ಆರು ತಿಂಗಳುಗಳ ಕಾಲ ಈತನ ಹೊಟ್ಟೆಯಲ್ಲಿತ್ತು ಮೊಬೈಲ್‌! ಮುಂದೆ ಆಗಿದ್ದೇನು?

|

ವ್ಯಕ್ತಿಯೊಬ್ಬನ ಹೊಟ್ಟೆಯೊಳಗೆ ಆರು ತಿಂಗಳುಗಳ ಕಾಲ ಇದ್ದ ಮೊಬೈಲ್‌ ಅನ್ನು ಹೊರತೆಗೆದಿರುವ ಘಟನೆ ಈಜಿಪ್ಟ್‌ನಲ್ಲಿ ನಡೆದಿದೆ. ಹೊಟ್ಟೆ ನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಹೊಟ್ಟೆಯೊಳಗೆ ಮೊಬೈಲ್‌ ಕಂಡ ವೈದ್ಯರು ಶಾಕ್‌ ಆಗಿದ್ದಾರೆ. ಹೊಟ್ಟೆಯ ನೋವು ಎಂದು ಆಸ್ಪತ್ರೆಗೆ ಬಂದ ವ್ಯಕ್ತಿಯ ಹೊಟ್ಟೆ ಭಾಗವನ್ನು ಎಕ್ಸ್‌ರೇ ತೆಗೆದಾಗ ಆತನ ಹೊಟ್ಟೆಯಲ್ಲಿ ಮೊಬೈಲ್‌ ಇರೋದು ಪತ್ತೆಯಾಗಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಏನೆಂದರೆ ಆರು ತಿಂಗಳ ಹಿಂದೆ ಆತನೇ ಫೋನ್‌ ಅನ್ನು ನುಂಗಿದ್ದ ಎನ್ನಲಾಗಿದೆ.

ಮೊಬೈಲ್‌

ಹೌದು, ಪ್ರಪಂಚದಲ್ಲಿ ಎಂತೆಂತಹ ವ್ಯಕ್ತಿಗಳು ಇರುತ್ತಾರೆ ಎಂದರೆ ನಂಬಲಿಕ್ಕೂ ಕೂಡ ಸಾದ್ಯವಿಲ್ಲ. ಅದರಂತೆ ಇಲ್ಲೊಬ್ಬ ಬೂಪ ಮೊಬೈಲ್‌ ಅನ್ನು ನುಂಗಿದ್ದಲ್ಲದೆ ಅದು ಮಲವಿಸರ್ಜನೆ ಮೂಲಕ ಹೊರಬರಲಿದೆ ಎಂದು ಆರು ತಿಂಗಳುಗಳ ಕಾಲ ಕಾದಿದ್ದಾನೆ. ಯಾವಾಗ ಮೊಬೈಲ್‌ ಹೊರಬರದೇ ಹೊಟ್ಟೆಯಲ್ಲಿ ನೋವು ಹೆಚ್ಚಾಯ್ತು ಆಗ ವೈದ್ಯರ ಬಳಿಗೆ ಬಂದಿದ್ದಾರೆ. ಅಷ್ಟೇ ಅಲ್ಲ ಮೊಬೈಲ್‌ ಮಲವಿಸರ್ಜನೆ ಮೂಲಕ ಹೋಗುತ್ತದೆ ಎಂದು ಕಾದಿದ್ದೆ ಎನ್ನುವ ಉತ್ತರವನ್ನು ನೀಡಿದ್ದಾನೆ.

