Just In
- 7 hrs ago
ಆಂಡ್ರಾಯ್ಡ್ ಗೆ ಬಂದಿದೆ ಅತ್ಯಂತ ಅಪಾಯಕಾರಿ ವೈರಸ್..! ಈ ಬಗ್ಗೆ ಗೂಗಲ್ ಏನೇಳುತ್ತೆ..?
- 11 hrs ago
ಏರ್ಟೆಲ್, ಜಿಯೋದಿಂದ ಮುಂದುವರೆದ ಸ್ಪರ್ಧೆ..! ರಿಟೇಲ್ ವ್ಯಾಪಾರಿಗಳಿಗೆ ಬಂಪರ್..!
- 12 hrs ago
ವಾಟ್ಸಪ್ ಸ್ಟೇಟಸ್ಗಳನ್ನು ಸುಲಭವಾಗಿ ಸೇವ್ ಮಾಡುವುದು ಹೇಗೆ ಗೊತ್ತಾ?
- 13 hrs ago
ಐಫೋನ್ 11 ಪ್ರೊ ಅರ್ಡರ್ ಮಾಡಿದ್ದ ಬೆಂಗಳೂರು ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?
Don't Miss
- News
ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್ಗೆ ಐತಿಹಾಸಿಕ ಬಹುಮತ
- Sports
ಐಎಸ್ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ
- Movies
ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Automobiles
ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್ಯುವಿ ಬಿಡುಗಡೆ
- Lifestyle
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
ಸೋನಿಯಿಂದ ಹೊಸ ಸೌಂಡ್ಬಾರ್ ಬಿಡುಗಡೆ!.ಬೆಲೆ ಮಾತ್ರ ದುಬಾರಿ!
ಜನಪ್ರಿಯ ಟೆಕ್ ಸಂಸ್ಥೆ ಸೋನಿಯು ಇತ್ತೀಚಿಗೆ ಭಾರತದಲ್ಲಿ ಸ್ಮಾರ್ಟ್ಫೋನ್ ಉತ್ಪಾದನೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದು, ಈ ಬೆನ್ನಲ್ಲೇ ಪೂರ್ಣ ಆಸಕ್ತಿಯನ್ನು ಆಡಿಯೊ ಮತ್ತು ಗೃಹ ಉತ್ಪನ್ನಗಳತ್ತ ನೀಡಿದೆ. ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ಹೊಸದಾಗಿ HT-Z9F ಹೆಸರಿನ ಸೌಂಡ್ ಬಾರ್ವೊಂದನ್ನು ಪರಿಚಯಿಸಿದ್ದು, ಈ ಡಿವೈಸ್ ಡಾಲ್ಬಿ ಆಟ್ಮೊಸ್ ಸೌಂಡ್ ತಂತ್ರಜ್ಞಾನವನ್ನು ಒಳಗೊಂಡಿದೆ.
ಹೌದು, ಸೋನಿ ಕಂಪನಿಯು ಭಾರತೀಯ ಮಾರುಕಟ್ಟೆಗೆ ನೂತನ HT-Z9F ಸೌಂಡ್ಬಾರ್ ಡಿವೈಸ್ ಅನ್ನು ಬಿಡುಗಡೆ ಮಾಡಿದ್ದು, 3.1 ಚಾನಲ್ ಮಾದರಿಯಲ್ಲಿದೆ. ಹಾಗೆಯೇ ಈ ಡಿವೈಸ್ ಇನ್ಬಿಲ್ಟ್ ಕ್ರೋಮ್ಕಾಸ್ಟ್ (Built-in Chromecast) ಸೌಲಭ್ಯವನ್ನು ಸಹ ಹೊಂದಿದ್ದು, ಸಬ್ವೂಫರ್ಗಳ ಮೂಲಕ 5.1 ಚಾನಲ್ ಮಾದರಿಗೆ ಅಪ್ಗ್ರೇಡ್ ಮಾಡಿಕೊಳ್ಳಬಹುದಾದ ಆಯ್ಕೆಯು ಇದೆ. ಇದರೊಂದಿಗೆ ಡಾಲ್ಬಿ ಆಟ್ಮೊಸ್ ಸೌಂಡ್ ಲೋಡೆಡ್ ಆಗಿದೆ.
ಇದೇ ಜುಲೈ 8ರಂದು ಈ ಡಿವೈಸ್ನ ಮೊದಲ ಸೇಲ್ ಆರಂಭವಾಗಲಿದೆ. ಅಧಿಕೃತ ಸೋನಿ ಶಾಪ್ಗಳಲ್ಲಿ ಮತ್ತು ಇ ಕಾಮರ್ಸ್ ಜಾಲತಾಣಗಳಲ್ಲಿ ಪ್ರಿ ಬುಕ್ಕಿಂಗ್ ಪ್ರಕ್ರಿಯೆಯು ಶುರುವಾಗಿದ್ದು, ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಕಂಪನಿಯ SA-Z9R ಸ್ಪೀಕರ್ ಸಹ ಲಭ್ಯವಾಗುವ ಅವಕಾಶವು ಇದೆ. ಹಾಗಾದರೇ ಸೋನಿ HT-Z9F ಸೌಂಡ್ಬಾರ್ ಡಿವೈಸ್ ಇತರೆ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಓದಿರಿ : ಪತಂಜಲಿ ಮೆಸೆಜ್ ಆಪ್ ಈ ಬಾರಿ ಪುಟಿದೆಳುವುದೇ?..ಹಾಗಾದ್ರೆ ವಾಟ್ಸಪ್ ಕಥೆ ಏನು?

