Just In
Don't Miss
- Finance
ಕರ್ನಾಟಕ ಬಜೆಟ್ 2021: ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ತಗ್ಗಬಹುದು!
- News
ಬೆಂಗಳೂರಿನ ಸಬ್ಅರ್ಬನ್ ರೈಲು ಕಾರಿಡಾರ್ಗಳಿಗೆ ಹೂವುಗಳ ಹೆಸರು
- Movies
ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಜೂ.ಎನ್ ಟಿ ಆರ್: ಯಾವ ಶೋ?
- Sports
ಐಎಸ್ಎಲ್: ಗೋವಾಕ್ಕೆ ಫೈನಲ್ ಪಂಚ್ ನೀಡುವ ಗುರಿಯಲ್ಲಿ ಮುಂಬೈ
- Lifestyle
ದಿನ ಭವಿಷ್ಯ: ನಿಮ್ಮ ರಾಶಿ ಸೋಮವಾರ ಹೇಗಿರಲಿದೆ ನೋಡಿ
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಯಾಮ್ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ಫೋನ್ ಲಾಂಚ್!..ಜಬರ್ದಸ್ತ್ ಕ್ಯಾಮೆರಾ!
ದಕ್ಷಿಣ ಕೊರಿಯಾದ ಜನಪ್ರಿಯ ಟೆಕ್ ಸಂಸ್ಥೆ ಸ್ಯಾಮ್ಸಂಗ್ ತನ್ನ ಬಹುನಿರೀಕ್ಷಿತ 'ಗ್ಯಾಲಕ್ಸಿ S21' ಸ್ಮಾರ್ಟ್ಫೋನ್ ಸರಣಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಈ ಸರಣಿಯು ಮೂರು ಮಾಡೆಲ್ಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ ಗ್ಯಾಲಕ್ಸಿ S21, ಗ್ಯಾಲಕ್ಸಿ S21 ಪ್ಲಸ್ ಹಾಗೂ ಗ್ಯಾಲಕ್ಸಿ S21 ಅಲ್ಟ್ರಾ ಆಗಿವೆ. ಇವುಗಳಲ್ಲಿ ಗ್ಯಾಲಕ್ಸಿ S21 ಅಲ್ಟ್ರಾ ಹೈ ಎಂಡ್ ಮಾದರಿಯ ಫೀಚರ್ಸ್ಗಳಿಂದ ಗ್ರಾಹಕರ ಗಮನ ಸೆಳೆದಿದೆ.

ಹೌದು, ಸ್ಯಾಮ್ಸಂಗ್ ಕಂಪನಿಯು ತನ್ನ ಗ್ಯಾಲಕ್ಸಿ ಅನ್ಪ್ಯಾಕ್ಡ್ 2021 ಕಾರ್ಯಕ್ರಮದಲ್ಲಿ ನೂತನ ಗ್ಯಾಲಕ್ಸಿ S21 ಸ್ಮಾರ್ಟ್ಫೋನ್ ಸರಣಿಯನ್ನು ಅನ್ನು ಲಾಂಚ್ ಮಾಡಿದೆ. ಈ ಸರಣಿಯಲ್ಲಿ ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್ಫೋನ್ ಕ್ವಾಡ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ವೇಗದ ಪ್ರೊಸೆಸರ್ ಮತ್ತು ಬಿಗ್ ಬ್ಯಾಟರಿ ಫೀಚರ್ಸ್ ಆಕರ್ಷಕ ಅನಿಸಿವೆ. ಇನ್ನುಳಿದಂತೆ ಗ್ಯಾಲಕ್ಸಿ S21 ಸ್ಮಾರ್ಟ್ಫೋನ್ ಫೀಚರ್ಸ್ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್ಪ್ಲೇ ಡಿಸೈನ್
ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್ಫೋನ್ 1,440x3,200 ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 6.8 ಇಂಚಿನ ಫುಲ್ ಎಡ್ಜ್ QHD+ ಪ್ಲಸ್ ಜೊತೆಗೆ ಡೈನಾಮಿಕ್ AMOLED ಡಿಸ್ಪ್ಲೇ ಹೊಂದಿದೆ. ಈ ಫೋನಿನ ಡಿಸ್ಪ್ಲೇ 120Hz ರೀಫ್ರೇಶ್ದ ರೇಟ್ ಅನ್ನು ಪಡೆದಿದ್ದು, HDR10+ ಬೆಂಬಲವನ್ನು ಒಳಗೊಂಡಿದೆ.

ಪ್ರೊಸೆಸರ್ ದಕ್ಷತೆ
ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್ಫೋನ್ ಸಂಸ್ಥೆಯ ಆಕ್ಟಾ ಕೋರ್ Exynos 2100 SoC (ಸ್ನ್ಯಾಪ್ಡ್ರಾಗನ್ 888) ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್ಫೋನ್ 12GB ಮತ್ತು 16GB ಆಂತರಿಕ ಸಂಗ್ರಹದ ವೇರಿಯಂಟ್ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ ಸೆನ್ಸಾರ್
ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ OIS ಸಪೋರ್ಟ್ ಜೊತೆಗೆ 108ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ನಾಲ್ಕನೇ ಕ್ಯಾಮೆರಾವು ಕ್ರಮವಾಗಿ 10ಎಂಪಿ ಸೆನ್ಸಾರ್ ಬಲವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 40ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ ಚಾರ್ಜಿಂಗ್ಗಾಗಿ USB PD 3.0 ಸಪೋರ್ಟ್ ಜೊತೆಗೆ 2.0 ವಾಯರ್ಲೆಸ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಜಿಯೋಮ್ಯಾಗ್ನೆಟಿಕ್, ಗೈರೋ ಸ್ಕೋಪ್, ಹಾಲ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ಅಲ್ಟ್ರಾಸಾನಿಕ್ ಫಿಂಗರ್ಪ್ರಿಂಟ್ ಸೆನ್ಸರ್ ಸಹ ಇದೆ.

ಬೆಲೆ ಎಷ್ಟು ಮತ್ತು ಲಭ್ಯತೆ
ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್ಫೋನ್ 12GB ಮತ್ತು 16GB ಸ್ಟೋರೇಜ್ನ ವೇರಿಯಂಟ್ ಬೆಲೆಯು 1,05,999ರೂ. ಆಗಿದೆ. ಹಾಗೆಯೇ 16GB RAM + 512GB ವೇರಿಯಂಟ್ ಬೆಲೆಯು 1,16,999ರೂ.ಗಳು ಆಗಿದೆ. ಭಾರತದಲ್ಲಿ ಇ-ಕಾಮರ್ಸ್ ತಾಣಗಳ ಮೂಲಕ ಜನೆವರಿ 29ರಿಂದ ಸೇಲ್ ಶುರುವಾಗಲಿದೆ ಎನ್ನಲಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190