ಭಾರತದಲ್ಲಿ ಟಿಸಿಎಲ್‌ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ!

|

ಟಿಸಿಎಲ್‌ ಕಂಪೆನಿ ಭಾರತ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ತನ್ನ C ಸರಣಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಮಿನಿ ಎಲ್ಇಡಿ ಸ್ಕ್ರೀನ್‌ ಟೆಕ್ನಾಲಜಿ , ಐಮ್ಯಾಕ್ಸ್ ವರ್ಧಿತ ಪ್ರಮಾಣೀಕರಣ, ಗೇಮ್ ಮಾಸ್ಟರ್ ಮತ್ತು ಎರಡನೇ ತಲೆಮಾರಿನ ಐಪಿಕ್ಯೂ ಎಂಜಿನ್ ಆಡಿಯೊ-ವಿಷುಯಲ್ ಪ್ರೊಸೆಸರ್ ಅನ್ನು ಈ ಸರಣಿಯ ಸ್ಮಾರ್ಟ್‌ಟಿವಿಗಳು ಒಳಗೊಂಡಿವೆ. ಇನ್ನು ಟಿಸಿಎಲ್‌ C ಸರಣಿ ಪ್ರೀಮಿಯಂ ಟಿಸಿಎಲ್ C 825, ಟಿಸಿಎಲ್ C 728, ಮತ್ತು ಟಿಸಿಎಲ್ C 725 ಸ್ಮಾರ್ಟ್‌ಟಿವಿಗಳನ್ನು ಹೊಂದಿದೆ.

ಟಿಸಿಎಲ್‌

ಹೌದು, ಟಿಸಿಎಲ್‌ ಕಂಪೆನಿ ಭಾರತದಲ್ಲಿ ಟಿಸಿಎಲ್ C ಸರಣಿ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಇದರಲ್ಲಿ ಟಿಸಿಎಲ್‌ C 825 ಟಿವಿ ಆಂಡ್ರಾಯ್ಡ್ ಟಿವಿಯಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ ಮಿನಿ ಎಲ್ಇಡಿ ಕ್ಯೂಎಲ್ಇಡಿ 4ಕೆ ಡಿಸ್‌ಪ್ಲೇ ಹೊಂದಿದೆ. ಇನ್ನು ಟಿಸಿಎಲ್ C728 ಕ್ಯೂಎಲ್ಇಡಿ 4 ಎಲ್ ಡಿಸ್‌ಪ್ಲೇ ಮತ್ತು ಗೇಮ್ ಮಾಸ್ಟರ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಆದರೆ ಟಿಸಿಎಲ್ C 725 ಹೋಮ್ ಕಂಟ್ರೋಲ್ ಸೆಂಟರ್ ಫೀಚರ್ಸ್‌ ಅನ್ನು ಹೊಂದಿದೆ. ಇನ್ನುಳಿಂದತೆ ಈ ಹೊಸ ಸ್ಮಾರ್ಟ್‌ಟಿವಿ ಸರಣಿಯ ವಿಶೇಷತೆ ಹಾಗೂ ಬೆಲೆ ವಿವರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಟಿಸಿಎಲ್ C 825 ಸ್ಮಾರ್ಟ್‌ಟಿವಿ

