ಸನ್ಹೈಸರ್‌ IE ಇಯರ್‌ಫೋನ್‌ ಬಿಡುಗಡೆ! ಡಿಟ್ಯಾಚೇಬಲ್ 3.5mm ಕೇಬಲ್ ವಿಶೇಷ!

|

ಟೆಕ್‌ ವಲಯದಲ್ಲಿ ನಾನಾ ಮಾದರಿಯ ಇಯರ್‌ಫೋನ್‌ಗಳು ಲಭ್ಯವಿವೆ. ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಮ್ಯೂಸಿಕ್‌ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಇಯರ್‌ಫೋನ್‌ಗಳತ್ತ ಒಲವು ತೋರುತ್ತಿದ್ದಾರೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಇಯರ್‌ಫೋನ್‌ಗಳನ್ನ ಪರಿಚಯಿಸಿವೆ. ಇದರಲ್ಲಿ ಸನ್ಹೈಸರ್‌ ಕಂಪೆನಿ ಕೂಡ ಒಂದು. ಈಗಾಗಲೇ ಹಲವು ಇಯರ್‌ಫೋನ್‌ ಪರಿಚಯಿಸಿರುವ ಸನ್ಹೈಸರ್‌ ಕಂಪೆನಿ ಇಈ ಹೊಸ ಸ್ನಹೈಸರ್‌ IE 300 ಇಯರ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ.

ಸನ್ಹೈಸರ್‌

ಹೌದು, ಸನ್ಹೈಸರ್‌ ಕಂಪೆನಿ ಹೊಸ ಸನ್ಹೈಸರ್‌ IE 300 ಇಯರ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಇಯರ್‌ಫೋನ್‌ಗಳು ಹೆಚ್ಚುವರಿ ಅನುಕೂಲಕ್ಕಾಗಿ ಡಿಟ್ಯಾಚೇಬಲ್ 3.5mm ಆಡಿಯೊ ಜ್ಯಾಕ್ ಕೇಬಲ್ ಮತ್ತು ಉತ್ತಮ ಧ್ವನಿ ಗುಣಮಟ್ಟಕ್ಕಾಗಿ ಜರ್ಮನ್ ನಿರ್ಮಿತ 7mm ಎಕ್ಸ್ಟ್ರಾ ವೈಡ್ ಬ್ಯಾಂಡ್ ಸಂಜ್ಞಾಪರಿವರ್ತಕ ವನ್ನು ಹೊಂದಿದೆ. ಇನ್ನು ಈ ಇಯರ್‌ ಫೋನ್‌ 6Hz ನಿಂದ 20kHz ಫ್ರಿಕ್ವೆನ್ಸಿ ರೆಸ್ಪಾನ್ಸ್‌ ಅನ್ನು ನೀಡಲಿದೆ. ಇನ್ನುಳಿದಂತೆ ಈ ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹೆಡ್‌ಫೋನ್‌

ಸನ್ಹೈಸರ್‌ IE 30 ಇನ್-ಇಯರ್ ಹೆಡ್‌ಫೋನ್‌ ಪ್ರಮುಖ ವಿಶೇಷತೆ ಎಂದರೆ ಇದರ ಡಿಟ್ಯಾಚೇಬಲ್ 3.5 ಎಂಎಂ ಕೇಬಲ್, ಈ ಕೇಬಲ್‌ ಅನ್ನು ದೀರ್ಘ ಬಾಳಿಕೆಗಾಗಿ ಪ್ಯಾರಾ-ಅರಾಮಿಡ್ ವಸ್ತುಗಳೊಂದಿಗೆ ಬಲಪಡಿಸಲಾಗಿದೆ. ಅಲ್ಲದೆ ಹೆಚ್ಚುವರಿ ಒತ್ತಡ ಪರಿಹಾರಕ್ಕಾಗಿ, ಚಿನ್ನ ಲೇಪಿತ ಫಿಡೆಲಿಟಿ + ಎಂಎಂಸಿಎಕ್ಸ್ ಕನೆಕ್ಟರ್ ಅನ್ನು ನೀಡಲಾಗಿದೆ. ಇನ್ನು ಈ ಇಯರ್‌ಫೋನ್‌ನಲ್ಲಿ 2.5mm ಅಥವಾ 4.4mm ಕನೆಕ್ಟರ್‌ಗಳನ್ನು ಹೊಂದಿರುವ ಸಮತೋಲಿತ ಕೇಬಲ್‌ಗಳು ಐಚ್ಛಿಕ ಪರಿಕರಗಳಾಗಿ ಲಭ್ಯವಿದೆ.

