ಭಾರತದಲ್ಲಿ ಸೋನಿ ಬ್ರಾವಿಯಾ X75 ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ! ಬೆಲೆ ಎಷ್ಟು?

|

ಸೋನಿ ಕಂಪೆನಿ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಸ್ಮಾರ್ಟ್‌ಟಿವಿ ಸೇರಿದಂತೆ ಹಲವು ಸ್ಮಾರ್ಟ್‌ ಡಿವೈಸ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಇದೀಗ ಸೋನಿ ಸಂಸ್ಥೆ ಹೊಸ ಸೋನಿ ಬ್ರಾವಿಯಾ X75 ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಸೋನಿಯ ಈ ಹೊಸ ಎಲ್ಇಡಿ ಟಿವಿ ಸರಣಿ ಆಂಡ್ರಾಯ್ಡ್ ಟಿವಿಯಲ್ಲಿ ಚಾಲನೆಯಲ್ಲಿರುವ ಅಲ್ಟ್ರಾ-ಎಚ್ಡಿ ಎಚ್ಡಿಆರ್ ಟೆಲಿವಿಷನ್‌ಗಳನ್ನು ಹೊಂದಿದೆ.

ಸೋನಿ

ಹೌದು, ಸೋನಿ ಸಂಸ್ಥೆ ಸೋನಿ ಬ್ರಾವಿಯಾ X75 ಸ್ಮಾರ್ಟ್‌ಟಿವಿ ಸರಣಿಯನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇದು 43 ಇಂಚು ಮತ್ತು 50 ಇಂಚಿನ ಆಯ್ಕೆಯ ಸ್ಮಾರ್ಟ್‌ಟಿವಿಗಳನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ ಟಿವಿಗಳು ಸೋನಿ X1 4K ಹೆಚ್‌ಡಿಆರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಟಿವಿ

ಸೋನಿ ಬ್ರಾವಿಯಾ X75 ಸ್ಮಾರ್ಟ್‌ಟಿವಿ 43 ಇಂಚುಗಳು ಮತ್ತು 50 ಇಂಚಿನ ಎರಡು ಗಾತ್ರಗಳಲ್ಲಿ ಲಭ್ಯವಿದೆ. ಈ ಎರಡೂ ಸ್ಮಾರ್ಟ್‌ಟಿವಿಗಳು 3840x2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ ಅಲ್ಟ್ರಾ-ಹೆಚ್‌ಡಿ ಹೆಚ್‌ಡಿಆರ್ ಡಿಸ್‌ಪ್ಲೇಯನ್ನು ಹೊಂದಿವೆ. ಅಲ್ಲದೆ ಈ ಡಿಸ್‌ಪ್ಲೇ 60Hz ಗರಿಷ್ಠ ರಿಫ್ರೆಶ್ ರೇಟ್‌ ಅನ್ನು ಪಡೆದುಕೊಂಡಿವೆ. ಇದಲ್ಲದೆ ಇನ್ನು ಹೆಚ್ಚಿನ ಕ್ರಿಯಾತ್ಮಕ ಶ್ರೇಣಿಯ ವಿಷಯಕ್ಕಾಗಿ ಹೆಚ್‌ಡಿಆರ್ 10 ಮತ್ತು ಎಚ್‌ಎಲ್‌ಜಿ ಸ್ವರೂಪಗಳನ್ನು ಟಿವಿಗಳಲ್ಲಿ ಬೆಂಬಲಿಸಲಾಗುತ್ತದೆ ಎನ್ನಲಾಗಿದೆ. ಜೊತೆಗೆ ಸೌಂಡ್‌ ಸಂಸ್ಕರಣೆಗಾಗಿ ಡಾಲ್ಬಿ ಆಡಿಯೊ ಸಿಸ್ಟಂ ಅನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿಗಳು ಸೋನಿ X1 4K ಹೆಚ್‌ಡಿಆರ್ ಪ್ರೊಸೆಸರ್ ಬಲವನ್ನು ಪಡೆದುಕೊಂಡಿವೆ. ಅಲ್ಲದೆ ಈ ಆಂಡ್ರಾಯ್ಡ್ ಟಿವಿ ಗೂಗಲ್ ಪ್ಲೇ ಸ್ಟೋರ್‌ ಅನ್ನು ಹೊಂದಿದ್ದು, ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ. ಇದರಲ್ಲಿ ಪ್ರಮುಖ ಸ್ಟ್ರೀಮಿಂಗ್ ಸೇವೆಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಯೂಟ್ಯೂಬ್, ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಬಹುದಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಇಂಟರ್‌ಬಿಲ್ಟ್‌ ಕ್ರೋಮಾಕಾಸ್ಟ್‌ ಮತ್ತು ಗೂಗಲ್ ಅಸಿಸ್ಟೆಂಟ್‌ಗೆ ಪ್ರವೇಶವನ್ನು ನೀಡಲಿದೆ. ಜೊತೆಗೆ ಬ್ಲೂಟೂತ್ ಸಂಪರ್ಕವೂ ಇದೆ. ಈ ಸ್ಮಾರ್ಟ್‌ಟಿವಿಗಳು ಮೂರು ಎಚ್‌ಡಿಎಂಐ ಪೋರ್ಟ್‌ಗಳನ್ನು ಮತ್ತು ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದ್ದು, ಹಲವಾರು ಇತರ ಆಡಿಯೋ ಮತ್ತು ವಿಡಿಯೋ ಸಂಪರ್ಕ ಆಯ್ಕೆಗಳನ್ನು ಹೊಂದಿವೆ.

ಸೋನಿ

ಸೋನಿ ಬ್ರಾವಿಯಾ X75 ಟಿವಿ ಸರಣಿಯು ಭಾರತದಲ್ಲಿ 43 ಇಂಚಿನ ಆವೃತ್ತಿಗೆ 66,900 ರೂ. 50 ಇಂಚಿನ ರೂಪಾಂತರಕ್ಕೆ 84,900 ರೂ. ಬಲೆಯನ್ನು ಹೊಂದಿವೆ. ಆದರೆ ಇವುಗಳಲ್ಲಿ 43 ಇಂಚಿನ ಆಯ್ಕೆಗೆ 59,990ರೂ. ಮತ್ತು 50 ಇಂಚಿನ ಆವೃತ್ತಿಗೆ 72,990 ರೂ.ಬೆಲೆಯನ್ನು ನಿಗದಿಪಡಿಸಲಾಗಿದೆ. 43 ಇಂಚಿನ ಮತ್ತು 50 ಇಂಚಿನ ಅಲ್ಟ್ರಾ-ಎಚ್‌ಡಿ ಟಿವಿಗಳ ಸ್ಪರ್ಧೆಗೆ ಹೋಲಿಸಿದರೆ ದುಬಾರಿಯಾದರೂ, ಸೋನಿ ಟೆಲಿವಿಷನ್‌ಗಳು ಸೋನಿಯ ಖ್ಯಾತಿಯ ಬೆಂಬಲದೊಂದಿಗೆ ಬರುತ್ತವೆ ಮತ್ತು ಭಾರತದಲ್ಲಿ ಮಾರಾಟ ಮತ್ತು ಸೇವಾ ನೆಟ್‌ವರ್ಕ್‌ಗಳನ್ನು ಸ್ಥಾಪಿಸಿಕೊಂಡಿವೆ.

Most Read Articles
Best Mobiles in India

English summary
Sony Bravia X75 Ultra-HD HDR Smart Android TV Series Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X