ಭಾರತದಲ್ಲಿ ಮೊದಲ ಲೋಕಲ್‌ ಗೇಮ್ಸ್‌ ಪ್ರಾರಂಭಿಸಿದ ಸ್ನ್ಯಾಪ್‌ಚಾಟ್‌!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ನ್ಯಾಪ್‌ಚಾಟ್‌ ಕೂಡ ಒಂದಾಗಿದೆ. ತನ್ನ ವಿಶೇಷ ಫೀಚರ್ಸ್‌ಗಳಿಂದ ಬಳಕೆದಾರರನ್ನು ಸೆಳೆದಿದೆ. ಸದ್ಯ ಇದೀಗ ಸ್ನ್ಯಾಪ್‌ಚಾಟ್‌ ಭಾರತದಲ್ಲಿ ಮೊದಲ ಲೋಕಲ್‌ ಸ್ನ್ಯಾಪ್ ಗೇಮ್ಸ್ "ಲುಡೋ ಕ್ಲಬ್" ಅನ್ನು ಪರಿಚಯಿಸಿದೆ. ಇದಕ್ಕಾಗಿ ಬೆಂಗಳೂರು ಮೂಲದ ಗೇಮಿಂಗ್ ಕಂಪನಿಯಾದ ಮೂನ್‌ಫ್ರಾಗ್ ಲ್ಯಾಬ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಇದು ಸ್ನ್ಯಾಪ್‌ಚಾಟ್ ಬಳಕೆದಾರರು ತಮ್ಮ ಸ್ನೇಹಿತರೊಂದಿಗೆ ಆಡಬಹುದಾದ ಗೇಮಿಂಗ್‌ ವಿಶೇಷ, ಕಸ್ಟಮ್ ನಿರ್ಮಿತ ಆವೃತ್ತಿಯಾಗಿದೆ.

ಸ್ನ್ಯಾಪ್‌ಚಾಟ್‌

ಹೌದು, ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಲೋಕಲ್‌ ಸ್ನ್ಯಾಪ್‌ಗೇಮ್ಸ್‌ ಲುಡೋ ಕ್ಲಬ್‌ ಅನ್ನು ಭಾರತದಲ್ಲಿ ಪ್ರಾರಂಭಿಸಿದೆ. ಈ ಮೂಲಕ ಭಾರತದ ಸ್ಥಳೀಯ ಗೇಮ್‌ಗಳತ್ತ ಸ್ನ್ಯಾಪ್‌ಚಾಟ್‌ ಗಮನಹಿರಿಸಿದೆ. ಇದಕ್ಕಾಗಿ ಕೆಲವು ಗೇಮಿಂಗ್‌ ಕಂಪೆನಿಗಳ ಜೊತೆಗೆ ಪಾಲುದರಿಕೆಯನ್ನು ಹೊಂದಿದೆ. ಇದು ಇಲ್ಲಿಯವರೆಗೆ ಪಿಕ್‌ಪಾಕ್, ಸ್ಪ್ರೈ ಫಾಕ್ಸ್, ಗೇಮ್ ಕ್ಲೋಸರ್, ಜೆಪ್ಟೋಲ್ಯಾಬ್, ಮೊಜಿವರ್ಕ್ಸ್ ಮತ್ತು ಗಿಸ್ಮಾರ್ಟ್ ಸೇರಿದಂತೆ ಗೇಮಿಂಗ್ ಡೆವಲಪರ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಹಾಗಾದ್ರೆ ಸ್ನ್ಯಾಪ್‌ಚಾಟ್‌ ಪರಿಚಯಿಸಿರುವ ಗೇಮ್‌ ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲುಡೋ

ಸದ್ಯ ಲುಡೋ ಕ್ಲಬ್ ಭಾರತದಲ್ಲಿ ಸ್ನ್ಯಾಪ್‌ಚಾಟ್ ಪರಿಚಯಿಸಿರುವ ಮೊದಲ ಲೋಕಲ್‌ ಗೇಮ್‌ ಆಗಿದೆ. ಈ ಮೂಲಕ ಭಾರತದಲ್ಲಿ ಸ್ಥಳಿಯ ಗೇಮ್‌ಗಳ ಕೊರತೆಯನ್ನು ನೀಗಿಸಿದೆ. ಇನ್ನು ಈಗೇಮ್‌ಗಳನ್ನು ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ನಲ್ಲಿ ಆಡಬಹುದಾಗಿದೆ. ಸ್ನ್ಯಾಪ್‌ಚಾಟ್ ದೇಶದಲ್ಲಿ ಮೊದಲ ಸ್ನ್ಯಾಪ್ ಒರಿಜಿನಲ್ "ಫೋನ್ ಸ್ವಾಪ್ ಇಂಡಿಯಾ" ಅನ್ನು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಈ ಹೊಸ ಗೇಮ್‌ ಅನ್ನು ಪರಿಚಯಿಸಿದೆ. ಇದು ವಿಆರ್ ದಾಸ್ ಅವರೊಂದಿಗೆ ಹೊಸ ಹಾಸ್ಯ ಸರಣಿಯನ್ನು ಪ್ರಾರಂಭಿಸುತ್ತಿದೆ, ಇದು ಒಎಂಎಲ್‌ನೊಂದಿಗೆ ಬರುವ ರಾಫ್ಟಾರ್‌ನಲ್ಲಿ ವಿಶೇಷ ಸರಣಿಯಾಗಿದೆ. ಸದ್ಯ ಭಾರತದಲ್ಲಿ 150% ನಷ್ಟು ಬೆಳವಣಿಗೆ ಕಂಡುಬಂದಿದ್ದು, 60 ದಶಲಕ್ಷಕ್ಕೂ ಹೆಚ್ಚಿನ ಬಳಕೆದಾರರನ್ನು ತಲುಪಿದೆ ಎಂದು ಕಂಪನಿ ತಿಳಿಸಿದೆ.

ಸ್ನ್ಯಾಪ್‌ಚಾಟ್‌

ಇನ್ನು ಸ್ನ್ಯಾಪ್‌ಚಾಟ್‌ನ ಚಾಟ್ ಫೀಚರ್ಸ್‌ನಲ್ಲಿ ಸ್ನ್ಯಾಪ್ ಗೇಮ್‌ಗಳು ಲಭ್ಯವಿದೆ. ಇದನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ. ಬಳಕೆದಾರರು ಈ ಆಟಗಳನ್ನು ನೇರವಾಗಿ ಚಾಟ್‌ನಿಂದ ಆಡಲು ಪ್ರಾರಂಭಿಸಬಹುದು. ನಾವು ಚಾಟ್‌ನೊಂದಿಗೆ ಸುತ್ತುವರೆದಿರುವಂತೆ ಸ್ನ್ಯಾಪ್ ಗೇಮ್‌ಗಳನ್ನು ವಿನ್ಯಾಸಗೊಳಿಸಿದ್ದೇವೆ ಏಕೆಂದರೆ ನೀವು ಚಾಟ್ ಮಾಡುವ ವಿಷಯಗಳಿಗಿಂತ ಸ್ನೇಹವೇ ಹೆಚ್ಚು ಎಂದು ನಾವು ನಂಬುತ್ತೇವೆ, ಎಂದು ಸಂಸ್ಥೆ ಹೇಳಿಕೊಂಡಿದೆ. ಸದ್ಯ ಬಿಟ್ಮೊಜಿ ಪಾರ್ಟಿ, ಆಲ್ಫಾಬಿಯರ್ ಹಸ್ಲ್, ಸಿ.ಎ.ಟಿ.ಎಸ್ ಸೇರಿದಂತೆ ಆರು ಆಟಗಳೊಂದಿಗೆ ಸ್ನ್ಯಾಪ್ ಗೇಮ್ಸ್ ಪ್ರಾರಂಭಿಸಲಾಗಿದೆ. ಡ್ರಿಫ್ಟ್ ರೇಸ್ ಮತ್ತು ಸ್ನೇಕ್ ಸ್ಕ್ವಾಡ್ ಕೂಡ ಸೇರಿದೆ.

ಕಳೆದ

ಇದು ಕಳೆದ ವರ್ಷದಲ್ಲಿ ಹೆಚ್ಚಿನ ಆಟಗಳನ್ನು ಪರಿಚಯಿಸಿದೆ ಮತ್ತು ಗಮನಾರ್ಹ ಬಳಕೆದಾರ ಚಟುವಟಿಕೆಯನ್ನು ಕಂಡಿದೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, 2019 ರಲ್ಲಿ ಪ್ರಾರಂಭವಾದ ಸ್ನ್ಯಾಪ್‌ಚಾಟ್‌ ಪಾಲುದಾರ ಗಿಸ್ಮಾರ್ಟ್‌ನ ಚೊಚ್ಚಲ ಆಟ ಕಲರ್ ಗ್ಯಾಲಕ್ಸಿ 41 ದಶಲಕ್ಷಕ್ಕೂ ಹೆಚ್ಚು ಸ್ನ್ಯಾಪ್‌ಚಾಟರ್‌ಗಳು ಮತ್ತು ಕ್ರೇಜಿ ರನ್ ಆಡಿದೆ. ಈಗಾಗಲೇ 7 ಮಿಲಿಯನ್ ಆಟಗಾರರನ್ನು ತಲುಪಿದೆ.

Most Read Articles
Best Mobiles in India

English summary
Snapchat launched “Ludo Club”, its first local Snap Games in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X