ವಾಟ್ಸಾಪ್ ಬಳಕೆದಾರರನ್ನು ಕಂಗಾಲು ಮಾಡಿದ Pink WhatsApp ಲಿಂಕ್!

|

ನೆನ್ನೆ (ಶುಕ್ರವಾರ) ಸಂಜೆಯಿಂದ ವಾಟ್ಸಾಪ್‌ ಬಳಕೆದಾರರಲ್ಲಿ ಹೆಚ್ಚು ಸದ್ದು ಮಾಡಿರುವುದು ಒಂದೆ ಅದುವೇ ಪಿಂಕ್ ವಾಟ್ಸಾಪ್ ಲಿಂಕ್. ಈ ಲಿಂಕ್ ನಿಮ್ಮ ವಾಟ್ಸಾಪ್‌ ಅನ್ನು ಪಿಂಕ್ ಬಣ್ಣಕ್ಕೆ ಬದಲಾಯಿಸಲು ಈ ಲಿಂಕ್ ಒತ್ತಿರಿ ಎನ್ನುವ ಮೆಸೆಜ್ ಹೊಂದಿದ್ದು, ಅನೇಕ ವಾಟ್ಸಾಪ್‌ ಬಳಕೆದಾರರು ವೈಯಕ್ತಿಕ ಮೆಸೆಜ್ ಹಾಗೂ ಗ್ರೂಪ್‌ ಮೆಸೆಜ್‌ಗಳ ಮೂಲಕ ಈ ಪಿಂಕ್ ವಾಟ್ಸಾಪ್ ಲಿಂಕ್ ಪಡೆದಿದ್ದಾರೆ. ಆದರೆ ಇದೊಂದು ಮಾಲ್‌ವೇರ್/ದುರುದ್ದೇಶದ ವೈರಸ್ ಆಗಿದೆ.

ಹೌದು, ಅನೇಕರು ವಾಟ್ಸಾಪ್‌ ಬಳಕೆದಾರರು ನೆನ್ನೆಯಿಂದ ಈ Pink WhatsApp- ಪಿಂಕ್ ವಾಟ್ಸಾಪ್ ಲಿಂಕ್‌ನಿಂದಾಗಿ ಕಂಗಾಲಾಗಿದ್ದಾರೆ. ಯಾವ ವಾಟ್ಸಾಪ್ ಗ್ರೂಪ್‌ ನೋಡಿದರೂ ಬರೀ Pink WhatsApp ಪಿಂಕ್ ವಾಟ್ಸಾಪ್ ಲಿಂಕ್‌ನದ್ದೇ ಹಾವಳಿ. ಅಷ್ಟಕ್ಕೂ ಈ ಲಿಂಕ್ ಒತ್ತಿದರೇ ನಿಮ್ಮ ವಾಟ್ಸಾಪ್‌ ಪಿಂಕ್ ಬಣ್ಣಕ್ಕೆ ಬದಲಾಗುತ್ತೆ ಅಂದುಕೊಂಡಿದ್ದಿರಾ.? ಖಂಡಿತಾ ಇಲ್ಲ ಏಕೆಂದರೇ ಅಸಲಿಗೆ ಈ ಲಿಂಕ್ ಅಧಿಕೃತ ವಾಟ್ಸಾಪ್ ಸಂಸ್ಥೆಯದ್ದಲ್ಲ. ಒಂದು ವೇಳೆ ವಾಟ್ಸಾಪ್ ಅಪ್‌ಡೇಟ್‌ ಮಾಡುವುದೇ ಆದಲ್ಲಿ ಸಂಸ್ಥೆಯು ಈ ರೀತಿಯ ಲಿಂಕ್ ನೀಡುವುದಿಲ್ಲ. ಹೀಗಾಗಿ ಇದೊಂದು ಮಾಲ್‌ವೇರ್‌ ಕುತಂತ್ರವಾಗಿದೆ.

ಲಿಂಕ್

ವಾಟ್ಸಾಪ್‌ ಖಾತೆಗಳಲ್ಲಿ ಹರಿದಾಡುತ್ತಿರುವ ಈ ಪಿಂಕ್ ವಾಟ್ಸಾಪ್ ಲಿಂಕ್ ಒತ್ತಿದ ಕೂಡಲೇ ತನ್ನಷ್ಟಕ್ಕೇ ಅವರ ಹೆಸರಲ್ಲಿ ಅದೇ ಲಿಂಕ್ ಫಾರ್ವಡ್ ಆಗ್ತಾ ಇತ್ತು. ಯಾರ ಜೊತೆಗೆಲ್ಲಾ ವಾಟ್ಸಾಪ್ ಕನೆಕ್ಷನ್ ಹೊಂದಿದ್ದಾರೋ ಅವರೆಲ್ಲರಿಗೂ ಈ ಪಿಂಕ್ ವಾಟ್ಸಾಪ್ ಲಿಂಕ್ ತನ್ನಿಂದ ತಾನೇ ಹೋಗ್ತಾ ಇತ್ತು. Pink WhatsApp ಹೆಸರಲ್ಲಿ ಸೈಬರ್‌ಗಳ ಕುತಂತ್ರದ ಕೆಲಸ ಇದಾಗಿದೆ.

