ಆಂಡ್ರಾಯ್ಡ್ ಟಿವಿ ಸೆಟ್‌ಟಾಪ್‌ ಬಾಕ್ಸ್‌: ಯಾವುದು ಅಗ್ಗ?..ಯಾವುದು ಯೋಗ್ಯ?

|

ದೇಶದ ಡಿಟಿಎಚ್ ಮಾರುಕಟ್ಟೆಯಲ್ಲಿ ಕಳೆದ ವರ್ಷ ಸಾಕಷ್ಟು ಮಹತ್ತರ ಬದಲಾವಣೆಗಳು ನಡೆದಿವೆ. ಪ್ರಮುಖ ಡಿಟಿಎಚ್ ಪೊರೈಕೆದಾರ ಸಂಸ್ಥೆಗಳಾದ ಟಾಟಾಸ್ಕೈ, ಏರ್‌ಟೆಲ್ ಡಿಜಿಟಲ್ ಟಿವಿ ಹಾಗೂ ಡಿಶ್‌ ಟಿವಿ ಭಿನ್ನ ಭಿನ್ನ ಆಕರ್ಷಕ ಕೊಡುಗೆಗಳನ್ನು ಘೋಷಿಸಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿವೆ. ಹಾಗೆಯೇ ಈ ಮೂರು ಸಂಸ್ಥೆಗಳು ಆಂಡ್ರಾಯ್ಡ್ ಟಿವಿ ಸೆಟ್‌ಟಾಪ್ ಬಾಕ್ಸ್‌ ಸೌಲಭ್ಯವನ್ನು ಹೊಂದಿವೆ. ಸದ್ಯ ಆಂಡ್ರಾಯ್ಡ್ ಟಿವಿ ಸೆಟ್‌ಟಾಪ್ ಬಾಕ್ಸ್‌ ದರದಲ್ಲಿಯೂ ಪೈಪೋಟಿ ಜೋರಾಗಿದೆ.

ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಹೌದು, ಎಸ್‌ಡಿ ಹಾಗೂ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ಗಳಿಗಿಂತ ಭಿನ್ನವಾಗಿದ್ದು, ಆಂಡ್ರಾಯ್ಡ್ ಟಿವಿ ಸೆಟ್‌ಟಾಪ್‌ ಬಾಕ್ಸ್ ಅಧಿಕ ಇಂಟರ್ನೆಟ್ ಆಧಾರಿತ ಸೇವೆಗಳನ್ನು ಲಭ್ಯವಾಗುತ್ತವೆ. ಈ ನಿಟ್ಟಿನಲ್ಲಿ ಬಹುತೇಕ ಗ್ರಾಹಕರು ಪ್ರಸ್ತುತ ಆಂಡ್ರಾಯ್ಡ್ ಟಿವಿ ಸೆಟ್‌ಟಾಪ್ ಬಾಕ್ಸ್‌ ಇನ್‌ಸ್ಟಾಲ್ ಮಾಡಿಕೊಳ್ಳಲು ಮನಸು ಮಾಡುತ್ತಾರೆ. ಹೀಗಾಗಿ ಡಿಟಿಎಚ್ ಪೊರೈಕೆದಾರರು ಸದ್ಯ ಟ್ರೆಂಡಿಂಗ್‌ನಲ್ಲಿರುವ ಆಂಡ್ರಾಯ್ಡ್ ಟಿವಿ ಡಿಟಿಎಚ್ ಸೆಟ್‌ಟಾಪ್‌ನತ್ತ ಹೆಚ್ಚು ಗಮನ ನೀಡಿವೆ.

ಏರ್‌ಟೆಲ್ ಡಿಜಿಟಲ್ ಟಿವಿ

ಡಿಟಿಎಚ್ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾಸ್ಕೈ, ಏರ್‌ಟೆಲ್ ಡಿಜಿಟಲ್ ಟಿವಿ ಹಾಗೂ ಡಿಶ್‌ ಟಿವಿಗಳ ನಡುವೆ ಸ್ಪರ್ಧೆ ಇದೆ. ಏರ್‌ಟೆಲ್ ಮತ್ತು ಡಿಶ್‌ಟಿವಿ ಟಾಟಾಸ್ಕೈ ಗಿಂತ ಕಡಿಮೆ ಬೆಲೆಗೆ ಆಂಡ್ರಾಯ್ಡ್‌ ಟಿವಿ ಸೆಟ್‌ಟಾಪ್‌ ಬಾಕ್ಸ್ ನೀಡುವತ್ತ ಹೆಜ್ಜೆ ಇಟ್ಟಿವೆ. ಈ ಕಂಪನಿಗಳ ಆಂಡ್ರಾಯ್ಡ್ ಈ ಸೆಟ್‌ಟಾಪ್‌ ಬೆಲೆ ಎಷ್ಟಿದೆ?..ಪ್ರಯೋಜನಗಳೆನು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಲಾಗಿದೆ. ಮುಂದೆ ಓದಿರಿ.