ಇಯರ್‌ಫೋನ್‌

ಇನ್ನು ಸನ್ಹೈಸರ್‌ IE 300 ಇಯರ್‌ಫೋನ್‌ಗಳು 7mm ಎಕ್ಸ್ಟ್ರಾ ವೈಡ್ ಬ್ಯಾಂಡ್ ಸಂಜ್ಞಾಪರಿವರ್ತಕವನ್ನು ಹೊಂದಿದ್ದು, ಇದನ್ನು ಜರ್ಮನಿಯ ಕಂಪನಿ ತಯಾರಿಸಿದೆ. ಇವುಗಳು ನೈಸರ್ಗಿಕ ಅನುರಣನಗಳು ಮತ್ತು ಒಟ್ಟು ಹಾರ್ಮೋನಿಕ್ ಅಸ್ಪಷ್ಟತೆಯನ್ನು ಕಡಿಮೆ ಮಾಡುವ ಆಪ್ಟಿಮೈಸ್ಡ್ ಮೆಂಬರೇನ್ ಫಾಯಿಲ್ ಅನ್ನು ಹೊಂದಿವೆ. ಅಲ್ಲದೆ ವಸತಿಗೃಹದೊಳಗಿನ ಪ್ರತಿಫಲನವನ್ನು ಕಡಿಮೆ ಮಾಡಲು ಸಂಜ್ಞಾಪರಿವರ್ತಕ ಬ್ಯಾಕ್ ವಾಲ್ಯೂಮ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಇಯರ್‌ಫೋನ್‌ಗಳು 6Hz ನಿಂದ 20kHz ಫ್ರಿಕ್ವೆನ್ಸಿ ರೆಸ್ಪಾನ್ಸ್‌ ಅನ್ನು ಹೊಂದಿದೆ.

ಇಯರ್‌ಫೋನ್‌

ಸನ್ಹೈಸರ್‌ IE 300 ಇಯರ್‌ಫೋನ್‌ ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಇದು ಕಿವಿಗೆ ತಕ್ಕಂತೆ ಹೊಂದಿಕೊಳ್ಳುವ ಕಿವಿ ಕೊಕ್ಕೆಗಳು ಮತ್ತು ಸಿಲಿಕೋನ್ ಮತ್ತು ಮೆಮೊರಿ ಫೋಮ್ ಇಯರ್ ಅಡಾಪ್ಟರುಗಳನ್ನು ಮೂರು ಗಾತ್ರಗಳಲ್ಲಿ ಹೊಂದಿದೆ. ರೆಸ್ಪಾನ್ಸ್‌ ಪ್ರತಿಕ್ರಿಯೆ ಮತ್ತು ಸೆಕ್ಯೂರ್‌ ಸ್ಟೋರೇಜ್‌ಗಾಗು ಇದರಲ್ಲಿ ಪ್ರೀಮಿಯಂ ಕ್ಯಾರಿ ಕೇಸ್‌ ಅನ್ನು ಸಹ ನೀಡಲಾಗಿದೆ. ಇದಲ್ಲದೆ ಸನ್ಹೈಸರ್‌ IE 300 ಇಯರ್‌ಫೋನ್‌ ಪ್ರತ್ಯೇಕವಾಗಿ ಹೊಂದಿಸಬಹುದಾದ ಕಿವಿಗೆ ಹೊಂದಿಕೊಳ್ಳುವ ಕಿವಿ ಕೊಕ್ಕೆಗಳನ್ನು ಹೊಂದಿದೆ.

ಇಯರ್‌ಫೋನ್‌

ಇನ್ನು ಸನ್ಹೈಸರ್‌ IE 300 ಇಯರ್‌ಫೋನ್‌ಗಳ ಬೆಲೆ ಭಾರತದಲ್ಲಿ 29,990 ರೂ.ಆಗಿದೆ. ಈ ಹೆಡ್‌ಫೋನ್‌ಗಳು ಪ್ರಮುಖ ಇ-ಕಾಮರ್ಸ್ ಸೈಟ್‌ಗಳು, ಸೆನ್‌ಹೈಸರ್‌ನ ಆನ್‌ಲೈನ್ ಸ್ಟೋರ್‌ನಲ್ಲಿ ಲಭ್ಯವಿರುತ್ತವೆ. ಅಲ್ಲದೆ ಆಫ್‌ಲೈನ್ ಔಟ್‌ಲೆಟ್‌ಗಳಲ್ಲೂ ಲಬ್ಯವಾಗಲಿದೆ. ಈ ಇಯರ್‌ಫೋನ್‌ಗಳು ಇದೇ ಮಾರ್ಚ್ 25 ರಿಂದ ಭಾರತದಲ್ಲಿ ಮಾರಾಟವಾಗಲಿವೆ.

Most Read Articles
Best Mobiles in India

English summary
Sennheiser IE 300 earphones have been launched in Indian. The headphones come with a detachable 3.5mm audio jack cable for extra convenience.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X