ಸೆನ್ಹೈಸರ್ HD 560S ಹೆಡ್‌ಫೋನ್‌ ಬಿಡುಗಡೆ!..ಓಪನ್‌ ಬ್ಯಾಕ್‌ ವಿನ್ಯಾಸ ವಿಶೇಷತೆ!

|

ಇದು ಸ್ಮಾರ್ಟ್‌ಫೋನ್‌ ಜಮಾನ, ಪ್ರಸ್ತುತ ಎಲ್ಲರ ಕೈಗಳಲ್ಲೂ ರಿಂಗಣಿಸುತ್ತಲೇ ಇದೆ. ಅದರಲ್ಲೂ ಸ್ಮಾರ್ಟ್‌ಫೋನ್‌ ಜೊತೆಗೆ ಮ್ಯೂಸಿಕ್‌ ಅನುಭವವನ್ನ ಆನಂದಿಸುವುದಕ್ಕೆ ಹೆಡ್‌ಫೋನ್‌ ಗಳಿದ್ದರೆ ಸಾಕು ಸಮಯ ಕಳೆಯುವುದೇ ತಿಳಿಯುವುದಿಲ್ಲ. ಇದೇ ಕಾರಣಕ್ಕೆ ಟೆಕ್‌ ವಲಯದಲ್ಲಿ ಸಾಕಷ್ಟು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಹೆಡ್‌ಫೋನ್‌ಗಳನ್ನ ಬಿಡುಗಡೆ ಮಾಡಿವೆ. ಇವುಗಳಲ್ಲಿ ಸನ್ಹೈಸರ್‌ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ಇದೇ ಕಂಪೆನಿ ತನ್ನ ಮತ್ತೊಂದು ಹೆಡ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಸೆನ್ಹೈಸರ್

ಹೌದು, ಜರ್ಮನ್ ಆಡಿಯೊ ಬ್ರಾಂಡ್ ಸೆನ್ಹೈಸರ್ ಕಂಪೆನಿ ತನ್ನ ಹೊಸ HD560S ಹೆಡ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಬಡ್ಸ್‌ ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಇದು ಓಪನ್‌ ಬ್ಯಾಕ್‌ ವಿನ್ಯಾಸವನ್ನು ಹೊಂದಿದ್ದು, ಈ ಹೆಡ್‌ಫೋನ್‌ ವೆಲೋರ್‌ ಇಯರ್‌ಪ್ಯಾಡ್‌ಗಳನ್ನು ಹೊಂದಿದೆ. ಇನ್ನು ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೆಡ್‌ಫೋನ್‌

ಸೆನ್ಹೈಸರ್ HD560S ಹೆಡ್‌ಫೋನ್‌ ಮ್ಯೂಸಿಕ್‌ ಅನ್ನು ಆನಂದಿಸಲು ಉತ್ತಮ ಅವಕಾಶವನ್ನು ನೀಡಿದೆ. ಇನ್ನು ನೀವು ಎಲ್ಲಾ ವಿವರಗಳಲ್ಲಿ ರಾಗವನ್ನು ಅರ್ಥಮಾಡಿಕೊಳ್ಳಲು ಬಯಸುವ ಆಡಿಯೊ ಉತ್ಸಾಹಿಯಾಗಿದ್ದರೆ, ಈ ಹೆಡ್‌ಫೋನ್‌ ಉತ್ತಮ ಆಯ್ಕೆಯಾಗಿದೆ. ಇದಲ್ಲದೆ, ಕಂಪನಿಯು ಹೆಚ್‌ಡಿ 560S ಹೆಡ್‌ಫೋನ್‌ಗಳಲ್ಲಿ ಅಲ್ಟ್ರಾಲೈಟ್ ಚಾಸಿಸ್ ಅನ್ನು ಬಳಸುತ್ತದೆ. ಇನ್ನು ಈ ಹೆಡ್‌ಫೋನ್‌ 3 ಮೀಟರ್ ಕೇಬಲ್, 6.3mm ಜ್ಯಾಕ್ ಮತ್ತು 3.5mm ಅಡಾಪ್ಟರ್‌ನೊಂದಿಗೆ ಹೊಂದಿಕೊಳ್ಳುತ್ತದೆ.

ಸನ್ಹೈಸರ್‌

ಇನ್ನು ಸನ್ಹೈಸರ್‌ ಹೆಚ್‌ಡಿ 560S ಹೆಡ್‌ಫೋನ್‌ನಲ್ಲಿ Transducers ಅನ್ನು ನಿರ್ದಿಷ್ಟವಾಗಿ ನಿಖರತೆಗಾಗಿ ಟ್ಯೂನ್ ಮಾಡಲಾಗಿದ್ದು, ವಿಶ್ವಾಸಾರ್ಹ ಎ/ಬಿ ಮಿಶ್ರಣಗಳ ಹೋಲಿಕೆಗಳು ಮತ್ತು ಮಾಧ್ಯಮ ಸ್ವರೂಪಗಳನ್ನು ನೀಡಲಿದೆ. ಜೊತೆಗೆ ಇದು 6Hz - 38kHz ಫ್ರಿಕ್ವೆನ್ಸಿ ರೆಸ್ಪಾನ್ಸ್‌ ರೇಂಜ್‌ ಅನ್ನು ನೀಡುತ್ತದೆ. ಅಲ್ಲದೆ ಇದು ಕಡಿಮೆ ಫ್ರಿಕ್ವೆನ್ಸಿ ವಿಸ್ತರಣೆಯಿಂದ ಪೂರಕವಾಗಿದೆ. ಇನ್ನು ಧ್ವನಿ ತರಂಗಗಳ ನೈಸರ್ಗಿಕ ಪ್ರಸರಣವನ್ನು ಒದಗಿಸಲು ಇದು ಓಪನ್-ಬ್ಯಾಕ್ ವಿನ್ಯಾಸದೊಂದಿಗೆ ಬರುತ್ತದೆ. ಈ ಹೆಡ್‌ಫೋನ್‌ಗಳು ವೆಲೋರ್ ಇಯರ್‌ಪ್ಯಾಡ್‌ಗಳನ್ನು ಹೊಂದಿದ್ದು, ಇದು ಗಂಟೆಗಳವರೆಗೆ ಸಂಗೀತವನ್ನು ಕೇಳಲು ನಿಮಗೆ ಒಂದು ಮಟ್ಟದ ಆರಾಮವನ್ನು ನೀಡುತ್ತದೆ.

ಹೆಡ್‌ಫೋನ್‌

ಸದ್ಯ ಸೆನ್‌ಹೈಸರ್ HD560S‌ ಹೆಡ್‌ಫೋನ್‌ ಬೆಲೆ 18,990 ರೂ ಬೆಲೆಯನ್ನು ಹೊಂದಿದೆ. ಇನ್ನು ಈ ಹೆಡ್‌ಫೋನ್‌ ಅನ್ನು ಕಂಪನಿಯ ಅಧಿಕೃತ ಸೈಟ್ ಮತ್ತು ಫ್ಲಿಪ್‌ಕಾರ್ಟ್, ಅಮೆಜಾನ್ ನಂತಹ ಇ-ಕಾಮರ್ಸ್‌ ತಾಣಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ದೇಶದ ಪ್ರಮುಖ ಎಲೆಕ್ಟ್ರಾನಿಕ್ ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ.

Most Read Articles
Best Mobiles in India

English summary
Sennheiser, a well-known audio products brand, has launched HD 560S headphones in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X