Just In
Don't Miss
- Automobiles
ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿ ಯೋಜನೆಗಾಗಿ ರೂ.700 ಕೋಟಿ ಹೂಡಿಕೆ ಮಾಡಿದ ಹೀರೋ
- Sports
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ನಡೆದ ಬೆಟ್ ಮೌಲ್ಯವೆಷ್ಟು ಗೊತ್ತ?!
- News
ಅಮೆರಿಕಾದಲ್ಲೇ ನಡೆಯಿತು ಮೈಸೂರಿನ ಅಭಿಷೇಕ್ ಅಂತ್ಯಕ್ರಿಯೆ
- Movies
ಮೇಕಪ್ ಆರ್ಟಿಸ್ಟ್ ನಿಧನ: ಕಣ್ಣೀರಿಟ್ಟ ನಟಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಕಡಿಮೆ ಬೆಲೆಗೆ ಲಾಂಚ್ ಆಯ್ತು 49 ಇಂಚಿನ 'ಶಿಂಕೊ' ಟಿವಿ!.ಕ್ರಿಕೆಟ್ ಮೋಡ್ ಇದೆ!
ಚೀನಾ ಮೂಲದ ಟೆಕ್ ಕಂಪನಿಗಳಿಗೆ ಭಾರತೀಯ ಮಾರುಕಟ್ಟೆಯೇ ಪ್ರಮುಖವಾಗಿದ್ದು, ಚೀನಾ ಕಂಪನಿಗಳು ಇಲ್ಲಿಯ ಗ್ರಾಹಕರ ಅಗತ್ಯತೆಗಳನ್ನು ಅರ್ಥೈಸಿಕೊಂಡಿವೆ. ಈ ದಿಸೆಯಲ್ಲಿ ಚೀನಾದ ಎಲೆಕ್ಟ್ರಾನಿಕ್ಸ್ ಅಪ್ಲೈನ್ಸ್ ಕಂಪನಿ ಶಿಂಕೊ ಈಗ ದೇಶಿಯ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ. ಕಂಪನಿಯು ಹೊಸದಾಗಿ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ಟಿವಿಯೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹೌದು, ಚೀನಾದ ಶಿಂಕೊ ಕಂಪನಿಯು 49 ಇಂಚಿನ ಸ್ಮಾರ್ಟ್ಟಿವಿಯನ್ನು ಲಾಂಚ್ ಮಾಡಿದ್ದು, ಈ ಸ್ಮಾರ್ಟ್ಟಿವಿಯು ಕಾರ್ಟೆಕ್ಸ್ A-53 ಪ್ರೊಸೆಸರ್ ಶಕ್ತಿಯನ್ನು ಹೊಂದಿದ್ದು, ಇದರೊಂದಿಗೆ ಆಂಡ್ರಾಯ್ಡ್ 8.0 ಓಎಸ್ನ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಮೇನ್ ಹೈಲೈಟ್ಸ್ ಅಂದರೇ ಈ ಟಿವಿಯು ಕ್ರಿಕೆಟ್ ಪಿಚ್ಚರ್ ಮೋಡ್ ಆಯ್ಕೆಯನ್ನು ಒಳಗೊಂಡಿದ್ದು, 4K ಕಂಟೆಂಟ್ ವಿಡಿಯೊಗಳಿಗೆ ಬೆಂಬಲ ನೀಡಿದೆ.
ಈ ಸ್ಮಾರ್ಟ್ಟಿವಿಯು 23,999ರೂ. ಪ್ರೈಸ್ಟ್ಯಾಗ್ ಅನ್ನು ಹೊಂದಿದ್ದು, 1GB RAM ಮತ್ತು 8GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದುಕೊಂಡಿದೆ. ಬೆಸ್ಟ್ ಇನ್ ಕ್ಲಾಸ್ ಸೌಂಡ್ ಗುಣಮಟ್ಟಕ್ಕಾಗಿ ಬಾಕ್ಸ್ ಸ್ಪೀಕರ್ಸ್ಗಳನ್ನು ಒಳಗೊಂಡಿದೆ. ಹಾಗೆಯೇ ಅತ್ಯುತ್ತಮ ಕನೆಕ್ಟಿವಿಟಿ ಆಯ್ಕೆಗಳು ಸಹ ಇವೆ. ಹಾಗಾದರೇ ಶಿಂಕೊ ಕಂಪನಿಯ ಸ್ಮಾರ್ಟ್ಟಿವಿಯಲ್ಲಿ ಇತರೆ ಯಾವೆಲ್ಲಾ ಫೀಚರ್ಸ್ಗಳಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್ ಮತ್ತು ಡಿಸ್ಪ್ಲೇ
ಈ ಸ್ಮಾರ್ಟ್ಟಿವಿಯು ತೆಳುವಾದ ಡಿಸೈನ್ನಲ್ಲಿದ್ದು, ಆಕರ್ಷಕ ಬಾಹ್ಯ ರಚನೆಯನ್ನು ಹೊಂದಿದೆ. ಹಾಗೆಯೇ 49 ಇಂಚಿನ ಡಿಸ್ಪ್ಲೇಯನ್ನು ಒಳಗೊಂಡಿರುವ ಈ ಸ್ಮಾರ್ಟ್ಟಿವಿಯು A+ ಗ್ರೇಡ್ ಡಿಸ್ಪ್ಲೇ ಪ್ಯಾನಲ್ನೊಂದಿಗೆ ಡಿಸ್ಪ್ಲೇಯು 1,920 x 1,080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. 4K ವಿಡಿಯೊಗಳಿಗೆ ಬೆಂಬಲ ಸಹ ನೀಡುತ್ತದೆ.

