ಬಿಎಸ್‌ಎನ್‌ಎಲ್‌ ಫ್ಯಾನ್ಸಿ ನಂಬರ್‌ಗಾಗಿ ಈತ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

|

ಬಿಎಸ್‌ಎನ್‌ಎಲ್‌ ವಿಚಾರದಲ್ಲಿ ನಡೆದಿರುವ ಈ ಘಟನೆ ನಿಜಕ್ಕೂ ಅಚ್ಚರಿಯೆನಿಸಲಿದೆ. ಮಾತ್ರವಲ್ಲ ಬಿಎಸ್‌ಎನ್‌ಎಲ್‌ ತನ್ನ ಜನಪ್ರಿಯತೆಯನ್ನು ಇನ್ನು ಹೇಗೆ ಉಳಿಸಿಕೊಂಡಿದೆ ಅನ್ನೊದಕ್ಕೆ ಇದು ಸಾಕ್ಷಿಯಾಗಿದೆ. ನಿಜ ನಮ್ಮ ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳ ಮುಂದೆ ಬಿಎಸ್‌ಎನ್‌ಎಲ್‌ ಸಾಕಷ್ಟು ಪೈಪೋಟಿ ನಡೆಸುತ್ತಿದೆ. ಹೆಚ್ಚಿನ ಜನರ ಮೊದಲ ಆಯ್ಕೆ ಖಾಸಗಿ ಟೆಲಿಕಾಂಗಳೇ ಆಗಿವೆ. ಇಂತಹ ಸನ್ನಿವೇಶದಲ್ಲಿ ಬಿಎಸ್‌ಎನ್‌ಎಲ್‌ ವಿಐಪಿ ಸಂಖ್ಯೆಗಾಗಿ ವ್ಯಕ್ತಿಯೊಬ್ಬ ಲಕ್ಷಗಟ್ಟಲೇ ಹಣ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಬಿಎಸ್‌ಎನ್‌ಎಲ್‌

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ತನ್ನ ವಿಐಪಿ ಸಂಖ್ಯೆಯನ್ನು ನೀಡುವ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ಬಿಎಸ್‌ಎನ್‌ಎಲ್‌ ವಿಐಪಿ ಫ್ಯಾನ್ಸಿ ನಂಬರ್‌ ಖರೀದಿಸುವುದಕ್ಕಾಗಿ ರಾಜಸ್ಥಾನದ ವ್ಯಕ್ತಿಯೊಬ್ಬ 2.4 ಲಕ್ಷ ನೀಡಿದ್ದಾನೆ ಎನ್ನಲಾಗಿದೆ. ಅದರಲ್ಲೂ ಆತನೊಬ್ಬ ಆಲೂಗಡ್ಡೆ ವ್ಯಾಪಾರಿ ಅನ್ನೊದು ಇನ್ನು ವಿಶೇಷ. ಇನ್ನು ಈ ವಿಐಪಿ ಅಥವಾ ಇತರ ಫ್ಯಾನ್ಸಿ ಸಂಖ್ಯೆಗಳು ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ನೀಡದಿದ್ರೂ, ಫ್ಯಾನ್ಸಿ ನಂಬರ್‌ ಮೇಲಿನ ಮೋಹ ಇಷ್ಟು ಹಣ ನೀಡಿ ಖರೀದಿಸುವಂತೆ ಮಾಡಿದೆ ಎನ್ನಲಾಗಿದೆ. ಹಾಗಾದ್ರೆ ಆಲೂಗೆಡ್ಡೆ ವ್ಯಾಪಾರಿ ಖರೀದಿಸಿದ ಫ್ಯಾನ್ಸಿ ನಂಬರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಎಸ್‌ಎನ್‌ಎಲ್‌

