ದೇಶಿ ಮಾರುಕಟ್ಟೆಗೆ ಹೊಸ ಸೋನಿ ಸೌಂಡ್‌ಬಾರ್ ಎಂಟ್ರಿ!..ಬೆಲೆ ಎಷ್ಟು?

|

ಮ್ಯೂಸಿಕ್ ಸಿಸ್ಟಮ್ ಉತ್ಪನ್ನಗಳ ಬಗ್ಗೆ ಮಾತನಾಡುವುದಾದರೇ ಅಲ್ಲಿ ಸೋನಿಯ ಕಂಪನಿಯ ಸ್ಪೀಕರ್ಸ್‌ಗಳ ಮಾತು ಬರದೆ ಇರದು. ಏಕೆಂದರೇ ಸೋನಿ ಸಂಸ್ಥೆಯು ಅತ್ಯುತ್ತಮ ಸೌಂಡ್‌ ಗುಣಮಟ್ಟದಿಂದ ಈಗಾಗಲೇ ಗ್ರಾಹಕರಲ್ಲಿ ಮನದಲ್ಲಿ ಗಟ್ಟಿ ಸ್ಥಾನ ಪಡೆದಿದೆ. ಸೋನಿ ಹಲವು ವಿಭಿನ್ನ ಮಾದರಿಯ ಸೌಂಡ್‌ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ನೂತನವಾಗ 'ಸೌಂಡ್‌ ಬಾರ್‌' ಯೊಂದನ್ನು ಲಾಂಚ್ ಮಾಡಿದೆ.

ಸೋನಿ ಸಂಸ್ಥೆ

ಹೌದು, ಸೋನಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಈಗ HT-S20R ಹೆಸರಿನ ಸೌಂಡ್‌ ಬಾರ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಈ ಸೌಂಡ್‌ಬಾರ್‌ ಸೌಂಡ್‌ ಗುಣಮಟ್ಟವು ಹೈ ಎಂಡ್ ಮಾದರಿಯಲ್ಲಿದ್ದು, 400W ಔಟ್‌ಪುಟ್ ಪವರ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ ಡಾಲ್ಬಿ ಸೌಂಡ್‌ ವ್ಯವಸ್ಥೆಯನ್ನು ಒಳಗೊಂಡಿದ್ದು, ಮ್ಯೂಸಿಕ್‌ ಪ್ರಿಯರಿಗೆ ಸಂಗೀತದ ರಸದೌತಣ ನೀಡುವ ಎಲ್ಲ ಫೀಚರ್ಸ್‌ಗಳನ್ನು ಪಡೆದಿದೆ.

ಸೋನಿ ಸೌಂಡ್‌ಬಾರ್ ಫೀಚರ್ಸ್‌

ಸೋನಿ ಸೌಂಡ್‌ಬಾರ್ ಫೀಚರ್ಸ್‌

ಸೋನಿಯ HT-S20R ಸೌಂಡ್‌ಬಾರ್ 5.1 ಚಾನೆಲ್ ಸಾಮರ್ಥ್ಯದ ರಿಯಲ್ ಸರೌಂಡ್‌(ಸುತ್ತಲೂ) ಸೌಂಡ್‌ ವ್ಯವಸ್ಥೆಯನ್ನು ಹೊಂದಿದೆ. ಗ್ರಾಹಕರು ಡೈನಾಮಿಕ್, ತಲ್ಲಣ ಮತ್ತು ಸಿನಿಮ್ಯಾಟಿಕ್ ಸೌಂಡ್‌ ಸೆಟ್ ಮಾಡುವ ಆಯ್ಕೆಗಳಿದ್ದು, ಬಳಕೆದಾರರು ಈ ಆಯ್ಕೆಗಳ ಶಬ್ದದ ಅನುಭೂತಿ ಪಡೆಯಬಹುದಾಗಿದೆ. ಹೆಚ್ಚುವರಿ ಸೌಂಡ್‌ ಎಫೆಕ್ಟ್‌ ಗಾಗಿ ಸಬ್‌ವೂಫರ್‌ ಸೌಲಭ್ಯಗಳನ್ನು ನೀಡಲಾಗಿದೆ.

