ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಫೋನ್‌ ಸರಣಿಯ ಬೆಲೆ ಪ್ರಕಟ!

|

ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯು ಬಿಡುಗಡೆ ಮಾಡಿರುವ ಬಹುನಿರೀಕ್ಷಿತ ಗ್ಯಾಲಕ್ಸಿ ನೋಟ್ 20 ಸ್ಮಾರ್ಟ್‌ಫೋನ್‌ ಸರಣಿ ಆಕರ್ಷಕ ಫೀಚರ್ಸ್‌ಗಳಿಂದ ಫ್ಲ್ಯಾಗ್‌ಶಿಪ್ ಫೋನ್ ಪ್ರಿಯರನ್ನು ಆಕರ್ಷಿಸಿದೆ. ಈ ಸರಣಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಮತ್ತು ಗ್ಯಾಲಕ್ಸಿ ನೋಟ್ 20 ಅಲ್ಟ್ರಾ ಫೋನ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ಗಳ ಭಾರತೀಯ ಮಾರುಕಟ್ಟೆಯ ಬೆಲೆ ಮತ್ತು ಲಭ್ಯತೆ ಈಗ ಬಹಿರಂಗವಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ

ಹೌದು, ಗ್ಯಾಲಕ್ಸಿ ನೋಟ್ 20 256GB 4G ವೇರಿಯಂಟ್ ಬೆಲೆಯು 77,999 ರೂ. ಆಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ 256GB ಸ್ಟೋರೇಜ್‌ನ 5G ವೇರಿಯಂಟ್ ಬೆಲೆ 1,04,999 ರೂ.ಗಳಾಗಿದೆ. ಇನ್ನು ಸ್ಯಾಮ್‌ಸಂಗ್.ಕಾಮ್ ಸೈಟ್ ಮತ್ತು ಇತರೆ ಪ್ರಮುಖ ಆಫ್‌ಲೈನ್ ರೀಟೇಲ್‌ ಸ್ಟೋರ್‌ಗಳಲ್ಲಿ ಈ ಫ್ಲ್ಯಾಗ್‌ಶಿಪ್‌ ಫೋನ್‌ಗಳ ಪ್ರೀ-ಬುಕಿಂಗ್ ಪ್ರಾರಂಭವಾಗಿದೆ. ಗ್ಯಾಲಕ್ಸಿ ನೋಟ್ 20 ಅನ್ನು ಮೊದಲೇ ಕಾಯ್ದಿರಿಸುವ ಗ್ರಾಹಕರು 6,000ರೂ, ಮತ್ತು ಗ್ಯಾಲಕ್ಸಿ ನೋಟ್ 20 ಅಲ್ಟ್ರಾ 5G ಪ್ರೀ ಬುಕಿಂಗ್‌ಗೆ 9,000ರೂ. ಕ್ಯಾಶ್‌ಬ್ಯಾಕ್‌ ಸಿಗಲಿದೆ. ಗ್ಯಾಲಕ್ಸಿ ನೋಟ್ 20 ಮತ್ತು ಗ್ಯಾಲಕ್ಸಿ ನೋಟ್ 20 ಅಲ್ಟ್ರಾ ಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯಿರಿ.

ಗ್ಯಾಲಕ್ಸಿ ನೋಟ್‌ 20-ಡಿಸ್‌ಪ್ಲೇ

ಗ್ಯಾಲಕ್ಸಿ ನೋಟ್‌ 20-ಡಿಸ್‌ಪ್ಲೇ

ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್‌ ಸಾಮರ್ಥ್ಯದೊಂದಿಗೆ 6.7 ಇಂಚಿನ ಸೂಪರ್‌ AMOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ ರೀಫ್ರೇಶ್‌ ರೇಟ್‌ 60Hz ಸಾಮರ್ಥ್ಯದಲ್ಲಿದೆ.

ಗ್ಯಾಲಕ್ಸಿ ನೋಟ್‌ 20-ಪ್ರೊಸೆಸರ್

ಗ್ಯಾಲಕ್ಸಿ ನೋಟ್‌ 20-ಪ್ರೊಸೆಸರ್

ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ ಕಂಪನಿಯ Exynos 990 SoC ಚಿಪ್‌ಸೆಟ್‌ ಸಾಮರ್ಥ್ಯದ ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI 2.0 ಬೆಂಬಲಿತ ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್ ಇದೆ.