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ತನ್ನ ಫ್ಯಾನ್ಸಿ ಅಥವಾ ವಿಐಪಿ ಸಂಖ್ಯೆಯನ್ನು ರಾಜಸ್ತಾನದ ಕೋಟಾ ಜಿಲ್ಲೆಯ ಆಲೂಗಡ್ಡೆ ವ್ಯಾಪಾರಿ 2.4 ಲಕ್ಷ ನೀಡಿ ಖರೀದಿಸಿದ್ದಾರೆ ಎನ್ನಲಾಗಿದೆ. ಆರು ಸೊನ್ನೆಗಳೊಂದಿಗೆ ಕೊನೆಗೊಳ್ಳುವ ಈ ಬಿಎಸ್‌ಎನ್‌ಎಲ್ ವಿಐಪಿ ಸಂಖ್ಯೆಯು ಬಿಎಸ್‌ಎನ್‌ಎಲ್‌ನ ಆನ್‌ಲೈನ್ ಪೋರ್ಟಲ್‌ನಲ್ಲಿ ಮಾರಾಟಕ್ಕಿತ್ತು. ಇದಕ್ಕಾಗಿ ಸಾಕಷ್ಟು ಮಂದಿ ಬಿಡ್‌ ಮಾಡಿದ್ದರು ಎನ್ನಲಾಗಿದೆ. ಸಾಕಷ್ಟು ಕುತೂಹಲದಿಂದ ಸಾಗಿದ ಈ ಬಿಡ್‌ನಲ್ಲಿ ಅಂತಿಮವಾಗಿ ರಾಜಸ್ತಾನದ ಆಲೂಗೆಡ್ಡೆ ವ್ಯಾಪಾರಿಯಾದ ತನುಜ್ ದುಡೇಜಾ ಎಂಬ ವ್ಯಕ್ತಿ ಬಿಡ್‌ ಗೆದ್ದಿದ್ದಾರೆ.

ಬಿಎಸ್‌ಎನ್‌ಎಲ್

ಇನ್ನು ಬಿಎಸ್‌ಎನ್‌ಎಲ್ ವಿಐಪಿ ಸಂಖ್ಯೆಯ ಬಿಡ್‌ ಒಂದು ವಾರದವರೆಗೂ ನಡೆದಿದೆ. ವಾಸ್ತವವಾಗಿ ಕೇವಲ 20,000ರೂ.ಗಳಿಂದ ಪ್ರಾರಂಭವಾಗಿದ್ದ ಈ ಬಿಡ್‌ ನಿರೀಕ್ಷೆಗೂ ಮೀರಿ 2 ಲಕ್ಷದ ಗಡಿ ದಾಟಿದೆ. ಸದ್ಯ ಬಿಡ್‌ ಗೆದ್ದ ರಾಜಸ್ತಾನದ ತನುಜ್ ದುಡೇಜಾ ಫರೂಕಾಬಾದ್‌ನಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಯಿಂದ ತಮ್ಮ ಫ್ಯಾನ್ಸಿ ನಂಬರ್‌ ಪಡೆದುಕೊಂಡಿದ್ದಾರೆ. ಹಾಗೇ ನೋಡಿದ್ರೆ ಬಿಎಸ್‌ಎನ್‌ಎಲ್‌ನ ಫ್ಯಾನ್ಸಿ ಸಂಖ್ಯೆ ಪಡೆಯಲು ನೀಡಿರುವ ಮೊತ್ತದಲ್ಲಿ 3 iPhone 13 ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದಾಗಿದೆ.

ಬಿಎಸ್‌ಎನ್‌ಎಲ್‌

ಇನ್ನು ರಾಜಸ್ತಾನದ ತನುಜ್ ದುಡೇಜಾ ಅವರು ವಿಐಪಿ ಫ್ಯಾನ್ಸಿ ಮೊಬೈಲ್ ನಂಬರ್‌ಗಳನ್ನು ಪಡೆದುಕೊಂಡಿರುವುದು ಇದೇ ಮೊದಲಲ್ಲ ಎನ್ನಲಾಗಿದೆ. ಫ್ಯಾನ್ಸಿ ನಂಬರ್‌ ಖರೀದಿಸುವುದು ಅವರಿಗೊಂದು ಹವ್ಯಾಸವಾಗಿದ್ದು,ಈ ಹಿಂದೆ ಕೂಡ 1 ಲಕ್ಷ ರೂ ಬೆಲೆಗೆ ಫ್ಯಾನ್ಸಿ ನಂಬರ್‌ ಖರೀದಿಸಿದ್ದರು ಎನ್ನುವ ಇಂಟ್ರೆಸ್ಟಿಂಗ್‌ ವಿಚಾರ ಬಹಿರಂಗವಾಗಿದೆ. ಇನ್ನು ಬಿಎಸ್‌ಎನ್‌ಎಲ್‌ ಟೆಲಿಕಾಂ ಫ್ಯಾನ್ಸಿ ನಂಬರ್‌ಗಳನ್ನು ಬಿಎಸ್‌ಎನ್‌ಎಲ್ ವೆಬ್‌ಸೈಟ್‌ನಿಂದ ಹರಾಜಿನ ಮೂಲಕ ಖರೀದಿಸಬಹುದು.

