ಶಿಂಕೊ ಸಂಸ್ಥೆಯಿಂದ ಮೂರು ಹೊಸ ಸ್ಮಾರ್ಟ್‌ಟಿವಿಗಳು ಲಾಂಚ್!

|

ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಟಿವಿ ಶ್ರೇಣಿಯನ್ನು ಪರಿಚಯಿಸಿರುವ ಶಿಂಕೊ ಕಂಪನಿಯು ಈಗ ಮತ್ತೆ ಹೊಸ ಸ್ಮಾರ್ಟ್‌ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಸಂಸ್ಥೆಯು ಈಗ ಭಾರತೀಯ ಮಾರುಕಟ್ಟೆಗೆ ಮೂರು ಹೊಸ ಮಾದರಿಯ ಸ್ಮಾರ್ಟ್‌ ಟಿವಿಗಳನ್ನು ಅನಾವರಣ ಮಾಡಿದೆ. ಈ ಟಿವಿಗಳು ಆಂಡ್ರಾಯ್ಡ್‌ ಓಎಸ್‌ ಬೆಂಬಲವನ್ನು ಪಡೆದಿರುವ ಜೊತೆಗೆ 4K ರೆಸಲ್ಯೂಶನ್‌ ಸೌಲಭ್ಯವನ್ನು ಪಡೆದಿವೆ.

ಶಿಂಕೊ

ಹೌದು, ಶಿಂಕೊ ಕಂಪನಿಯು 49 ಇಂಚಿನ SO43AS, SO50QBT ಮತ್ತು SO55QBT ಹೆಸರಿನ ಸ್ಮಾರ್ಟ್‌ಟಿವಿಯನ್ನು ದೇಶದಲ್ಲಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿಗಳು ಕ್ರಮವಾಗಿ 43, 49 ಮತ್ತು 55 ಇಂಚಿನ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿವೆ. ಇದರೊಂದಿಗೆ ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ ನಂತಹ ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ಸೌಲಭ್ಯವನ್ನು ಪಡೆದಿದೆ. ಶಿಂಕೊ ಬಿಡುಗಡೆ ಮಾಡಿರುವ ಹೊಸ ಸ್ಮಾರ್ಟ್‌ ಟಿವಿಗಳು ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಡಿಸೈನ್‌ ಮತ್ತು ಡಿಸ್‌ಪ್ಲೇ

ಡಿಸೈನ್‌ ಮತ್ತು ಡಿಸ್‌ಪ್ಲೇ

ಶಿಂಕೊ 43 ಇಂಚಿನ SO43AS ಟಿವಿಯು ಪೂರ್ಣ ಹೆಚ್‌ಡಿ ಸಾಮರ್ಥ್ಯ ಪಡೆದಿದ್ದು, 1,920x1,080 ಪಿಕ್ಸಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ ಶಿಂಕೊ SO50QBT ಮತ್ತು SO55QBT ಟಿವಿಗಳು 4K UHD ಸಪೋರ್ಟ್‌ ಒಳಗೊಂಡಿದ್ದು, ಕ್ರಮವಾಗಿ 49 ಮತ್ತು 55 ಇಂಚಿನ 3,840x2,160 ಪಿಕ್ಸಲ್ ರೆಸಲ್ಯೂಶನ್ ಬೆಂಬಲ ಪಡೆದಿವೆ.

ಪ್ರೊಸೆಸರ್‌ ಶಕ್ತಿ

ಪ್ರೊಸೆಸರ್‌ ಶಕ್ತಿ

ಶಿಂಕೊ 43 ಇಂಚಿನ SO43AS ಟಿವಿಯು ಆಕ್ಟಾ ಕೋರ್ Cortex-A53 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 1GB RAM ಮತ್ತು 8GB ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಹಾಗೆಯೇ ಶಿಂಕೊ SO50QBT ಮತ್ತು SO55QBT ಟಿವಿಗಳು ಆಕ್ಟಾ ಕೋರ್ Cortex-A55 SoC ಪ್ರೊಸೆಸರ್ ಜೊತೆಗೆ 2GB RAM ಮತ್ತು 16GB ಸ್ಟೋರೇಜ್ ಸಂಗ್ರಹ ಪಡೆದಿವೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಶಿಂಕೊ SO43AS ಟಿವಿಯು 970x80x570mm ಸುತ್ತಳತೆ ಇದ್ದು, 7.63kg ತೂಕ ಹೊಂದಿದೆ. ಇನ್ನು ಶಿಂಕೊ SO50QBT ಸ್ಮಾರ್ಟ್‌ಟಿವಿಯು 1100x75x640mm ಸುತ್ತಳತೆ ಹೊಂದಿದ್ದು, 9.5kg ತೂಕ ಪಡೆದಿದೆ. ಹಾಗೆಯೇ SO55QBT ಸ್ಮಾರ್ಟ್‌ ಟಿವಿಯು 1240x82x718mm ಸುತ್ತಳತೆ ಒಳಗೊಂಡಿದ್ದು, 13kg ತೂಕವನ್ನು ಪಡೆದಿದೆ. ಶಿಂಕೊ SO43AS ಟಿವಿಯು ಬೆಲೆಯು 16,999ರೂ. ಆಗಿದೆ. ಇನ್ನು ಶಿಂಕೊ SO50QBT ಸ್ಮಾರ್ಟ್‌ಟಿವಿಯ ದರವು 24,250ರೂ.ಗಳಾಗಿದೆ. ಹಾಗೆಯೇ SO55QBT ಸ್ಮಾರ್ಟ್‌ ಟಿವಿಯು 28,299ರೂ. ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ.

Most Read Articles
Best Mobiles in India

English summary
The Shinco SO43AS is priced at Rs. 16,999, the Shinco SO50QBT is priced at Rs. 24,250.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X