ಭಾರತದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಸ್ವಾವಲಂಬನೆಯ ಮಂತ್ರ!

|

ಡೆಡ್ಲಿ ಕೊರೊನಾ ವೈರಸ್‌ ವಕ್ಕರಿಸಿ ಇಡೀ ಜಗತ್ತನ್ನೇ ಅಲುಗಾಡಿಸಿ ಬಿಟ್ಟಿದೆ. ಬಹುತೇಕ ವಲಯಗಳ ಆರ್ಥಿಕ ಸ್ಥಿತಿಗತಿಗಳಿಗೂ ಪೆಟ್ಟು ನೀಡಿರುವ ಜೊತೆಗೆ ಅನೇಕರ ಉದ್ಯೋಗ ಕಡಿತಕ್ಕೂ ಕಾರಣವಾಗಿರುವ ಕೊರೊನಾ ವೈರಸ್‌ ಜನನವಾಗಿದ್ದು ಚೀನಾದಲ್ಲಿ. ಈ ಹಿನ್ನಲೆಯಲ್ಲಿ ದೇಶದಲ್ಲಿ ಈಗ ಮೇಡ್ ಇನ್ ಚೀನಾ ಉತ್ಪನ್ನಗಳ ಬಹಿಷ್ಕಾರದ ಕೂಗು ದೊಡ್ಡ ಧ್ವನಿಯಲ್ಲಿ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿದೆ.

ಹೌದು, ಸದ್ಯ ದೇಶದಲ್ಲಿ ಬಾಯ್ಕಟ್ ಚೀನಾ ಅಭಿಯಾನ ಜೋರಾಗಿದೆ. ಚೀನಾದಲ್ಲಿ ತಯಾರಾದ ಉತ್ಪನ್ನಗಳನ್ನು ಬಳಕೆ ನಿಲ್ಲಿಸಿ ಸ್ವದೇಶಿ ಉತ್ಪನ್ನಗಳ ಬಳಕೆ ಮಾಡುವ ಉದ್ದೇಶವಾಗಿದೆ. ಈ ಹಿಂದೆಯೂ ಈಗಾಗಲೆ ದೇಶದಲ್ಲಿ ಚೀನಾ ಉತ್ಪನ್ನಗಳ ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎನ್ನುವ ಕೂಗು ಇತ್ತು. ಆದ್ರೆ ಇದೀಗ ಕೊರೊನಾ ಹಾವಳಿಯಿಂದಾಗಿ ಚೀನಾ ವಸ್ತುಗಳ ವಿರುದ್ಧದ ಧ್ವನಿ ಮತ್ತೆ ಮುನ್ನಲೆಗೆ ಬಂದಿದೆ. ಆದರೆ ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಹಿಷ್ಕಾರ ಮಾಡುವುದು ಸಾಧ್ಯವೇ?..ಖಂಡಿತಾ ಸಾಧ್ಯವಿದೆ. ಮುಂದೆ ಓದಿರಿ

ಚೀನಾ ಉತ್ಪನ್ನಗಳು ಹೆಚ್ಚಿವೆ

ಚೀನಾ ಉತ್ಪನ್ನಗಳು ಹೆಚ್ಚಿವೆ

ದೇಶದ ಮಾರುಕಟ್ಟೆಯಲ್ಲಿ ಚೀನಾ ವಸ್ತುಗಳ ಪಾಲು ಹೆಚ್ಚಿದೆ. ಅದರಲ್ಲಿಯೂ ನಾವು ಬಳಸುವ ದೈನಂದಿನ ಬಹುತೇಕ ಅಗತ್ಯ ವಸ್ತುಗಳು ಚೀನಾದಲ್ಲಿಯೇ ತಯಾರಾಗಿವೆ. ಇನ್ನೂ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಗ್ಯಾಡ್ಜೆಟ್, ಡಿಜಿಟಲ್ ಉತ್ಪನ್ನಗಳ ಪಟ್ಟಿಯಲ್ಲಿಯೂ ಚೀನಾದ ಪಾಲು ಹೆಚ್ಚಿದೆ. ಹಾಗೆಯೇ ಟಿಕ್‌ಟಾಕ್, ಜೂಮ್ ಸೇರಿದಂತೆ ಹಲವು ಜನಪ್ರಿಯ ಆಪ್‌ಗಳು ತವರು ಚೀನಾ ಆಗಿದೆ.

