ತನ್ನ ಬಳಕೆದಾರರಿಗೆ ವಿಡಿಯೋ ಪಾಡ್‌ಕಾಸ್ಟ್‌ ಸೇವೆ ಪರಿಚಯಿಸಿದ ಸ್ಪಾಟಿಫೈ!

|

ಇತ್ತೀಚಿನ ದಿನಗಳಲ್ಲಿ ಮ್ಯೂಸಿಕ್‌ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆಯನ್ನ ಗಳಿಸಿವೆ. ರೆಟ್ರೊ ಶೈಲಿಯಿಂದ ಹಿಡಿದು ಪ್ರಸ್ತುತ ಹಾಡುಗಳನ್ನ ಸಹ ಇವುಗಳಲ್ಲಿ ಆಲಿಸಬಹುದಾಗಿದೆ. ಇನ್ನು ಲಬ್ಯವಿರುವ ಮ್ಯೂಸಿಕ್‌ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ಗಳಲ್ಲಿ ಸ್ಪಾಟಿಫೈ ಕೂಡ ಒಂದಾಗಿದೆ. ಈಗಾಗಲೇ ಬಳಕೆದಾರರ ನೆಚ್ಚಿನ ಅಪ್ಲಿಕೇಸನ್‌ಗಳಲ್ಲಿ ಒಂದಾಗಿರುವ ಸ್ಪಾಟಿಫೈನಲ್ಲಿ ಇದೀಗ ವೀಡಿಯೊ ಪಾಡ್‌ಕಾಸ್ಟ್‌ಗಳು ಸಹ ಲಭ್ಯವಾಗಲಿದೆ. ಅಷ್ಟೇ ಅಲ್ಲ ಇತ್ತಿಚಿನ ಪ್ರಮುಖ ಬೆಳವಣಿಗೆಗಳ ವೀಡಿಯೋಗಳನ್ನ ಇಲ್ಲಿ ಕಾಣಬಹುದಾಗಿದ್ದು, ಪ್ರೀಮಿಯಂ ಚಂದಾದಾರಿಕೆ ಇಲ್ಲದೆ ಸ್ಪಾಟಿಫೈನ ವೀಡಿಯೊ ಪಾಡ್‌ಕಾಸ್ಟ್‌ಗಳು ಇದೀಗ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.

ಸ್ಪಾಟಿಫೈ

ಹೌದು, ಸ್ಪಾಟಿಫೈ ಬಳಕೆದಾರರು ಇದೀಗ ವಿಡಿಯೋ ಪಾಡ್‌ಕಾಸ್ಟ್‌ಗಳನ್ನು ಸಹ ಅನುಭವಿಸಬಹುದಾಗಿದೆ. ಅಲ್ಲದೆ ಬುಕ್ ಆಫ್ ಬಾಸ್ಕೆಟ್‌ಬಾಲ್ 2.0, ಫ್ಯಾಂಟಸಿ ಫುಟ್‌ಬಾಲ್ ಪ್ಲೇಯರ್ಸ್‌, ದಿ ಮಿಸ್‌ಫಿಟ್ಸ್ ಪಾಡ್‌ಕ್ಯಾಸ್ಟ್, ಎಚ್ 3 ಪಾಡ್‌ಕ್ಯಾಸ್ಟ್, ದಿ ಮಾರ್ನಿಂಗ್ ಟೋಸ್ಟ್, ವ್ಯಾನ್ ಲಥನ್ ಮತ್ತು ರಾಚೆಲ್ ಲಿಂಡ್ಸೆ, ಮತ್ತು ರೂಸ್ಟರ್ ಟೀತ್ ಪಾಡ್‌ಕ್ಯಾಸ್ಟ್‌ನಂತಹ ಕೆಲವು ವೀಡಿಯೊ ಪಾಡ್‌ಕ್ಯಾಸ್ಟ್ ವೀಕ್ಷಣೆಗೆ ಸ್ಪಾಟಿಫೈ ಅವಕಾಶ ನೀಡಿದೆ. ಅಷ್ಟಕ್ಕು ಸ್ಪಾಟಿಫೈ ತನ್ನ ಬಳಕೆದಾರರಿಗೆ ಪರಿಚಯಿಸಿರುವ ವಿಡಿಯೋ ಪಾಡ್‌ಕಾಸ್ಟ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಪಾಟಿಫೈ

ಸದ್ಯ ಸ್ಪಾಟಿಫೈನಲ್ಲಿ ಬಳಕೆದಾರರು ವಿಡಿಯೋ ಪಾಡ್‌ಕಾಸ್ಟ್‌ ಸೇವೆಯನ್ನು ಸಹ ಪಡೆಯಬಹುದಾಗಿದೆ. ಜಾಗತಿಕವಾಗಿ ಈ ಸೇವೆ ಲಬ್ಯವಾಗಲಿದ್ದು, ಪ್ರಮುಖ ಘಟನೆಗಳನ್ನು ಸಹ ವಿಡಿಯೋಗಳ ಮುಖಾಂತರ ಡಿಸ್‌ಪ್ಲೇ ಆಗಲಿದೆ. ನೀವು ಮ್ಯೂಸಿಕ್‌ ಅನ್ನು ಅಸ್ಪಾದಿಸುತ್ತಾ ವಿಡಿಯೊಗಳನ್ನ ವೀಕ್ಷಿಸಬಹುದಾಗಿದೆ. ಅಲ್ಲದೆ ಸ್ಪಾಟಿಫೈ ಅನ್ನು ಟ್ಯೂನ್ ಮಾಡಿದಾಗ ವೀಡಿಯೊ ಪಾಡ್‌ಕಾಸ್ಟ್‌ಗಳು ಸ್ವಯಂಚಾಲಿತವಾಗಿ ಪ್ಲೇ ಆಗಲು ಪ್ರಾರಂಭವಾಗುತ್ತದೆ. ಇದಲ್ಲದೆ ಬಳಕೆದಾರರು ತಮ್ಮ ಫೋನ್‌ಗಳನ್ನು ಲಾಕ್ ಮಾಡಿದಾಗಲೂ ಸಹ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಪ್ಲೇ ಆಗುತ್ತಲೇ ಇರುತ್ತದೆ.

