ಸದ್ಯದಲ್ಲೇ ಲಗ್ಗೆ ಕೊಡಲಿದೆ ಸ್ಯಾಮ್‌ಸಂಗ್ 'ಗ್ಯಾಲಕ್ಸಿ A13 5G' ಫೋನ್!

|

ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ ಗ್ಯಾಲಕ್ಸಿ M, ಗ್ಯಾಲಕ್ಸಿ F ಮತ್ತು ಗ್ಯಾಲಕ್ಸಿ A ಸರಣಿಯಲ್ಲಿ ಹಲವು ಬಜೆಟ್‌ ದರದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಮುಖ್ಯವಾಗಿ ಗ್ಯಾಲಕ್ಸಿ A ಸರಣಿಯಲ್ಲಿ ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್‌ ಬಜೆಟ್‌ ದರದಲ್ಲಿ ಗ್ರಾಹಕರ ಗಮನ ಸೆಳೆದಿದೆ. ಅದರ ಬೆನ್ನಲ್ಲೇ ಇದೀಗ ಸಂಸ್ಥೆಯು A ಸರಣಿಯಲ್ಲಿ ಮತ್ತೆ ಹೊಸದಾಗಿ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಜ್ಜಾಗಿದೆ.

ಸದ್ಯದಲ್ಲೇ ಲಗ್ಗೆ ಕೊಡಲಿದೆ ಸ್ಯಾಮ್‌ಸಂಗ್ 'ಗ್ಯಾಲಕ್ಸಿ A13 5G' ಫೋನ್!

ಹೌದು, ಸ್ಯಾಮ್‌ಸಂಗ್ ಕಂಪನಿಯು ಸದ್ಯದಲ್ಲೇ ಮಾರುಕಟ್ಟೆಗೆ A ಸರಣಿಯಲ್ಲಿ ಗ್ಯಾಲಕ್ಸಿ A13 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸೂಚನೆ ಹೊರಹಾಕಿದೆ. ಬರಲಿರುವ ಈ ನೂತನ ಸ್ಮಾರ್ಟ್‌ಫೋನ್ ಸಹ ಬಜೆಟ್‌ ಪ್ರೈಸ್‌ಟ್ಯಾಗ್‌ ಅನ್ನು ಪಡೆದಿರಲಿದೆ ಎನ್ನಲಾಗುತ್ತಿದೆ. ಇನ್ನು ಈ ಫೋನ್ 50 ಮೆಗಾ ಪಿಕ್ಸಲ್ ಕ್ಯಾಮೆರಾ ಸೆನ್ಸಾರ್ ಪಡೆದಿರಲಿದೆ ಹಾಗೆಯೇ 5G ಸಪೋರ್ಟ್‌ ಅನ್ನು ಒಳಗೊಂಡಿರಲಿದೆ. ಹೀಗಾಗಿ ಈ ಫೋನ್ ಕ್ಯಾಮೆರಾ ಮತ್ತು 5G ಸೌಲಭ್ಯದಿಂದ ಹೈಲೈಟ್ ಆಗುವ ನಿರೀಕ್ಷೆಗಳಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಸದ್ಯದಲ್ಲೇ ಲಗ್ಗೆ ಕೊಡಲಿದೆ ಸ್ಯಾಮ್‌ಸಂಗ್ 'ಗ್ಯಾಲಕ್ಸಿ A13 5G' ಫೋನ್!

ಸ್ಯಾಮ್‌ಸಂಗ್ ಗ್ಯಾಲಕ್ಸಿ A13 5G ಫೋನ್‌ ಬಹುತೇಕ ಗ್ಯಾಲಕ್ಸಿ A12 ಫೋನಿನ ಫೀಚರ್ಸ್‌ಗಳನ್ನು ಹೋಲುವಂತಹ ಸಾಧ್ಯತೆಗಳು ಇರಲಿವೆ ಎನ್ನಲಾಗಿದೆ. ಹಾಗೆಯೇ ಬರಲಿರುವ ಹೊಸ ಗ್ಯಾಲಕ್ಸಿ A13 5G ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಗ್ಯಾಲಕ್ಸಿ A ಸರಣಿಯ ಕೆಲವು ಫೋನ್‌ಗಳು (ಗ್ಯಾಲಕ್ಸಿA12, ಗ್ಯಾಲಕ್ಸಿA22, ಗ್ಯಾಲಕ್ಸಿA32) ಸಹ 5,000mAh ಸಾಮರ್ಥ್ಯದ ಬ್ಯಾಟರಿ ಪವರ್ ಒಳಗೊಂಡಿವೆ.

