Just In
Don't Miss
- News
ಸ್ಪೀಕರ್ ರಮೇಶಕುಮಾರ್ ಅವರೇ ಈಗ ಅನರ್ಹರಾಗಿದ್ದಾರೆ: ಶಿವರಾಮ ಹೆಬ್ಬಾರ್
- Finance
ದೀದಿ ಸರ್ಕಾರದಿಂದ 50 ರುಪಾಯಿಗೆ 1 ಕೆಜಿ ಈರುಳ್ಳಿ
- Automobiles
ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್
- Movies
ಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆ
- Education
ಬೆಂಗಳೂರು ನಗರ ಜಿಲ್ಲೆ 179 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
- Lifestyle
ಪಾರ್ಟಿ ಲುಕ್ಗೆ ಕಣ್ಣಿನ ಅಂದ ಹೆಚ್ಚಿಸುವ ಬ್ಯೂಟಿ ಟಿಪ್ಸ್
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಸ್ಲೋ ಮೊಷನ್ ರೆಕಾರ್ಡಿಂಗ್ ವಿಶೇಷತೆಯ 'ಸೋನಿ RX0 II' ಚಿಕ್ಕ ಕ್ಯಾಮೆರಾ ಲಾಂಚ್!
ಗುಣಮಟ್ಟದ ಟೆಕ್ ಉತ್ಪನ್ನಗಳಿಂದ ವಿಶ್ವಮಟ್ಟದಲ್ಲಿ ಭಾರಿ ಜನಪ್ರಿಯ ಗಳಿಸಿರುವ 'ಸೋನಿ' ಕಂಪನಿಯ ಕ್ಯಾಮೆರಾಗಳೆಂದರೇ ಫೋಟೊಗ್ರಾಫರ್ಗಳಿಗೆ ಅಚ್ಚುಮೆಚ್ಚು. ಈ ನಿಟ್ಟಿನಲ್ಲಿ ಕಂಪನಿಯು ಸಹ ಅತ್ಯುತ್ತಮ ಕ್ಯಾಮೆರಾಗಳನ್ನು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇತ್ತೀಚಿಗೆ ಕಂಪನಿಯು ಟೆಕ್ ಜಗತ್ತೆ ಬೆರಗಾಗುವ 'RX0 II' ಹೆಸರಿನ ಚಿಕ್ಕ ಕ್ಯಾಮೆರಾ ಘೋಷಿಸಿತ್ತು. ಇದೀಗ ಆ ಕ್ಯಾಮೆರಾ ಲಾಂಚ್ ಆಗಿದೆ.
ಹೌದು, ಸೋನಿ ಕಂಪನಿಯ ಬಹುನಿರೀಕ್ಷಿತ 'RX0 II'(DSC-RX0M2)ವಿಡಿಯೋ ರೆಕಾರ್ಡರ್ ಇದೀಗ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಿದ್ದು, 57,990ರೂ.ಗಳ ಪ್ರೈಸ್ಟ್ಯಾಗ್ ಅನ್ನು ಹೊಂದಿದೆ. ಪ್ರತಿ ಸೆಕೆಂಡಿಗೆ 1,000 fps ಸೂಪರ್ ಸ್ಲೋ ಮೊಷನ್ ವಿಡಿಯೊ ರೆಕಾರ್ಡಿಂಗ್ ಆಯ್ಕೆ ಮತ್ತು 4K ವಿಡಿಯೋ ರೆಕಾರ್ಡಿಂಗ್ ಈ ಕ್ಯಾಮೆರಾದ ಪ್ರಮುಖ ಹೈಲೈಟ್ಸ್ಗಳಾಗಿವೆ. ಹಾಗೆಯೇ Exmor RS ಇಮೇಜ್ ಸೆನ್ಸಾರ್ ಮತ್ತು ಸೋನಿಯ BIONZ X ಇಂಜಿನ್ ಸಹ ಹೊಂದಿದೆ.
ಪುಟಾಣಿ ಗಾತ್ರದ ಈ ಕ್ಯಾಮೆರಾವು 15.3 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, 180 ಡಿಗ್ರಿಯಲ್ಲಿ ಫ್ಲಿಪ್ಅಪ್ ಸ್ಕ್ರೀನ್ ಡಿಸ್ಪ್ಲೇಯನ್ನು ಒಳಗೊಂಡಿದೆ. ವಾಟರ್ ರೆಸಿಸ್ಟೆನ್ಸ್, ಡಸ್ಟ್ ಪ್ರೂಫ್, ಕ್ರಾಶ್ ಪ್ರೂಫ್ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹಾಗಾದರೇ ಸೋನಿಯ 'RX0 II' (DSC-RX0M2) ವಿಡಿಯೋ ರೆಕಾರ್ಡರ್ ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್ಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿರಿ.
ಓದಿರಿ : ಮಳೆಗಾಲದಲ್ಲಿ ಈ ಜನಪ್ರಿಯ ಸ್ಮಾರ್ಟ್ಫೋನ್ಗಳಿಗೆ ಅಪಾಯ ಹೆಚ್ಚು.!

