ಇಹಲೋಕ ತ್ಯಜಿಸಿದ ಸ್ಟೀಫನ್ ಹಾಕಿಂಗ್ ಜೀವನ ಕುರಿತ ರೋಚಕ ಸಂಗತಿಗಳು...!

|

ವಿಶ್ವ ಭೌತಶಾಸ್ತ್ರ ಕ್ಷೇತ್ರಕ್ಕೆ ಅಮೋಘ ಕಾಣಿಕೆಯನ್ನು ನೀಡಿದ್ದ ಇಂಗ್ಲೆಂಡ್‌ನ ಪ್ರಸಿದ್ಧ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್(76) ಇಂದು ಇಹಲೋಕವನ್ನು ತ್ಯಜಿಸಿದ್ದಾರೆ. ಈ ಕುರಿತು ಬಿಬಿಸಿ ವರದಿ ಮಾಡಿದೆ. ಇಂಗ್ಲಿಷ್ ಭೌತಶಾಸ್ತ್ರಜ್ಞರಾಗಿದ್ದ ಇವರು, 1942ರ ಜನವರಿ 8ರಂದು ಅವರು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿ ಜನಿಸಿದ್ದರು. ಸುಮಾರು ನಾಲ್ಕು ದಶಕಕ್ಕೂ ಹೆಚ್ಚು ಕಾಲ ಭೌತ ವಿಜ್ಞಾನ ಕ್ಷೇತ್ರದಲ್ಲಿ ಸ್ಮರಣಿಯ ಸೇವೆಯನ್ನು ಸಲ್ಲಿಸಿದ್ದಾರೆ.

ಇಹಲೋಕ ತ್ಯಜಿಸಿದ ಸ್ಟೀಫನ್ ಹಾಕಿಂಗ್ ಜೀವನ ಕುರಿತ ರೋಚಕ ಸಂಗತಿಗಳು...!

ಸೈದ್ಧಾಂತಿಕ ವಿಶ್ವವಿಜ್ಞಾನ ಹಾಗೂ ಕ್ವಾಂಟಮ್‌ ಗುರುತ್ವಾಕರ್ಷಣೆ, ಬ್ಲ್ಯಾಕ್ ಹೋಲ್ ಕುರಿತು ಇವರು ಮಾಡಿದ ಸಂಶೋಧನೆಯೂ ವಿಶ್ವವಿಕಸದ ಕುರಿತು ತಿಳಿದುಕೊಳ್ಳಲು ಸಾಕಷ್ಟು ಸಹಾಯ ಮಾಡಿದೆ. ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ ಎಂಬ ತೀವ್ರತರದ ಸ್ನಾಯುಚಾಲಕ ನರಕೋಶದ ಖಾಯಿಲೆಯಿಂದ ಹಲವು ವರ್ಷಗಳಿಂದ ಬಳಲುತ್ತಿದ್ದ ಸ್ಟೀಫನ್ ಹಾಕಿಂಗ್ 76ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ರೂ.13,500ಕ್ಕೆ ಇಂಟೆಲ್ ಪ್ರೋಸೆಸರ್ ಇರುವ ವಿಂಡೋಸ್ 10 ಮಿನಿ ಕಂಪ್ಯೂಟರ್..!

ಸ್ಟೀಫನ್ ಹಾಕಿಂಗ್ ಸಾಧನೆಗಳಿಂದ ವಿಶ್ವದ ಗಮನ ಸೆಳೆದವರಾಗಿದ್ದು, ಅವರ ಜೀವನದಲ್ಲಿ ಸಾಕಷ್ಟು ಆಸಕ್ತಿಕರ ಸಂಗತಿಗಳಿವೆ. ಮಾನವನ ಬಗೆಗಿನ ಅವರ ನಿಲುವು, ಭೂಮಿಗೆ ಬರಲಿರುವ ಹಾರುವ ತಟ್ಟೆಗಳು, ವಿಶ್ವದ ವಿನಾಶ ಹೀಗೆ ಅವರು ನೀಡುವ ಮಾಹಿತಿಗಳು ಸತ್ಯಕ್ಕೆ ಹತ್ತಿರವಾಗಿತ್ತು. ಈ ಹಿನ್ನಲೆಯಲ್ಲಿ ಸ್ಟೀಫನ್ ಹಾಕಿಂಗ್ ಅವರ ಜೀವನದ ರೋಚಕತೆಯ ಬಗ್ಗೆ ಮಾಹಿತಿಯೂ ಇಲ್ಲಿದೆ.