ಟಾಟಾಸ್ಕೈ ಬಿಂಜ್ ಪ್ಲಸ್

ಟಾಟಾಸ್ಕೈ ಬಿಂಜ್ ಪ್ಲಸ್

ಟಾಟಾಸ್ಕೈ ಸಂಸ್ಥೆಯು ಬಿಂಜ್ ಪ್ಲಸ್ ಆಂಡ್ರಾಯ್ಡ್ ಟಿವಿ ಸೌಲಭ್ಯವನ್ನು ಕಳೆದ ವರ್ಷ ಬಿಡುಗಡೆ ಮಾಡಿದೆ. ಇನ್ನು ಈ ಬಿಂಜ್ ಪ್ಲಸ್‌ ಬೆಲೆಯು 5,999ರೂ.ಗಳು ಆಗಿದೆ. ಖರೀದಿಗೆಯೊಂದಿಗೆ ಒಂದು ತಿಂಗಳ ಬಿಂಜ್ ಪ್ಲಸ್ ಚಂದಾದಾರಿಗೆ ಲಭ್ಯವಾಗಲಿದೆ. ಈಗಾಗಲೇ ಟಾಟಾಸ್ಕೈ ಡಿಟಿಎಚ್ ಹೊಂದಿರುವ ಗ್ರಾಹಕರು ಬಿಂಜ್ ಪ್ಲಸ್‌ ಸೇವೆಗೆ ಅಪ್‌ಗ್ರೇಡ್ ಆದರೆ 1,000ರೂ. ಕ್ಯಾಶ್‌ ಬ್ಯಾಕ್ ನೀಡುತ್ತದೆ. ಇನ್ನು ಬಿಂಜ್ ಪ್ಲಸ್‌ ಸೇವೆಯಲ್ಲಿ ಲೈವ್ ಟಿವಿ ಚಾನೆಲ್ಸ್‌, ಟಿವಿ ಸೀರಿಸ್, ಗಳು ಲಭ್ಯವಾಗುತ್ತವೆ.

ಡಿಶ್‌ ಸ್ಮಾರ್ಟ್‌ ಹಬ್ ಮತ್ತು ಡಿಟಿಎಚ್ ಸ್ಟ್ರೀಮ್

ಡಿಶ್‌ ಸ್ಮಾರ್ಟ್‌ ಹಬ್ ಮತ್ತು ಡಿಟಿಎಚ್ ಸ್ಟ್ರೀಮ್

ಡಿಶ್ ಸ್ಮಾರ್ಟ್ ಹಬ್ ಹೆಸರಿನಲ್ಲಿ ಡಿಶ್‌ ಟಿವಿಯು ಆಂಡ್ರಾಯ್ಡ್ ಟಿವಿ ಸೆಟ್‌ಟಾಪ್‌ ಬಾಕ್ಸ್ ಸೇವೆಯನ್ನು ಹೊಂದಿದೆ. ಇನ್ನು ಈ ಡಿಶ್ ಸ್ಮಾರ್ಟ್ ಹಬ್ ಟಿವಿ ಸೇವೆಯ ಬೆಲೆಯು 3,999ರೂ. ಆಗಿದ್ದು, ಈಗಾಗಲೇ ಡಿಶ್‌ ಟಿವಿ ಡಿಟಿಎಚ್ ಸೇವೆ ಪಡೆಯುತ್ತಿರುವ ಗ್ರಾಹಕರಿಗೆ ಡಿಶ್ ಸ್ಮಾರ್ಟ್ ಹಬ್ ಕೇವಲ 2,499ರೂ.ಗಳಿಗೆ ಲಭ್ಯವಾಗಲಿದೆ. OTT ಸೇವೆಗಳನ್ನು ಪಡೆಯಲು ಗ್ರಾಹಕರು ಪ್ರತ್ಯೇಕ ರೀಚಾರ್ಜ್ ಮಾಡಿಸಿಕೊಳ್ಳಬೇಕಿದೆ.

ಏರ್‌ಟೆಲ್ ಎಕ್ಸ್‌ಟ್ರಿಮ್ ಬಾಕ್ಸ್

ಏರ್‌ಟೆಲ್ ಎಕ್ಸ್‌ಟ್ರಿಮ್ ಬಾಕ್ಸ್

ಏರ್‌ಟೆಲ್ ಸಂಸ್ಥೆಯು ಆಂಡ್ರಾಯ್ಡ್ ಟಿವಿ ಸೇವೆಯನ್ನು ಹೊಂದಿದ್ದು, ಅದುವೇ ಏರ್‌ಟೆಲ್ ಎಕ್ಸ್‌ಟ್ರಿಮ್ ಬಾಕ್ಸ್ ಆಗಿದೆ. ಈಗಾಗಲೇ ಏರ್‌ಟೆಲ್ ಡಿಟಿಎಚ್ ಸೌಲಭ್ಯ ಹೊಂದಿರುವ ಗ್ರಾಹಕರು ಏರ್‌ಟೆಲ್ ಎಕ್ಸ್‌ಟ್ರಿಮ್ ಬಾಕ್ಸ್ ಸೇವೆಗೆ ಅಪ್‌ಗ್ರೇಡ್ ಆದರೆ 2,249ರೂ, ಈ ಸೇವೆ ಲಭ್ಯವಾಗಲಿದೆ. ಅದೇ ಹೊಸ ಗ್ರಾಹಕರಿಗೆ ಏರ್‌ಟೆಲ್ ಎಕ್ಸ್‌ಟ್ರಿಮ್ ಬಾಕ್ಸ್ ಶುಲ್ಕವು 3,999ರೂ.ಗಳು ಆಗಿದೆ. ಈ ಸೇವೆಯಲ್ಲಿ ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್‌, ಜೀ5, ಹಾಟ್‌ಸ್ಟಾರ್, ನಂತಹ ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ದೊರೆಯುತ್ತವೆ.

Most Read Articles
Best Mobiles in India

English summary
Tata Sky: Tata Sky Binge+ is priced on the steeper side at Rs 5,999 for new customers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X