ವಿಶೇಷ ಸೌಲಭ್ಯಗಳು

ವಿಶೇಷ ಸೌಲಭ್ಯಗಳು

ಸೋನಿಯ ಈ ಸೌಂಡ್‌ಬಾರ್ ಯುಎಸ್‌ಬಿ ಪೋರ್ಟ್‌ ಆಯ್ಕೆ ಪಡೆದಿದೆ. ಬ್ಲೂಟೂತ್, ಎಚ್‌ಡಿಎಮ್ಐ HDMI ARC ಆಯ್ಕೆಗಳು ಇವೆ. ಕೇವಲ ಒಂದೇ ಕೇಬಲ್‌ನಿಂದ ಟಿವಿಯೊಂದಿಗೆ ಕನೆಕ್ಟ್ ಮಾಡಲು HDMI ARC (HDMI ಸಪೋರ್ಟ್ ಇರದ ಟಿವಿಗಳಲ್ಲಿ) ನೆರವಾಗಲಿದೆ. 400W ಔಟ್‌ಪುಟ್ ಪವರ್ ಜೊತೆಗೆ ಸವ್‌ವೂಫರ್‌ಗಳಲ್ಲಿ 160mm ಆಡಿಯೊ ಡ್ರೈವರ್‌ ಯೂನಿಟ್ ಹೊಂದಿದೆ. ಅತ್ಯುತ್ತಮ ಆಡಿಯೊ ಅನುಭವ ಒದಗಿಸಲಿದೆ.

ಆಡಿಯೊ ಮೋಡ್

ಆಡಿಯೊ ಮೋಡ್

ಕೇಳುಗರಿಗೆ ಭಿನ್ನ ಆಡಿಯೊ ಅನುಭವ ನೀಡಲು ಸೋನಿಯ ಈ ಸೌಂಡ್‌ಬಾರ್ ಆಡಿಯೊ ಮೋಡ್ ಆಯ್ಕೆಗಳನ್ನು ಪಡೆದಿದೆ. ಆಟೋ, ಸ್ಟ್ಯಾಂಡರ್ಡ್, ಸಿನಿಮಾ ಮತ್ತು ಮ್ಯೂಸಿಕ್ ಆಡಿಯೊ ಮೋಡ್ ಸೌಲಭ್ಯಗಳಿವೆ. ಕೇಳುಗರು ಅಗತ್ಯಕ್ಕೆ ಅನುಗುಣವಾಗಿ ಆಡಿಯೊ ಮೋಡ್ ಆಯ್ಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಇದರೊಂದಿಗೆ ಸಂಸ್ಥೆಯು ನೈಟ್‌ ಮತ್ತು ವಾಯಿಸ್‌ ಮೋಡ್‌ ಆಯ್ಕೆಗಳನ್ನು ನೀಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಸೋನಿ HT-S20R ಸೌಂಡ್‌ಬಾರ್ 14,990ರೂ.ಗಳ ಪ್ರೈಸ್‌ಟ್ಯಾಗ್‌ ಬೆಲೆಯಲ್ಲಿ ಗುರುತಿಸಿಕೊಂಡಿದೆ. ಇನ್ನು ಈ ಸೌಂಡ್‌ಬಾರ್ ಇದೇ ಫೆ.7(ನಾಳೆಯಿಂದ ) ಖರೀದಿಗೆ ಲಭ್ಯವಾಗಲಿದೆ. ಪ್ರಮುಖ ಇ-ಕಾಮರ್ಸ್‌ ತಾಣಗಳಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.

Most Read Articles
Best Mobiles in India

English summary
Sony is selling the sound bar with a price label of Rs 14,990 in India, and it will be available for purchase from February 7, 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X