Just In
Don't Miss
- News
ಹೈದರಾಬಾದ್ ಘಟನೆ ನಂತರ ಮಹಿಳೆಯರ ಸುರಕ್ಷತೆಗೆ ನಮ್ಮ ಮೆಟ್ರೋ ಕ್ರಮ
- Automobiles
ಟ್ರೈಬರ್ ಕಾರಿಗೆ ಭರ್ಜರಿ ಬೇಡಿಕೆ- ಕಾರು ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ರೆನಾಲ್ಟ್
- Movies
ಅತ್ಯಾಚಾರಿಗಳ ಎನ್ ಕೌಂಟರ್: ಉಪ್ರೇಂದ ಟ್ವೀಟ್ ವಿರುದ್ಧ ನೆಟ್ಟಿಗರ ಆಕ್ರೋಶ
- Sports
ಐಎಸ್ಎಲ್: ನಾರ್ತ್ ಈಸ್ಟ್-ಎಟಿಕೆಗೆ ಡ್ರಾವನ್ನು ಜಯವಾಗಿಸಲು ಸೂಕ್ತ ಕಾಲ
- Finance
ಸರ್ಕಾರ ನೆರವು ಕೊಡದಿದ್ರೆ ವೊಡಾಫೋನ್-ಐಡಿಯಾ ಮುಚ್ಚಬೇಕು: ಕೆ.ಎಂ. ಬಿರ್ಲಾ
- Lifestyle
ಶನಿವಾರದ ದಿನ ಭವಿಷ್ಯ 07-12-2019
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಇಂತಹ ಗ್ರಾಹಕರ ಇಂಟರ್ನೆಟ್ ಬ್ಯಾಂಕಿಂಗ್ ಆಕ್ಸಿಸ್ ಬ್ಲಾಕ್ ಮಾಡಲಿದೆ ಎಸ್ಬಿಐ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಯಾವ ಗ್ರಾಹಕರದ್ದು ರಿಜಿಸ್ಟ್ರರ್ಡ್ ಮೊಬೈಲ್ ನಂಬರ್ ಇರುವುದಿಲ್ಲವೋ ಅಥವಾ ಯಾವ ಗ್ರಾಹಕರು ತಮ್ಮ ಮೊಬೈಲ್ ನಂಬರ್ ನ್ನು ತಮ್ಮ ಖಾತೆಯೊಂದಿಗೆ ರಿಜಿಸ್ಟ್ರರ್ ಮಾಡಿಕೊಂಡಿರುವುದಿಲ್ಲವೋ ಅಂತಹ ಗ್ರಾಹಕರ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಮ್ಮ ಬ್ಯಾಂಕಿನಲ್ಲಿ ಬ್ಲಾಕ್ ಮಾಡುವುದಕ್ಕೆ ಮುಂದಾಗಿದೆ. ಯಾವುದೇ ಎಸ್ ಬಿಐ ಅಕೌಂಟ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿಲ್ಲದೇ ಇದ್ದಲ್ಲಿ ಮತ್ತು ಅದರ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ನೀವು ಪಡೆಯುತ್ತಿದ್ದಲ್ಲಿ ಅಂತಹವರ ಇಂಟರ್ನೆಟ್ ಬ್ಯಾಂಕಿಂಗ್ ಆಕ್ಸಿಸ್ ಡಿಸೆಂಬರ್ 1 ರಿಂದ ಕಟ್ ಆಗುತ್ತದೆ.
ಒಂದು ವೇಳೆ ನೀವು ಕೂಡ ಎಸ್ ಬಿಐ ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲವಾದಲ್ಲಿ ಕೂಡಲೇ ನಿಮ್ಮ ಹತ್ತಿರದ ಎಸ್ ಬಿಐ ಬ್ಯಾಂಕಿಗೆ ನವೆಂಬರ್ 30 ರ ಒಳಗೆ ತೆರಳಿ. ಬ್ಯಾಂಕಿಗೆ ತೆರಳುವ ಮುನ್ನ ನಿಮ್ಮ ಎಸ್ ಬಿಐ ಅಕೌಂಟಿಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿದೆಯೋ ಇಲ್ಲವೋ, ಎಸ್ ಬಿಐ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಬಳಸಬಹುದೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಿರಿ.
