ಜಿಯೋ ಸಂಸ್ಥೆಯಲ್ಲಿ 'ಸಿಲ್ವರ್ ಲೇಕ್‌' ಹೂಡಿಕೆ; ದೇಶದ ಡಿಜಿಟಲ್ ವಲಯಕ್ಕೆ ಬಲ!

|

ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಸಿಲ್ವರ್ ಲೇಕ್‌ 5,655.75 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಇಂದು ಘೋಷಿಸಿವೆ. ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.90 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.15 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದ್ದು, ಏಪ್ರಿಲ್ 22, 2020ರಂದು ಘೋಷಿಸಲಾದ ಫೇಸ್‌ಬುಕ್ ಹೂಡಿಕೆಯ ಹೋಲಿಕೆಯಲ್ಲಿ 12.5% ಪ್ರೀಮಿಯಂ ಅನ್ನು ಪ್ರತಿನಿಧಿಸುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಜಿಯೋದ ಮುಂಚೂಣಿ ಡಿಜಿಟಲ್ ಆಪ್‌ಗಳು, ಡಿಜಿಟಲ್ ಇಕೋಸಿಸ್ಟಂಗಳು ಹಾಗೂ ಭಾರತದ ನಂ.1 ಅತಿವೇಗದ ಸಂಪರ್ಕ ವೇದಿಕೆಯನ್ನು ಒಂದೇ ಛಾವಣಿಯಡಿ ತರುವ ಮೂಲಕ ಭಾರತಕ್ಕಾಗಿ ಡಿಜಿಟಲ್ ಸಮಾಜವನ್ನು ರೂಪಿಸುತ್ತಿರುವ ಮುಂದಿನ ಪೀಳಿಗೆಯ ತಂತ್ರಜ್ಞಾನ ಸಂಸ್ಥೆಯಾಗಿದೆ. 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿಗೆ ಸಂಪರ್ಕ ವೇದಿಕೆಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಜಿಯೋ ಪ್ಲಾಟ್‌ಫಾರ್ಮ್‌ಗಳ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರಲಿದೆ.

ಶತಕೋಟಿ ಭಾರತೀಯರು

1.3 ಶತಕೋಟಿ ಭಾರತೀಯರು ಹಾಗೂ ಭಾರತೀಯ ಉದ್ಯಮಗಳಿಗೆ, ಅದರಲ್ಲೂ ವಿಶೇಷವಾಗಿ ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರಿಗೆ, ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ. ಭಾರತೀಯ ಡಿಜಿಟಲ್ ಸೇವೆಗಳ ಕ್ಷೇತ್ರವನ್ನು ಪರಿವರ್ತಿಸುವ ಬದಲಾವಣೆಗಳನ್ನು ಜಿಯೋ ತಂದಿದೆ ಹಾಗೂ ವಿಶ್ವದ ಪ್ರಮುಖ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದಾಗಿ ಜಾಗತಿಕ ತಂತ್ರಜ್ಞಾನ ನಾಯಕತ್ವದ ಸ್ಥಾನ ಪಡೆಯುವತ್ತ ಭಾರತವನ್ನು ಮುನ್ನಡೆಸಿದೆ.

ಕೋವಿಡ್-19

ಜಗತ್ತಿನೆಲ್ಲೆಡೆ ಹಾಗೂ ವಿಶೇಷವಾಗಿ ಭಾರತದಲ್ಲಿ ಕೋವಿಡ್-19 ಜಾಗತಿಕ ಸೋಂಕು ಉಂಟುಮಾಡಿರುವ ತೀವ್ರ ಆರ್ಥಿಕ ಅಡಚಣೆಗಳ ಹಿನ್ನೆಲೆಯಲ್ಲಿ, ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಹೂಡಿಕೆದಾರರಲ್ಲಿ ಒಂದಾದ ಸಿಲ್ವರ್ ಲೇಕ್ ಜೊತೆಗಿನ ಈ ಪಾಲುದಾರಿಕೆಗೆ ವಿಶಿಷ್ಟ ಮಹತ್ವ ದೊರೆತಿದೆ. ಭಾರತೀಯ ಅರ್ಥವ್ಯವಸ್ಥೆಯನ್ನು ಪುನರುತ್ಥಾನದಲ್ಲಿ ಸಮಗ್ರ ಡಿಜಿಟಲೀಕರಣವು ಮಹತ್ವದ ಪಾತ್ರ ವಹಿಸಲಿದೆ. ಭಾರತದ 360-ಡಿಗ್ರಿ ಡಿಜಿಟಲ್ ರೂಪಾಂತರದಲ್ಲಿ, ಹೊಸ ಉದ್ಯೋಗ ಮತ್ತು ಉದ್ಯಮಗಳೂ ಸೇರಿದಂತೆ ಸೃಷ್ಟಿಯಾಗುವ ಮಹತ್ತರ ಅವಕಾಶಗಳಿಂದ ಯಾರೂ ವಂಚಿತರಾಗಬಾರದು ಎನ್ನುವುದು ನಮ್ಮ ದೃಢವಾದ ನಂಬಿಕೆಯಾಗಿದೆ.