ಗ್ರೂಪ್

ವಾಟ್ಸಾಪ್‌ನಲ್ಲಿ ಈ ಲಿಂಕ್ ಪಡೆದ ಬಳಕೆದಾರ ಇದು ವಾಟ್ಸಾಪ್‌ನ ಹೊಸ ವರ್ಷನ್ ಇರಬೇಕು ಎಂದು ಲಿಂಕ್ ಅನ್ನು ಒತ್ತಿದ ಕೂಡಲೇ ಅದು ಆ ಬಳಕೆದಾರನ ವಾಟ್ಸಾಪ್ ಖಾತೆಯ ಕಾಂಟ್ಯಾಕ್ಟ್‌ ಎಲ್ಲರ ಜೊತೆಗೂ ಹಂಚಿಕೆ ಆಗ್ತಾ ಇತ್ತು. ಈ ಲಿಂಕ್ ತನ್ನಿಂದ ತಾನೇ ಒತ್ತಿದ ವ್ಯಕ್ತಿ ಎಷ್ಟು ಗ್ರೂಪ್ ಗಳಲ್ಲಿ ಸದಸ್ಯರಾಗಿದ್ದಾರೆ ಮತ್ತು ಅವರ ಜೊತೆ ವೈಯಕ್ತಿಕವಾಗಿ ಯಾರೆಲ್ಲ ಲಿಂಕ್ ಹೊಂದಿದ್ದಾರೆ ಅವೆರಲ್ಲರಿಗೂ ಈ ಲಿಂಕ್ ಹೋಗ್ತಾ ಇತ್ತು. ಇದು ಹೊಸ ರೀತಿಯ ದುರುದ್ದೇಶದ ಸೈಬರ್ ವೈರಸ್ ಆಗಿದೆ.

ಬಹುತೇಕ

ಕೆಲವರಂತೂ ಈ ಲಿಂಕ್ ವೈರಸ್ ಅನ್ನೋದು ಗೊತ್ತಾಗುತ್ತಲೇ ಮತ್ತೆ ಡಿಲೀಟ್ ಬಟನ್ ಒತ್ತಲು ಆರಂಭಿಸಿದ್ದಾರೆ. ಆದರೆ, ಒಮ್ಮೆ ಒತ್ತಿದರೆ ಮುಗೀತು ಕ್ಷಣಾರ್ಧದಲ್ಲಿ ಸಾವಿರಾರು ಮಂದಿಗೆ ಲಿಂಕ್ ಹಂಚಿಕೆಯಾಗಿರುತ್ತೆ. ಸಾವಿರಾರು ಮಂದಿ ಈ ಲಿಂಕ್ ಕೂಪಕ್ಕೆ ಒದ್ದಾಡುವಂತಾಗಿದೆ. ಬಹುತೇಕ ಮೀಡಿಯಾ ಮಂದಿಯೂ ಇದರಿಂದ ಹೊರತಾಗಿಲ್ಲ. ಒಂದು ವೇಳೆ ಈ ಪಿಂಕ್ ವಾಟ್ಸಾಪ್ ಹೆಸರಿನ ಫೇಕ್/ಕುತಂತ್ರ ಆಪ್‌ ನಿಮ್ಮ ಮೊಬೈಲ್‌ ಸೇರಿದ್ದರೆ, ಅದನ್ನು ಡಿಲೀಟ್ ಮಾಡುವುದು ಸೂಕ್ತ.

ವಾಟ್ಸಾಪ್

ಪ್ರಸ್ತುತ ಸೈಬರ್ ಕಳ್ಳರು ನಾನಾ ದುರುದ್ದೇಶಗಳಿಗೆ ಹೊಸ ಮಾರ್ಗದ ಮೂಲಕ ಯಾಮಾರಿಸಲು ಪ್ರಯತ್ನಿಸುತ್ತಿರುತ್ತಾರೆ. ಹೀಗಾಗಿ ಮೊಬೈಲ್‌ನಲ್ಲಿ ಬರುವ ಯಾವುದೇ ಆಫರ್, ಕೊಡುಗೆ, ಬಹುಮಾನದ ಲಿಂಕ್‌ಗಳನ್ನು ಹಾಗೂ ಈ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ, ಹತ್ತು ವಾಟ್ಸಾಪ್ ಕಾಂಟ್ಯಾಕ್ಟ್‌ಗೆ ಶೇರ್ ಮಾಡಿ ಎನ್ನುವ ಯಾವುದೇ ಲಿಂಖ್‌ಗಳನ್ನು ತೆರೆಯಬೇಡಿರಿ. ಸದ್ಯ ಮೊಬೈಲ್‌ನಲ್ಲಿ ಪಿಂಕ್ ವಾಟ್ಸಾಪ್ ಸೇರಿದ್ದರೇ ಅದನ್ನು ಅನ್‌ಇನ್‌ಸ್ಟಾಲ್ ಮಾಡಲು ಹೀಗೆ ಮಾಡಿ> ನಿಮ್ಮ ಫೋನಿನ ಸೆಟ್ಟಿಂಗ್ ಮೆನು ತೆರೆಯಿರಿ ನಂತರದಲ್ಲಿ ಆಪ್ ವಿಭಾಗಕ್ಕೆ ಹೋಗಿರಿ. ಅಲ್ಲಿ ಪಿಂಕ್ ಬಣ್ಣದ ಐಕಾನ ಇರುವ ಪಿಂಕ್ ವಾಟ್ಸಾಪ್ ಅನ್ನು ಕ್ಲಿಕ್ಕ ಮಾಡಿರಿ. ಆ ನಂತರದಲ್ಲಿ ಅನ್‌ಇನ್‌ಸ್ಟಾಲ್‌ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.

Most Read Articles
Best Mobiles in India

English summary
Users are shocked by the rapid spread of the ‘Pink WhatsApp’ virus in most WhatsApp groups.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X