ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫಿಟ್ 2 ಬಿಡುಗಡೆ! ಆಕರ್ಷಕ ವಿನ್ಯಾಸ!

|

ದಕ್ಷಿಣ ಕೋರಿಯಾ ಮೂಲದ ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್ ಬ್ಯಾಂಡ್‌ ವಲಯದಲ್ಲೂ ತನ್ನ ವ್ಯಾಪ್ತಿಯನ್ನ ವಿಸ್ತರಿಸಿಕೊಂಡಿದೆ. ಈಗಾಲೇ ಹಲವು ಬಿನ್ನ ಮಾದರಿಯ ಫಿಟ್ನೆಸ್‌ ಬ್ಯಾಂಡ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಫಿಟ್‌ನೆಸ್ ಟ್ರ್ಯಾಕರ್ ಗ್ಯಾಲಕ್ಸಿ ಫಿಟ್ 2 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಗ್ಯಾಲಕ್ಸಿ ಫಿಟ್ 2 ಅಮೋಲೆಡ್ ಡಿಸ್‌ಪ್ಲೇ ಮತ್ತು 15 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ.

ಸ್ಯಾಮ್‌ಸಂಗ್

ಹೌದು, ಸ್ಮಾರ್ಟ್‌ಫೋನ್ ದಿಗ್ಗಜ ಸ್ಯಾಮ್‌ಸಂಗ್ ಸಂಸ್ಥೆ ತನ್ನ ಹೊಸ ಫಿಟ್‌ನೆಸ್ ಟ್ರ್ಯಾಕರ್ ಗ್ಯಾಲಕ್ಸಿ ಫಿಟ್ 2 ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ಈ ಫಿಟ್ನೆಸ್‌ ಟ್ರ್ಯಾಕರ್‌ ಅನ್ನು ಕಳೆದ ತಿಂಗಳು ತನ್ನ ‘ಲೈಫ್ ಅನ್‌ಸ್ಟಾಪಬಲ್' ವರ್ಚುವಲ್ ಈವೆಂಟ್‌ನಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಗಿತ್ತು. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಫಿಟ್ 2 ಬೆಲೆ 3,999,ರೂ ಆಗಿದ್ದು, ಇದು ಕಂಪನಿಯ ಆನ್‌ಲೈನ್ ಸ್ಟೋರ್, ಆಫ್‌ಲೈನ್ ಸ್ಟೋರ್‌ಗಳು ಮತ್ತು ಅಮೆಜಾನ್ ಇಂಡಿಯಾದಲ್ಲಿ ಇಂದಿನಿಂದ ಲಭ್ಯವಿದೆ. ಇನ್ನು ಈ ಫಿಟ್ನೆಸ್ ಟ್ರ್ಯಾಕರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಿಟ್ 2 ಬ್ಯಾಂಡ್

ಗ್ಯಾಲಕ್ಸಿ ಫಿಟ್ 2 ಬ್ಯಾಂಡ್‌ 1.1-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 3D ಬಾಗಿದ ಗಾಜಿನ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 450 ನಿಟ್ಸ್ ಬ್ರೈಟ್‌ನೆಶ್‌ ಅನ್ನು ಹೊಂದಿದೆ. ಈ ಫಿಟ್‌ನೆಸ್ ಬ್ಯಾಂಡ್‌ನ ತೂಕ 21 ಗ್ರಾಂ, ಆಗಿದ್ದು, ಇಂಡೆಂಟ್ ಮಾಡಿದ ಪಟ್ಟಿಯನ್ನು ಹೊಂದಿದೆ ಅದು ಬೆವರು ನಿರೋಧಕವಾಗಿದೆ. ಅಲ್ಲದೆ ಗ್ಯಾಲಕ್ಸಿ ಫಿಟ್ 2 ನಲ್ಲಿ 70 ಕ್ಕೂ ಹೆಚ್ಚು ಡೌನ್‌ಲೋಡ್ ಮಾಡಬಹುದಾದ ವಾಚ್ ಫೇಸ್‌ಗಳನ್ನು ಒಳಗೊಂಡಿದೆ. ಜೊತೆಗೆ ಡಿಸ್‌ಪ್ಲೇಯನ್ನು ಆನ್‌ ಮಾಡಲು ಮತ್ತು ನ್ಯಾವಿಗೇಟ್‌ ಮಾಡಲು ಈ ಫಿಟ್‌ನೆಸ್ ಬ್ಯಾಂಡ್‌ನಲ್ಲಿ ಒಂದೇ ಟಚ್ ಕೀ ಇದೆ.

