ಟಾಟಾ ಸ್ಕೈ ಮ್ಯೂಸಿಕ್‌ ಸೇವೆ ಇದೀಗ ದಿನಕ್ಕೆ ಕೇವಲ 2.5.ರೂ,ಗೆ ಲಭ್ಯ!

|

ಟಾಟಾ ಸ್ಕೈ ಸಂಸ್ಥೆ ದೇಶದ ಡಿಟಿಎಚ್‌ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ತನ್ನ ಗ್ರಾಹಕರಿಗೆ ವಿಭಿನ್ನ ಸೇವೆಗಳನ್ನು ಪರಿಚಯಿಸುವ ಮೂಲಕ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಟಾಟಾ ಸ್ಕೈ ಮ್ಯೂಸಿಕ್ ಮತ್ತು ಟಾಟಾ ಸ್ಕೈ ಮ್ಯೂಸಿಕ್ + ಚಂದಾದಾರಿಕೆಗಳನ್ನು ಸಂಯೋಜಿಸಲು ಟಾಟಾ ಸ್ಕೈ ಮ್ಯೂಸಿಕ್ ಸೇವೆಯನ್ನು ಪರಿಷ್ಕರಿಸಿದೆ. ಈ ಮೂಲಕ ಟಿವಿ ಮತ್ತು ಅದರ ಮೊಬೈಲ್ ಅಪ್ಲಿಕೇಶನ್‌ನಲ್ಲಿ "360 ಡಿಗ್ರಿ ಸಂಗೀತ ಅನುಭವ" ವನ್ನು ಕೈಗೆಟುಕುವ ಬೆಲೆಯಲ್ಲಿ ನೀಡಲು ಉದ್ದೇಶಿಸಿದೆ.

ಟಾಟಾ ಸ್ಕೈ

ಹೌದು, ಟಾಟಾ ಸ್ಕೈ ಸಂಸ್ಥೆ ತನ್ನ ಎರಡು ಟಾಟಾ ಸ್ಕೈ ಮ್ಯೂಸಿಕ್ ಸೇವೆಗಳ ಚಂದಾದಾರಿಕೆ ಪರಿಷ್ಕರಿಸಲು ಮುಂದಾಗಿದೆ. ಎರಡು ಮ್ಯೂಸಿಕ್‌ ಸೇವೆಗಳು ಟಾಟಾ ಸ್ಕೈ ಮ್ಯೂಸಿಕ್ + ನೊಂದಿಗೆ ಪ್ರತ್ಯೇಕವಾಗಿದ್ದು, ಒಮ್ಮೆ ಗುಣಮಟ್ಟದ ಮೇಲೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಈಗ, ಎರಡೂ ಚಂದಾದಾರಿಕೆ ಸೇವೆಗಳನ್ನು ಸಂಯೋಜಿಸಲಾಗಿದೆ. ಇವುಗಳನ್ನು ಇನ್ಮುಂದೆ ಒಟ್ಟಾರೆಯಾಗಿ ಟಾಟಾ ಸ್ಕೈ ಮ್ಯೂಸಿಕ್ ಎಂದು ಕರೆಯಲಾಗುತ್ತದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹಂಗಮಾ ಮ್ಯೂಸಿಕ್ ಪ್ರೊ ಅನ್ನು ಸಹ ಚಂದಾದಾರಿಕೆ ಒಳಗೊಂಡಿದೆ. ಹಾಗಾದ್ರೆ ಪರಿಷ್ಕೃತಗೊಂಡ ಟಾಟಾ ಸ್ಕೈ ಮ್ಯೂಸಿಕ್‌ ಸೇವೆ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟಾಟಾ ಸ್ಕೈ

ಟಾಟಾ ಸ್ಕೈ ಪತ್ರಿಕಾ ಪ್ರಕಟಣೆಯ ಮೂಲಕ ನಿಯಮಿತ ಟಾಟಾ ಸ್ಕೈ ಮ್ಯೂಸಿಕ್ ಚಂದಾದಾರಿಕೆ ಸೇವೆ ಮತ್ತು ಟಾಟಾ ಸ್ಕೈ ಮ್ಯೂಸಿಕ್ + ಸೇವೆಯನ್ನು ಒಂದಾಗಿ ವಿಲೀನಗೊಳಿಸುತ್ತಿದೆ ಎಂದು ಘೋಷಿಸಿದೆ. ಇದು ಟಿವಿ ಮತ್ತು ಟಾಟಾ ಸ್ಕೈ ಮೊಬೈಲ್ ಆಪ್‌ನಲ್ಲಿ ದಿನಕ್ಕೆ 2.5.ರೂಗೆ ಹೊಸ ಟಾಟಾ ಸ್ಕೈ ಮ್ಯೂಸಿಕ್ ಸೇವೆಗೆ ಚಂದಾದಾರರಾಗಬಹುದಾಗಿದೆ. ಅಲ್ಲದೆ ಜಾಹೀರಾತು ರಹಿತ ಆಲಿಸುವ ಅನುಭವದೊಂದಿಗೆ 20 ಆಡಿಯೊ ಕೇಂದ್ರಗಳು ಮತ್ತು ಐದು ವಿಡಿಯೋ ಕೇಂದ್ರಗಳು ಸಿಗುತ್ತವೆ. ಜೊತೆಗೆ ಇದು ಅನಿಯಮಿತ ಆಫ್‌ಲೈನ್ ಡೌನ್‌ಲೋಡ್‌ಗಳು, ಮ್ಯೂಸಿಕ್ ವೀಡಿಯೊಗಳ ಅನಿಯಮಿತ ಸ್ಟ್ರೀಮಿಂಗ್ ಮತ್ತು ಹಂಗಮಾ ಮ್ಯೂಸಿಕ್ ಪ್ರೊಗೆ ಉಚಿತ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ, ಇದು ಪ್ರತ್ಯೇಕವಾಗಿ ತಿಂಗಳಿಗೆ 99 ರೂ.ಚಂದಾದಾರಿಕೆ ಹೊಂದಿದೆ.

