Just In
Don't Miss
- Movies
ಹಿಟ್ಲರ್ ಕಲ್ಯಾಣ: ತನ್ನ ತಾಯಿಗೆ ಪಾಠ ಕಲಿಸುತ್ತಾಳ ಲೀಲಾ?
- News
ಪಕ್ಷ ಬಿಡೋರು ಬಿಡಲಿ, ಹೊಸದಾಗಿ ಪಕ್ಷ ಕಟ್ತೀವಿ: ಉದ್ಧವ್ ಠಾಕ್ರೆ
- Education
BIMS Belagavi Recruitment 2022 : 10 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
SL-w vs IND-w 2ನೇ ಟಿ20: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಕೌರ್ ಪಡೆ; ಪಂದ್ಯ ಯಾವಾಗ, ಎಲ್ಲಿ?
- Finance
ಡೇಟಿಂಗ್ ಆಪ್ ಪರಿಚಯ: ಯುವತಿಗೆ ರೂಪಾಯಿ 5.7 ಕೋಟಿ ನೀಡಿದ ಬ್ಯಾಂಕ್ ಮ್ಯಾನೇಜರ್ ಬಂಧನ
- Automobiles
ಹೇಗಿವೆ ಗೊತ್ತಾ ರಾಯಲ್ ಎನ್ಫೀಲ್ಡ್ ಕಸ್ಟಮೈಸ್ಡ್ ಬೈಕ್ಗಳು: ಅಭಿಮಾನಿಗಳಿಗಾಗಿ 4 ಮಾದರಿಗಳ ಪ್ರದರ್ಶನ
- Lifestyle
ಪುರುಷರಲ್ಲಿ ಲೈಂಗಿಕ ಶಕ್ತಿಯ ಸಮಸ್ಯೆಗೆ ಈ ಹಣ್ಣುಗಳೇ ಪವರ್ಫುಲ್ ಮದ್ದು
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಸ್ಯಾಮ್ಸಂಗ್ನಿಂದ ಮತ್ತೆ ನೂತನ ಸ್ಮಾರ್ಟ್ಫೋನ್ ಅನಾವರಣ!
ಜನಪ್ರಿಯ ಸ್ಯಾಮ್ಸಂಗ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ M ಸರಣಿಯಲ್ಲಿ ಲಾಂಚ್ ಆಗಿರುವ ಈ ಸ್ಮಾರ್ಟ್ಫೋನ್, ಸಂಸ್ಥೆಯ ಗ್ಯಾಲಕ್ಸಿ M12 ಯಶಸ್ಸಿನ ಮುಂದುವರಿದ ಭಾಗವಾಗಿದೆ ಎನ್ನಲಾಗಿದೆ. ಇನ್ನು ಈ ಫೋನ್ ಮುಖ್ಯವಾಗಿ ತ್ರಿವಳಿ ಕ್ಯಾಮೆರಾ ರಚನೆ, ಬಿಗ್ ಬ್ಯಾಟರಿ ಬಾಳಿಕೆಯನ್ನು ಪಡೆದಿರುವುದು ಈ ಫೋನಿನ ಪ್ರಮುಖ ಹೈಲೈಟ್ಸ್ಗಳಾಗಿವೆ.

ಹೌದು, ಸ್ಯಾಮ್ಸಂಗ್ ಕಂಪನಿಯು ಹೊಸದಾಗಿ ಗ್ಯಾಲಕ್ಸಿ M13 ಅನಾವರಣ ಮಾಡಿದೆ. ಈ ಫೋನ್ 5,000mAh ಬ್ಯಾಟರಿ ಹೊಂದಿದ್ದು, ಮುಖ್ಯ ರಿಯರ್ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ನಲ್ಲಿದೆ. ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ ಹಾಗೆಯೇ ಇನ್ಫಿನಿಟಿ V ಮಾದರಿಯ ಡಿಸ್ಪ್ಲೇ ಲುಕ್ ಹೊಂದಿದೆ. ಇನ್ನುಳಿದಂತೆ ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನಿನ ಫೀಚರ್ಸ್ಗಳೆನು ಎಂಬುದನ್ನು ಮುಂದೆ ತಿಳಿಯೋಣ.
ಡಿಸ್ಪ್ಲೇ ರಚನೆ ಮತ್ತು ಪ್ರೊಸೆಸರ್ ಪವರ್
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಅಧಿಕ ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 6.6 ಇಂಚಿನ ಫುಲ್ ಹೆಚ್ಡಿ ಪ್ಲಸ್ ಜೊತೆಗೆ ಇನ್ಫಿನಿಟಿ V ಮಾದರಿಯ ಡಿಸ್ಪ್ಲೇ ಹೊಂದಿದೆ. ಹಾಗೆಯೇ ಆಕ್ಟಾ-ಕೋರ್ ಎಕ್ಸಿನೋಸ್ 850 ಪ್ರೊಸೆಸರ್ನಿಂದ 2GHz ವೇಗವನ್ನು ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು 4GB RAM ಆಯ್ಕೆ ಜೊತೆಗೆ 64GB ಮತ್ತು 128GB ಸ್ಟೋರೇಜ್ ಆಯ್ಕೆ ಪಡೆದಿದೆ. ಎಸ್ಡಿ ಕಾರ್ಡ್ ಮೂಲಕ 1TB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದೆ.

ಕ್ಯಾಮೆರಾ ಸೆನ್ಸಾರ್ ರಚನೆ
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 5 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಬಲವನ್ನು ಪಡೆದಿದೆ. ಇದರೊಂದಿಗೆ 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.
ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಇದರೊಂದಿಗೆ 4G VoLTE, ವೈಫೈ, ಬ್ಲೂಟತ್, ಜಿಪಿಎಸ್, 3.5mm ಆಡಿಯೊ ಜಾಕ್ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್ಗಳನ್ನು ಒಳಗೊಂಡಿದೆ. ಇನ್ನು ಈ ಫೋನಿನ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ. ಹಾಗೂ ಭಾರತದಲ್ಲಿ ಯಾವಾಗ ಎಂಟ್ರಿ ಕೊಡಲಿದೆ ಎಂದು ಬಹಿರಂಗಪಡಿಸಿಲ್ಲ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999