ಶಾಲೆಯಲ್ಲಿ ಸಾಮಾನ್ಯ ವಿಧ್ಯಾರ್ಥಿ:

ಶಾಲೆಯಲ್ಲಿ ಸಾಮಾನ್ಯ ವಿಧ್ಯಾರ್ಥಿ:

ಶಾಲಾ ದಿನಗಳಲ್ಲಿ ಅಷ್ಟೊಂದು ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಸ್ಟೀಫನ್ ಅತಿ ಕಷ್ಟದಿಂದ ಪರೀಕ್ಷೆಗಳನ್ನು ಎದುರಿಸಿ ಪಾಸಾಗುತ್ತಿದ್ದರು. ಆದರೆ ಅವರಲ್ಲಿ ಅಗಾಧವಾದ ಪ್ರತಿಭೆ ಅಡಗಿತ್ತು. ಮುಂದೊಂದು ದಿನ ಶ್ರೇಷ್ಟ ಸಾಧಕರಾಗು ಲಕ್ಷಣವಿತ್ತು.

ಭೌತವಿಜ್ಞಾನದ ಒಲವು:

ಭೌತವಿಜ್ಞಾನದ ಒಲವು:

ಸ್ಟೀಫನ್ ತಂದೆಯವರಾದ ಫ್ರಾಂಕ್‌ ಅವರಿಗೆ ಮಗ ವೈದ್ಯನಾಗಬೇಕೆಂಬ ಕನಸಿತ್ತು, ಆದರೆ ಸ್ಟೀಫನ್‌ಗೆ ಭೌತ ವಿಜ್ಞಾನದಲ್ಲಿ ಹೆಚ್ಚಿನ ಒಲವು ಹೊಂದಿದ್ದರು ಎನ್ನಲಾಗಿದೆ.

ಆಕ್ಸ್‌ಫರ್ಡ್ ನಲ್ಲಿ ಆರಂಭದ ದಿನಗಳು:

ಆಕ್ಸ್‌ಫರ್ಡ್ ನಲ್ಲಿ ಆರಂಭದ ದಿನಗಳು:

ಆಕ್ಸ್‌ಫರ್ಡ್‌ ಸೇರಿಕೊಂಡ ಸ್ಟೀಫನ್, ಮೊದಲ ವರ್ಷದಲ್ಲಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಅಧ್ಯಯನವನ್ನುನಡೆಸಿದರು ಎನ್ನಲಾಗಿದ್ದು, ದಿನ ಕಳೆದಂತೆ ಕಾಲೇಜಿನಲ್ಲಿ ಪ್ರಸಿದ್ಧರಾದರು.

22ನೇ ವಯಸ್ಸಿಗೆ:

22ನೇ ವಯಸ್ಸಿಗೆ:

ಸ್ಟೀಫನ್ 22ನೇ ವಯಸ್ಸಿನಲ್ಲಿಯೇ ದೇಹಗಳ ಮೇಲಿನ ಸ್ನಾಯುಗಳ ನಿಯಂತ್ರಣವನ್ನು ಕಳೆದುಕೊಂಡಿದ್ದರು, ಲೋ ಗೆರಿಗ್ಸ್ ಎಂದ ಅತೀ ವಿರಳ ಖಾಯಿಲೆಯಿಂದ ಬಳಸುತ್ತಿದ್ದ ಅವರು, ಕೇವಲ 5 ವರ್ಷ ಮಾತ್ರವೇ ಬದುಕುವರು ಎನ್ನಲಾಗಿತ್ತು.

