ಸ್ಯಾಮ್‌ಸಂಗ್ ವಾಚ್ ಆಕ್ಟೀವ್ 2 4G ಲಾಂಚ್!..ಇದು ಮೇಡ್‌ ಇನ್ ಇಂಡಿಯಾ!

|

ಟೆಕ್ ದಿಗ್ಗಜ ಸ್ಯಾಮ್‌ಸಂಗ್ ಸಂಸ್ಥೆಯು ಈಗಾಗಲೇ ಹಲವು ಗ್ಯಾಡ್ಜೆಟ್ಸ್‌ ಉತ್ಪನ್ನಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರಲ್ಲಿ ಸಂಸ್ಥೆಯು ಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳು ಸಹ ಗ್ರಾಹಕರನ್ನು ಸೆಳೆದಿವೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಕಂಪನಿಯು ಇದೀಗ ಸ್ಯಾಮ್‌ಸಂಗ್ ವಾಚ್ ಆಕ್ಟೀವ್ 2 4G ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಈ ವಾಚ್ ಮೇಡ್ ಇನ್ ಇಂಡಿಯಾ ಎನ್ನುವ ಹೆಗ್ಗಳಿಗೆ ಪಡೆದಿದೆ.

ಸ್ಯಾಮ್‌ಸಂಗ್

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಹೊಸದಾಗಿ ಸ್ಯಾಮ್‌ಸಂಗ್ ವಾಚ್ ಆಕ್ಟೀವ್ 2 4G ಅಲ್ಯೂಮಿನಿಯಮ್ ಎಡಿಷನ್ ಸ್ಮಾರ್ಟ್‌ವಾಚ್‌ ಅನ್ನು ಭಾರತದ ಮಾರುಕಟ್ಟೆಗೆ (ಜುಲೈ 9, 2020) ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ ಸ್ಥಳೀಯ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್ ಮತ್ತು ಜಿಯೋ ಅನ್ನು ಬೆಂಬಲಿಸುವ ಇಎಸ್ಐಎಂ ಅನ್ನು ಹೊಂದಿದೆ. ಇನ್ನು ಈ ಡಿವೈಸ್‌ ಕ್ಲೌಡ್ ಸಿಲ್ವರ್, ಆಕ್ವಾ ಬ್ಲ್ಯಾಕ್ ಮತ್ತು ಪಿಂಕ್ ಗೋಲ್ಡ್ ಕಲರ್ ಆಯ್ಕೆಗಳನ್ನು ಪಡೆದಿದೆ.

ಸ್ಮಾರ್ಟ್‌ವಾಚ್

ಈ ಸ್ಮಾರ್ಟ್‌ವಾಚ್ ಅಲ್ಯೂಮಿನಿಯಂ ಫಿನಿಶ್‌ನಲ್ಲಿ ರಚನೆ ಹೊಂದಿದೆ. ಹಾಗೆಯೇ LET ಮಾದರಿಯು 44mm ನಲ್ಲಿ ಮಾತ್ರ ಲಭ್ಯವಾಗಲಿದೆ. ಈ ವಾಚ್ 1.4-ಇಂಚಿನ ಸೂಪರ್ ಅಮೋಲೆಡ್ ರೌಂಡ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ರೌಂಡ್ ಡಿಸ್‌ಪ್ಲೇ ಪ್ಯಾನಲ್ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ DX+ ಜೊತೆಗೆ 360x360 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಸ್ಮಾರ್ಟ್ ವಾಚ್ ಐಪಿ 68 ಪ್ರಮಾಣೀಕರಿಸಲ್ಪಟ್ಟಿದೆ

ಸ್ಯಾಮ್‌ಸಂಗ್

ಇದರೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಆಕ್ಟಿವ್ 2 4G ವಾಚ್‌ 1.5GB RAM, 4GB ಆಂತರಿಕ ಸಂಗ್ರಹಣೆ, 4G LTE, ವೈ-ಫೈ, ಎನ್ಎಫ್ಸಿ, ಬ್ಲೂಟೂತ್ ವಿ 5.0, ಜಿಪಿಎಸ್, ಗ್ಲೋನಾಸ್, ಬೀಡೌ ಮತ್ತು ಟಿಜೆನ್ ಓಎಸ್. ಇದರ 340mAh ಬ್ಯಾಟರಿಯು ದೈನಂದಿನ ಬಳಕೆಯಲ್ಲಿ 60 ಗಂಟೆಗಳವರೆಗೆ ಬ್ಯಾಕ್‌ಅಪ್ ಪಡೆದಿದೆ. ಜೊತೆಗೆ ಹೃದಯ ಬಡಿತ ಸಂವೇದಕ, ಇಸಿಜಿ ಸಂವೇದಕ, ವೇಗವರ್ಧಕ, ಗೈರೊಸ್ಕೋಪ್, ಮಾಪಕ ಮತ್ತು ಸುತ್ತುವರಿದ ಬೆಳಕಿನ ಸಂವೇದಕ ಸೌಲಭ್ಯಗಳನ್ನು ಪಡೆದಿದೆ.

ಸ್ಯಾಮ್‌ಸಂಗ್

ಇನ್ನು ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಆಕ್ಟಿವ್ 2 4G ಅಲ್ಯೂಮಿನಿಯಂ ಎಡಿಷನ್ ವೇರಿಯಂಟ್ ಬೆಲೆಯು 28,490 ರೂ. ಆಗಿದೆ. ಈ ಡಿವೈಸ್ ಆಕ್ವಾ ಬ್ಲ್ಯಾಕ್, ಕ್ಲೌಡ್ ಸಿಲ್ವರ್ ಮತ್ತು ಪಿಂಕ್ ಗೋಲ್ಡ್ ಬಣ್ಣ ಆಯ್ಕೆಗಳನ್ನು ಪಡೆದಿದೆ. ಇದೇ ಜುಲೈ 11 ರಿಂದ ಅಧಿಕೃತ ಸ್ಯಾಮ್‌ಸಂಗ್ ರೀಟೇಲ್ ಸ್ಟೋರ್‌ಗಳಲ್ಲಿ ಹಾಗೂ ಸ್ಯಾಮ್‌ಸಂಗ್ ಒಪೇರಾ ಹೌಸ್‌ ಮತ್ತು ಅಧಿಕೃತ ಸ್ಯಾಮ್‌ಸಂಗ್ ವೆಬ್‌ಸೈಟ್‌ ಜೊತೆಗೆ ಪ್ರಮುಖ ಆನ್‌ಲೈನ್ ಸೈಟ್‌ಗಳಲ್ಲಿ ಮಾರಾಟವಾಗಲಿದೆ.

Most Read Articles
Best Mobiles in India

English summary
The South Korean tech giant has unveiled the Aluminium edition of the Galaxy Watch Active 2 4G in the country.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X