ಬೆಸ್ಟ್ ಸೌಲಭ್ಯಗಳು
ಸೋನಿಯ HT-Z9F ಸೌಂಡ್ಬಾರ್ ಡಿವೈಸ್ 4K HRD ವಿಡಿಯೊಗೆ ಬೆಂಬಲ ನೀಡುವ ಆಯ್ಕೆಯನ್ನು ಹೊಂದಿದ್ದು, ಈ ಸೌಲಭ್ಯವನ್ನು HDMI ARC ಮೂಲಕ ಕನೆಕ್ಟ್ ಮಾಡಬಹುದಾಗಿದೆ. ಇದರೊಂದಿಗೆ ಲೆಟೆಸ್ಟ್ ಬ್ಲೂಟೂತ್ ಕನೆಕ್ಟಿವಿಟಿ, LAN, USB ಮತ್ತು ಆಪ್ಟಿಕಲ್ ಇನ್ ಕನೆಕ್ಟಿವಿಟಿ ಸೌಲಭ್ಯಗಳನ್ನು ಸಹ ಒಳಗೊಂಡಿದೆ. ಹಾಗೆಯೇ ಈ ಡಿವೈಸ್ ರಿಮೋಟ್ ಅತ್ಯುತ್ತಮ ಫೀಚರ್ಸ್ಗಳನ್ನು ಹೊಂದಿದೆ.

ವಾಯಿಸ್ ಅಸಿಸ್ಟಂಟ್ ಬೆಂಬಲ
ಸದ್ಯ ಇತ್ತೀಚಿನ ಸ್ಮಾರ್ಟ್ಡಿವೈಸ್ಗಳಲ್ಲಿ ವಾಯಿಸ್ ಅಸಿಸ್ಟಂಟ್ ಫೀಚರ್ ಕಾಮನ್ ಆಗಿದ್ದು, ಸೋನಿಯ ಈ ಸೌಂಡ್ಬಾರ್ ಸಹ ಗೂಗಲ್ ಅಸಿಸ್ಟಂಟ್ ಮತ್ತು ಅಮೆಜಾನ್ ಅಲೆಕ್ಸಾ ವಾಯಿಸ್ ಅಸಿಸ್ಟಂಟ್ ಆಯ್ಕೆಯನ್ನು ಬೆಂಬಲಿಸಲಿದೆ. ಹೀಗಾಗಿ ವಾಯಿಸ್ ಕಮಾಂಡ್ ಮೂಲಕವೇ ಸೌಂಡ್ಬಾರ್ ಅನ್ನು ಬಳಕೆದಾರರು ನಿಯಂತ್ರಿಸಬಹುದಾಗಿದೆ.
ಓದಿರಿ : 'ಜಬ್ರಾ ಇಲೈಟ್ 85H' ಬ್ಲೂಟೂತ್ ಹೆಡ್ಫೋನ್ ಲಾಂಚ್!..ಹೇಗಿವೆ ಗೊತ್ತಾ ಫೀಚರ್ಸ್!

ಕ್ರೋಮ್ಕಾಸ್ಟ್ ಕನೆಕ್ಟಿವಿಟಿ
ಸೋನಿಯ ಹೊಸ ಸೌಂಡ್ಬಾರ್ ಡಿವೈಸ್ ಇನ್ಬಿಲ್ಟ್ ಕ್ರೋಮ್ಕಾಸ್ಟ್ ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದುಕೊಂಡಿದ್ದು, ಸುಲಭವಾಗಿ ಸ್ಮಾರ್ಟ್ಟಿವಿಗೆ ಕನೆಕ್ಟ್ ಮಾಡಬಹುದಾಗಿದೆ. ಇದರೊಂದಿಗೆ ವೈ ಫೈ ಕನೆಕ್ಟಿವಿಟಿ ಆಯ್ಕೆಯನ್ನು ನೀಡಲಾಗಿದ್ದು, ಇದು ಸಹ ಕ್ರೋಮ್ಕಾಸ್ಟ್ಗೆ ಕನೆಕ್ಟಿವಿಟಿಗೆ ಬೆಂಬಲ ಒದಗಿಸಲಿದೆ.

ಬೆಲೆ ಮತ್ತು ಲಭ್ಯತೆ
ಸೋನಿ HT-Z9F ಸೌಂಡ್ಬಾರ್ ಇದೇ ಜುಲೈ 8ರಂದು ಸೇಲ್ ಆರಂಭಿಸಲಿದೆ. ಮುಂಗಡ ಬುಕ್ಕಿಂಗ್ ಪ್ರಕ್ರಿಯೆಯು ಸಹ ಶುರುವಾಗಿದ್ದು, ಈ ಡಿವೈಸ್ನ ಬೆಲೆಯು 59,990ರೂ.ಗಳು ಆಗಿದೆ. ಕಂಪನಿಯ ಅಧಿಕೃತ ಶಾಪ್, ಮಲ್ಟಿಬ್ರ್ಯಾಂಡ್ ಎಲೆಕ್ಟ್ರಾನಿಕ್ಸ್ ರಿಟೈಲ್ ಶಾಪ್ಗಳಲ್ಲಿ ಮತ್ತು ಪ್ರಮುಖ ಇ ಕಾಮರ್ಸ್ ಜಾಲತಾಣಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ.
ಓದಿರಿ : ವೊಡಾಫೋನ್ ಹೊಸ ಐಡಿಯಾ!.ಕುಟುಂಬದ ಮೊಬೈಲ್ ಬಿಲ್ನಲ್ಲಿ ಶೇ.80%ರಷ್ಟು ಉಳಿಕೆ!
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790