BSNL

BSNL ನ ಅನೇಕ ಫ್ಯಾನ್ಸಿ ನಂಬರ್‌ಗಳು ಬಿಎಸ್‌ಎನ್‌ಎಲ್‌ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ನೀವು ಕೂಡ ಫ್ಯಾನ್ಸಿ ನಂಬರ್‌ ಬಯಸಿದರೆ ಹರಾಜಿನಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ. ಅಷ್ಟೇ ಅಲ್ಲ ಫ್ಯಾನ್ಸಿ ಸಂಖ್ಯೆಗಳನ್ನು ನೋಡಲು ಬಯಸಿದರೆ, BSNL ವೆಬ್‌ಸೈಟ್‌ಗೆ ಭೇಟಿ ನೀಡಿ 'ಮೊಬೈಲ್ ಮತ್ತು ಡೇಟಾ' ಡ್ರಾಪ್‌ಡೌನ್ ಮೆನುವಿನಲ್ಲಿರುವ "ಫ್ಯಾನ್ಸಿ ಸಂಖ್ಯೆಗಳ ಹರಾಜು" ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದಾಗಿದೆ.

BSNL

ಇನ್ನು ಇತ್ತೀಚಿಗೆ BSNL ಭಾರತದಲ್ಲಿ Inmarsat ನ ಗ್ಲೋಬಲ್ Xpress (GX) ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡಲು ಪರವಾನಗಿಯನ್ನು ಪಡೆದಿದೆ. ಇದು Inmarsat ಟರ್ಮಿನಲ್‌ಗಳು ಮತ್ತು ಮೂಲಸೌಕರ್ಯಗಳನ್ನು ಬಳಸಿಕೊಂಡು ವಿಮಾನಯಾನ ಮತ್ತು ಹಡಗುಗಳಿಗೆ ಹೆಚ್ಚಿನ ವೇಗದ ವಿಮಾನ ಮತ್ತು ಕಡಲ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ ಎನ್ನಲಾಗಿದೆ. ಸ್ಪೈಸ್‌ಜೆಟ್ ಲಿಮಿಟೆಡ್ ಮತ್ತು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಈಗಾಗಲೇ ಹೊಸ GX ಸೇವೆಗಳಿಗೆ ಸಹಿ ಹಾಕಿವೆ, ಇದು 50Mbps ವರೆಗಿನ ಸಾಮರ್ಥ್ಯವನ್ನು ತೆರೆಯುತ್ತದೆ ಎಂದು ವರದಿಯಾಗಿದೆ.

ಬಿಎಸ್‌ಎನ್‌ಎಲ್‌

ಇದಲ್ಲದೆ ಇನ್ನು ಇತ್ತೀಚಿಗೆ ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂಗಳ ಹಾದಿಯಲ್ಲಿಯೇ ಹೆಜ್ಜೆಹಾಕಿದೆ. ಇದಕ್ಕೆ ಪೂರಕ ಎಂಬಂತೆ ಕೆಲ ದಿನಗಳ ಹಿಂದೆ ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ ಬಿಎಸ್‌ಎನ್‌ಎಲ್‌ ಸೆಲ್ಫ ಕೇರ್‌ ಎಂಬ ಹೊಸ ಆಪ್ ಅನ್ನು ಬಿಡುಗಡೆ ಮಾಡಿದೆ. ಇದು ಗೂಗಲ್ ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್‌ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್‌ ಮೂಲಕ ಪ್ರಿಪೇಯ್ಡ್ ಮೊಬೈಲ್ ಪ್ಲಾನ್‌ಗಳು, ಮುಖ್ಯ ಖಾತೆಯ ಬ್ಯಾಲೆನ್ಸ್, ಪ್ಲಾನ್ ವ್ಯಾಲಿಡಿಟಿ, ಇತ್ತೀಚಿನ ಆಫರ್‌ಗಳು ಇತ್ಯಾದಿ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.

Most Read Articles
Best Mobiles in India

English summary
BSNL number check: The VIP number was special as it had as many as six zeros and was bought by a potato trader.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X