ಚೀನಾ ಉತ್ಪನ್ನಗಳಿಗೆ ಪರ್ಯಾಯ ಇದೆಯಾ

ಚೀನಾ ಉತ್ಪನ್ನಗಳಿಗೆ ಪರ್ಯಾಯ ಇದೆಯಾ

ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು, ಚೈನೀಸ್ ಅಪ್ಲಿಕೇಶನ್‌ಗಳು ಮತ್ತು ಚೀನೀ ಎಲೆಕ್ಟ್ರಾನಿಕ್ಸ್ ಅನ್ನು ಭಾರತದಲ್ಲಿ ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಕೂಗು ಕೇಳಿಬರುತ್ತಿದೆ. ಚೀನೀ ಬ್ರ್ಯಾಂಡ್‌ನಿಂದ ಬಂದ ಉತ್ಪನ್ನವನ್ನು ನಾವು ನಿಷೇಧಿಸಿದರೂ ಸಹ, ಅದಕ್ಕೆ ಪರ್ಯಾಯವಾದ ಸೂಕ್ತ ಆಯ್ಕೆಗಳು ನಮ್ಮಲ್ಲಿ ಕಡಿಮೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕಿದೆ.

ಜನಪ್ರಿಯ ಮೊಬೈಲ್ ಬ್ರ್ಯಾಂಡ್‌ಗಳು

ಜನಪ್ರಿಯ ಮೊಬೈಲ್ ಬ್ರ್ಯಾಂಡ್‌ಗಳು

ಚೀನಾ ಮೂಲದ ವಿವೊ, ಒಪ್ಪೊ, ಒನ್‌ಪ್ಲಸ್ ಮತ್ತು ಶಿಯೋಮಿ ಮೊಬೈಲ್ ಬ್ರ್ಯಾಂಡ್‌ಗಳು ಈಗಾಗಲೇ ಹೆಚ್ಚು ಜನರನ್ನು ಸೆಳೆದಿವೆ. ಇವುಗಳಿಗೆ ಕೈಬಿಟ್ಟು ಚೀನಾ ಮೂಲವಲ್ಲದ ಸ್ಯಾಮ್‌ಸಂಗ್, ಎಲ್‌ಜಿ, ಸೋನಿ ಮತ್ತು ಆಪಲ್‌ ಬ್ರ್ಯಾಂಡ್‌ನ ಫೋನ್ ಖರೀದಿಸಲು ಕೆಲವರು ಶಿಫಾರಸು ಮಾಡುತ್ತಾರೆ. ಆದರೆ ಚೀನಾದ ಫೋನ್‌ಗಳ ದರ ಕಡಿಮೆ ಹೀಗಾಗಿ ಗ್ರಾಹಕರನ್ನು ಆಕರ್ಷಿಸುತ್ತವೆ.

ಚೀನಾ ಸಂಸ್ಥೆಗಳ ಕೊಡುಗೆ

ಚೀನಾ ಸಂಸ್ಥೆಗಳ ಕೊಡುಗೆ

ಒಪ್ಪೋ, ವಿವೊ, ಮತ್ತು ಶಿಯೋಮಿಯಂತಹ ಕಂಪನಿಗಳು ಚೀನಾದವರಾಗಿದ್ದರೂ, ದೇಶದ ಆರ್ಥಿಕತೆಗೆ ಇವರ ಕೊಡುಗೆ ಇದೆ. ದೇಶದಲ್ಲಿ ಮಾರಾಟವಾಗುವ ಈ ಸಂಸ್ಥೆಗಳ ಬಹುತೇಕ ಫೋನ್‌ಗಳು/ಎಲೆಕ್ಟ್ರಾನಿಕ್ಸ್ ದೇಶದಲ್ಲಿ ಅಸೆಂಬಲ್ (ಜೋಡಿಸುವುದು) ಮಾಡಲಾಗುತ್ತದೆ ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಹಾಗೂ ದೇಶದ ಆರ್ಥಿಕತೆಯನ್ನು ಹೆಚ್ಚಿಸುತ್ತವೆ. ಆದ್ರೆ ಚೀನಾದ ಹಾರ್ಡ್‌ವೇರ್ ಘಟಕಗಳ ಉತ್ಪಾದನೆಯನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸುವುದು ಸುಲಭವಲ್ಲ. ಒಂದು ಸಣ್ಣ ಕೆಪಾಸಿಟರ್ ಉತ್ಪಾದನಾ ಘಟಕಕ್ಕೆ ಶತಕೋಟಿ ಡಾಲರ್ ಹೂಡಿಕೆ ಮತ್ತು ಆ ನಿಖರವಾದ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಕಾರ್ಯಪಡೆಯ ಅಗತ್ಯವಿರುತ್ತದೆ.

