Just In
Don't Miss
- Automobiles
ಭಾರತದಲ್ಲಿ ಟೊಯೊಟಾ ಹಿಲಕ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಹಿತಿ ಬಹಿರಂಗ
- News
ರಾಮ ಮಂದಿರ ನಿರ್ಮಾಣದಿಂದ ಬಡವರ ಹೊಟ್ಟೆ ತುಂಬುತ್ತಾ ಎನ್ನುವ ಪ್ರಶ್ನೆಗೆ RSS ಮುಖ್ಯಸ್ಥರು ಕೊಟ್ಟ ಉತ್ತರ
- Sports
ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಲಂಕಾದ ದಿಲ್ಹರ ಲೋಕುಹೆಟ್ಟಿಗೆ ತಪ್ಪಿತಸ್ಥ ಎಂದು ಸಾಬೀತು
- Movies
ರಾಬರ್ಟ್, ಪೊಗರು, ಕೋಟಿಗೊಬ್ಬ 3 ಬಗ್ಗೆ ಪುನೀತ್ ರಾಜ್ಕುಮಾರ್ ಮಾತು
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 28ರ ಚಿನ್ನ, ಬೆಳ್ಳಿ ದರ
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಾರ್ಟರ್ಡ್ ಅಕೌಂಟೆಂಟ್ಗೆ 10,000 ರೂ. ವಂಚಿಸಿದ ಓಲಾ ಡ್ರೈವರ್!
ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿರುವ ಓಲಾ ಚಾಲಕನೋರ್ವ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ವ್ಯಕ್ತಿಯೋರ್ವರಿಗೆ ಪಂಗನಾಮ ಹಾಕಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ವಿರಾಜ್ ಪ್ರಸಾದ್ ಎಂಬುವವರು ಪ್ರಯಾಣ ಆರಂಭಕ್ಕೆ ಮೊದಲು ಕಳುಹಿಸಿದ ಒಟಿಪಿ ಹಂಚಿಕೊಂಡು ಓಲಾ ಮನಿ ಅಕೌಂಟಿನಿಂದ 10,000 ರೂ ಕಳೆದುಕೊಂಡಿದ್ದಾರೆ. ಇದಾದ ನಂತರ ತಕ್ಷಣವೇ ಓಲಾ ಆಪ್ ನಿಷ್ಕ್ರಿಯಗೊಂಡಿದೆ.!
ಹೌದು, ವಿರಾಜ್ ಪ್ರಸಾದ್ ಅವರು ಒಬೆರಾಯ್ ಸ್ಪ್ಲೆಂಡರ್ನಿಂದ ತಮ್ಮ ಕಚೇರಿಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆಯಲ್ಲಿ ಚಾಲಕ ಎಲ್ಲಿಗೆ ತಲುಪಿದ್ದಾನೆ ಎಂದು ತಿಳಿಯಲು ಅವನಿಗೆ ಕರೆ ಮಾಡಿದಾಗ, ಜಾಗ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಓಲಾ ಕಳುಹಿಸಿದ ಒಟಿಪಿ ಹಂಚಿಕೊಳ್ಳುವಂತೆ ಕೇಳಿದ್ದಾನೆ. ಇದನ್ನು ನಂಬಿದ ವಿರಾಜ್ ಪ್ರಸಾದ್ ಪ್ರಯಾಣ ಆರಂಭಕ್ಕೆ ಮೊದಲು ಕಳುಹಿಸಿದ ಒಟಿಪಿಯನ್ನು ಹಂಚಿಕೊಂಡಿದ್ದಾರೆ.
ಇದಾದ ಕೆಲವೇ ಸಮಯದ ಬಳಿಕ ವಿರಾಜ್ ಪ್ರಸಾದ್ ಅವರ ಓಲಾ ಮನಿ ಅಕೌಂಟಿನಿಂದ 10,000 ರೂ ಕಳೆದುಕೊಂಡಿರುವುದು ಪ್ರಸಾದ್ಗೆ ಅವರಿಗೆ ತಿಳಿದಿದೆ. ವಿಷಯವೇನೆಂದರೆ, ಡ್ರೈವರ್ ಜೊತೆಗೆ ವಿರಾಜ್ ಪ್ರಸಾದ್ ಅವರು ಹಂಚಿಕೊಂಡಿರುವ ಒಟಿಪಿಯು ಪ್ರಯಾಣ ಆರಂಭಕ್ಕೆ ಮೊದಲು ಕಳುಹಿಸಿದ ಒಟಿಪಿಯಾಗಿದೆ. ಓಲಾ ಚಾಲಕನು ವಿರಾಜ್ ಪ್ರಸಾದ್ ಅವರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಓಲಾ ಮನಿಯನ್ನು ವರ್ಗಾಯಿಸಿಕೊಂಡಿದ್ದಾನೆ.
ಇದಾದ ನಂತರ ಈ ಬಗ್ಗೆ ದೂರು ದಾಖಲಾಗಿದೆ. ಈಗ ಓಲಾ ಚಾಲಕನ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. 'ಮತ್ತೊರ್ವ ವ್ಯಕ್ತಿಯ ಫೋನ್ ನಂಬರ್ಗೆ ಹೊಸದಾಗಿ ಓಲಾ ಆಪ್ ಡೌನ್ಲೋಡ್ ಮಾಡಿಕೊಂಡರೂ ದುರ್ಬಳಕೆ ತಡೆಯುವುದಕ್ಕಾಗಿ ಮೂಲ ನೋಂದಾಯಿತ ಫೋನ್ ಸಂಖ್ಯೆಗೆ ಒಟಿಪಿ ರವಾನೆಯಾಗುತ್ತದೆ. ಹೀಗಾಗಿ ಒಟಿಪಿಯನ್ನು ಯಾರ ಜತೆಗೂ ಹಂಚಿಕೊಳ್ಳಬಾರದು. ಒಟಿಪಿ ಇಲ್ಲದೆ ಇಂತಹ ವಂಚನೆ ಪ್ರಕರಣ ಅಸಾಧ್ಯ ಎಂದು ಸೈಬರ್ ಭದ್ರತಾ ತಜ್ಞರು ಹೇಳಿದ್ದಾರೆ.
ಗ್ರಾಹಕರು ತಮ್ಮ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ನಾವು ನಿರಂತರವಾಗಿ ಮಾಹಿತಿಗಳನ್ನು ನೀಡುತ್ತಲೇ ಇದ್ದೇವೆ. ಲಾಗಿನ್ ವಿವರ, ಒಟಿಪಿಯಂತಹ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬಾರದು ಎಂದು ತಿಳಿಸುತ್ತಲೇಇದ್ದೇವೆ. ನಾವು ಯಾವತ್ತೂ ಅಂತಹ ಮಾಹಿತಿಗಳನ್ನು ಕೇಳುವುದಿಲ್ಲ. ಓಲಾ ಕಂಪನಿಯವರೇ ಎಂದು ಹೇಳಿಕೊಂಡು ಯಾರಾದರೂ ಕೇಳಿದರೂ ಮಾಹಿತಿಗಳನ್ನು ನೀಡಬಾರದು ಎಂದು ಓಲಾ ಅಧಿಕಾರಿಯೋರ್ವರು ತಿಳಿಸಿದ್ದಾರೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190