ಪಾಡ್‌ಕಾಸ್ಟ್

ಇನ್ನು ವೀಡಿಯೊ ಪಾಡ್‌ಕಾಸ್ಟ್‌ಗಳು ಕನಿಷ್ಠ ಡೇಟಾ ಬಳಕೆಯನ್ನು ಬಳಸುತ್ತವೆ ಎಂದು ಸ್ಪಾಟಿಫೈ ಹೇಳಿದೆ. ಜೊತೆಗೆ ವೀಡಿಯೊ ಪಾಡ್‌ಕಾಸ್ಟ್‌ಗಳು ಸ್ಪಾಟಿಫೈನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮತ್ತು ಅದರ ಡೆಸ್ಕ್‌ಟಾಪ್ ಆವೃತ್ತಿಯಲ್ಲಿಯೂ ಸಹ ಪ್ಲೇ ಆಗುತ್ತವೆ ಎನ್ನಲಾಗಿದೆ. ಪ್ರಸ್ತುತ, ಸ್ಪಾಟಿಫೈ ಆಯ್ದ ಕೆಲವೇ ಕೆಲವು ಕ್ರಿಯೆಟರ್ಸ್‌ಗೆ ಮಾತ್ರ ತಮ್ಮ ಪಾಡ್‌ಕಾಸ್ಟ್‌ಗಳಿಗಾಗಿ ವೀಡಿಯೊಗಳನ್ನು ಮಾಡಲು ಅನುಮತಿಸಿದೆ. ಅಲ್ಲದೆ ಸ್ಟ್ರೀಮಿಂಗ್ ಸೇವೆಯು ಅದರ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ಕ್ರಿಯೆಟರ್ಸ್‌ಗಳಿಗಾಗಿ ವಿಸ್ತರಿಸುತ್ತದೆ.

ಸ್ಪಾಟಿಫೈ

ಸದ್ಯ ಸ್ಪಾಟಿಫೈ ವೀಡಿಯೊ ಪಾಡ್‌ಕಾಸ್ಟ್‌ಗಳು ಇದೇ ಸೆಪ್ಟೆಂಬರ್ 1 ರಿಂದ ಸ್ಪಾಟಿಫೈನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ. ಈ ಮೂಲಕ ಬಳಕೆದಾರರಿಗೆ ಮ್ಯೂಸಿಕ್‌ ಜೊತೆಗೆ ವಿಡಿಯೋ ಸ್ಟ್ರಿಮಿಂಗ್‌ ಅವಕಾಶ ಸಹ ಲಬ್ಯವಾಗಲಿದೆ. ಜೊತೆಗೆ ಕ್ರಿಯೆಟರ್ಸ್‌ಗಳು ಮಾಡುವ ವಿಡಿಯೋಗಳು ಕೂಡ ವಿಡಿಯೋ ಪಾಡ್‌ಕಾಸ್ಟ್‌ನಲ್ಲಿ ಡಿಸ್‌ಪ್ಲೇ ಆಗಲಿದೆ ಎಂದು ಹೇಳಲಾಗ್ತಿದೆ. ಬುಕ್ ಆಫ್ ಬಾಸ್ಕೆಟ್‌ಬಾಲ್ 2.0, ಫ್ಯಾಂಟಸಿ ಫುಟ್‌ಬಾಲ್ ಪ್ಲೇಯರ್ಸ್‌, ದಿ ಮಿಸ್‌ಫಿಟ್ಸ್ ಪಾಡ್‌ಕ್ಯಾಸ್ಟ್, ಎಚ್ 3 ಪಾಡ್‌ಕ್ಯಾಸ್ಟ್, ದಿ ಮಾರ್ನಿಂಗ್ ಟೋಸ್ಟ್, ವ್ಯಾನ್ ಲಥನ್ ಮತ್ತು ರಾಚೆಲ್ ಲಿಂಡ್ಸೆ, ಮತ್ತು ರೂಸ್ಟರ್ ಟೀತ್ ಪಾಡ್‌ಕ್ಯಾಸ್ಟ್‌ನಂತಹ ಕೆಲವು ವೀಡಿಯೊ ಪಾಡ್‌ಕ್ಯಾಸ್ಟ್ ವೀಕ್ಷಣೆಗೆ ಸ್ಪಾಟಿಫೈ ಅವಕಾಶ ನಿಡಿದೆ.

Most Read Articles
Best Mobiles in India

English summary
Spotify's video podcasts are available on its mobile app and desktop version.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X