ಭಾರತದಲ್ಲಿ TCL ಸಂಸ್ಥೆಯಿಂದ ಮೂರು ಹೊಸ ಸ್ಮಾರ್ಟ್‌ಟಿವಿಗಳು ಅನಾವರಣ!

|

ಫ್ಲಿಪ್‌ಕಾರ್ಟ್ ಸಹಭಾಗಿತ್ವದಲ್ಲಿ ಟಿಸಿಎಲ್ ಕಂಪನಿಯು ಭಾರತದಲ್ಲಿ ಸ್ಮಾರ್ಟ್ ಟಿವಿಗಳ ಸರಣಿಯನ್ನು ಪ್ರಕಟಿಸಿದೆ. ಟಿಸಿಎಲ್‌ P715 4K UHD AI ಟಿವಿ, C715 4K QLED ಟಿವಿ ಮತ್ತು C815 4K QLED ಟಿವಿ ಮಾಡೆಲ್‌ಗಳನ್ನು ಆಗಿವೆ. ಈ ಸರಣಿಯು 43 ಇಂಚಿ ನಿಂದ 75 ಇಂಚಿನ ಗಾತ್ರದ ಆಯ್ಕೆಯನ್ನು ಒಳಗೊಂಡಿದೆ. ಈ ಟಿವಿಗಳು ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್, ಕ್ವಾಂಟಮ್ ಡಾಟ್ ಟೆಕ್ನಾಲಜಿ, ಡಾಲ್ಬಿ ವಿಷನ್ ಮತ್ತು ಎಚ್‌ಡಿಆರ್ 10+ ನಂತಹ ಫೀಚರ್ಸ್‌ಗಳನ್ನು ಹೊಂದಿದೆ.

ಸಂಸ್ಥೆಯ

ಹೌದು, ಟಿಸಿಎಲ್‌ ಸಂಸ್ಥೆಯ ಈ ಮೂರು ಸ್ಮಾರ್ಟ್‌ಟಿವಿಗಳಲ್ಲಿ TCL P715 4K UHD AI ಟಿವಿ ಮೈಕ್ರೋ ಡಿಮ್ಮಿಂಗ್, ಡೈನಾಮಿಕ್ ಕಲರ್ ವರ್ಧನೆ, 4K ಅಪ್‌ಸ್ಕೇಲಿಂಗ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. TCL C815 4K QLED ಟಿವಿಯು ಸಹ ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್ ನಂತಹ ಅತ್ಯುತ್ತಮ ಸೌಲಭ್ಯಗಳನ್ನು ಒಳಗೊಂಡಿದೆ. ಹಾಗಾದರೇ ಟಿಸಿಎಲ್‌ ಕಂಪನಿಯ ಮೂರು ಹೊಸ ಟಿವಿಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟಿಸಿಎಲ್ P715 4K UHD AI ಟಿವಿ

ಟಿಸಿಎಲ್ P715 4K UHD AI ಟಿವಿ

ಹೊಸ ಟಿಸಿಎಲ್ P715 4K UHD AIಟಿವಿ 43 ಇಂಚು, 50 ಇಂಚು, 55 ಇಂಚು ಮತ್ತು 65 ಇಂಚಿನ ಡಿಸ್‌ಪ್ಲೇ ಗಾತ್ರಗಳಲ್ಲಿ ಲಭ್ಯವಿದೆ. 43 ಇಂಚಿನ ಟಿವಿಯು ಭಾರತದಲ್ಲಿ 29,999ರೂ, ಆಗಿದೆ. 50 ಇಂಚಿನ ಮಾದರಿಯ ಬೆಲೆ 38,999ರೂ, 55 ಇಂಚಿನ ಮಾದರಿಯ ಬೆಲೆ 42,999ರೂ. ಮತ್ತು 65 ಇಂಚಿನ ರೂಪಾಂತರದ ಬೆಲೆ 64,999ರೂ. ಆಗಿದೆ. ಇನ್ನು ಫೀಚರ್ಸ್‌ಗಳನ್ನು ನೋಡುವುದಾದರೇ ಈ ಟಿವಿಯು ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್, ಎಐ-ಇಂಟಿಗ್ರೇಟೆಡ್ ಸಿಸ್ಟಮ್ಸ್, ಗೂಗಲ್ ಪ್ಲೇ ಸರ್ವೀಸಸ್ ಮತ್ತು ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಒಟಿಟಿ ಲಭ್ಯತೆಯಂತಹ ವೈಶಿಷ್ಟ್ಯಗಳನ್ನು ಸಂಯೋಜಿಸುತ್ತದೆ. ಎಂಪಿ 3, ಡಬ್ಲ್ಯುಎಂಎ ಮತ್ತು ಎಸಿ 4 ಸ್ವರೂಪಗಳನ್ನು ಬೆಂಬಲಿಸುವ ಇಂಟಿಗ್ರೇಟೆಡ್ ಬಾಕ್ಸ್ ಸ್ಪೀಕರ್‌ನೊಂದಿಗೆ ಸಾಧನವನ್ನು ಡಾಲ್ಬಿ ಆಡಿಯೋ ಬೆಂಬಲಿಸುತ್ತದೆ.

