ಗಂಟೆಗೆ ಬರೋಬ್ಬರಿ 300 ಪಿಜ್ಜಾ ತಯಾರಿಸುತ್ತೆ ಈ ರೋಬೋಟ್‌..! ಹೊಟೇಲ್‌ ಉದ್ಯಮದಲ್ಲಿ ಕ್ರಾಂತಿ..!

By Gizbot Bureau
|

ಸಾಂಪ್ರದಾಯಿಕ ಪಿಜ್ಜಾ ತಯಾರಿಕೆಗೆ ಆಧುನಿಕತೆಯ ಸ್ಪರ್ಶ ಸಿಕ್ಕಿದ್ದು, ಸಿಯಾಟಲ್ ಉದ್ಯಮವು ಅಸೆಂಬ್ಲಿ-ಲೈನ್ ಶೈಲಿಯ ಆಹಾರ ಉತ್ಪಾದನಾ ರೊಬೊಟಿಕ್ ವೇದಿಕೆಯನ್ನು ಅನಾವರಣಗೊಳಿಸಿದೆ. ಇದು ಗಂಟೆಗೆ ಬರೋಬ್ಬರಿ 300 ಪಿಜ್ಜಾಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಮಾನವ ಸಂಪನ್ಮೂಲದ ಬಳಕೆಯನ್ನು ಕಡಿಮೆ ಮಾಡುತ್ತಿದೆ. ರೊಬೊಟಿಕ್‌ ಯಂತ್ರವು ವಿಶ್ವದ ಹೊಟೇಲ್‌ ಉದ್ಯಮದಲ್ಲಿ ಭಾರೀ ಕ್ರಾಂತಿಯನ್ನು ಸೃಷ್ಟಿಸುವ ಸಾಧ್ಯತೆಯಿದ್ದು, ಪಿಜ್ಜಾ ತಯಾರಿಸುವ ತಂತ್ರಜ್ಞಾನ ಬೇರೆ ಖಾದ್ಯಗಳಿಗೂ ವರ್ಗಾವಣೆಯಾಗುವ ಸಾಧ್ಯತೆಯಿದೆ.

ಪಿಜ್ಜಾ ತಯಾರಿ ಹೇಗೆ..?

ಪಿಜ್ಜಾ ತಯಾರಿ ಹೇಗೆ..?

ಖಾಲಿ ಕ್ರಸ್ಟ್ ಅನ್ನು ಕನ್ವೇಯರ್ ಬೆಲ್ಟ್‌ನಲ್ಲಿ ಲೋಡ್ ಮಾಡಲಾಗುತ್ತದೆ. ಮತ್ತು ಕಂಪ್ಯೂಟರ್ ದೃಷ್ಟಿಯನ್ನು ಬಳಸಿಕೊಂಡು ಕನ್ಫಿಗರ್ ಮಾಡಬಹುದಾದ ಉಪಕರಣಗಳು ಮತ್ತು ಆಳವಾದ ಕಲಿಕೆಯ ವಿಧಾನವನ್ನು ಬಳಸಲಾಗುತ್ತದೆ. ಈ ರೋಬೋಟ್ ಅಗತ್ಯವಿರುವ ಉತ್ಪನ್ನಗಳನ್ನು ಸೇರಿಸಿ, ಪಿಜ್ಜಾ ಪೈಯನ್ನು ಪರಿಪೂರ್ಣವಾಗಿ ಬೇಯಿಸುತ್ತದೆ.

ಪಿಕ್ನಿಕ್‌ನಿಂದ ಅಭಿವೃದ್ಧಿ..!