ತಂತ್ರಜ್ಞಾನ-ಸಶಕ್ತ ಅವಕಾಶ

ನಿರ್ವಹಣೆ ಮತ್ತು ಬದ್ಧ ಬಂಡವಾಳದ ಅಡಿಯಲ್ಲಿ ಸುಮಾರು $40 ಬಿಲಿಯನ್ ಸಂಯೋಜಿತ ಆಸ್ತಿ, ಹಾಗೂ ಪ್ರಪಂಚದ ಅತ್ಯುತ್ತಮ ತಂತ್ರಜ್ಞಾನ ಮತ್ತು ತಂತ್ರಜ್ಞಾನ-ಸಶಕ್ತ ಅವಕಾಶಗಳತ್ತ ಕೇಂದ್ರೀಕೃತ ಗಮನ ಹೊಂದಿರುವ ಸಿಲ್ವರ್ ಲೇಕ್, ದೊಡ್ಡ ಪ್ರಮಾಣದ ತಂತ್ರಜ್ಞಾನ ಹೂಡಿಕೆಯಲ್ಲಿ ಜಾಗತಿಕ ನಾಯಕತ್ವದ ಸ್ಥಾನದಲ್ಲಿದೆ. ವಿಶ್ವದರ್ಜೆಯ ನಿರ್ವಹಣಾ ತಂಡಗಳ ಜೊತೆ ಪಾಲುದಾರಿಕೆಯಲ್ಲಿ ಅತ್ಯುತ್ತಮ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಅದರ ಗುರಿಯಾಗಿದೆ. ಏರ್‌ಬಿಎನ್‌ಬಿ, ಅಲಿಬಾಬ, ಆಂಟ್ ಫೈನಾನ್ಶಿಯಲ್, ಆಲ್ಫಾಬೆಟ್‌ನ ವೆರಿಲಿ ಮತ್ತು ವೇಮೋ ವಿಭಾಗಗಳು, ಡೆಲ್ ಟೆಕ್ನಾಲಜೀಸ್, ಟ್ವಿಟರ್ ಹಾಗೂ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿಯಲ್ಲಿರುವ ಇನ್ನಿತರ ಸಂಸ್ಥೆಗಳು ಅದರ ಹೂಡಿಕೆಗಳ ಪಟ್ಟಿಯಲ್ಲಿವೆ.

ಸ್ಮಾರ್ಟ್ ಸಾಧನ

ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿ ಜಿಯೋ ರೂಪಿಸಿರುವ ವಿಶ್ವದರ್ಜೆಯ ಡಿಜಿಟಲ್ ವೇದಿಕೆಯ ಸಾಮರ್ಥ್ಯಕ್ಕೆ ಸಿಲ್ವರ್ ಲೇಕ್‌ನ ಈ ಹೂಡಿಕೆಯು ಇನ್ನಷ್ಟು ಸಾಕ್ಷಿ ಒದಗಿಸುತ್ತಿದೆ.