ಟಾಟಾ ಸ್ಕೈ ಮ್ಯೂಸಿಕ್

ಇನ್ನು ಟಾಟಾ ಸ್ಕೈ ಮ್ಯೂಸಿಕ್ ಚಂದಾದಾರರು ತಮ್ಮ ಟಿವಿಯಲ್ಲಿ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಭಾರತೀಯ, ಅಂತರರಾಷ್ಟ್ರೀಯ, ಪ್ರಾದೇಶಿಕ, ಭಕ್ತಿ, ಗಜಲ್, ಹಿಂದೂಸ್ತಾನಿ ಮತ್ತು ಇತರ ಪ್ರಕಾರಗಳನ್ನು ಕೇಳಬಹುದು. ಟಾಟಾ ಸ್ಕೈ ಮ್ಯೂಸಿಕ್ ಅಥವಾ ಟಾಟಾ ಸ್ಕೈ ಮ್ಯೂಸಿಕ್ + ಗೆ ಈಗಾಗಲೇ ಚಂದಾದಾರರಾಗಿರುವವರನ್ನು ಸ್ವಯಂಚಾಲಿತವಾಗಿ ಹೊಸ ಸಂಯೋಜಿತ ಸೇವೆಗೆ ಅಪ್‌ಗ್ರೇಡ್ ಮಾಡಲಾಗುತ್ತದೆ. ಹೊಸ ಚಂದಾದಾರರು ಚಾನೆಲ್ 815 ನಲ್ಲಿ ಸೇವೆಯನ್ನು ಆನಂದಿಸಲು 080 6858 0815 ಗೆ ಮಿಸ್ಡ್ ಕಾಲ್ ನೀಡಬಹುದಾಗಿದೆ.

ಮ್ಯೂಸಿಕ್

ಇದಲ್ಲದೆ "ನಾವು ಹೆಚ್ಚಿನ ಪ್ರಯೋಜನಗಳೊಂದಿಗೆ ಒನ್‌-ಸ್ಟಾಪ್‌ ಮ್ಯೂಸಿಕ್‌ ಸೇವೆಯನ್ನು ನೀಡಲು ಬಯಸಿದ್ದೇವೆ. ಎಲ್ಲಾ ಪ್ರಕಾರದ ಸಂಗೀತಗಳಿಗೆ ದೃಡವಾದ ಮತ್ತು ಕ್ಯುರೇಟೆಡ್ ಲೈಬ್ರರಿಯೊಂದಿಗೆ ಸೇವೆ ನೀಡುವುದಾಗಿ ಹೇಳಿದೆ. ಅಲ್ಲದೆ ರಿಫ್ರೆಶ್ ಮಾಡಿದ ಟಾಟಾ ಸ್ಕೈ ಮ್ಯೂಸಿಕ್ ಚಂದಾದಾರರಿಗೆ ಉನ್ನತ ಸಂಗೀತ ಅನುಭವವನ್ನು ನೀಡುವುದಾಗಿ ಹೇಳಿದೆ. ನಮ್ಮ ಪಾಲುದಾರ ಹಂಗಮಾ ಮ್ಯೂಸಿಕ್ ಸಹಾಯದಿಂದ, ಇದು ಪ್ರೇಕ್ಷಕರ ಸಂಖ್ಯೆಯನ್ನು ವಿಸ್ತರಿಸುವ ಮತ್ತು ಗ್ರಾಹಕರ ಅನೇಕ ಹೊಸ ಸಮೂಹಗಳನ್ನು ಅನ್ವೇಷಿಸುವ ಒಂದು ಹೆಜ್ಜೆಯಾಗಿದೆ "ಎಂದು ಟಾಟಾ ಸ್ಕೈ ಸಂಸ್ಥೆ ಹೇಳಿಕೊಂಡಿದೆ.

Most Read Articles
Best Mobiles in India

English summary
Tata Sky Music subscription includes 20 audio stations and five video stations with an ad-free listening experience.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X