ದೇಶಿಯ ಫೋನ್ ಬ್ರ್ಯಾಂಡ್

ದೇಶಿಯ ಫೋನ್ ಬ್ರ್ಯಾಂಡ್

ಭಾರತೀಯ ಸ್ಮಾರ್ಟ್‌ಫೋನ್ ಬ್ರಾಂಡ್‌ ಆದ ಮೈಕ್ರೋಮ್ಯಾಕ್ಸ್ ಇಂದಿಗೂ (R&D) ಆರ್&ಡಿ ಯಲ್ಲಿ ಹೂಡಿಕೆ ಮಾಡಿಲ್ಲ. ಚೀನಾದಿಂದ ಫೋನ್‌ಗಳನ್ನು ಆಮದು ಮಾಡಿಕೊಳುವುದು ರೀಬ್ರ್ಯಾಂಡ್ ಮಾಡಿ, ಮಾರಾಟ ಮಾಡುವುದನ್ನು ಮುಂದುವರೆಸಿದೆ. ಇನ್ನೂ ಮೂಕ್ರೋಮ್ಯಾಕ್ಸ್‌ ಫೋನ್ ಕಾರ್ಯವೈಖರಿಯ ಬಗ್ಗೆ ನಿಮಗೆ ತಿಳಿದೆ ಇದೆ. ಬಹುಪಾಲು ದೇಶಿಯ ಫೋನ್‌ ಸಂಸ್ಥೆಗಳ ಕಥೆ ಹೀಗೆ ಇದೆ.

ಚೀನಾ ವಸ್ತುಗಳನ್ನು ಬಹಿಷ್ಕಾರಿಸುವುದು ಅಸಾಧ್ಯವಲ್ಲ

ಚೀನಾ ವಸ್ತುಗಳನ್ನು ಬಹಿಷ್ಕಾರಿಸುವುದು ಅಸಾಧ್ಯವಲ್ಲ

ಚೀನಾ ವಸ್ತುಗಳನ್ನು ಬಹಿಷ್ಕಾರಿಸುವುದು ಅಸಾಧ್ಯವಲ್ಲ

ಭಾರತದ ಮಾರುಕಟ್ಟೆಯಲ್ಲಿ ಚೀನಾ ಬಹುಪಾಲು ಆವರಿಸಿ ಬಿಟ್ಟಿದೆ. ಹಾಗಂತ ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸುವದು ಕಷ್ಟವೇನಲ್ಲ ಮತ್ತು ಅಸಾಧ್ಯವು ಅಲ್ಲ. ಮನಸ್ಸು ಮಾಡಿದರೇ ಚೀನಾ ಬ್ರ್ಯಾಂಡ್‌ಗಳನ್ನು ಹೇಳ ಹೆಸರಿಲ್ಲದಂತೆ ದೇಶದಿಂದ ಹೊರಗೆ ಅಟ್ಟಬಹುದು. ಅದಕ್ಕಾಗಿ ದೇಶದಲ್ಲಿ ದೊಡ್ಡ ಪ್ರಮಾಣದ ಕೆಲಸಗಳಾಗಬೇಕು, ನಾವು ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆಗಳನ್ನು ಹಾಕಬೇಕು. ಈ ನಿಟ್ಟಿನಲ್ಲಿ ಮುನ್ನಡೆದರೇ ಖಂಡಿತಾ ಕೆಲ ವರ್ಷಗಳಲ್ಲಿ ಸಂಪೂರ್ಣ ಸ್ವಾವಲಂಬನೆ ಕಂಡುಕೊಳ್ಳಲು ಸಾಧ್ಯವಿದೆ.

Most Read Articles
Best Mobiles in India

English summary
A lot of posts and comments on various social media sites are related to banning Chinese smartphone brands, Chinese apps, and Chinese electronics in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more