ಗ್ಯಾಲಕ್ಸಿ A13 5G ಫೋನ್ ಡಿಸ್‌ಪ್ಲೇಯು ಅಧಿಕ ಪಿಕ್ಸಲ್ ರೆಸಲ್ಯೂಶ್‌ನ ನೊಂದಿಗೆ ಪೂರ್ಣ ಹೆಚ್‌ಡಿ + ಸೂಪರ್‌ ಅಮೋಲೆಡ್ ಮಾದರಿಯಲ್ಲಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಹಾಗೆಯೇ 5Gಗೆ ಪೂರಕವಾಗಿ ಅಧಿಕ ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಇದರೊಂದಿಗೆ 4GB RAM ಮತ್ತು 6GB RAM ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿರಲಿವೆ ಎನ್ನಲಾಗಿದೆ. ಹಿಂಬದಿಯ ಕ್ಯಾಮೆರಾದಂತೆ ಸೆಲ್ಫಿಗಾಗಿ ಸಹ ಅತ್ಯುತ್ತಮ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ನೀಡುವ ಸಾಧ್ಯತೆಗಳು ಇವೆ.

ಸದ್ಯದಲ್ಲೇ ಲಗ್ಗೆ ಕೊಡಲಿದೆ ಸ್ಯಾಮ್‌ಸಂಗ್ 'ಗ್ಯಾಲಕ್ಸಿ A13 5G' ಫೋನ್!

ಇನ್ನು ಗ್ಯಾಲಕ್ಸಿ A13 5G ಫೋನ್ ಬೇಸ್ ವೇರಿಯಂಟ್ ಯುರೋಪ್‌ನಲ್ಲಿ EUR 200 ಆಗಿರಲಿದೆ ಎಂದು ಹೇಳಲಾಗುತ್ತಿದೆ. (ಭಾರತದಲ್ಲಿ ಅಂದಾಜು 17,300ರೂ.ಗಳು). 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪೂಕರವಾಗಿ ಫಾಸ್ಟ್‌ ಚಾರ್ಜಿಂಗ್ ಒದಗಿಸುವ ನಿರೀಕ್ಷೆಗಳಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ ಫೈ, ಬ್ಲೂಟೂತ್, ಫಿಂಗರ್‌ಪ್ರಿಂಟ್ ಸೆನ್ಸಾರ್, ಉತ್ತಮ ಆಡಿಯೋ ಸೌಲಭ್ಯ, ಯುಎಸ್‌ಬಿ ಸಿ ಪೋರ್ಟ್‌ ಸೇರಿದಂತೆ ಇತರೆ ಇತ್ತೀಚಿನ ಅಗತ್ಯ ಸೌಲಭ್ಯಗಳನ್ನು ನೀಡುವ ಸಾಧ್ಯತೆಗಳು ಇವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಫೋನಿನ ಫೀಚರ್ಸ್‌
ಸ್ಯಾಮ್‌ಸಂಗ್‌ ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು TFT ಇನ್ಫಿನಿಟಿ-ವಿ ಡಿಸ್‌ಪ್ಲೇ ಆಗಿದ್ದು, 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು ಆಕ್ಟಾ-ಕೋರ್‌ ಮೀಡಿಯಾ ಟೆಕ್‌ ಹಿಲಿಯೊ P35 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 10 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 4GB RAM+64GB 4GB RAM+128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೇ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G- ಫೀಚರ್ಸ್‌
ಈ ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. ಇದು ಸೂಪರ್ AMOLED ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 778G SoC ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಒನ್ UI 3.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 6GB ಮತ್ತು 8GB RAM ಹಾಗೂ 128GB ಇಂಟರ್‌ ಸ್ಟೋರೇಜ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ ಎಂದು ನಿರೀಕ್ಷಿಸಲಾಗಿದೆ.

Most Read Articles
Best Mobiles in India

English summary
Samsung Galaxy A13 5G Tipped to Get A 50 Megapixel Camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X