ಗ್ಯಾಲಕ್ಸಿ ಫಿಟ್ 2

ಇನ್ನು ಗ್ಯಾಲಕ್ಸಿ ಫಿಟ್ 2 ಐದು Automatic workouts ಮತ್ತು ಸ್ಯಾಮ್‌ಸಂಗ್ ಹೆಲ್ತ್‌ ಲೈಬ್ರರಿಯಲ್ಲಿ 90ಕ್ಕೂ ಅಧಿಕ ವರ್ಕೌಟ್‌ ಮಾದರಿಗಳನ್ನಿ ನೀಡಲಾಗಿದೆ. ಈ ಫಿಟ್ನೆಸ್ ಬ್ಯಾಂಡ್ Awake, REM, light and deep ನಂತಹ ನಿದ್ರೆಯ ನಾಲ್ಕು ಹಂತಗಳನ್ನು ವಿಶ್ಲೇಷಿಸಲಿದೆ. ಜೊತೆಗೆ ಇದು ಒತ್ತಡದ ಟ್ರ್ಯಾಕಿಂಗ್ ಅನ್ನು ಸಹ ಹೊಂದಿದೆ, ಹೆಚ್ಚಿನ ಒತ್ತಡದ ಕ್ಷಣಗಳಲ್ಲಿ ಉಸಿರಾಟದ ಮಾರ್ಗದರ್ಶಿಯನ್ನು ಸೂಚಿಸುತ್ತದೆ. ಅಲ್ಲದೆ ಗ್ಯಾಲಕ್ಸಿ ಫಿಟ್ 2 5ATM ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು, ಸ್ವಿಮ್ಮಿಂಗ್‌ ಮಾಡಡುವಾಗ್ ಪಿಟ್ನೆಸ್‌ ಬ್ಯಾಂಡ್‌ ಸಕ್ರಿಯಗೊಳ್ಳುವುದನ್ನು ತಡೆಯಲು ವಾಟರ್ ಲಾಕ್ ಮೋಡ್ ಹೊಂದಿದೆ.

ಗ್ಯಾಲಕ್ಸಿ ಫಿಟ್ 2 ಬ್ಯಾಂಡ್

ಇದಲ್ಲದೆ ಗ್ಯಾಲಕ್ಸಿ ಫಿಟ್ 2 ಬ್ಯಾಂಡ್‌ 12 ಮಾದರಿಯ ಡೆಡಿಕೇಟೆಡ್‌ ವಿಜೆಟ್‌ಗಳನ್ನು ಹೊಂದಿದೆ. ಅಲ್ಲದೆ ಇದು ಅಧಿಸೂಚನೆಗಳಿಗೆ ಮೊದಲೇ ಪ್ರತ್ಯುತ್ತರಗಳನ್ನು ಸಹ ಬೆಂಬಲಿಸುತ್ತದೆ. ಇನ್ನು ಈ ಫಿಟ್‌ನೆಸ್ ಬ್ಯಾಂಡ್‌ನಲ್ಲಿ ಮ್ಯೂಸಿಕ್‌ ಕಂಟ್ರೋಲ್‌ ಅನ್ನು ಸಹ ನೀಡಲಾಗಿದ್ದು, ಮ್ಯೂಸಿಕ್‌ ಅನುಭವವನ್ನು ಸಹ ಪಡೆಯಬಹುದಾಗಿದೆ. ಜೊತೆಗೆ ಇದು 159mAh ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 15 ದಿನಗಳವರೆಗೆ ಇರುತ್ತದೆ. ಕೇವಲ ದಿನದ ಬಳಕೆಗೆ ಬಂದಾಗ, ಫಿಟ್‌ನೆಸ್ ಬ್ಯಾಂಡ್ 21 ದಿನಗಳವರೆಗೆ ಬಳಸಬಹುದಾಗಿದೆ. ಇನ್ನು ಈ ಫಿಟ್ನೆಸ್‌ ಬ್ಯಾಂಡ್‌ ಕಪ್ಪು ಮತ್ತು ಕಡುಗೆಂಪು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

Read more about:
English summary
Samsung Galaxy Fit2 comes with stress tracking, 5ATM water resistance, and over 70 watch faces.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X