ಕ್ಯಾಮೆರಾ ಡಿಸೈನ್
ಸೋನಿಯ RX0 II ವಿಡಿಯೋ ರೆಕಾರ್ಡರ್ ಪುಟ್ಟ ರಚನೆಯನ್ನು ಹೊಂದಿದ್ದು, 2.32 x 1.59 x 1.37 ಇಂಚುಗಳ ಸುತ್ತಳತೆಯನ್ನು ಹೊಂದಿದೆ. ಇದರ ತೂಕ ಕೇವಲ 132ಗ್ರಾಂ ಆಗಿದ್ದು, ಫ್ಲಿಪ್ ಮಾದರಿಯ ಡಿಸ್ಪ್ಲೇ ಇದ್ದು, 180 ಡಿಗ್ರಿಯ ತಿರುಗುವ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಬಾಹ್ಯ ರಚನೆಯು ವಾಟರ್ ರೆಸಿಸ್ಟೆನ್ಸ್, ಡಸ್ಟ್ ಪ್ರೂಫ್, ಕ್ರಾಶ್ ಪ್ರೂಫ್ ಸೌಲಭ್ಯಗಳನ್ನು ಒಳಗೊಂಡಿದೆ.

ಪಿಕ್ಸಲ್ ಮತ್ತು ಲೆನ್ಸ್
ಸೋನಿಯ RX0 II ಕ್ಯಾಮೆರಾವು 15.3 ಮೆಗಾಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, Exmor RS ಇಮೇಜ್ ಸೆನ್ಸಾರ್ ಮತ್ತು ಸೋನಿಯ BIONZ X ಇಂಜಿನ್ ಆಯ್ಕೆಗಳನ್ನು ಸಹ ಹೊಂದಿದೆ. Zeiss ಕಂಪನಿಯ 24mm ವೈಲ್ಡ್ ಆಂಗಲ್ ಫಿಕ್ಸಡ್ ಲೆನ್ಸ್ ನೀಡಲಾಗಿದ್ದು, ಈ ಕ್ಯಾಮೆರಾವು 80-12,800 ಐಓಎಸ್ ವ್ಯಾಪ್ತಿಯನ್ನು ಒಳಗೊಂಡಿದ್ದು, 4K ಗುಣಮಟ್ಟದ ವಿಡಿಯೋ ರೆಕಾರ್ಡಿಂಗ್ ಸೌಲಭ್ಯವನ್ನು ಹೊಂದಿದೆ.
ಓದಿರಿ : ಬೆಲೆ ಇಳಿಕೆ ಕಂಡ 'ನೋಕಿಯಾ 6.1' ಸ್ಮಾರ್ಟ್ಫೋನ್!

ಐ ಆಟೋ ಫೋಕಸ್
ಸೋನಿಯ RX0 II ಕ್ಯಾಮೆರಾವು 'ಐ ಆಟೋ ಫೋಕಸ್' ಅನ್ನು ಹೊಂದಿದ್ದು, ವೇಗ, ಅಕ್ಯುರಸಿಯಲ್ಲಿ ಮತ್ತು ಐ AF ಫೀಚರ್ ಆಯ್ಕೆಯಲ್ಲಿ ಅಪ್ಡೇಟ್ ಮಾಡಿದೆ. ಹೀಗಾಗಿ ಈ ಆಯ್ಕೆಯು ಹಾಫ್ ಶೆಟರ್ ಒತ್ತುವ ಮೂಲಕ ಆಟೋಮ್ಯಾಟಿಕ್ ಆಗಿ ಫೋಕಸ್ ಮಾಡಿಕೊಳ್ಳುವ ಸೌಲಭ್ಯ ಪಡೆದಿದೆ. ಮೆನು ಸಿಸ್ಟಮ್ ನಲ್ಲಿ ಎಡ ಕಣ್ಣು, ಬಲಗಣ್ಣು ಮತ್ತು ಆಟೋ ಎಂಬ ಆಯ್ಕೆಗಳು ನೀಡಲಾಗಿದೆ.

