'ಗ್ಯಾಲ್ಯಾಕ್ಸಿ M30s' ಬಿಡುಗಡೆ!..ಖರೀದಿಗೆ ಜನರು ಮುಗಿ ಬೀಳುವುದು ಪಕ್ಕಾ!

|

ಸ್ಯಾಮ್‌ಸಂಗ್ ಇತ್ತೀಚಿಗೆ 'ಗ್ಯಾಲ್ಯಾಕ್ಸಿ ಎಂ' ಸರಣಿ ಮೂಲಕ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಆ ಲಿಸ್ಟಿಗೆ ಈಗ ಮತ್ತೊಂದು ಪವರ್‌ಫುಲ್ ಸ್ಮಾರ್ಟ್‌ಫೋನ್‌ ಅನ್ನು ಸೇರ್ಪಡೆ ಮಾಡಿದೆ. ಕಂಪನಿಯ ಬಹುನಿರೀಕ್ಷಿತ 'ಗ್ಯಾಲ್ಯಾಕ್ಸಿ ಎಂ30ಎಸ್‌' ಮತ್ತು 'ಗ್ಯಾಲ್ಯಾಕ್ಸಿ ಎಂ10ಎಸ್‌' ಸ್ಮಾರ್ಟ್‌ಫೋನ್‌ಗಳನ್ನು ಇಂದು ಕಂಪನಿಯು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಖರೀದಿಗೆ ಗ್ರಾಹಕರು ಮುಗಿಬೀಳುವುದು ಕನ್ಫರ್ಮ್‌.

ಸ್ಯಾಮ್‌ಸಂಗ್

ಹೌದು, ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯು ಇಂದು(ಸೆಪ್ಟೆಂಬರ್‌ 18) ಅಧಿಕೃತವಾಗಿ 'ಗ್ಯಾಲ್ಯಾಕ್ಸಿ ಎಂ30ಎಸ್‌' ಮತ್ತು 'ಗ್ಯಾಲ್ಯಾಕ್ಸಿ ಎಂ10ಎಸ್‌' ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರಲ್ಲಿ 'ಗ್ಯಾಲ್ಯಾಕ್ಸಿ ಎಂ30ಎಸ್‌' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 48ಎಂಪಿ ರಿಯರ್‌ ಕ್ಯಾಮೆರಾ ಮತ್ತು 6000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ.

ಗ್ಯಾಲ್ಯಾಕ್ಸಿ ಎಂ30ಎಸ್‌

ಹಾಗೆಯೇ ಗ್ಯಾಲ್ಯಾಕ್ಸಿ ಎಂ30ಎಸ್‌ ಫೋನ್ 4GB RAM/64GB ಮತ್ತು 6GB RAM/128GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದ್ದು, ಬ್ಕ್ಯಾಕ್‌, ಬ್ಲೂ ಮತ್ತು ಪರ್ಲ್ ವೈಟ್‌ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಫೋನಿನ ಆರಂಭಿಕ ಬೆಲೆಯು 13,999ರೂ. ಗಳಾಗಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30ಎಸ್‌ ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ವಾಟ್ಸಪ್‌ನ ಈ 5 ಕುತೂಹಲಕಾರಿ ಫೀಚರ್ಸ್‌ಗಳ ಬಗ್ಗೆ ನೀವು ತಿಳಿಯಲೇಬೇಕು!

ಗ್ಯಾಲ್ಯಾಕ್ಸಿ M30s ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ M30s ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.4 ಇಂಚಿನ AMOLED ಫುಲ್‌ ಹೆಚ್‌ಡಿ ಪ್ಲಸ್‌ ಇನ್‌ಫಿನಿಟಿ ಯು ಡಿಸ್‌ಪ್ಲೇಯನ್ನು ಹೊಂದಿದೆ. ವಾಟರ್‌ ಡ್ರಾಪ್ ನಾಚ್ ಹೊಂದಿರುವ ಈ ಸ್ಕ್ರೀನಿನ ಅನುಪಾತವು ಶೇ.91% ಆಗಿದ್ದು, ಡಿಸ್‌ಪ್ಲೇಯ ಕಾಂಡ್ರಾಸ್ಟ್‌ ಅನುಪಾತವು 78960:1ರಷ್ಟಾಗಿದೆ. ಪ್ರತಿ ಇಂಚಿನ ಸಾಂದ್ರತೆಯು 403ppi ಆಗಿದ್ದು, ಬ್ರೈಟ್ನೆಸ್‌ ಸಾಮರ್ಥ್ಯವು 420nits ಆಗಿದೆ.

ಗ್ಯಾಲ್ಯಾಕ್ಸಿ M30s ಪ್ರೊಸೆಸರ್‌

ಗ್ಯಾಲ್ಯಾಕ್ಸಿ M30s ಪ್ರೊಸೆಸರ್‌

ಗ್ಯಾಲ್ಯಾಕ್ಸಿ M30s ಫೋನ್ ಆಕ್ಟಾಕೋರ್ ಸ್ಯಾಮ್‌ಸಂಗ್ Exynos 9611 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಸ್ಯಾಮ್‌ಸಂಗ್ ಒನ್ UI ಹಾಗೂ ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲವನ್ನು ಸಹ ಹೊಂದಿದೆ. ಹಾಗೆಯೇ ಈ ಫೋನ್ 4GB RAM ಮತ್ತು 64GB ಸ್ಟೋರೇಜ್ ಮತ್ತು 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ 512GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಶ ನೀಡಲಾಗಿದೆ.

