ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್ ಲೈವ್ ಇಯರ್‌ಫೋನ್‌ ಬಿಡುಗಡೆ!

|

ದಕ್ಷಿಣ ಕೊರಿಯಾದ ಟೆಕ್ ಸಂಸ್ಥೆ ಸ್ಯಾಮ್‌ಸಂಗ್‌ ತನ್ನ ವಿವಿಧ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸುವಲ್ಲಿ ಸೈ ಎನಿಸಿಕೊಂಡಿದೆ. ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌, ಇಯರ್‌ಫೋನ್‌,ಗಳ ಮೂಲಕ ಸಂಚಲನ ಸೃಷ್ಟಿಸಿರುವ ಸ್ಯಾಮ್‌ಸಂಗ್‌ ಇದೀಗ ತನ್ನ ಹೊಸ ಗ್ಯಾಲಕ್ಸಿ ಬಡ್ಸ್ ಲೈವ್ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದು ಸ್ಯಾಮ್‌ಸಂಗ್‌ ಸಂಸ್ಥೆಯ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಒಳಗೊಂಡಿರುವ ಮೊದಲನೆಯ ಇಯರ್‌ಬಡ್ಸ್‌ ಆಗಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಸಂಸ್ಥೆ ತನ್ನ ಹೊಸ ಗ್ಯಾಲಕ್ಸಿ ಬಡ್ಸ್‌ ಲೈವ್‌ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಫೋನ್‌ಗಳು ಹುರುಳಿ ಆಕಾರದ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಇಯರ್‌ಫೋನ್‌ $169.99 (ಅಂದಾಜು ರೂ. 12,700)ಬೆಲೆಯನ್ನ ಹೊಂದಿದೆ. ಜೊತೆಗೆ ಈ ಇಯರ್‌ಫೋನ್‌ 12mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಹಾಗಾದ್ರೆ ಈ ಇಯರ್‌ಫೋನ್‌ಗಳ ವಿನ್ಯಾಸ ಹೇಗಿದೆ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್ ಇಯರ್‌ಫೋನ್ AKG ಟ್ಯೂನಿಂಗ್ ಹೊಂದಿರುವ 12 mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಮೂರು ಮೈಕ್ರೊಫೋನ್‌ಗಳನ್ನು ನೀಡಲಾಗಿದ್ದು, ಇಯರ್‌ಫೋನ್‌ಗಳ ಹೊರ ಭಾಗದಲ್ಲಿ ಎರಡು ಮತ್ತು ಒಳಭಾಗದಲ್ಲಿ ಒಂದು ಮೈಕ್ರೊಫೋನ್‌ ಅಳವಡಿಸಲಾಗಿದೆ. ಇನ್ನು ಈ ಇಯರ್‌ಫೋನ್‌ ಹಿಂದಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳಂತೆ, ಬಡ್ಸ್ ಲೈವ್ ಕನೆಕ್ಟಿವಿಟಿಯಲ್ಲಿ ಬ್ಲೂಟೂತ್ v5.0 ಅನ್ನು ಬೆಂಬಲಿಸುತ್ತದೆ. ಜೊತೆಗೆ SBC,AAC ಮತ್ತು ಸ್ಕೇಲೆಬಲ್ ಬ್ಲೂಟೂತ್ ಕೋಡೆಕ್‌ಗಳನ್ನು ಬೆಂಬಲಿಸುತ್ತದೆ.

ಇಯರ್‌ಫೋನ್‌

ಇನ್ನು ಈ ಇಯರ್‌ಫೋನ್‌ನ ಹೊರಗಿನ ವಿನ್ಯಾಸವು ಇಯರ್‌ ಫಿಟ್ ಅನ್ನು ಹೊಂದಿದೆ. ಇದು ವಾಯ್ಸ್‌ ಕ್ಯಾನ್ಸೆಲೇಶನ್‌ ಅನ್ನು ನೀಡುವಾಗ ಸುತ್ತುವರಿದ ಆಲಿಸುವಿಕೆಯನ್ನು ಅನುಮತಿಸುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್‌ನ ಕೇಸ್‌ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಹೊಂದಿದ್ದರೆ, ಇಯರ್‌ಫೋನ್‌ಗಳು ತಲಾ 60mAh ಬ್ಯಾಟರಿಗಳನ್ನು ಹೊಂದಿದ್ದು,ಈ ಕೇಸ್‌ 472mAh ಬ್ಯಾಟರಿಯನ್ನು ಹೊಂದಿದೆ. ಪ್ರತಿ ಚಾರ್ಜ್ ಸೈಕಲ್‌ಗೆ 29 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಸ್ಯಾಮ್‌ಸಂಗ್ ಹೇಳಿಕೊಂಡಿದೆ. ಅಲ್ಲದೆ ಈ ಇಯರ್‌ಫೋನ್‌ಗಳು ಮಾತ್ರ ಪ್ರತಿ ಚಾರ್ಜ್‌ಗೆ 8 ಗಂಟೆಗಳವರೆಗೆ ಚಲಿಸುತ್ತವೆ ಎಂದು ಹೇಳಲಾಗಿದೆ.

ಇಯರ್‌ಫೋನ್‌

ಇದಲ್ಲದೆ ಈ ಇಯರ್‌ಫೋನ್‌ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದ್ದು, ಐದು ನಿಮಿಷಗಳ ಚಾರ್ಜಿಂಗ್‌ನೊಂದಿಗೆ 1 ಗಂಟೆ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಅಲ್ಲದೆ ಇಯರ್‌ಫೋನ್‌ಗಳನ್ನು ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು, IPX2 ಎಂದು ರೇಟ್ ಮಾಡಲಾಗಿದೆ ಮತ್ತು ಸ್ಯಾಮ್‌ಸಂಗ್‌ನ ಬಿಕ್ಸ್‌ಬಿ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್ ಐಒಎಸ್‌ಗಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಅಪ್ಲಿಕೇಶನ್ ಮತ್ತು ಆಂಡ್ರಾಯ್ಡ್‌ಗಾಗಿ ಗ್ಯಾಲಕ್ಸಿ ವೇರಬಲ್ ಅಪ್ಲಿಕೇಶನ್ ಮೂಲಕ ಕೇಸ್‌ ಕಿ ವಾಯರ್‌ಲೆಸ್‌ ಚಾರ್ಜಿಂಗ್, ಟಚ್ ಕಂಟ್ರೋಲ್ಸ್ ಮತ್ತು ಅಪ್ಲಿಕೇಶನ್ ಆಧಾರಿತ ಗ್ರಾಹಕೀಕರಣವನ್ನು ಸಹ ಒಳಗೊಂಡಿದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ ಲೈವ್‌ $169.99 (ಅಂದಾಜು ರೂ. 12,700) ಬೆಲೆಯನ್ನು ಹೊಂದಿದೆ. ಅಲ್ಲದೆ ಇದು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಆಗಸ್ಟ್ 6 ರಂದು ಮಾರಾಟವಾಗಲಿದೆ.

Most Read Articles
Best Mobiles in India

English summary
Samsung Galaxy Buds Live are available in three colours - black, bronze, and white - and feature 12mm drivers with AKG tuning.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X