ಪ್ರೊಸೆಸರ್ ಶಕ್ತಿ
ಶಿಂಕೊದ ಹೊಸ ಸ್ಮಾರ್ಟ್ಟಿವಿಯು ಕಾರ್ಟೆಕ್ಸ್ A-53 ಕ್ವಾಡ್ ಕೋರ್ 800MHz ಪ್ರೊಸೆಸರ್ ಶಕ್ತಿಯನ್ನು ಪಡೆದುಕೊಂಡಿದ್ದು, ಜೊತೆಗೆ Mali 450 GPU ಸಹ ಹೊಂದಿದೆ. ಇದರಲ್ಲಿ ಆಂಡ್ರಾಯ್ಡ್ 8.0 ಓರಿಯೊ ಓಎಸ್ನ ಬೆಂಬಲವು ಸಹ ಇದ್ದು, ಆಂಡ್ರಾಯ್ಡ್ ಅಪ್ಲಿಕೇಶನ್ಗಳನ್ನು ಸಪೋರ್ಟ್ ಮಾಡುತ್ತದೆ. ಹಾಗೆಯೇ 1GB RAM ಮತ್ತು 8GB ಸ್ಟೋರೇಜ್ ಆಯ್ಕೆ ಇದೆ.

ಕ್ರಿಕೆಟ್ ಪಿಚ್ಚರ್ ಮೋಡ್
ಶಿಂಕೊ ಕಂಪನಿಯು 49 ಇಂಚಿನ ಸ್ಮಾರ್ಟ್ಟಿವಿ ಹೊಸದಾಗಿ ಕ್ರಿಕೆಟ್ ಪಿಚ್ಚರ್ ಮೋಡ್ ಆಯ್ಕೆಯನ್ನು ಪರಿಚಯಿಸಿದೆ. ಈ ಆಯ್ಕೆಯು ಟಿವಿಯ ಶಾರ್ಪನೆಸ್ ಅನ್ನು ಹೆಚ್ಚಿಸಿಕೊಳ್ಳಲಿದ್ದು, ಟಿವಿಯಲ್ಲಿ ಕ್ರಿಕೆಟ್ ವೀಕ್ಷಿಸುವ ಅನುಭವವನ್ನು ಮತ್ತಷ್ಟು ರೋಚಕಗೊಳಿಸಲಿದೆ. ಸದ್ಯ ವರ್ಲ್ಡ್ ಕಪ್ ಕ್ರಿಕೆಟ್ ಮ್ಯಾಚ್ಗಳು ನಡೆಯುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಈ ಆಯ್ಕೆ ಇಷ್ಟವಾಗುವುದು.

ಇತರೆ ಸೌಲಭ್ಯಗಳು
ಶಿಂಕೊ ಸ್ಮಾರ್ಟ್ಟಿವಿಯು ಅಗ್ಗದ ಬೆಲೆಯನ್ನು ಹೊಂದಿದ್ದರು ಅಗತ್ಯ ಫೀಚರ್ಸ್ಗಳನ್ನು ಅಳವಡಿಸಿದೆ. ಈ ಟಿವಿಯಲ್ಲಿ ಎರಡು HDMI ಪೋರ್ಟ್, ಎರಡು USB ಪೋರ್ಟ್ಗಳ, Type-A ಪೋರ್ಟ್ಸ್, ಹಾಗೂ ವೈಫೈ ಕನೆಕ್ಟಿವಿಟಿ ಸೌಲಭ್ಯಗಳನ್ನು ನೀಡಲಾಗಿದೆ. ಸೌಂಡ್ಗಾಗಿ ಎರಡು ಬಾಕ್ಸ್ ಸ್ಪೀಕರ್ಸ್ಗಳು ಒದಗಿಸಲಾಗಿದ್ದು, ಕನೆಕ್ಟಿವಿಟಿ ಸುಲಭವಾಗಿದೆ.

ಬೆಲೆ ಮತ್ತು ಲಭ್ಯತೆ
ಅಗ್ಗದ ಬೆಲೆಯಲ್ಲಿ ಹಲವು ವೈಶಿಷ್ಟತೆಗಳನ್ನು ಹೊಂದಿರುವ ಶಿಂಕೊ ಕಂಪನಿಯ 49 ಇಂಚಿನ ಸ್ಮಾರ್ಟ್ಟಿವಿಯು ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಮತ್ತು ಅಮೆಜಾನ್ ಇಂಡಿಯಾ ಇ ಕಾಮರ್ಸ್ ಜಾಲತಾಣಗಳಲ್ಲಿ ಖರೀದಿಗೆ ದೊರೆಯಲಿದೆ. ಈ ಸ್ಮಾರ್ಟ್ಟಿವಿಯು 23,999ರೂ.ಗಳ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090