SBI ಇಂಟರ್ನೆಟ್ ಬ್ಯಾಂಕಿಂಗ್ ವೆಬ್ ಸೈಟ್ ಗೆ ನಿಮ್ಮ ಡೆಸ್ಕ್ ಟಾಪ್ ನ ಯಾವುದೇ ಬ್ರೌಸರ್ ಮೂಲಕ ತೆರಳಬಹುದು. -- www.onlinesbi.com
ಫುಲ್ ಫ್ಲೆಡ್ಜ್ ಆಗಿ ಆನ್ ಲೌನ್ ಬ್ಯಾಂಕಿಂಗ್ ಸೈಟ್ ಗೆ ನಿಮ್ಮ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ (Yono ಅಥವಾ ಲೈಟ್ ಸೈಟ್ ಅಲ್ಲ)
ಒಮ್ಮೆ ಲಾಗಿನ್ ಆದ ನಂತರ, ಮೈ ಅಕೌಂಟ್ಸ್ ಮತ್ತು ಪ್ರೊಫೈಲ್ ಟ್ಯಾಬ್ ನ್ನು ಕ್ಲಿಕ್ಕಿಸಿ
ಮೈ ಅಕೌಂಟ್ಸ್ ಮತ್ತು ಪ್ರೊಫೈಲ್ ಟ್ಯಾಬ್ ನ ಅಡಿಯಲ್ಲಿನ ಡ್ರಾಪ್ ಡೌನ್ ಮೆನು ಮೂಲಕ 'Profile’ ಆಯ್ಕೆಯನ್ನು ಸೆಲೆಕ್ ಮಾಡಿ.
'Personal Details/Mobile’ ಆಯ್ಕೆಯನ್ನು ಕ್ಲಿಕ್ಕಿಸಿ.
ನಂತರ ನೀವು ಪ್ರೊಫೈಲ್ ಪಾಸ್ ವರ್ಡ್ ನ್ನು ಎಂಟರ್ ಮಾಡಿ. ( ಸೂಚನೆ: ಇದು ನಿಮ್ಮ ಲಾಗಿನ್ ಪಾಸ್ ವರ್ಡ್ ಅಲ್ಲ ಬದಲಾಗಿ ಮತ್ತೊಂದು ಸಪರೇಟ್ ಪಾಸ್ ವರ್ಡ್ ಆಗಿರುತ್ತದೆ. )
ಪರ್ಸನಲ್ ಡೀಟೆಲ್ಸ್ ಪುಟವು ನಿಮ್ಮ ನಿಮ್ಮ ರಿಜಿಸ್ಟ್ರರ್ಡ್ ಹೆಸರು, ಇಮೇಲ್ ಐಡಿ ಮತ್ತು ನಿಮ್ಮ ಅಕೌಂಟಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನ್ನು ತೋರಿಸುತ್ತದೆ.
ಒಂದು ವೇಳೆ ನೀವು ನಿಮ್ಮ ಅಕೌಂಟಿಗೆ ನಿಮ್ಮ ಮೊಬೈಲ್ ನಂಬರ್ ನ್ನು ಲಿಂಕ್ ಮಾಡಿದ್ದಲ್ಲಿ ಅದು ನಿಮಗೆ 98XXXXXXXX ಫಾರ್ಮೇಟ್ ನಲ್ಲಿ ನಿಮಗೆ ತೋರಿಸುತ್ತದೆ.
ಒಂದು ವೇಳೆ ಮೊಬೈಲ್ ನಂಬರ್ ಲಿಂಕ್ ಆಗಿಲ್ಲದೇ ಇದ್ದಲ್ಲಿ ಅದು ಬ್ಲಾಂಕ್ ಆಗಿರುತ್ತದೆ ಮತ್ತು ನೀವು ಹತ್ತಿರದ ಎಸ್ ಬಿಐ ಶಾಖೆಗೆ ತೆರಳಿ ನಿಮ್ಮ ಮೊಬೈಲ್ ನಂಬರ್ ನ್ನು ಲಿಂಕ್ ಮಾಡಬೇಕಾಗುತ್ತದೆ.
ಒಂದು ವೇಳೆ ಮೊಬೈಲ್ ನಂಬರ್ ಇಲ್ಲದೇ ಇದ್ದಲ್ಲಿ ಡಿಸೆಂಬರ್ 1 ರಿಂದ ಕೇವಲ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವು ಬ್ಲಾಕ್ ಆಗುತ್ತದೆ.
ಎಸ್ ಬಿಐ ಬ್ಯಾಂಕ್ ಮೊಬೈಲ್ ನಂಬರ್ ಲಿಂಕ್ ಆಗಿರದ ಅಕೌಂಟಿನ ಇತರ ಕಾರ್ಯಚಟುವಟಿಕೆಗಳನ್ನು ಮತ್ತು ಸೇವೆಗಳನ್ನು ಮುಂದುವರಿಸುತ್ತದೆ ಎಂಬುದು ನೆನಪಿರಲಿ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090