ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7 FE ಮತ್ತು ಟ್ಯಾಬ್ A7 ಲೈಟ್‌ ಲಾಂಚ್!

|

ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ಗಳಂತೆ ಕಂಪನಿ ಗ್ಯಾಲಕ್ಸಿ ಸರಣಿಯ ಟ್ಯಾಬ್‌ಗಳು ಸಹ ಹೆಚ್ಚು ಜನಪ್ರಿಯತೆ ಪಡೆದಿವೆ. ಕಂಪನಿಯು ಇದೀಗ ಹೊಸ ಗ್ಯಾಲಕ್ಸಿ ಟ್ಯಾಬ್ S7 FE ಮತ್ತು ಗ್ಯಾಲಕ್ಸಿ ಟ್ಯಾಬ್ A7 ಲೈಟ್‌ ಟ್ಯಾಬ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಡಿವೈಸ್‌ಗಳು ಅಧಿಕ ಬ್ಯಾಟರಿ, ಪ್ರೊಸೆಸರ್‌ ಹಾಗೂ ಕ್ಯಾಮೆರಾ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ.

ಬ್ಯಾಕ್‌ಅಪ್‌

ಹೌದು, ಸ್ಯಾಮ್‌ಸಂಗ್‌ ಸಂಸ್ಥೆ ಇಂದು (ಜೂನ್‌ 18) ತನ್ನ ನೂತನ ಗ್ಯಾಲಕ್ಸಿ ಟ್ಯಾಬ್ S7 FE ಮತ್ತು ಟ್ಯಾಬ್ A7 ಲೈಟ್‌ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ. ಗ್ಯಾಲಕ್ಸಿ ಟ್ಯಾಬ್ S7 FE ಟ್ಯಾಬ್ 10,090mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಪಡೆದಿದೆ. ಅದೇ ರೀತಿ ಗ್ಯಾಲಕ್ಸಿ ಟ್ಯಾಬ್ A7 ಲೈಟ್‌ ಟ್ಯಾಬ್‌ 5,100mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನು ಈ ಎರಡು ಹೊಸ ಟ್ಯಾಬ್‌ಗಳು ಇದೇ ಜೂನ್ 23ರಂದು ಆನ್‌ಲೈನ್‌ ಹಾಗೂ ಆಫ್‌ಲೈನ್ ತಾಣಗಳ ಮೂಲಕ ಸೇಲ್ ಪ್ರಾರಂಭಿಸಲಿವೆ. ಹಾಗಾದರೇ ಗ್ಯಾಲಕ್ಸಿ ಟ್ಯಾಬ್ S7 FE ಮತ್ತು ಟ್ಯಾಬ್ A7 ಲೈಟ್‌ ಡಿವೈಸ್‌ಗಳ ಫೀಚರ್ಸ್‌ಗಳೇನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗ್ಯಾಲಕ್ಸಿ ಟ್ಯಾಬ್ S7 FE ಟ್ಯಾಬ್

ಗ್ಯಾಲಕ್ಸಿ ಟ್ಯಾಬ್ S7 FE ಟ್ಯಾಬ್

ಗ್ಯಾಲಕ್ಸಿ ಟ್ಯಾಬ್ S7 FE ಟ್ಯಾಬ್‌ 2,560x1,600 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 12.4-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ಟ್ಯಾಬ್ಲೆಟ್‌ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಹಾಗೆಯೇ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ಈ ಟ್ಯಾಬ್ 10,090mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 45W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿಗಾಗಿ ವೈಫೈ, ಬ್ಲೂಟೂತ್, ಯುಎಸ್ಬಿ ಟೈಪ್-ಸಿ 3.2 ಜೆನ್ 1 ಪೋರ್ಟ್‌ ಆಯ್ಕೆಗಳು ಇವೆ.

ಗ್ಯಾಲಕ್ಸಿ ಟ್ಯಾಬ್ A7 ಲೈಟ್‌

ಗ್ಯಾಲಕ್ಸಿ ಟ್ಯಾಬ್ A7 ಲೈಟ್‌

ಈ ಟ್ಯಾಬ್‌ 8.7-ಇಂಚಿನ WQXGA + ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ 1,340x800 ಆಗಿದೆ. ಈ ಡಿಸ್‌ಪ್ಲೇ 15:9 ರಚನೆಯ ಅನುಪಾತವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೊ ಪಿ 22 ಟಿ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 3GB RAM+ 32GB ಮತ್ತು 4GB RAM + 64 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಬಾಹ್ಯ ಮೆಮೊರಿಯನ್ನು ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೂ ವಿಸ್ತರಿಸಬಹುದಾಗಿದೆ. ಈ ಟ್ಯಾಬ್‌ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ರಿಯರ್‌ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಇದು 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್‌ಗೆ ಬೆಂಬಲ ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಗ್ಯಾಲಕ್ಸಿ ಟ್ಯಾಬ್ S7 FE ಟ್ಯಾಬ್ 4GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 46,999ರೂ.ಗಳು ಆಗಿದೆ. 6GB +128GB ವೇರಿಯಂಟ್ ಬೆಲೆಯು 50,999ರೂ.ಗಳು ಆಗಿದೆ. ಇನ್ನು ಈ ಟ್ಯಾಬ್‌ ಮಿಸ್ಟಿಕ್ ಬ್ಲ್ಯಾಕ್, ಮಿಸ್ಟಿಕ್ ಸಿಲ್ವರ್, ಮಿಸ್ಟಿಕ್ ಗ್ರೀನ್ ಮತ್ತು ಮಿಸ್ಟಿಕ್ ಪಿಂಕ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಬರಲಿದೆ. ಹಾಗೆಯೇ ಗ್ಯಾಲಕ್ಸಿ ಟ್ಯಾಬ್ A7 ಲೈಟ್‌ ಟ್ಯಾಬ್ 3GB + 32GB ವೇರಿಯಂಟ್ ದರವು 14,999ರೂ. ಆಗಿದೆ. ಈ ಡಿವೈಸ್ ಗ್ರೇ ಹಾಗೂ ಸಿಲ್ವರ್‌ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಇನ್ನು ಈ ಟ್ಯಾಬ್‌ಗಳು ಇದೇ ಜೂನ್‌ 23 ರಿಂದ ಖರೀದಿಗೆ ಲಭ್ಯವಾಗಲಿವೆ.

Most Read Articles
Best Mobiles in India

English summary
Samsung Galaxy Tab S7 FE is priced at Rs. 46,999 for 4GB RAM + 64GB storage variant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X