ರೊಬೊಟಿಕ್ ಪಿಜ್ಜಾ ತಯಾರಿಕಾ ಯಂತ್ರವನ್ನು ಪಿಕ್ನಿಕ್ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಪಿಕ್ನಿಕ್‌ ಕಂಪನಿ ಆಹಾರ ಉತ್ಪಾದನಾ ತಂತ್ರಜ್ಞಾನ ಮತ್ತು ರೊಬೊಟಿಕ್ಸ್-ಎ-ಸರ್ವಿಸ್ ಸಲೂಸ್ಯನ್‌ಗಳನ್ನು ವಿನ್ಯಾಸಗೊಳಿಸುತ್ತದೆ. ಆಹಾರ ತಯಾರಿಕೆಗಾಗಿ ನಾವು ಹೊಸ ಮಾನದಂಡವನ್ನು ವ್ಯಾಖ್ಯಾನಿಸುತ್ತಿದ್ದೇವೆ ಮತ್ತು ಸಾಮೂಹಿಕ ಗ್ರಾಹಕೀಕರಣ ಬೆಂಬಲಿಸುವ ಏಕೈಕ ಪಿಜ್ಜಾ ಆಟೊಮೇಷನ್ ಪ್ಲಾಟ್‌ಫಾರ್ಮ್‌ನ್ನು ನೀಡುತ್ತಿದ್ದೇವೆ ಎಂದು ಪಿಕ್ನಿಕ್ ಸಿಇಒ ಕ್ಲೇಟನ್ ವುಡ್ ಹೇಳಿದ್ದಾರೆ.

ಗಂಟೆಗೆ 180 ರಿಂದ 300 ಪಿಜ್ಜಾ

ಗಂಟೆಗೆ 180 ರಿಂದ 300 ಪಿಜ್ಜಾ

ಪ್ರಸ್ತುತವಿರುವ ಅನೇಕ ನ್ಯೂನತೆಗಳನ್ನು ತೊಡೆದುಹಾಕಲು ಮತ್ತು ವಿಕಸಿಸುತ್ತಿರುವ ಗ್ರಾಹಕರ ಅಭಿರುಚಿಗಳನ್ನು ಪರಿಹರಿಸಲು ಆಹಾರ ಸೇವಾ ನಿರ್ವಾಹಕರಿಗೆ ಪಿಕ್ನಿಕ್ ಕಂಪನಿ ಅನುವು ಮಾಡಿಕೊಡುತ್ತದೆ. ಪ್ಲಾಟ್‌ಫಾರ್ಮ್ ಆರಂಭದಲ್ಲಿ ಹೆಚ್ಚಿನ ಪ್ರಮಾಣದ, ಕಸ್ಟಮೈಸ್ ಮಾಡಬಹುದಾದ ಪಿಜ್ಜಾಗಳ ಉತ್ಪಾದನೆಯ ಮೇಲೆ ಕೇಂದ್ರೀಕರಿಸುತ್ತದೆ, ಯಾವುದೇ ರೀತಿಯ ಪದಾರ್ಥಗಳಿಂದ ತಯಾರಿಸುತ್ತದೆ. ಗಂಟೆಗೆ 18 ಇಂಚಿನ 180 ಅಥವಾ 12 ಇಂಚಿನ 300 ಪಿಜ್ಜಾಗಳನ್ನು ರೊಬೊಟಿಕ್‌ ತಯಾರಿಸುತ್ತದೆ.

ಕಸ್ಟಮೈಸ್‌ ಆಯ್ಕೆ..!

ಕಸ್ಟಮೈಸ್‌ ಆಯ್ಕೆ..!