ಚಲಬಿಡದ ಸ್ಟೀಫನ್:

ಚಲಬಿಡದ ಸ್ಟೀಫನ್:

ಹಾಕಿಂಗ್‌ರ ಮುಖ್ಯ ಸಾಧನೆಗಳಲ್ಲಿ 1983 ರ ವಿಶ್ವಕ್ಕೆ ಯಾವುದೇ ಸೀಮೆಗಳಿಲ್ಲ ಎಂಬ ಸಿದ್ಧಾಂತವನ್ನು ಮಂಡಿಸಿದರು. ವಿಶ್ವದ ಸ್ವಭಾವ ಮತ್ತು ಆಕಾರವನ್ನು ಅರಿತುಕೊಳ್ಳಲು ಅವರು ಪ್ರಯತ್ನಪಟ್ಟರು. ಅದರಂತೆಯೇ ವಿಶ್ವಕ್ಕೆ ಯಾವುದೇ ಸೀಮೆಗಳಿಲ್ಲ ಎಂಬುದನ್ನು ಕಂಡುಕೊಂಡರು.

ಕಪ್ಪುಕುಳಿಯ ಬಗ್ಗೆ ಸಂಶೋಧನೆ:

ಕಪ್ಪುಕುಳಿಯ ಬಗ್ಗೆ ಸಂಶೋಧನೆ:

1997 ರಲ್ಲಿ ತಮ್ಮ ಸಹ ವಿಜ್ಞಾನಿಗಳೊಂದಿಗೆ ಕಪ್ಪು ಕುಳಿಗಳು ಬಗ್ಗೆ ಸಂಶೋಧನೆಯನ್ನು ಕೈಗೊಂಡರು, ಬ್ಲ್ಯಾಕ್ ಹೋಲ್ ಬಗ್ಗೆ ಸಂಶೋಧನೆ ನಡೆಸಿ ಆ ಕುರಿತು ಹೆಚ್ಚಿನ ಮಾಹಿತಿಯನ್ನು ಹೊರಹಾಕಿದರು.

ಏಲಿಯನ್ ಸಹವಾಸ:

ಏಲಿಯನ್ ಸಹವಾಸ:

ಕಾಸ್ಮಲಜಿಯಲ್ಲಿ ಅವರು ಜ್ಞಾನವನ್ನು ಪಡೆದಿದ್ದು, ಏಲಿಯನ್ ಹಾಜರಾತಿ ಕುರಿತು ನಾಸಾದ 50 ನೇ ವಾರ್ಷಿಕ ಆಚರಣೆ ಸಂದರ್ಭದಲ್ಲಿ ಏಲಿಯನ್ ಕುರಿತು ಅವರ ಆಲೋಚನೆಗಳು ಮತ್ತು ನಂಬಿಕೆಗಳನ್ನು ಪ್ರಸ್ತುತಪಡಿಸಿದರು.

ಪ್ರಶಸ್ತಿ:

ಪ್ರಶಸ್ತಿ:

ಪ್ರತಿಷ್ಠಿತ ರಾಯಲ್‌ ಸೊಸೈಟಿಯ ಫೆಲೋ, ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಮತ್ತು ಪೋಂಟಿಫಿಶಿಯಲ್ ಅಕಾಡೆಮಿ ಆಫ್‌ ಸೈನ್ಸಸ್‌ನ ಸದಸ್ಯರೂ ಆಗಿದ್ದ ಸ್ಟೀಫನ್ ಅವರಿಗೆ ಭೌತಶಾಸ್ತ್ರದಲ್ಲಿನ ಸಾಧನೆಗೆ13 ಗೌರವ ಪದವಿಗಳು, ಚಿನ್ನದ ಪದಕ, ಅಲ್ಬರ್ಟ್ ಐನ್‌ಸ್ಟೈನ್ ಪ್ರಶಸ್ತಿ ಸೇರಿದಂತೆ ಇನ್ನೂ ಹಲವಾರು ಪದಕಗಳು, ಪಾರಿತೋಷಕಗಳು ಸಂದಿವೆ.

Most Read Articles
Best Mobiles in India

English summary
Stephen Hawking dies aged 76, to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more