ವಾಟ್ಸಾಪ್‌ನಿಂದ ‘ಸ್ಟ್ಯಾಂಡ್ ಅಪ್ ಫಾರ್ ಅರ್ಥ್’ ಸ್ಟಿಕ್ಕರ್‌ ಪ್ಯಾಕ್‌ ಬಿಡುಗಡೆ!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ಆಗಿದೆ. ವಾಟ್ಸಾಪ್‌ ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ನು ವಾಟ್ಸಾಪ್‌ನಲ್ಲಿ ಬಳಕೆದಾರರು ತಮ್ಮ ಭಾವನೆಗಳನ್ನು ಸ್ನೇಹಿತರೊಂದಿಗೆ ಸ್ಟಿಕ್ಕರ್‌ ರೂಪದಲ್ಲಿಯೂ ಸಹ ಶೇರ್‌ ಮಾಡಿಕೊಳ್ಳಬಹುದು.ಇದಕ್ಕಾಗಿ ಈಗಾಗಲೇ ಸ್ಟಿಕ್ಕರ್‌ ಫೀಚರ್ಸ್‌ ಅನ್ನು ವಾಟ್ಸಾಪ್‌ ಪರಿಚಯಿಸಿದೆ. ಸದ್ಯ ಇದೀಗ ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ 'ಸ್ಟ್ಯಾಂಡ್ ಅಪ್ ಫಾರ್ ಅರ್ಥ್' ಎಂಬ ಹೊಸ ಸ್ಟಿಕ್ಕರ್ ಪ್ಯಾಕ್ ಅನ್ನು ಪರಿಚಯಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ‘ಸ್ಟ್ಯಾಂಡ್ ಅಪ್ ಫಾರ್ ಅರ್ಥ್' ಎಂಬ ಹೊಸ ಸ್ಟಿಕ್ಕರ್‌ ಫೀಚರ್ಸ್‌ ಪರಿಚಯಿಸಿದೆ. ಇದು ಹೊಸ ಮಾದರಿಯ ಸ್ಟಿಕ್ಕರ್‌ಗಳನ್ನು ಹೊಂದಿದ್ದು, ಜಗತ್ತಿನಾದ್ಯಂತ ಎದುರಿಸುತ್ತಿರುವ ಕೆಲವು ಪರಿಸರ ಸವಾಲುಗಳನ್ನು ಒಳಗೊಂಡಿದೆ. ಮರುಬಳಕೆ, ವಿದ್ಯುತ್ ಕಡಿಮೆ ಮಾಡುವುದು ಮತ್ತು ನೀರು ಉಳಿತಾಯ ಮಾಡುವ ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಲು ಇದು ಬಳಕೆದಾರರನ್ನು ಪ್ರೋತ್ಸಾಹಿಸುತ್ತದೆ. ಹಾಗಾದ್ರೆ ‘ಸ್ಟ್ಯಾಂಡ್ ಅಪ್ ಫಾರ್ ಅರ್ಥ್' ಸ್ಟಿಕ್ಕರ್‌ ಪ್ಯಾಕ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಕೊಡ್ತೀವಿ ಓದಿರಿ.

ವಾಟ್ಸಾಪ್

ವಾಟ್ಸಾಪ್ ಹೊಸದಾಗಿ ಪರಿಚಯಿಸಿದ ಸ್ಟ್ಯಾಂಡ್ ಅಪ್ ಫಾರ್ ಅರ್ಥ್ ಸ್ಟಿಕ್ಕರ್ ಪ್ಯಾಕ್ ಹೆಸರಿನಂತೆಯೆ ಜಾಗತಿಕ ಸವಾಲುಗಳ ಬಗ್ಗೆ ಅರಿವು ಮೂಡಿಸುವ ಸ್ಟಿಕ್ಕರ್‌ಗಳನ್ನು ಒಳಗೊಂಡಿದೆ. ಪರಿಸರ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳು, ಮರಗಿಡ ಬೆಳೆಸುವ ಕ್ರಮಗಳ ಬಗ್ಗೆ ಪ್ರೋತ್ಸಾಹಿಸುವ ಸ್ಟಿಕ್ಕರ್‌ಗಳನ್ನು ಇದರಲ್ಲಿ ಕಾಣಬಹುದಾಗಿದೆ. ಇನ್ನು ಈ ಸ್ಟಿಕ್ಕರ್‌ ಪ್ಯಾಕ್‌ ಅನ್ನು ಬರ್ಲಿನ್‌ನಲ್ಲಿ ವಾಸಿಸುತ್ತಿರುವ ಅರ್ಜೆಂಟೀನಾದ ಸಚಿತ್ರಕಾರ ಜುವಾನ್ ಮೊಲಿನೆಟ್ ರಚಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಸ್ಟಿಕ್ಕರ್ ಪ್ಯಾಕ್ ಅನ್ನು ಬಳಸುವುದು ಹೇಗೆ ಎಂದು ತಿಳಿಯಲು ಕೆಳಗಿನ ಹಂತಗಳನ್ನು ಅನುಸರಿಸಿ.