ಗ್ಯಾಲಕ್ಸಿ ನೋಟ್‌ 20-ಕ್ಯಾಮೆರಾ

ಗ್ಯಾಲಕ್ಸಿ ನೋಟ್‌ 20-ಕ್ಯಾಮೆರಾ

ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಹೊಂದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳೆರಡು ಸಹ ಕ್ರಮವಾಗಿ 12ಎಂಪಿಯ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ.

ಗ್ಯಾಲಕ್ಸಿ ನೋಟ್‌ 20-ಬ್ಯಾಟರಿ

ಗ್ಯಾಲಕ್ಸಿ ನೋಟ್‌ 20-ಬ್ಯಾಟರಿ

ಗ್ಯಾಲಕ್ಸಿ ನೋಟ್‌ 20-ಬ್ಯಾಟರಿ

ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಹಾಗೆಯೇ ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಇದರೊಂದಿಗೆ 5G ಸಪೋರ್ಟ್‌ ಹಾಗೂ ಐಕಾನಿಕ್ S ಪೆನ್ ಸೌಲಭ್ಯ ಇದೆ. ಗ್ರೀನ್‌, ಗ್ರೇ ಹಾಗೂ ಬ್ರೌಂಜ್‌ ಬಣ್ಣಗಳ ಆಯ್ಕೆ ಹೊಂದಿದೆ.

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಡಿಸ್‌ಪ್ಲೇ

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಡಿಸ್‌ಪ್ಲೇ

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ ಸ್ಮಾರ್ಟ್‌ಫೋನ್ 3200x1440 ಪಿಕ್ಸಲ್‌ ಸಾಮರ್ಥ್ಯದೊಂದಿಗೆ 6.9 ಇಂಚಿನ ಡೈನಾಮಿಕ್ AMOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ ರೀಫ್ರೇಶ್‌ ರೇಟ್‌ 120Hz ಸಾಮರ್ಥ್ಯದಲ್ಲಿದೆ. ಹಾಗೆಯೇ ಗೊರಿಲ್ಲಾ ಗ್ಲಾಸ್‌ 7 ಪಡೆದಿದೆ.

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಪ್ರೊಸೆಸರ್

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಪ್ರೊಸೆಸರ್

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ ಸ್ಮಾರ್ಟ್‌ಫೋನ್ ಕಂಪನಿಯ Exynos 990 SoC ಚಿಪ್‌ಸೆಟ್‌ ಸಾಮರ್ಥ್ಯದ ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI 2.0 ಬೆಂಬಲಿತ ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್ ಇದೆ.

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಕ್ಯಾಮೆರಾ

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಕ್ಯಾಮೆರಾ

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್‌ ಹೊಂದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳೆರಡು ಸಹ ಕ್ರಮವಾಗಿ 12ಎಂಪಿಯ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಸೆಲ್ಫಿ ಕ್ಯಾಮೆರಾವು 10ಎಂಪಿ ಸೆನ್ಸಾರ್‌ ಪಡೆದಿದೆ.

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಬ್ಯಾಟರಿ

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಬ್ಯಾಟರಿ

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ ಸ್ಮಾರ್ಟ್‌ಫೋನ್ 4500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಜೊತೆಗೆ 5G ಸಪೋರ್ಟ್‌ ಹಾಗೂ ಐಕಾನಿಕ್ S ಪೆನ್ ಸೌಲಭ್ಯ ಇದೆ. ಬ್ರಾಂಜ್‌, ಬ್ಲ್ಯಾಕ್ ಹಾಗೂ ವೈಟ್‌ ಬಣ್ಣಗಳ ಆಯ್ಕೆ ಪಡೆದಿದೆ.

Most Read Articles
Best Mobiles in India

English summary
Samsung has announced India pricing of the Galaxy Note 20 and Note 20 Ultra in the country.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X