Just In
Don't Miss
- Lifestyle
ಭಾನುವಾರದ ದಿನ ಭವಿಷ್ಯ 08-12-2019
- News
ಭಾರತ ಈಗ ಅತ್ಯಾಚಾರದ ರಾಜಧಾನಿಯಾಗಿದೆ: ರಾಹುಲ್ ಗಾಂಧಿ
- Automobiles
390 ಅಡ್ವೆಂಚರ್ ಜೊತೆಗೆ 790 ಅಡ್ವೆಂಚರ್ ಆವೃತ್ತಿಯನ್ನು ಸಹ ಪ್ರದರ್ಶನಗೊಳಿಸಿದ ಕೆಟಿಎಂ
- Movies
ಮುಂದಿನ ವರ್ಷವೇ ಮದುವೆ ಎನ್ನುತ್ತಾರೆ ಮನುರಂಜನ್..!
- Finance
ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ : ಡಿಸೆಂಬರ್ 16ರಿಂದ NEFT 24x7 ಸೌಲಭ್ಯ
- Sports
ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ಪಾಕ್ ತಂಡಕ್ಕೆ ಮರಳಿದ ಫವಾದ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಪೇಟಿಎಮ್ ಆಪ್ನಲ್ಲಿ ಹಣ ವರ್ಗಾವಣೆ ಈಗ ಇನ್ನಷ್ಟು ಸುಲಭ!
ಸದ್ಯ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಜನಪ್ರಿಯತೆ ಪಡೆಯುತ್ತಿದ್ದು, ಹಲವಾರು ಹೊಸ ಪಅಪ್ಲಿಕೇಶನ್ಗಳು ಸೇರಿಕೊಂಡಿವೆ. ಸಣ್ಣ ಪುಟ್ಟ ಅಂಗಡಿಗಳಿಂದ ದೊಡ್ಡ ಶಾಪ್ಗಳೆವರೆಗೂ ಪೇಟಿಎಮ್, ಪೋನ್ಪೇ, ಗೂಗಲ್ ಪೇ, ಅಮೆಜಾನ್ ಪೇ ಸೇವೆಗಳನ್ನೇ ಗ್ರಾಹಕರು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಆಪ್ಗಳಿಂದ QR ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡುವ ಆಯ್ಕೆ ಸಹ ಒಳಗೊಂಡಿವೆ. ಆದರೆ ಪೇಟಿಎಮ್ ಇತರೆ ಆಪ್ಗಳ QR ಕೋಡ್ಗೆ ಬೆಂಬಲ ನೀಡುತ್ತಿರಲಿಲ್ಲ.
ಹೌದು, ಜನಪ್ರಿಯ ಪೇಟಿಎಮ್ ಸಂಸ್ಥೆಯು ಇದೀಗ ತನ್ನ QR (Quick response) ಕೋಡ್ ಅನ್ನು ಮುಕ್ತವಾಗಿಸಿದ್ದು, ಪೇಟಿಎಮ್ ಆಪ್ನಿಂದ ಯಾವುದೇ ಡಿಜಿಟಲ್ ಪೇಮೆಂಟ್ ಆಪ್ನ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲ್ ಪೇಮೆಂಟ್ ಮಾಡಬಹುದಾಗ ಸೌಲಭ್ಯ ಸೇರಿಕೊಳ್ಳಲಿದೆ. ಇದಕ್ಕಾಗಿ ಕಂಪನಿಯು ಸುಮಾರು 200-250ಕೋಟಿ ಮೆಗಾ ಕ್ಯಾಂಪೇಯನ್ ನಡೆಸಲು ಸಿದ್ಧತೆಗಳನ್ನು ನಡೆಸಿದೆ.
ಈ ಹೊಸ ಸೌಲಭ್ಯವು ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಿಗೆ ಹೆಚ್ಚು ಉಪಯುಕ್ತವಾಗಲಿದ್ದು, ಹಣವು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತದೆ. ಈಗಾಗಾಲೇ ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ಮೆಡಿಕಲ್ ಶಾಪ್, ಹಾಸ್ಪಿಟಲ್, ಸೇರಿದಂತೆ ಹಲವು ಕಡೆಗಳಲ್ಲಿ ಪೇಟಿಎಮ್ UPI ಹೊಂದಿದ್ದಾರೆ ಅವರಿಗೆ ಇನ್ನಷ್ಟು ಹೊಸ ಫೀಚರ್ಸ್ಗಳನ್ನು ಪರಿಚಯಿಸಿದ್ದೆವೆ ಎಂದು ಪೇಟಿಎಮ್ನ ಹಿರಿಯ ಉಪಾಧ್ಯಕ್ಷರಾದ 'ದೀಪಕ್ ಅಬಾಟ್' ಹೇಳಿದ್ದಾರೆ. ಹಾಗಾದರೇ ಇತರೆ ಜನಪ್ರಿಯ ಡಿಜಿಟಲ್ ಪೇಮೆಂಟ್ ಆಪ್ಸ್ಗಳ ಬಗ್ಗೆ ಕಿರು ಮಾಹಿತಿ ನೋಡೋಣ ಬನ್ನಿರಿ.
ಓದಿರಿ : ಶಿಯೋಮಿ ಸ್ಮಾರ್ಟ್ಟಿವಿ ಸೇರಲಿದೆ 'ಜಿಯೋ ಸಿನಿಮಾ' ಆಪ್!.ಮನರಂಜನೆ ಡಬಲ್!