ಪಿಜ್ಜಾ ತಯಾರಿಕೆ ಪ್ರಕ್ರಿಯೆಯಲ್ಲಿ ಮಾಡ್ಯುಲರ್ ಬಳಸುವುದರಿಂದ, ರೋಬೋಟ್ ಪ್ರತಿಯೊಂದು ಪಿಜ್ಜಾ ಪೈನ್ನು ಕಸ್ಟಮೈಸ್ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಖಾಲಿ ಕ್ರಸ್ಟ್‌ನ್ನು ಕನ್ವೇಯರ್ ಬೆಲ್ಟ್‌ನಲ್ಲಿ ಇರಿಸಲಾಗುತ್ತದೆ, ನಂತರ ಆಪರೇಟರ್‌ ಪಿಜ್ಜಾ ಪೈನ ಗಾತ್ರ, ಅಗತ್ಯ ಉತ್ಪನ್ನಗಳು ಸೇರಿದ ವಿಶೇಷಣಗಳನ್ನು ನಮೂದಿಸುತ್ತಾನೆ. ಕ್ರಸ್ಟ್ ಅಸೆಂಬ್ಲಿ ಮೂಲಕ ಹೋಗುತ್ತದೆ, ನಂತರ ಸಾಸ್, ಚೀಸ್ ಮತ್ತು ಉತ್ಪನ್ನಗಳನ್ನು ಹಾಕಲಾಗುತ್ತದೆ, ಅಂತಿಮವಾಗಿ ಪಿಜ್ಜಾ ಪೈನ್ನು ಪರಿಪೂರ್ಣವಾಗಿ ಬೇಯಿಸಲಾಗುತ್ತದೆ.

ಗ್ರಾಹಕರಿಗೆ ಉತ್ತಮ ಅನುಭವ

ಗ್ರಾಹಕರಿಗೆ ಉತ್ತಮ ಅನುಭವ

ಯಾವಾಗಲೂ ಎಐ, ರೊಬೊಟಿಕ್ಸ್ ಮತ್ತು ಹೊಸ ತಾಂತ್ರಿಕ ಪರಿಹಾರಗಳನ್ನು ಗುರುತಿಸುವಾಗ ನಮ್ಮ ಅಭಿಮಾನಿಗಳಿಗೆ ಉತ್ತಮ ಅನುಭವವನ್ನು ನೀಡಲು ಅನುವು ಮಾಡಿಕೊಡುತ್ತೇವೆ ಎಂದು ಸೆಂಟರ್ ಪ್ಲೇಟ್‌ನ ಹಿರಿಯ ಉಪಾಧ್ಯಕ್ಷ ಆಡ್ರಿಯನ್ ಡಿಶಿಂಗ್ಟನ್ ಹೇಳಿದ್ದಾರೆ. ನಮ್ಮ ಅಡುಗೆ ಮನೆಗಳಲ್ಲಿ ಪಿಕ್ನಿಕ್ ಪಿಜ್ಜಾ ತಯಾರಿಸುವ ತಂತ್ರಜ್ಞಾನದ ಪೈಲಟ್ ತರಲು ನಾವು ಸಂತಸಪಡುತ್ತಿದ್ದು, ನಮ್ಮ ಗುಣಮಟ್ಟ ಮತ್ತು ಸೇವೆಯ ವೇಗವನ್ನು ಹೆಚ್ಚಿಸಲು ನಾವು ನೋಡುತ್ತೇವೆ ಎಂದಿದ್ದಾರೆ.

ಕಾರ್ಮಿಕರಿಗೆ ಸುರಕ್ಷತೆ

ಕಾರ್ಮಿಕರಿಗೆ ಸುರಕ್ಷತೆ

ಪಿಜ್ಜಾ ತಯಾರಿಸುವ ರೋಬೋಟ್‌ಗೆ ತೋಳಿನ ಅಗತ್ಯವಿಲ್ಲದ ಕಾರಣ, ಕಾರ್ಮಿಕರಿಗೆ ಸುರಕ್ಷತಾ ಅನುಭವವನ್ನು ನೀಡುತ್ತದೆ. ಇದರಿಂದ ಕಾರ್ಮಿಕರು ಯಾವುದೇ ಸುರಕ್ಷತೆಯಿಲ್ಲದೆ ಪಿಕ್ನಿಕ್‌ ತಯಾರಿಸಿರುವ ಯಂತ್ರದ ಜೊತೆ ಕೆಲಸ ಮಾಡಬಹುದು.

Most Read Articles
Best Mobiles in India

Read more about:
English summary
Seattle firm unveils robotic pizza maker to make 300 pies in one hour

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X