ಮುಖೇಶ್ ಅಂಬಾನಿ

ಸಿಲ್ವರ್ ಲೇಕ್ ಜೊತೆಗಿನ ವಹಿವಾಟಿನ ಬಗ್ಗೆ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಮುಖೇಶ್ ಅಂಬಾನಿ, "ಭಾರತೀಯರೆಲ್ಲರ ಪ್ರಯೋಜನಕ್ಕಾಗಿ ಭಾರತದ ಡಿಜಿಟಲ್ ಇಕೋಸಿಸ್ಟಂ‌ನ ಬೆಳವಣಿಗೆ ಹಾಗೂ ರೂಪಾಂತರವನ್ನು ಮುಂದುವರೆಸುವಲ್ಲಿ ಸಿಲ್ವರ್ ಲೇಕ್ ಅನ್ನು ಒಬ್ಬ ಮೌಲ್ಯಯುತ ಪಾಲುದಾರನಾಗಿ ಸ್ವಾಗತಿಸಲು ನಾನು ಸಂತೋಷಪಡುತ್ತೇನೆ. ಜಾಗತಿಕವಾಗಿ ಪ್ರಮುಖ ತಂತ್ರಜ್ಞಾನ ಕಂಪನಿಗಳಿಗೆ ಅಮೂಲ್ಯವಾದ ಪಾಲುದಾರನಾಗಿರುವ ಅತ್ಯುತ್ತಮ ದಾಖಲೆ ಸಿಲ್ವರ್ ಲೇಕ್‌ನದು. ತಂತ್ರಜ್ಞಾನ ಮತ್ತು ಹಣಕಾಸು ಕ್ಷೇತ್ರದ ಅತ್ಯಂತ ಗೌರವಾನ್ವಿತ ಧ್ವನಿಗಳಲ್ಲಿ ಸಿಲ್ವರ್ ಲೇಕ್ ಕೂಡ ಒಂದು. ಅವರ ಜಾಗತಿಕ ತಂತ್ರಜ್ಞಾನ ಸಂಬಂಧಗಳಿಂದ ಭಾರತದ ಡಿಜಿಟಲ್ ಸಮಾಜದ ರೂಪಾಂತರಕ್ಕಾಗಿ ಒಳನೋಟಗಳನ್ನು ಪಡೆಯಲು ನಾವು ಉತ್ಸುಕರಾಗಿದ್ದೇವೆ." ಎಂದು ಹೇಳಿದ್ದಾರೆ.

ಜಿಯೋ ಪ್ಲಾಟ್‌ಫಾರ್ಮ್ಸ್

ಹೂಡಿಕೆಯ ಬಗ್ಗೆ ಮಾತನಾಡಿದ ಸಿಲ್ವರ್ ಲೇಕ್ ಜಂಟಿ-ಸಿಇಓ ಮತ್ತು ವ್ಯವಸ್ಥಾಪಕ ಪಾಲುದಾರ ಶ್ರೀ ಈಗಾನ್ ಡರ್ಬನ್, "ಧೈರ್ಯಶಾಲಿ ದೂರದೃಷ್ಟಿಗೆ ಚಾಲನೆ ನೀಡುತ್ತಿರುವ ಮತ್ತು ವಾಸ್ತವಿಕಗೊಳಿಸುತ್ತಿರುವ, ನಂಬಲಾರದಷ್ಟು ಸದೃಢ ಹಾಗೂ ಉದ್ಯಮಶೀಲ ನಿರ್ವಹಣಾ ತಂಡದ ನೇತೃತ್ವವಿರುವ ಜಿಯೋ ಪ್ಲಾಟ್‌ಫಾರ್ಮ್ಸ್ ವಿಶ್ವದ ಅತ್ಯಂತ ಗಮನಾರ್ಹ ಸಂಸ್ಥೆಗಳಲ್ಲಿ ಒಂದಾಗಿದೆ. ಕಡಿಮೆ ವೆಚ್ಚದ ಡಿಜಿಟಲ್ ಸೇವೆಗಳ ಶಕ್ತಿಯನ್ನು ಸಾಮಾನ್ಯ ಗ್ರಾಹಕರಿಗೆ ಹಾಗೂ ಸಣ್ಣ ಉದ್ಯಮಗಳಿಗೆ ತಲುಪಿಸಲು ಅವರು ಅಸಾಧಾರಣ ಇಂಜಿನಿಯರಿಂಗ್ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅವರ ಗುರಿಯಾಗಿರುವ ಮಾರುಕಟ್ಟೆಯ ಸಾಮರ್ಥ್ಯವು ಅಗಾಧವಾಗಿದೆ. ಜಿಯೋದ ಗುರಿಯನ್ನು ವಿಸ್ತರಿಸುವಲ್ಲಿ ಮುಖೇಶ್ ಅಂಬಾನಿ ಹಾಗೂ ರಿಲಯನ್ಸ್ ಹಾಗೂ ಜಿಯೋದಲ್ಲಿನ ತಂಡದೊಡನೆ ಪಾಲುದಾರರಾಗಲು ಆಮಂತ್ರಣ ಪಡೆದಿದ್ದಕ್ಕೆ ನಾವು ಗೌರವಿತರಾಗಿದ್ದೇವೆ ಹಾಗೂ ಸಂತೋಷಿಸುತ್ತೇವೆ" ಎಂದು ಹೇಳಿದ್ದಾರೆ.

Most Read Articles
Best Mobiles in India

English summary
Silver Lake will invest Rs 5,655.75 crore into Jio Platforms.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more