ಟಿಸಿಎಲ್ C 825 ಸ್ಮಾರ್ಟ್‌ಟಿವಿ

ಟಿಸಿಎಲ್ C 825 ಸ್ಮಾರ್ಟ್‌ಟಿವಿ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, ಉತ್ತಮ ಡೆಪ್ತ್‌ ಮತ್ತು ಬಣ್ಣಕ್ಕಾಗಿ ಮಿನಿ ಎಲ್ಇಡಿ ಕ್ಯೂಎಲ್ಇಡಿ 4ಕೆ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಫುಲ್ ಅರೇ ಲೋಕಲ್ ಡಿಮ್ಮಿಂಗ್, 1,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಮತ್ತು 111.5% ಡಿಸಿಐ-ಪಿ 3 ಕಲರ್‌ ವಾಲ್ಯೂಮ್‌ ಅನ್ನು ಒಳಗೊಂಡಿದೆ. ಗೆಸ್ಚರ್ ನಿಯಂತ್ರಣವನ್ನು ಬೆಂಬಲಿಸುವ 1080p ವೈಡ್-ಆಂಗಲ್ ವೀಡಿಯೊ ಕಾಲಿಂಗ್‌ ಮ್ಯಾಜಿಕ್ ಕ್ಯಾಮೆರಾ ಹೊಂದಿದೆ. ಇದು ಆಂಡ್ರಾಯ್ಡ್ ಟಿವಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಗೂಗಲ್ ಅಸಿಸ್ಟೆಂಟ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್ ಐಕ್ಯೂ, ಡಾಲ್ಬಿ ವಿಷನ್ ಎಚ್‌ಡಿಆರ್ ಅನ್ನು ಬೆಂಬಲಿಸುತ್ತದೆ. ಐಐಪಿಕ್ಯು ಎಂಜಿನ್ ಅನ್ನು ಎಐ ಸೂಪರ್ ರೆಸಲ್ಯೂಶನ್‌ನೊಂದಿಗೆ ಸಂಯೋಜಿಸುತ್ತದೆ. ಇದು ಐಮ್ಯಾಕ್ಸ್ ವರ್ಧಿತ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಗೇಮ್ ಮಾಸ್ಟರ್ ಅನ್ನು ಸಹ ಹೊಂದಿದೆ. C825 15W ಸ್ಪೀಕರ್ ಮತ್ತು 20W ಸ್ಪೀಕರ್ ಅನ್ನು ಆನ್‌ಬೋರ್ಡ್ ಹೊಂದಿದೆ.

ಟಿಸಿಎಲ್ C 728 ಸ್ಮಾರ್ಟ್‌ಟಿವಿ

ಟಿಸಿಎಲ್ C 728 ಸ್ಮಾರ್ಟ್‌ಟಿವಿ

ಟಿಸಿಎಲ್ C728 ಸ್ಮಾರ್ಟ್‌ಟಿವಿ ಗೇಮಿಂಗ್‌ ಚಾಪಿಯಂನ್‌ ಎಂದೇ ಹೇಳಲಾಗ್ತಿದೆ. ಇದು ಕ್ಯೂಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 100% ಡಿಸಿಐ-ಪಿ 3 ಕಲರ್‌ ವಾಲ್ಯೂಮ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್, ಡಾಲ್ಬಿ ವಿಷನ್ ಐಕ್ಯೂ ಮತ್ತು ಡಾಲ್ಬಿ ಅಟ್ಮೋಸ್ ಅನ್ನು ಬೆಂಬಲಿಸುತ್ತದೆ. ಗೇಮಿಂಗ್ ಮಾಡುವಾಗ ಉತ್ತಮ ಪ್ರದರ್ಶನಕ್ಕಾಗಿ ಗೇಮ್ ಮಾಸ್ಟರ್ ಜೊತೆಗೆ AIPQ ಎಂಜಿನ್ ಇದೆ. ಇದು ಎಚ್‌ಡಿಎಂಐ 2.1 ಅನ್ನು ಸಹ ಬೆಂಬಲಿಸುತ್ತದೆ ಮತ್ತು ವೇರಿಯಬಲ್ ರಿಫ್ರೆಶ್ ರೇಟ್ (ವಿಆರ್ಆರ್), ಆಟೋ ಲೋ ಲ್ಯಾಟೆನ್ಸಿ ಮೋಡ್ (ಎಎಲ್‌ಎಂ), ಮತ್ತು ಎಚ್‌ಡಿಎಂಐ ಇಎಆರ್‌ಸಿ ಬೆಂಬಲದಂತಹ ಫೀಚರ್ಸ್‌ಗಳನ್ನು ಹೊಂದಿದೆ.