ಗೂಗಲ್ ಪೇ
ಗೂಗಲ್ ಪೇ ಡಿಜಿಟಲ್ ಪೇಮೆಂಟ್ ಆಪ್ ಗೂಗಲ್ ಸಂಸ್ಥೆಯ ಒಡೆತನಕ್ಕೆ ಸೇರಿದ್ದು, ಈ ಮೊದಲು ಇದರ ಹೆಸರು ತೇಜ್ ಆಪ್ ಎಂದಿತ್ತು. ಜನವರಿ 8, 2018ರಂದು ಗೂಗಲ್ ಪೇ ಎಂದಾಯಿತು. ಈ ಆಪ್ನಲ್ಲಿ ವಿದ್ಯುತ್ ಬಿಲ್, ನೀರಿನ ಬಿಲ್, ಮೊಬೈಲ್ ರೀಚಾರ್ಜ್, ಸೇರಿದಂತೆ ಎಲ್ಲ ಬಗೆಯ ಪೇಮೆಂಟ್ ಮಾಡುವ ಆಯ್ಕೆಗಳಿದ್ದು, ಕೇಲವೊಮ್ಮೆ ಪೇಮೆಂಟ್ ನಂತರ ಸ್ಕ್ರಾಚ್ಕಾರ್ಡ್ ಲಭ್ಯವಾಗುತ್ತದೆ.

ಫೋನ್ ಪೇ
ಪ್ರಸ್ತುತ ಜನಪ್ರಿಯ ಡಿಜಟಲ್ ಪೇಮೆಂಟ್ ಆಪ್ಗಳಲ್ಲಿ ಒಂದಾಗಿರುವ ಫೋನ್ ಪೇ ಆಪ್, 2016ರಲ್ಲಿ ಬಳಕೆಗೆ ಬಂದಿದೆ. QR ಕೋಡ್ ಸ್ಕ್ಯಾನ್ ಆಯ್ಕೆ ಇದ್ದು, ಅಕೌಂಟ್ ಮತ್ತು ಫೋನ್ ನಂಬರ್ ಮೂಲಕವು ಪೇಮೆಂಟ್ ಮಾಡುವ ಆಯ್ಕೆ ಇದೆ. ಅಗತ್ಯ ಎಲ್ಲ ಬಗೆಯ ಬಿಲ್ ಪೇಮೆಂಟ್ ಮಾಡಬಹುದಾಗದ ಆಯ್ಕೆಗಳನ್ನು ಒಳಗೊಂಡಿದೆ. ಬಿಲ್ ಪೇಮೆಂಟ್ ನಂತರ ರೀವಾರ್ಡ್ ಆಗಿ ಸುಮಾರು 1000ವರೆಗೂ ಹಣ ಸೀಗುವ ಸಾಧ್ಯತೆಗಳು ಹೆಚ್ಚು.
ಓದಿರಿ : ಫ್ಲಿಪ್ಕಾರ್ಟ್ನಲ್ಲಿಗ ಹಳೆಯ ಸ್ಮಾರ್ಟ್ಫೋನ್ಗೆ ಬೆಸ್ಟ್ ಎಕ್ಸ್ಚೇಂಜ್ ಆಫರ್!

ಅಮೆಜಾನ್ ಪೇ
ಅಮೆಜಾನ್ ಸಂಸ್ಥೆಗೆ ಸೇರಿರುವ ಈ ಡಿಜಿಟಲ್ ಪೇಮೆಂಟ್ ಆಪ್ ಸಹ ಇದೀಗ ಅಂಗಡಿಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಎಲ್ಲ ಬಗೆಯ ರೀಚಾರ್ಜ್ ಮತ್ತು ಬಿಲ್ ಪೇಮೆಂಟ್ ಮಾಡುವ ಆಯ್ಕೆಗಳನ್ನು ಒಳಗೊಂಡಿದ್ದು, ಕ್ಯಾಶ್ಬ್ಯಾಕ್ ಮತ್ತು ರೀವಾರ್ಡ್ ಪ್ರಯೋಜನಗಳು ಲಭ್ಯವಾಗಲಿವೆ. ಅಮೆಜಾನ್ ಪೇ ಆಪ್ನಲ್ಲಿ ಡೊಮೆಸ್ಟಿಕ್ ಪ್ಲೈಟ್ ಬುಕ್ಕಿಂಗ್ ಮಾಡುವ ಸೌಲಭ್ಯವನ್ನು ಆರಂಭಿಸಿದೆ.

ವಾಟ್ಸಪ್ ಪೇ
ಫೇಸ್ಬುಕ್ ಮಾಲೀಕತ್ವದ ಜನಪ್ರಿಯ ಮೆಸೆಜ್ ಆಪ್ 'ವಾಟ್ಸಪ್' ಈಗಾಗಲೇ 'ವಾಟ್ಸಪ್ ಪೇ' ಹೆಸರಿನ ಡಿಜಿಟಲ್ ಪೇಮೆಂಟ್ ಸೇವೆಯನ್ನು ಆರಂಭಿಸುವ ತಾರತುರಿಯಲ್ಲಿದೆ. ವಾಟ್ಸಪ್ ಆಪ್ನಲ್ಲಿ ಎಲ್ಲ ರೀತಿಯ ಅಗತ್ಯ ಪೇಮೆಂಟ್ ಮಾದರಿಗಳನ್ನು ಅಳವಡಿಸಲಿದ್ದು, ಗ್ರಾಹಕರಿಗೆ ಸುಲಭ ಹಂತಗಳನ್ನು ಪರಿಚಯಿಸಲಿದೆ. ಹಾಗೆಯೇ ಈ ಆಪ್ ಬಹುಬೇಗ ಹೆಚ್ಚಿನ ಗ್ರಾಹಕ ಸಂಖ್ಯೆಯನ್ನು ಹೊಂದುವ ವಿಶ್ವಾಸದಲ್ಲಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090