ಗ್ಯಾಲ್ಯಾಕ್ಸಿ M30s ಕ್ಯಾಮೆರಾ

ಗ್ಯಾಲ್ಯಾಕ್ಸಿ M30s ಕ್ಯಾಮೆರಾ

ಗ್ಯಾಲ್ಯಾಕ್ಸಿ M30s ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಅದರಲ್ಲಿ ಮುಖ್ಯ ಕ್ಯಾಮೆರಾವು f2.0 ಅಪರ್ಚರ್‌ನೊಂದಿಗೆ 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು f2.2 ಅಪರ್ಚರ್‌ನೊಂದಿಗೆ 8ಎಂಪಿ ಅಲ್ಟ್ರಾ ವೈಲ್ಡ್‌ ಸೆನ್ಸಾರ್‌ನಲ್ಲಿದೆ ಮತ್ತು ಮೂರನೇ ಕ್ಯಾಮೆರಾವು 5ಎಂಪಿ ಸೆನ್ಸಾರ್‌ನಲ್ಲಿದ್ದು, f2.2 ಅಪರ್ಚರ್‌ ಸಾಮರ್ಥ್ಯವಿದೆ. ಇನ್ನು ಸೆಲ್ಫಿಗಾಗಿ 24ಎಂಪಿ ಕ್ಯಾಮೆರಾ ನೀಡಲಾಗಿದೆ.

ಗ್ಯಾಲ್ಯಾಕ್ಸಿ M30s ಬ್ಯಾಟರಿ

ಗ್ಯಾಲ್ಯಾಕ್ಸಿ M30s ಬ್ಯಾಟರಿ

ಗ್ಯಾಲ್ಯಾಕ್ಸಿ M30s ಸ್ಮಾರ್ಟ್‌ಫೋನ್ 6,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ 15w ಸಾಮರ್ಥ್ಯದ ಟೈಪ್‌-ಸಿ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಈ ಫೋನಿನ ಬ್ಯಾಟರಿ ಬ್ಯಾಕ್‌ಅಪ್‌ ಅತ್ಯುತ್ತಮವಾಗಿದ್ದು, ಸುಮಾರು 49ಗಂಟೆ ವಾಯಿಸ್‌ ಕಾಲ್‌, 29ಗಂಟೆಗಳ ವಿಡಿಯೊ ಪ್ಲೇಬ್ಯಾಕ್ ಮತ್ತು 131ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್‌ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದೆ.

ಗ್ಯಾಲ್ಯಾಕ್ಸಿ M30s ಬೆಲೆ

ಗ್ಯಾಲ್ಯಾಕ್ಸಿ M30s ಬೆಲೆ

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30ಎಸ್‌ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ನಲ್ಲಿ ಬಿಡುಗಡೆ ಆಗಿದ್ದು, 4GB RAM ಮತ್ತು 64GB ಬೆಲೆಯು 13,999ರೂ.ಗಳಾಗಿದೆ. ಮತ್ತು 6GB RAM ಮತ್ತು 128GB ಸ್ಟೋರೇಜ್ ವೇರಿಯಮಟ್ ಬೆಲೆಯು 16,999ರೂ.ಗಳಾಗಿದೆ. ಇದೇ ಸೆಪ್ಟೆಂಬರ್ 29ರಿಂದ ಅಮೆಜಾನ್ ತಾಣ ಮತ್ತು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ದೊರೆಯಲಿದೆ. ಅಂದಹಾಗೇ ಗ್ಯಾಲ್ಯಾಕ್ಸಿ ಎಂ ಸರಣಿ ಆನ್‌ಲೈನ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯ.

ಓದಿರಿ : ಟಾಟಾಸ್ಕೈ, ಡಿಶ್‌ಟಿವಿ ಸಂಸ್ಥೆಗಳಿಂದ ಉಚಿತ ಹೆಚ್ಚುವರಿ ಸೇವೆ!.ಇಲ್ಲಿದೆ ಮಾಹಿತಿ!

ಗ್ಯಾಲ್ಯಾಕ್ಸಿ ಎಂ10ಎಸ್‌ ಬೆಲೆ ಮತ್ತು ಲಭ್ಯತೆ

ಗ್ಯಾಲ್ಯಾಕ್ಸಿ ಎಂ10ಎಸ್‌ ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಂ10ಎಸ್‌' ಸಹ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆ ಆಗಿದ್ದು, 6.4 ಇಂಚಿನ ಫುಲ್‌ ಹೆಚ್‌ಡಿ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಸ್ಯಾಮ್‌ಸಂಗ್‌ Exynos 7884B SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4,000mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಈಫೋನಿನ 3GB RAM ಮತ್ತು 32GB ಸ್ಟೋರೇಜ್ ವೇರಿಯಂಟ್‌ ಬೆಲೆಯು 8,999ರೂ.ಗಳಾಗಿದೆ. ಈ ಸ್ಮಾರ್ಟ್‌ಫೋನ್ ಸಹ ಇದೇ ಸೆಪ್ಟೆಂಬರ್ 29ರಿಂದ ಅಮೆಜಾನ್ ತಾಣ ಮತ್ತು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ದೊರೆಯಲಿದೆ.

Most Read Articles
Best Mobiles in India

English summary
Samsung Galaxy M30s has been launched in two variants in India. It will go on sale starting September 29 on Amazon India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X