‘ಸ್ಟ್ಯಾಂಡ್ ಅಪ್ ಫಾರ್ ಅರ್ಥ್' ಸ್ಟಿಕ್ಕರ್‌ ಪ್ಯಾಕ್‌ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

‘ಸ್ಟ್ಯಾಂಡ್ ಅಪ್ ಫಾರ್ ಅರ್ಥ್' ಸ್ಟಿಕ್ಕರ್‌ ಪ್ಯಾಕ್‌ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1: ವಾಟ್ಸಾಪ್ ತೆರೆಯಿರಿ ಮತ್ತು ನಂತರ ಯಾವುದೇ ಚಾಟ್ ವಿಂಡೋವನ್ನು ತೆರೆಯಿರಿ.

ಹಂತ 2: ಚಾಟ್‌ಬಾಕ್ಸ್‌ನಲ್ಲಿ ಟ್ಯಾಪ್ ಮಾಡಿ ನಂತರ ಸ್ಟಿಕ್ಕರ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 3: ಈಗ, ಸ್ಟಿಕ್ಕರ್ ಆಯ್ಕೆಯನ್ನು ಮತ್ತೆ ಟ್ಯಾಪ್ ಮಾಡಿ.

ಹಂತ 4: ನಂತರ, ಪ್ಲಸ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ 5: ವಿಶ್ವ ಭೂ ದಿನದ ಸ್ಟಿಕ್ಕರ್ ಪ್ಯಾಕ್‌ನ ಪಕ್ಕದಲ್ಲಿರುವ ಡೌನ್‌ಲೋಡ್ ಬಟನ್ ಟ್ಯಾಪ್ ಮಾಡಿ.

ಸ್ಟಿಕ್ಕರ್

ಇನ್ನು ಹೊಸ ಸ್ಟಿಕ್ಕರ್ ಪ್ಯಾಕ್ ಅನ್ನು ಪ್ರಾರಂಭಿಸುವುದರ ಜೊತೆಗೆ, ಕಂಪನಿಯು ಹಲವಾರು ಹೊಸ ವಾಲ್‌ಪೇಪರ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಈ ವಾಲ್‌ಪೇಪರ್‌ಗಳಲ್ಲಿ ನಮ್ಮ ಗ್ರಹದ ಸೌಂದರ್ಯವನ್ನು ತೋರಿಸುವ ವಾಲ್‌ಪೇಪರ್‌, ಹುಲ್ಲುಗಾವಲುಗಳು, ರಾತ್ರಿಯಲ್ಲಿ ನದಿ ತೀರ, ಎತ್ತರದ ಪ್ರದೇಶಗಳ ಸೌಂದರ್ಯ ತೋರುವ ವಾಲ್‌ಪೇಪರ್‌ಗಳು ಲಭ್ಯವಿವೆ. ಈ ವಾಲ್‌ಪೇಪರ್‌ಗಳನ್ನು ಬಳಸಲು, ವಾಟ್ಸಾಪ್‌ ಸೆಟ್ಟಿಂಗ್‌ಗಳು> ಚಾಟ್‌ಗಳು> ಚಾಟ್ ವಾಲ್‌ಪೇಪರ್> ವಾಲ್‌ಪೇಪರ್ ಆಯ್ಕೆಮಾಡಿ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

Most Read Articles
Best Mobiles in India

English summary
stand up for earth sticker pack now available on whatsapp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X