ಮೊಬೈಲ್‌

ಈಜಿಪ್ಟ್‌ನಲ್ಲಿ ನಡೆದಿರುವ ಈ ಘಟನೆ ನಿಜಕ್ಕೂ ಅಚ್ಚರಿಯೆನಿಸಲಿದೆ. ಮೊಬೈಲ್‌ ಅನ್ನು ನುಂಗಿದ ನಂತರ ಆತ ಆರು ತಿಂಗಳುಗಳ ಕಾಲ ಹೇಗಿದ್ದ ಅನ್ನೊದೇ ಅಶ್ಚರ್ಯಕರವಾಗಿದೆ. ಆದರೂ ಕೂಡ ಆತ ಮೊದಲಿಗೆ ವೈದ್ಯರ ಬಳಿ ಮೊಬೈಲ್‌ ನುಂಗಿರುವ ವಿಚಾರ ಬಾಯ್ಬಿಟ್ಟಿಲ್ಲ. ಬದಲಿಗೆ ಹೊಟ್ಟೆ ಕೆಟ್ಟಿದ್ದು, ವಿಪರೀತ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ ವೈದ್ಯರು ಎಕ್ಸ್‌ರೇ ತೆಗೆದು ನೋಡಿ ಆತನ ಹೊಟ್ಟೆಯಲ್ಲಿ ಫೋನ್ ಕಂಡು ಆಘಾತಕ್ಕೊಳಗಾಗಿದ್ದಾರೆ. ಇದೆಲ್ಲಾ ನಡೆದ ಮೇಲೆ ಆತ ತಾನು ಆರು ತಿಂಗಳ ಹಂದೆ ಫೋನ್‌ ನುಂಗಿರುವ ಘಟನೆ ತಿಳಿಸಿದ್ದಾನೆ.

ಮೊಬೈಲ್‌

ಇನ್ನು ಮೊಬೈಲ್‌ ಅನ್ನು ಯಾವುದೋ ಅಚಾತುರ್ಯದಿಂದ ನುಂಗಿದ ನಂತರ ಆತ ವೈದ್ಯರ ಬಳಿ ಹೋಗಲು ಮುಂಜುಗರಪಟ್ಟಿದ್ದಾನೆ. ಆದರಿಂದ ಇದು ನೈಸರ್ಗಿಕವಾಗಿ ಮಲವಿಸರ್ಜನೆಯಲ್ಲಿ ಹೊರಹೋಗಬಹುದು ಅಂತಾ ಕಾದಿದ್ದಾನೆ. ಹಾಗಂತ ಆತ ಕಾದಿದ್ದು ಬರೋಬ್ಬರಿ ಆರು ತಿಂಗಳುಗಳ ಕಾಲ. ಆದರೆ ದಿನಕಳೆದಂತೆ ಆತನ ಹೊಟ್ಟೆ ನೋವು ಹೆಚ್ಚಾಗಿದೆ. ಕರುಳಿನ ಭಾಗದಲ್ಲಿ ನೋವು ಹೆಚ್ಚಾದಾಗ ಸಹಿಸಲಾರದ ವೈದ್ಯರ ಬಳಿ ತೆರಳಿದ್ದಾನೆ. ಆಗ ಈ ವಿಚಾರ ಬಹಿರಂಗವಾಗಿದೆ.

ಮೊಬೈಲ್‌

ಸದ್ಯ ಮೊಬೈಲ್‌ ನುಂಗಿದ ವ್ಯಕ್ತಿಗೆ ಈಜಿಪ್ಟ್‌ನ ಅಸ್ವಾನ್ ನಗರದ ಅಸ್ವಾನ್ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವ್ಯಕ್ತಿಯೊಬ್ಬ ಸಂಪೂರ್ಣ ಮೊಬೈಲ್ ಫೋನ್ ನುಂಗಿದ ಪ್ರಕರಣವನ್ನು ಇದೇ ಮೊದಲ ಬಾರಿಗೆ ನಾವು ನೋಡಿದ್ದು ಎಂದು ಅಸ್ವಾನ್ ಯೂನಿವರ್ಸಿಟಿ ಆಸ್ಪತ್ರೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಮೊಹಮದ್ ಎಲ್-ದಶೌರಿ ಹೇಳಿದ್ದಾರೆ. ಇನ್ನು ಮೊಬೈಲ್‌ ನುಂಗಿದ್ದ ಮನುಷ್ಯನ ಆರೋಗ್ಯದ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ, ಆದಾಗ್ಯೂ, ಅವನು ಸಂಪೂರ್ಣ ಚೇತರಿಸಿಕೊಳ್ಳುತ್ತಾನೆ ಎಂದು ನಂಬಲಾಗಿದೆ. ಆತ ಮೊಬೈಲ್ ಫೋನ್ ಅನ್ನು ಏಕೆ ನುಂಗಿದ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

Most Read Articles
Best Mobiles in India

English summary
Someone swallowed a whole phone, waited for 6 months before going to a hospital.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X