ಸೂಪರ್ ಸ್ಲೋ ಮೊಷನ್
ಸೋನಿಯ RX0 II ಕ್ಯಾಮೆರಾವು 'ಸೂಪರ್ ಸ್ಲೋ ಮೋಷನ್' ಆಯ್ಕೆಯನ್ನು ಒಳಗೊಂಡಿದ್ದು, ಪ್ರತಿ ಸೆಕೆಂಡ್ಗೆ 1000 fps ಸಾಮರ್ಥ್ಯದಲ್ಲಿದೆ. ಕಂಪನಿಯ 'RX0 ವಿಡಿಯೊ ರೆಕಾರ್ಡರ್' ಕ್ಯಾಮೆರಾವು 960fps ಸಾಮರ್ಥ್ಯದ ಸ್ಲೋ ಮೋಷನ್ ಆಯ್ಕೆಯನ್ನು ಹೊಂದಿತ್ತು. 16 fps ಕಂಟಿನ್ಯೂ ಶೂಟ್ಗೆ ಅವಕಾಶ ಇದ್ದು, ಎಕ್ಸಟ್ರನಲ್ ರೆಕಾರ್ಡರ್ ಆಯ್ಕೆ ಸಹ ಇದೆ.
ಓದಿರಿ : ಸ್ಮಾರ್ಟ್ಫೋನ್ ಮಾರುಕಟ್ಟೆಗೆ ದೊಡ್ಡ ಅಚ್ಚರಿ ನೀಡಲು ಸಜ್ಜಾದ 'ಸೋನಿ'!

ವೇಗದ ಶೆಟರ್
ಸೋನಿಯ RX0 II ವಿಡಿಯೋ ರೆಕಾರ್ಡರ್ Anti-Distortion ಶೆಟರ್ ಅನ್ನು ಒಳಗೊಂಡಿದ್ದು, ಪ್ರತಿ ಸೆಕೆಂಡಿಗೆ 1/32,000 ಸಾಮರ್ಥ್ಯದಲ್ಲಿ ಶೂಟ್ ಮಾಡಬಹುದಾಗಿದೆ. ಹಾಗೆಯೇ 16fps ಸಾಮರ್ಥ್ಯ ನಿರಂತರ ಶೂಟ್ ಮಾಡಬಹುದಾಗಿದ್ದು, ಆಟೋಮ್ಯಾಟಿಕ್ ಶಟರ್ ಆಯ್ಕೆಯ 'ಐ ಆಟೋ ಫೋಕಸ್' ಸೌಲಭ್ಯ ಇದ್ದು, ಇದರೊಂದಿಗೆ HDMI ಕೇವಲ ಮೂಲಕ ಬಾಹ್ಯವಾಗಿ 4K ವಿಡಿಯೊ ರೆಕಾರ್ಡ್ ಮಾಡುವ ಸೌಲಭ್ಯದ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ
ಸೋನಿಯ RX0 II ಚಿಕ್ಕ ವಿಡಿಯೋ ರೆಕಾರ್ಡರ್ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ರಿಲೀಸ್ ಆಗಿದ್ದು, ಇದೇ ಜುಲೈ 15ರ ನಂತರ ಅಧಿಕೃತ ಸೋನಿ ಶೋರೂಮ್ಗಳಲ್ಲಿ, ಪ್ರಮುಖ ಎಲೆಕ್ಟ್ರಾನಿಕ್ ಶಾಪ್ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ಸ್ಲೋ ಮೋಷನ್ ಕ್ಯಾಮೆರಾ ಬೆಲೆಯು 57,990ರೂ.ಗಳು ಆಗಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090