ಟಾಟಾಸ್ಕೈನಿಂದ ಕಡಿಮೆ ಬೆಲೆಯಲ್ಲಿ 200Mbps ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಲಾಂಚ್!

|

ಪ್ರಸ್ತುತ ಪ್ರತಿಯೊಂದು ಸ್ಮಾರ್ಟ್‌ ಡಿವೈಸ್‌ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಇಂಟರ್ನೆಟ್ ಅಗತ್ಯ ಹಾಗೂ ಅನಿವಾರ್ಯ. ಈ ನಿಟ್ಟಿನಲ್ಲಿ ಪ್ರಮುಕ ಬ್ರಾಡ್‌ಬ್ಯಾಂಡ್ ಸಂಸ್ಥೆಗಳು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಅವುಗಳಲ್ಲಿ ಜನಪ್ರಿಯ ಟಾಟಾಸ್ಕೈ ಕಂಪನಿಯು ಹಲವು ಭಿನ್ನ ಶ್ರೇಣಿಯಲ್ಲಿ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿದ್ದು, ಆ ಲಿಸ್ಟಿಗೆ ಇದೀಗ ಮತ್ತೊಂದು ವೇಗದ ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ಸೇರ್ಪಡೆ ಮಾಡಿದೆ.

ಟಾಟಾಸ್ಕೈ

ಹೌದು, ಜನಪ್ರಿಯ ಟಾಟಾಸ್ಕೈ ಸಂಸ್ಥೆಯು ತನ್ನ ಬ್ರಾಡ್‌ಬ್ಯಾಂಡ್ ಇಂಟರ್ನೆಟ್‌ ಸೇವೆಯಲ್ಲಿ ಹೊಸದಾಗಿ ಈಗ 200 Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ಮಾಸಿಕ ಶುಲ್ಕವು 1050ರೂ. ಆಗಿದ್ದು, ಅನಿಯಮಿತ ಡೇಟಾ ಸೌಲಭ್ಯವನ್ನು ಒಳಗೊಂಡಿದೆ. ಹಾಗಾದರೇ ಟಾಟಾಸ್ಕೈನ ಹೊಸ 200 Mbps ಪ್ಲ್ಯಾನಿನ ಪ್ರಯೋಜನಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಮಾಸಿಕ ಶುಲ್ಕ 1050ರೂ.

ಮಾಸಿಕ ಶುಲ್ಕ 1050ರೂ.

ಟಾಟಾ ಸ್ಕೈ ಸಂಸ್ಥೆಯ 200 ಎಂಬಿಪಿಎಸ್ ವೇಗದ ಈ ಹೊಸ ಯೋಜನೆಯು ತಿಂಗಳಿಗೆ 1050ರೂ. ಶುಲ್ಕವನ್ನು ಹೊಂದಿದೆ. ಇದೊಂದು ಅನಿಯಮಿತ ಡೇಟಾ ಸೌಲಭ್ಯದ ಯೋಜನೆ ಆಗಿದೆ. ಆದರೆ ಬಳಕೆದಾರರು 3300GB ಡೇಟಾ ಮಿತಿಯನ್ನು ತಲುಪಿದ ನಂತರ ಅನಿಯಮಿತ 300 Mbps ಯೋಜನೆಯ ವೇಗವು 3 Mbps ಗೆ ಕಡಿಮೆಯಾಗುತ್ತದೆ ಎಂದು ಆಪರೇಟರ್ ಹೈಲೈಟ್ ಮಾಡಿದ್ದಾರೆ.

ವಾರ್ಷಿಕ ಅವಧಿಯ ಆಯ್ಕೆ

ವಾರ್ಷಿಕ ಅವಧಿಯ ಆಯ್ಕೆ

ಟಾಟಾ ಸ್ಕೈನ ಹೊಸ 200 ಎಮ್‌ಬಿಪಿಎಸ್ ಯೋಜನೆಯನ್ನು ಬಳಕೆದಾರರು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ವ್ಯಾಲಿಡಿಟಿಯ ಆಧಾರದ ಮೇಲೆ ಚಂದಾದಾರಿಕೆಗೆ ಪಡೆಯಬಹುದಾಗಿದೆ ಎಂದು ಆಪರೇಟರ್ ಹೈಲೈಟ್ ಮಾಡಿದ್ದಾರೆ. ಮಾಸಿಕ ಆಧಾರದ ಮೇಲೆ 200 ಎಮ್‌ಬಿಪಿಎಸ್ ಯೋಜನೆಗೆ ಚಂದಾದಾರರಾಗುವ ಬಳಕೆದಾರರು ಇನ್‌ಸ್ಟಾಲೇಶನ್‌ಗಾಗಿ 500 ರೂ. ನೀಡಬೇಕಿರುತ್ತದೆ.

ಪ್ಲ್ಯಾನ್ ಲಭ್ಯತೆ

ಪ್ಲ್ಯಾನ್ ಲಭ್ಯತೆ

ಟಾಟಾಸ್ಕೈ ಕಂಪನಿಯ ಹೊಸ 200 ಎಂಬಿಪಿಎಸ್ ಯೋಜನೆಯು ಭಾರತದಾದ್ಯಂತ ಸುಮಾರು 13 ಪ್ರದೇಶಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ ಸಂಸ್ಥೆಯ 300ಎಮ್‌ಬಿಪಿಎಸ್‌ ಯೋಜನೆಯು ಸಹ ಕೆಲವು ಆಯ್ದ ಪ್ರದೇಶಗಳಲ್ಲಿ ಲಭ್ಯ.

300Mbps ಯೋಜನೆಯಲ್ಲಿ ಪರಿಷ್ಕರಣೆ

300Mbps ಯೋಜನೆಯಲ್ಲಿ ಪರಿಷ್ಕರಣೆ

ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಭಾರತದಾದ್ಯಂತ ಆಯ್ದ ನಗರಗಳಲ್ಲಿ ಇತ್ತೀಚಿಗೆ ತಿಂಗಳಿಗೆ 1900 ರೂ.ಗೆ ಅನಿಯಮಿತ 300 ಎಂಬಿಪಿಎಸ್ ಯೋಜನೆಯನ್ನು ಪರಿಚಯಿಸಿತ್ತು. ಆದ್ರೆ ಈಗ ಈ ಯೋಜನೆಯಲ್ಲಿ ಪರಿಷ್ಕರಣೆ ಮಾಡಿದ್ದು, ಈಗ ತೆರೆಗೆ ಶುಲ್ಕ ಹೊರತುಪಡಿಸಿ 1500ರೂ.ಗಳಿಗೆ ಲಭ್ಯ ಎಂದು ಟೆಲಿಕಾಂ ಹೇಳಿದೆ.

Most Read Articles
Best Mobiles in India

English summary
Tata Sky Introduces 200 Mbps plan is said to be available in 13 locations across India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X