ಟಿಸಿಎಲ್ C715 4K QLED ಟಿವಿ

ಟಿಸಿಎಲ್ C715 4K QLED ಟಿವಿ

ಹೊಸ ಟಿಸಿಎಲ್ C715 4K QLED ಟಿವಿಯು ಇದು 50 ಇಂಚು, 55 ಇಂಚು ಮತ್ತು 65 ಇಂಚಿನ ಮಾದರಿಗಳಲ್ಲಿ ಲಭ್ಯವಿದೆ. ಇವುಗಳ ಬೆಲೆಯು ಕ್ರಮವಾಗಿ 49,999ರೂ, 56,999ರೂ ಮತ್ತು 88,499ರೂ. ಆಗಿದೆ. ಹಾಗೆಯೇ ಈ ಸ್ಮಾರ್ಟ್ ಟಿವಿ ಅಂತರ್ನಿರ್ಮಿತ ಗೂಗಲ್ ಅಸಿಸ್ಟೆಂಟ್ ಮತ್ತು ಕ್ರೋಮ್‌ಕಾಸ್ಟ್ ಮತ್ತು ಹ್ಯಾಂಡ್ಸ್-ಫ್ರೀ ಧ್ವನಿ ನಿಯಂತ್ರಣದೊಂದಿಗೆ ಬರುತ್ತದೆ. ಅಲ್ಟ್ರಾ-ಹೆಚ್‌ಡಿ ಪ್ರದರ್ಶನವು ಕ್ವಾಂಟಮ್ ಡಾಟ್ ಟೆಕ್ನಾಲಜಿ, ಡಾಲ್ಬಿ ವಿಷನ್, ಎಚ್‌ಡಿಆರ್ 10+, ಮತ್ತು IPQ ಎಂಜಿನ್ ಅನ್ನು ಉತ್ತಮ ವೀಕ್ಷಣೆ ಅನುಭವಕ್ಕಾಗಿ ಸಜ್ಜುಗೊಳಿಸಿದೆ. ಇದು ಡಾಲ್ಬಿ ಅಟ್ಮೋಸ್ ಮತ್ತು ಡಿಟಿಎಸ್ ಸ್ಮಾರ್ಟ್ ಆಡಿಯೊ ಸಂಸ್ಕರಣೆಯನ್ನು ಸಹ ಬೆಂಬಲಿಸುತ್ತದೆ ಮತ್ತು ಆಂಡ್ರಾಯ್ಡ್ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಟಿಸಿಎಲ್ C815 4K QLED ಟಿವಿ

ಟಿಸಿಎಲ್ C815 4K QLED ಟಿವಿ

ಇನ್ನು ಟಿಸಿಎಲ್ C815 4K QLED ಟಿವಿ ಜನಪ್ರಿಯ ಫ್ಲಿಪ್‌ಕಾರ್ಟ್‌ನಲ್ಲಿ 55 ಇಂಚು, 65 ಇಂಚು ಮತ್ತು 75 ಇಂಚಿನ ಮಾದರಿಗಳಲ್ಲಿ ಲಭ್ಯವಿದೆ. ಅವುಗಳ ಬೆಲೆಯು ಕ್ರಮವಾಗಿ 78,499ರೂ, 1,14,999ರೂ ಮತ್ತು 1,29,999ರೂ. ಆಗಿದೆ. ಈ ಟಿವಿಯು ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್, ಕ್ವಾಂಟಮ್ ಡಾಟ್ ಟೆಕ್ನಾಲಜಿ, ಡಾಲ್ಬಿ ವಿಷನ್, ಮತ್ತು ಹೆಚ್‌ಆರ್‌ಡಿ 10+ ಬೆಂಬಲವನ್ನು ಹೊಂದಿದೆ. ಹೆಚ್ಚುವರಿಯಾಗಿ, ಇದು ಮೋಷನ್ ಎಸ್ಟಿಮೇಷನ್ / ಮೋಷನ್ ಕಾಂಪೆನ್ಸೇಷನ್ (MEMC) ಅನ್ನು ಸಂಯೋಜಿಸುತ್ತದೆ. ಡಾಲ್ಬಿ ಅಟ್ಮೋಸ್ ಬೆಂಬಲದ ಜೊತೆಗೆ, ಟಿಸಿಎಲ್ C815 4K QLED ಟಿವಿ ವರ್ಧಿತ ಆಡಿಯೊ ಔಟ್‌ಪುಟ್‌ಗಾಗಿ ಒಂಕಿಯೋ ಸೌಂಡ್‌ಬಾರ್‌ಗಳನ್ನು ಸಂಯೋಜಿಸುತ್ತದೆ.

Most Read Articles
Best Mobiles in India

English summary
TCL C815 4K QLED TV will be available on Flipkart in 55-inches, 65-inches, and 75-inches and will be priced at Rs. 78,499, Rs. 1,14,999, and Rs. 1,29,999 respectively.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X