೆ ಮಾಡುವಾಗಲೂ ಬಿಕ್ಸ್‌ಬಿ ನಿಮಗೆ ಸಹಾಯಕವಾಗಲಿದೆ.

ಸ್ಯಾಮ್‌ಸಂಗ್‌

ನೀವು ಸ್ಯಾಮ್‌ಸಂಗ್‌ ವಾಯ್ಸ್‌ ಅಸಿಸ್ಟೆಂಟ್‌ ಬಿಕ್ಸ್‌ಬಿಗೆ ಹೊಸಬರಾಗಿದ್ದರೆ, ಬಿಕ್ಸ್‌ಬಿಗೆ ಸೈನ್ ಇನ್ ಮಾಡುವಾಗ ನೀವು "ಇಂಗ್ಲಿಷ್ (ಭಾರತ)" ಆಯ್ಕೆ ಮಾಡಬಹುದು. ನೀವು ಬಿಕ್ಸ್‌ಬಿ ಬಳಕೆದಾರರಾಗಿದ್ದರೆ, ನೀವು ಹೊಸ ಅಪ್ಡೇಟ್‌ನ ಅಧಿಸೂಚನೆಯನ್ನು ಪಡೆಯಬೇಕು. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಇತ್ತೀಚಿನ ಭಾರತ ಕೇಂದ್ರಿತ ಫೀಚರ್ಸ್‌ಗಳನ್ನು ಪಡೆಯಲು "ಇಂಗ್ಲಿಷ್ (ಭಾರತ)" ಆಯ್ಕೆಮಾಡಬೇಕಾಗುತ್ತದೆ.

ವಾಯ್ಸ್‌

ಇನ್ನು ಈ ವಾಯ್ಸ್‌ ಅಸಿಸ್ಟೆಂಟ್‌ನಲ್ಲಿ ಸಂಬಂಧಗಳೊಂದಿಗೆ ಸಂಖ್ಯೆಗಳನ್ನು ಬಳಸಲು, ಬಿಕ್ಸ್‌ಬಿಯನ್ನು ಕೇಳುವ ಮೂಲಕ ಹೆಚ್ಚಿನ ಕೆಲಸಗಳನ್ನು ಮಾಡಬಹುದಾದರೂ, ಬಳಕೆದಾರರು ಮೊದಲು ಅವುಗಳನ್ನು ಸೆಟ್‌ ಮಾಡಬೇಕಾಗುತ್ತದೆ. ಬಳಕೆದಾರರು ಡಿಸ್‌ಪ್ಲೇ ಮೇಲ್ಭಾಗದಲ್ಲಿರುವ ಕಂಟ್ಯಾಕ್ಟ್‌ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಸಂಬಂಧಗಳನ್ನು ಆಯ್ಕೆ ಮಾಡಬಹುದು. ಒಮ್ಮೆ ಆಯ್ಕೆ ಮಾಡಿದ ನಂತರ, ಬಳಕೆದಾರರು ಸಂಬಂಧವನ್ನು ಸೆಟ್‌ ಮಾಡಬಹುದು. ವ್ಯಕ್ತಿಯ ಸಂಖ್ಯೆಯನ್ನು ಆಯ್ಕೆ ಮಾಡಿ ಮತ್ತು ಅದನ್ನು ಸೇವ್‌ ಮಾಡಬಹುದು. ಅಲ್ಲದೆ ಯಾವುದೇ ಭಾರತೀಯ ಸಂಬಂಧದ ಹೆಸರನ್ನು ಹೇಳುವುದರ ಮೂಲಕ ಸಂಬಂಧವನ್ನು ಸೆಟ್‌ ಮಾಡಬಹುದು.

ಸ್ಯಾಮ್‌ಸಂಗ್‌

ಇದಲ್ಲದೆ ಸ್ಯಾಮ್‌ಸಂಗ್‌ ತನ್ನ ವಾಯ್ಸ್‌ ಅಸಿಸ್ಟೆಂಟ್‌ ಬಿಕ್ಸ್‌ಬಿ ಅಪ್ಡೇಟ್‌ ಮೂಲಕ ಭವಿಷ್ಯದಲ್ಲಿ ಇನ್ನು ಹೆಚ್ಚು ಭಾರತ-ಕೇಂದ್ರಿತ ಫೀಚರ್ಸ್‌ಗಳನ್ನು ಸೇರಿಸುವ ಸುಳಿವು ನೀಡಿದೆ. ಈ ಮೂಲಕ ತನ್ನ ಬಳಕೆದಾರರ ಬಳಗವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಸದ್ಯ ವರ್ಚುವಲ್ ಅಸಿಸ್ಟೆಂಟ್ ಸ್ಯಾಮ್‌ಸಂಗ್‌ನ ಕೆಲವೇ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇದು ಇನ್ನು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗಲಿದೆ ಎಂದು ಸ್ಯಾಮ್‌ಸಂಗ್‌ ಸಂಸ್ಥೆ ಹೇಳಿಕೊಂಡಿದೆ.

Most Read Articles
Best Mobiles in India

English summary
Samsung Bixby 3.0 Launched With New India-Specific Features.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X