ಟಿಸಿಎಲ್ C 725 ಸ್ಮಾರ್ಟ್‌ಟಿವಿ

ಟಿಸಿಎಲ್ C 725 ಸ್ಮಾರ್ಟ್‌ಟಿವಿ

ಟಿಸಿಎಲ್ C 725 ಸ್ಮಾರ್ಟ್‌ಟಿವಿ ಕ್ಯೂಎಲ್‌ಇಡಿ 4ಕೆ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌, ಡಾಲ್ಬಿ ವಿಷನ್, 100% ಡಿಸಿಐ-ಪಿ 3 ಕಲರ್ ವಾಲ್ಯೂಮ್ ಮತ್ತು ಎಚ್‌ಡಿಆರ್ 10+ ಬೆಂಬಲವನ್ನು ಹೊಂದಿದೆ. ಇದು ಕಂಪನಿಯ ಐಪಿಕ್ಯೂ ಎಂಜಿನ್‌ನಿಂದ ಕೂಡಿದೆ ಮತ್ತು ಎಂಇಎಂಸಿ ಮತ್ತು ಎಚ್‌ಡಿಎಂಐ 2.1 ಎರಡನ್ನೂ ಬೆಂಬಲಿಸುತ್ತದೆ. ಮೇಲೆ ವೀಡಿಯೊ ಕರೆ ಮಾಡುವ ಕ್ಯಾಮೆರಾ ಇದೆ. ಅಲ್ಲದೆ ಪ್ರೀಮಿಯಂ ಮನರಂಜನಾ ಅನುಭವಕ್ಕಾಗಿ ಡಾಲ್ಬಿ ಅಟ್ಮೋಸ್‌ನೊಂದಿಗೆ ಒಂಕಿಯೋ ಪ್ರಮಾಣೀಕೃತ ಸೌಂಡ್‌ಬಾರ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಉತ್ತಮ ಮತ್ತು ವೇಗವಾಗಿ ಧ್ವನಿ ಗುರುತಿಸುವಿಕೆಗಾಗಿ ಇದು ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್ 2.0 ಅನ್ನು ಸಹ ನೀಡುತ್ತದೆ. ಟಿಸಿಎಲ್‌ C 725 ಸ್ಮಾರ್ಟ್‌ಟಿವಿ ಎರಡು 12W ಸ್ಪೀಕರ್‌ಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೊಸ ಪ್ರೀಮಿಯಂ ಟಿಸಿಎಲ್ C 825 55 ಇಂಚಿನ ರೂಪಾಂತರಕ್ಕೆ 1,14,990 ರೂ. ಮತ್ತು 65 ಇಂಚಿನ ಮಾದರಿಗೆ 1,49,990 ರೂ. ಬೆಲೆ ಹೊಂದಿದೆ. ಇದು ಜುಲೈ 7 ರಿಂದ ಅಮೆಜಾನ್ ಇಂಡಿಯಾ ಮತ್ತು ರಿಲಯನ್ಸ್ ಡಿಜಿಟಲ್‌ನಲ್ಲಿ ಲಭ್ಯವಾಗಲಿದೆ.
ಇನ್ನು ಟಿಸಿಎಲ್ C 728 ಟಿವಿ 55 ಇಂಚಿನ ಗಾತ್ರದ ಆಯ್ಕೆಗೆ 79,990 ರೂ. ಮತ್ತು 65 ಇಂಚಿನ ಗಾತ್ರದ ರೂಪಾಂತರಕ್ಕೆ 1,02,990, ರೂ. ಹಾಗೂ 75 ಇಂಚಿನ ಆಯ್ಕೆಗೆ 1,59,990 ರೂ. ಬೆಲೆಯನ್ನು ಹೊಂದಿದೆ. ಈ ಮಾದರಿಯು storeindia.tcl.com ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ, ಆದರೆ ನಿಖರವಾದ ಮಾರಾಟ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.
ಇದಲ್ಲದೆ ಟಿಸಿಎಲ್ C 725 ಸ್ಮಾರ್ಟ್‌ಟಿವಿ 50 ಇಂಚಿನ ಮಾದರಿಗೆ 64,990,ರೂ. ಮತ್ತು 55 ಇಂಚಿನ ಮಾದರಿಗೆ 72,990,ರೂ. ಹಾಗೂ 65 ಇಂಚಿನ ರೂಪಾಂತರಕ್ಕೆ 99,999 ರೂ.ಬೆಲೆಯನ್ನು ಪಡದುಕೊಂಡಿದೆ. ಇದು ಜುಲೈ 7 ರಿಂದ ಅಮೆಜಾನ್.ಇನ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ.

Most Read Articles
Best Mobiles in India

Read more about:
English summary
TCL C-series Smart TV models were launched in India on Wednesday, June 30 with features like Mini LED display technology.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X