ಶಾಶ್ವತ ಬೆಲೆ ಇಳಿಕೆ ಕಂಡ ಸ್ಯಾಮ್‌ಸಂಗ್ ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್!

|

ಸ್ಯಾಮ್‌ಸಂಗ್ ಸಂಸ್ಥೆಯು ಗ್ಯಾಲ್ಯಾಕ್ಸಿ A ಮತ್ತು M ಸರಣಿಯಲ್ಲಿ ಇತ್ತೀಚಿಗೆ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಸರಣಿಯಲ್ಲಿನ ಬಜೆಟ್‌ ಬೆಲೆಯ ಫೋನ್‌ಗಳಿಂದ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದು, ಗ್ರಾಹಕರ ಗಮನ ಸೆಳೆದಿವೆ. ಆ ಪೈಕಿ ಭಾರಿ ಸದ್ದು ಮಾಡಿರುವ ಗ್ಯಾಲ್ಯಾಕ್ಸಿ M21 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ ಇಳಿಕೆ ಆಗಿದ್ದು, ಮತ್ತೆ ಗ್ರಾಹಕರನ್ನು ತನ್ನತ್ತ ಆಕರ್ಷಿಸುವಂತಾಗಿದೆ.

ಗ್ಯಾಲಕ್ಸಿ M21

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಜನಪ್ರಿಯ ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಶಾಶ್ವತವಾಗಿ ಕಡಿತ ಮಾಡಿದೆ. ಈ ಫೋನ್‌ 4GB + 64GB ಮತ್ತು 6GB + 128GB ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಫೋನ್‌ ಪ್ರೈಸ್ನಲ್ಲಿ ಈಗ 500ರೂ. ದರ ಕಡಿತವಾಗಿದ್ದು, ಆರಂಭಿಕ ವೇರಿಯಂಟ್‌ 13,999ರೂ.ಗಳಿಗೆ ಲಭ್ಯವಾಗಲಿದೆ. ಸದ್ಯ ಅಮೆಜಾನ್ ಹಾಗೂ ಸ್ಯಾಮ್‌ಸಂಗ್ ವೆಬ್‌ಸೈಟ್‌ನಲ್ಲಿ ದೀಪಾವಳಿ ಸೇಲ್‌ ಪ್ರಯುಕ್ತ ಬೇಸ್‌ ವೇರಿಯಂಟ್‌ ಫೋನ್‌ ಅನ್ನು 12,499ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಫೀಚರ್ಸ್‌ಗಳು ಏನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್‌ 1080x2340 ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿರುವ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಜೊತೆಗೆ ಇನ್‌ಫಿನಿಟಿ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಈ ಫೋನಿನ ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. ಹಾಗೂ ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 3 ಸೌಲಭ್ಯವನ್ನು ಪಡೆದಿದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್‌ ಸಂಸ್ಥೆಯ ಆಕ್ಟಾ ಕೋರ್ exynos 9611 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ Mali-G72 MP3 GPU ಪಡೆದಿದೆ. ಎರಡು ವೇರಿಯಂಟ್ ಆಯ್ಕೆಗಳಿದ್ದು, ಅವುಗಳು ಕ್ರಮವಾಗಿ 4GB RAM + 64GB ಸ್ಟೋರೇಜ್ ಮತ್ತು 6GB RAM + 128GB ಸಾಮರ್ಥ್ಯ ಸ್ಟೋರೇಜ್ ಆಯ್ಕೆಗಳನ್ನು ಪಡೆದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್‌ ತ್ರಿವಳಿ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಕ್ಯಾಮೆರಾವು 5ಎಂಪಿ ಸೆನ್ಸಾರ್ ಬಲವನ್ನು ಪಡೆದಿದೆ. ಇದರೊಂದಿಗೆ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ ಎಡಿಟಿಂಗ್ ಆಯ್ಕೆಗಳು ಇವೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಇದರೊಂದಿಗೆ 4G VoLTE, ವೈಫೈ, ಬ್ಲೂಟತ್, ಜಿಪಿಎಸ್ ಆಡಿಯೊ ಜಾಕ್ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ.

Most Read Articles
Best Mobiles in India

English summary
Samsung Galaxy M21 price in India now starts at Rs 13,999 following the price cut.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X